ನವದೆಹಲಿ :ಬೆಂಗಳೂರಿನ21 ವರ್ಷದ ಪರಿಸರ ಕಾರ್ಯಕರ್ತೆ ದಿಶಾ ರವಿ ಅವರನ್ನ ಬಂಧಿಸಿದ ಮೇಲೆ ಐದು ದೆಹಲಿಯ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ದಿಶಾ ರವಿ ಅವರ ಮೇಲೆ ರೈತ ಹೋರಾಟದ ಪರ ಟೂಲ್ ಕಿಟ್ ಹಂಚಿಕೊಂಡ ಆರೋಪವಿದೆ.
ದಿಶಾ ರವಿ ಟೂಲ್ಕಿಟ್ ಗೂಗಲ್ ಡಾಕ್ಯುಮೆಂಟ್ನ ಎಡಿಟರ್ ಆಗಿದ್ದು, ಫೆಬ್ರವರಿ 5ರಂದು ಟ್ವಿಟರ್ನಲ್ಲಿ ಪ್ರಸಾರ ಮಾಡಲಾಗಿತ್ತು. ಫೆಬ್ರವರಿ 5ರಂದು ಆಕೆಯನ್ನು ಬಂಧಿಸುವ ಮೊದಲು ಟ್ವಿಟರ್ ಪೋಸ್ಟ್‌ನ ಡಿಲೀಟ್ ಮಾಡಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಖಲಿಸ್ತಾನಿ ಹೋರಾಟಗಾರರು ದಿಶಾ ರವಿ ಸಂಪರ್ಕದಲ್ಲಿದ್ದಾರೆಂಬ ಆರೋಪವಿದ್ದು, ಈ ಕುರಿತು ತನಿಖೆ ನಡೆಯುತ್ತಿದೆ.
ಟೂಲ್ ಕಿಟ್ ಅಂದ್ರೇನು?:ಟೂಲ್ ಕಿಟ್ ಅಂದರೆ ಸಾಮಾನ್ಯವಾಗಿ ಡಾಕ್ಯುಮೆಂಟ್ ಅಥವಾ ಕಿರುಪುಸ್ತಕ ಎಂಬ ಅರ್ಥವಿದೆ. ಇದನ್ನು ಯಾವುದಾದರೂ ಒಂದು ವಿಷಯವನ್ನು ವರದಿ ಮಾಡಲು ಬಳಸಲಾಗುತ್ತದೆ.
ಕೆಲ ವಿಚಾರಗಳ ಬಗ್ಗೆ ಅಭಿಯಾನ ನಡೆಸುವ ವೇಳೆಯೂ ಇದನ್ನು ಬಳಸಲಾಗುತ್ತದೆ. ಅಭಿಯಾನದ ವೇಳೆ ಬಳಸುವ ಟೂಲ್ಕಿಟ್ನಲ್ಲಿ ಅಭಿಯಾನದ ಕಾರ್ಯತಂತ್ರವನ್ನು ವಿವರಿಸಲಾಗಿರುತ್ತದೆ.
ಅತ್ಯಂತ ಮುಖ್ಯವಾಗಿ ಒಂದು ವಿಷಯಕ್ಕೆ ಸಂಬಂಧಿಸಿದಂತೆ ಸಲಹೆ, ಮಾರ್ಗದರ್ಶನ ನೀಡುವುದು ಮಾತ್ರವಲ್ಲದೇ ಆ ವಿಷಯದ ಉಗಮ, ಬೆಳವಣಿಗೆ ಬಗ್ಗೆಯೂ ಟೂಲ್ಕಿಟ್ನಲ್ಲಿ ಮಾಹಿತಿ ನೀಡಲಾಗುತ್ತದೆ.
ಈಗ ಟೂಲ್ಕಿಟ್ ವಿವಾದವೇಕೆ?:ಅಂತಾರಾಷ್ಟ್ರೀಯ ಪರಿಸರ ಕಾರ್ಯಕರ್ತೆ ಗ್ರೇಟಾ ಥನ್ಬರ್ಗ್ ಒಂದು ಟೂಲ್ಕಿಟ್ ಹಂಚಿಕೊಂಡಿದ್ದರು. ಆ ಟೂಲ್ಕಿಟ್ನಲ್ಲಿ 'ಭಾರತದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯ ಅರಿವಿಲ್ಲದವರಿಗೆ ಚೆನ್ನಾಗಿ ಅರ್ಥ ಮಾಡಿಸಲು ಮತ್ತು ತಮ್ಮದೇ ವಿಶ್ಲೇಷಣೆಯ ಮೇಲೆ ರೈತರ ಪ್ರತಿಭಟನೆಯನ್ನು ಹೇಗೆ ಬೆಂಬಲಿಸಬೇಕೆಂಬ ಬಗ್ಗೆ ನಿರ್ಧಾರ ಕೈಗೊಳ್ಳಲು ಇದೊಂದು ವರದಿಯಾಗಿದೆ' ಎಂದಿದ್ದರು.
ಇದನ್ನೂ ಓದಿ:ಗೋದ್ರಾ ಹತ್ಯಾಕಾಂಡ: 19 ವರ್ಷಗಳ ನಂತರ ಪ್ರಮುಖ ಆರೋಪಿ ಸೆರೆ
ಆ ವರದಿಯಲ್ಲಿ ಅಥವಾ ದಾಖಲೆಯಲ್ಲಿ ಕೈಗೊಳ್ಳಬೇಕಾದ ಕಾರ್ಯತಂತ್ರಗಳು, ಟ್ವಿಟರ್ನಲ್ಲಿ ಅನುಸರಿಸಬೇಕಾದ ಕ್ರಮಗಳು, ಭಾರತದ ರಾಯಭಾರ ಕಚೇರಿಗಳ ಮುಂದೆ ಪ್ರತಿಭಟನೆ ಮತ್ತು ರೈತರ ಪ್ರತಿಭಟನೆಗೆ ಬೆಂಬಲ ಮುಂತಾದ ವಿಚಾರಗಳನ್ನು ಉಲ್ಲೇಖಿಸಲಾಗಿತ್ತು.
ಟೂಲ್ಕಿಟ್ಗೆ ಪೊಲೀಸರ ಕಾಟ ಏಕೆ?:ಗ್ರೇಟಾ ಥನ್ಬರ್ಗ್ ಹಂಚಿಕೊಂಡಿದ್ದ ಟೂಲ್ಕಿಟ್ನ ಕೆಲವು ಭಾಗಗಳನ್ನು ದಿಶಾ ರವಿ ಎಡಿಟ್ ಮಾಡಿದ್ದು, ಟ್ವಿಟರ್ನಲ್ಲಿ ಹ್ಯಾಷ್ಟ್ಯಾಗ್ಗಳ ಮೂಲಕ ಜನವರಿ 26ರೊಳಗೆ ಡಿಜಿಟಲ್ ಸ್ಟ್ರೈಕ್, ಟ್ವಿಟರ್ನಲ್ಲಿ ಜನವರಿ 23ರಂದು ಹೆಚ್ಚು ಟ್ವೀಟ್ ಮಾಡುವುದು, ಜನವರಿ 26ರಂದು ಪ್ರತಿಭಟನೆ ಮತ್ತು ರೈತರ ದೆಹಲಿಗೆ ಮುತ್ತಿಗೆ ಹಾಕುವುದನ್ನು ಗಮನಿಸುವುದು ಅಥವಾ ಬೆಂಬಲಿಸುವುದು ಎಂದು ತಿದ್ದಿದ್ದರು ಎಂದು ದೆಹಲಿ ಪೊಲೀಸರು ಮಾಹಿತಿ ನೀಡಿದ್ದಾರೆ.
ದೆಹಲಿ ಪೊಲೀಸರು ಆಕೆಯ ಇ-ಮೇಲ್ ಐಡಿ, ಯುಆರ್ಎಲ್ ಮತ್ತು ಸಾಮಾಜಿಕ ಜಾಲತಾಣಗಳ ವಿವರ ನೀಡಲು ಗೂಗಲ್ ಮತ್ತು ಸಾಮಾಜಿಕ ಜಾಲತಾಣ ಕಂಪನಿಗಳಿಗೆ ಸಂಪರ್ಕಿಸಿದ್ದರು. ಈಕೆ ಬಂಧನದ ನಂತರ ಆಕೆಯ ಪೋಸ್ಟ್ಗಳು ಡಿಲೀಟ್ ಆಗಿರುವುದು ಕಂಡು ಬಂದಿತ್ತು.
ಖಲಿಸ್ತಾನಿ ಸಂಚು?:ಇನ್ನಿಬ್ಬರು ಆರೋಪಿಗಳಾದ ಶಂತನು ಮತ್ತು ನಿಕಿತಾ ಖಲಿಸ್ತಾನಿ ಬೆಂಬಲಿತ ಸಂಘಟನೆಯಾದ ಪೊಯೆಟಿಕ್ ಜಸ್ಟೀಸ್ ಫೌಂಡೇಷನ್ (ಪಿಜೆಎಫ್) ಝೂಮ್ ಅಪ್ಲಿಕೇಷನ್ನಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಭಾಗವಹಿಸಿದ್ದರೆಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲೂ ತನಿಖೆ ನಡೆಯುತ್ತಿದೆ.