ಜಾರ್ಖಂಡ್:ಇಲ್ಲಿನಗರ್ಹ್ವಾ ಎಂಬಲ್ಲಿ ಚಿರತೆ ಹಾವಳಿ ಹೆಚ್ಚಾಗಿದ್ದು, ಈಗಾಗಲೇ ಮೂವರು ಸಾವಿಗೀಡಾಗಿದ್ದಾರೆ. ನರಭಕ್ಷಕ ಚಿರತೆಯನ್ನು ಗುರುತಿಸಿ ಕೊಲ್ಲಲು ಆದೇಶಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅರಣ್ಯಾಧಿಕಾರಿಗಳು ಸದ್ಯಕ್ಕೆ ಚಿರತೆಗೆ ಅರಿವಳಿಕೆ ನೀಡಿ ಸೆರೆ ಹಿಡಿಯಲು ಅನುಮತಿಸಿದೆ. ಇನ್ನೆರಡು ದಿನಗಳಲ್ಲಿ ಚಿರತೆಯನ್ನು ನರಭಕ್ಷಕ ಎಂದು ಘೋಷಿಸುವ ಸಾಧ್ಯತೆಯೂ ಇದೆ. ಇಲಾಖೆಯ ಪರಿಣತ ತಂಡ ವಿವಿಧ ಪ್ರದೇಶಗಳಲ್ಲಿ ಶೋಧ ಕಾರ್ಯ ನಡೆಸುತ್ತಿದೆ.
ಚಿರತೆಯನ್ನು ನರಭಕ್ಷಕ ಎಂದು ಘೋಷಿಸಿದಲ್ಲಿ ಕೊಲ್ಲಲು ಅರಣ್ಯ ಇಲಾಖೆ ಆದೇಶ ನೀಡುತ್ತದೆ. ಇದಕ್ಕಾಗಿ ಹೈದರಾಬಾದ್‌ನಿಂದ ತಜ್ಞರನ್ನು ಕರೆಸಲು ಚಿಂತನೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸೋಮವಾರ ಗಢ್ವಾದಲ್ಲಿರುವ ಭಂಡಾರಿಯಾದಿಂದ ಬರ್ಗಢ್ ಕಡೆಗೆ ಚಿರತೆ ಹೋಗಿದೆ. ಈ ಪ್ರದೇಶವು ಛತ್ತೀಸ್‌ಗಢದಿಂದ ಕೆಲವೇ ಕಿಲೋಮೀಟರ್ ದೂರದಲ್ಲಿದೆ ಎಂದು ಗರ್ವಾ ಡಿಎಫ್‌ಒ ದಿಲೀಪ್ ಕುಮಾರ್ ಹೇಳಿದ್ದಾರೆ. ಚಿರತೆಯನ್ನು ಕೊಲ್ಲಲು ಹೈದರಾಬಾದ್‌ನ ತಜ್ಞ ನವಾಬ್ ಸಪತ್ ಅಲಿ ಖಾನ್ ಅವರನ್ನು ಸಂಪರ್ಕಿಸಲಾಗಿದೆ. ಇಲಾಖೆಯು ನಿರಂತರವಾಗಿ ತಜ್ಞರೊಂದಿಗೆ ಸಂಪರ್ಕದಲ್ಲಿದ್ದು, ಅನುಮತಿ ದೊರೆತ ತಕ್ಷಣ ಅವರನ್ನು ಕರೆಸಲಾಗುವುದು ಎಂದು ಅವರು ಮಾಹಿತಿ ನೀಡಿದರು.