ಕರ್ನಾಟಕ

karnataka

ETV Bharat / bharat

ಕೋವಿಡ್​ ಸಾಂಕ್ರಾಮಿಕ ಪೂರ್ವಕ್ಕಿಂತಲೂ ದೇಶದ ಜಿಡಿಪಿ ಹೆಚ್ಚಳ!

ದೇಶದ ಜಿಡಿಪಿಯು 2022ರ ಆರ್ಥಿಕ ಸಾಲಿನಲ್ಲಿ ಶೇ.8.7ಕ್ಕೆ ತಲುಪಿದೆ. ಇದು ಕೋವಿಡ್​ ಸಾಂಕ್ರಾಮಿಕ ಮತ್ತು ಅದಕ್ಕೂ ಪೂರ್ವಕ್ಕಿಂತಲೂ ಹೆಚ್ಚಳವಾಗಿದೆ.

ಕೋವಿಡ್​ ಸಾಂಕ್ರಾಮಿಕ ಪೂರ್ವಕ್ಕಿಂತಲೂ ದೇಶದ ಜಿಡಿಪಿ ಹೆಚ್ಚಳ
What does GDP surpassing pre-pandemic level mean

By

Published : Jun 3, 2022, 4:06 PM IST

ನವದೆಹಲಿ:ಎರಡು ವರ್ಷಗಳ ಕಾಲ ಕೋವಿಡ್​ ಹಾವಳಿ ನಂತರ ದೇಶದ ಜಿಡಿಪಿ ಬೆಳವಣಿಗೆ ಕಂಡಿದೆ. 2022ರ ಆರ್ಥಿಕ ವರ್ಷದಲ್ಲಿ ಎಲ್ಲ ಸೇವೆಗಳು ಮತ್ತು ಸರಕುಗಳ ಮೌಲ್ಯವೂ ಏರಿಕೆಯಾಗಿದೆ. ಜಿಡಿಪಿಯು 147 ಲಕ್ಷ ಕೋಟಿ ರೂ.ಗಳಷ್ಟು ಬೆಳವಣಿಗೆ ತಲುಪಿದೆ.

ಏಪ್ರಿಲ್ - ಮಾರ್ಚ್ 2019 ಮತ್ತು ಏಪ್ರಿಲ್ - ಮಾರ್ಚ್ 2020ರ ಅವಧಿಯಲ್ಲಿ ಕೋವಿಡ್​ ಸಾಂಕ್ರಾಮಿಕದಿಂದ ದೇಶದ ಉತ್ಪಾದನೆಯ ಮೇಲೆ ಭಾರಿ ಹೊಡೆತ ಕೊಟ್ಟಿತ್ತು. ಇದರಿಂದ ದೇಶದ ಜಿಡಿಪಿ ಕುಸಿದಿತ್ತು. ಈಗ 2022ರ ಆರ್ಥಿಕ ವರ್ಷದಲ್ಲಿ ದೇಶದ ಜಿಡಿಪಿಯು ಶೇ.8.7ಕ್ಕೆ ತಲುಪಿದೆ. ಅಂದರೆ, ಇದರ ಅರ್ಥ ಕಳೆದ 2021ರ ಸಾಲಿಗಿಂತ 2022ರ ಅವಧಿಯಲ್ಲಿ ಉತ್ಪಾದಿಸಲಾದ ಸರಕು ಮತ್ತು ಸೇವೆಗಳ ಮೌಲ್ಯವು 11.77 ಲಕ್ಷ ಕೋಟಿ ರೂ.ಗೆ ಹೆಚ್ಚಳವಾಗಿದೆ.

2020ರ ಏಪ್ರಿಲ್​ ಮತ್ತು 2021ರ ಮಾರ್ಚ್​​ ಅವಧಿಯಲ್ಲಿ ದೇಶದಲ್ಲಿ ಮೂರು ತಿಂಗಳು ಕಾಲ ಸಂಪೂರ್ಣ ಲಾಕ್​ಡೌನ್​ ಇತ್ತು. ಎರಡನೇ ಹಂತದಲ್ಲಿ ಲಾಕ್​ಡೌನ್​ನಲ್ಲಿ ಜುಲೈ ಮತ್ತು ಸೆಪ್ಟೆಂಬರ್​​ನಲ್ಲಿ ಸಲ್ಪ​ ಸಡಿಲಿಕೆ ಮಾಡಲಾಗಿತ್ತು. ಇದರ ನಡುವೆ ಸಾಂಕ್ರಾಮಿಕ ರೋಗಕ್ಕಿಂತ ಹಿಂದಿನ ವರ್ಷಕ್ಕೆ ಹೋಲಿಸಿದರೆ ದೇಶದಲ್ಲಿ ಸರಕು ಮತ್ತು ಸೇವೆಗಳ ಮೌಲ್ಯವು 9.57 ಲಕ್ಷ ಕೋಟಿ ರೂ.ಗಳಷ್ಟು ಕಡಿಮೆಯಾಗಿತ್ತು.

ಇದೀಗ ಗುರುವಾರ ರಾಷ್ಟ್ರೀಯ ಅಂಕಿ - ಅಂಶಗಳ ಕಚೇರಿ ಬಿಡುಗಡೆ ಮಾಡಿದ ಅಧಿಕೃತ ಮಾಹಿತಿ ಪ್ರಕಾರ ಕಳೆದ ಎರಡು ವರ್ಷಗಳಿಂತ 2022ರ ಆರ್ಥಿಕ ವರ್ಷದಲ್ಲಿ ಜಿಡಿಪಿ ಹೆಚ್ಚಳವಾಗಿದೆ. 2019-20ರ ಆರ್ಥಿಕ ವರ್ಷದ ಜಿಡಿಪಿಗೆ ಹೋಲಿಕೆ ಮಾಡಿದರೆ 2.19 ಲಕ್ಷ ಕೋಟಿ ರೂ. ಹಾಗೂ 2018-2019ರ ಆರ್ಥಿಕ ವರ್ಷಕ್ಕೆ ಹೋಲಿಸಿದರೆ 7.4 ಲಕ್ಷ ಕೋಟಿ ರೂ.ಗಳಷ್ಟು ಜಿಡಿಜಿ ಮೌಲ್ಯ ಏರಿಕೆಯಾಗಿದೆ. ಇದನ್ನೇ ಶೇಕಡಾವಾರು ಲೆಕ್ಕಾಚಾರದಲ್ಲಿ ಹೇಳಬೇಕಾದರೆ ಕ್ರಮವಾಗಿ ಶೇ.1.5 ಮತ್ತು ಶೇ.5ರಷ್ಟು ಜಿಡಿಪಿ ಹೆಚ್ಚಳವಾಗಿದೆ ಎಂದು ವಿಶ್ಲೇಷಿಸಲಾಗಿದೆ.

ಇದನ್ನೂ ಓದಿ:ಆರ್​ಬಿಐನಿಂದ ರೆಪೊ ದರ ಹೆಚ್ಚಳ ಹಿನ್ನೆಲೆ: ಸಾಲದ ಬಡ್ಡಿ ದರ ಹೆಚ್ಚಿಸಿದ ಬ್ಯಾಂಕ್​ಗಳು

ABOUT THE AUTHOR

...view details