ಕರ್ನಾಟಕ

karnataka

ETV Bharat / bharat

ಮನೆಯಲ್ಲಿ ಬಾಂಬ್​ ಸ್ಫೋಟ: ಮಹಿಳೆ ಸೇರಿ ಆರು ಜನರ ಸಾವು, 50 ಮೀಟರ್ ದೂರಕ್ಕೆ ತೂರಿಬಿದ್ದ ದೇಹ

ಮನೆಯಲ್ಲಿ ಸ್ಫೋಟದಿಂದಾಗಿ ಕಾಲ್ತುಳಿತ ಉಂಟಾಗಿದೆ ಹಾಗೂ ಮನೆಯ ಮೇಲ್ಛಾವಣಿ, ಗೋಡೆಗಳು ಕುಸಿದು ಬಿದ್ದಿವೆ. ಪರಿಣಾಮ ಆರು ಜನರು ಮೃತಪಟ್ಟಿದ್ದಾರೆ.

explosion-in-cracker-factory-in-chapra
ಮನೆಯಲ್ಲಿ ಬಾಂಬ್​ ಸ್ಫೋಟ: ಮಹಿಳೆ ಸೇರಿ ಆರು ಜನರ ಸಾವು, 50 ಮೀಟರ್ ದೂರಕ್ಕೆ ಚಿಮ್ಮಿದ ದೇಹದ ಭಾಗ

By

Published : Jul 24, 2022, 5:48 PM IST

Updated : Jul 24, 2022, 5:58 PM IST

ಛಾಪ್ರಾ (ಬಿಹಾರ): ಬಿಹಾರದ ಛಾಪ್ರಾ ಜಿಲ್ಲೆಯಲ್ಲಿ ಭಾರಿ ದುರಂತ ಸಂಭವಿಸಿದೆ. ಮನೆಯಲ್ಲಿ ಬಾಂಬ್​ ತಯಾರಿಕೆ ವೇಳೆ ಅದು ಸ್ಫೋಟಗೊಂಡು ಓರ್ವ ಮಹಿಳೆ ಸೇರಿ ಆರು ಮಂದಿ ದುರ್ಮರಣ ಹೊಂದಿದ್ದಾರೆ. ಅಲ್ಲದೇ, ಇನ್ನೂ ನಾಲ್ವರು ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಇಲ್ಲಿನ ಖೈರಾ ಸಮೀಪದ ಖುದೈಬಾಗ್‌ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ.

ಮನೆಯಲ್ಲಿ ಪಟಾಕಿ ಮದ್ದಿನಿಂದ ಬಾಂಬ್​ ತಯಾರಿಸಲಾಗುತ್ತಿತ್ತು ಎನ್ನಲಾಗ್ತಿದೆ. ಈ ವೇಳೆ ಏಕಾಏಕಿ ಸ್ಫೋಟ ಸಂಭವಿಸಿದೆ. ಈ ಸ್ಫೋಟದಿಂದಾಗಿ ಕಾಲ್ತುಳಿತ ಉಂಟಾಗಿದೆ ಹಾಗೂ ಮನೆಯ ಮೇಲ್ಛಾವಣಿ, ಗೋಡೆಗಳು ಕುಸಿದು ಬಿದ್ದಿವೆ. ಪರಿಣಾಮ ಆರು ಜನರು ಮೃತಪಟ್ಟಿದ್ದಾರೆ. ನಾಲ್ವರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೂ ನಾಲ್ವರು ಅವಶೇಷಗಳ ಅಡಿಯಲ್ಲಿ ಸಿಲುಕಿದ್ದಾರೆ ಎಂದು ವರದಿಯಾಗಿದೆ.

ಮನೆಯಲ್ಲಿ ಬಾಂಬ್​ ಸ್ಫೋಟ: ಮಹಿಳೆ ಸೇರಿ ಆರು ಜನರ ಸಾವು, 50 ಮೀಟರ್ ದೂರಕ್ಕೆ ತೂರಿಬಿದ್ದ ದೇಹ

ಇತ್ತ, ಸ್ಫೋಟದ ತೀವ್ರತೆಗೆ ವ್ಯಕ್ತಿಯೊಬ್ಬರ ದೇಹದ ಭಾಗ ಸುಮಾರು 50 ಮೀಟರ್ ದೂರದಲ್ಲಿ ತೂರಿ ಬಿದ್ದಿದೆ. ಈ ಘಟನೆಯ ವಿಷಯ ಪೊಲೀಸರು ಆರು ಆ್ಯಂಬುಲೆನ್ಸ್​ಗಳು ಮತ್ತು ಪರಿಹಾರ ಹಾಗೂ ರಕ್ಷಣಾ ತಂಡಗಳೊಂದಿಗೆ ಗ್ರಾಮಕ್ಕೆ ದೌಡಾಯಿಸಿದ್ದಾರೆ. ಅವಶೇಷಗಳ ಸಿಲುಕಿದ್ದ ಆರು ಜನರ ಶವಗಳನ್ನು ಹೊರತೆಗೆಯಲಾಗಿದೆ.

ಮನೆ ನೆಲಸಮಗೊಂಡ ನಂತರವೂ ಸ್ಫೋಟಗಳು ಮುಂದುವರಿದಿವೆ. ಇಂತಹದೊಂದು ಸ್ಫೋಟ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಜನರು ಬೆಚ್ಚಿಬಿದ್ದಿದ್ದಾರೆ. ಈ ದುರಂತ ಬಾಂಬ್​ ಸ್ಫೋಟದಿಂದಲೇ ಸಂಭವಿಸಿದೆಯೋ ಅಥವಾ ಪಟಾಕಿ ತಯಾರಿಕೆ ವೇಳೆ ಸ್ಫೋಟ ಸಂಭವಿಸಿದೆಯೇ ಎಂಬುದು ಇನ್ನೂ ದೃಢಪಟ್ಟಿಲ್ಲ.

ಇದನ್ನೂ ಓದಿ:60 ಬಾರಿ ಚಾಕುವಿನಿಂದ ಚುಚ್ಚಿ ವೃದ್ಧೆ ಕೊಲೆ.. ಆರೋಪಿ ಸಿಕ್ಕಿಬೀಳಲು ಸಾಕಾಯ್ತು ಅದೊಂದು ಸುಳಿವು

Last Updated : Jul 24, 2022, 5:58 PM IST

ABOUT THE AUTHOR

...view details