ಶ್ರೀನಗರ(ಜಮ್ಮು ಕಾಶ್ಮೀರ): ಕಣಿವೆನಾಡಲ್ಲಿ ಬೆಳ್ಳಂಬೆಳಗ್ಗೆ ಉಗ್ರರು ದುಷ್ಕೃತ್ಯ ಮೆರೆದಿದ್ದಾರೆ. ಭಯೋತ್ಪಾದಕರ ಅಟ್ಟಹಾಸಕ್ಕೆ ಆಗಾಗ್ಗೆ ಸಾಕ್ಷಿಯಾಗುತ್ತಿರುವ ಕಾಶ್ಮೀರದಲ್ಲಿ ಇಂದು ಮತ್ತೊಂದು ಸ್ಫೋಟ ಸಂಭವಿಸಿದೆ. ಜಮ್ಮು ವಿಮಾನ ನಿಲ್ದಾಣದಲ್ಲಿ ಸ್ಫೋಟದ ಮಾಹಿತಿ ತಿಳಿದುಬಂದಿದೆ.
ಜಮ್ಮು ವಿಮಾನ ನಿಲ್ದಾಣದ ಟೆಕ್ನಿಕಲ್ ಪ್ರದೇಶದಲ್ಲಿ ಬಾಂಬ್ ಸ್ಫೋಟವಾಗಿದೆ ಎಂದು ಉನ್ನತ ಮೂಲಗಳು ತಿಳಿಸಿದ್ದು, ಫೋರೆನ್ಸಿಕ್ ತಂಡ, ಬಾಂಬ್ ನಿಷ್ಕ್ರಿಯ ದಳ ಸ್ಫೋಟದ ಸ್ಥಳಕ್ಕೆ ಧಾವಿಸಿ, ಪರಿಶೀಲನೆ ನಡೆಸುತ್ತಿವೆ.