ಕರ್ನಾಟಕ

karnataka

ETV Bharat / bharat

ಶೀತನೆಗಡಿ, ಕೋವಿಡ್​-19 ಸೋಂಕು ಹೆಚ್ಚಾದಾಗ ಮಾಸ್ಕ್​ ಧರಿಸಿ ಅಂತಾರೆ ತಜ್ಞರು

FFP2 ಮಾಸ್ಕ್​ಗಳು ಸರ್ಜಿಕಲ್ ಮಾಸ್ಕ್​ಗಳಿಗಿಂತ ಸುರಕ್ಷಿತ ; ಸರಿಯಾದ ಮಾಸ್ಕ್​​ ಅನ್ನು ಸರಿಯಾದ ರೀತಿಯಲ್ಲಿ ಧರಿಸುವುದು ಅತ್ಯಂತ ಮುಖ್ಯವಾಗಿದೆ ಎನ್ನುತ್ತಾರೆ ಜನರಲ್ ಫಿಸಿಷಿಯನ್ ಡಾ. ಎಸ್‌ಸಿ ಅಜ್ಮಾನಿ. ಮಾಸ್ಕ್​ ಎಂಥವು ಮತ್ತು ಅವು ನಿಮ್ಮ ಮುಖಕ್ಕೆ ಎಷ್ಟು ಸರಿಯಾಗಿ ಫಿಟ್ ಆಗುತ್ತವೆ ಎಂಬುದು ಕೂಡ ಮುಖ್ಯ. ವೈದ್ಯಕೀಯ ಸಂಸ್ಥೆಯ ಸಂಶೋಧನೆಯೊಂದರ ಪ್ರಕಾರ ಬಿಗಿಯಾಗಿ ಕುಳಿತುಕೊಳ್ಳುವ FFP2 ಮಾಸ್ಕ್​ಗಳು ಸರ್ಜಿಕಲ್ ಮಾಸ್ಕ್​ಗಳಿಗಿಂತ 75 ಪಟ್ಟು ಹೆಚ್ಚು ಸುರಕ್ಷತೆ ನೀಡುತ್ತವೆಯಂತೆ.

By

Published : Sep 17, 2022, 3:44 PM IST

ಶೀತನೆಗಡಿ, ಕೋವಿಡ್​-19 ಸೋಂಕು ಹೆಚ್ಚಾದಾಗ ಮಾಸ್ಕ್​ ಧರಿಸಿ ಅಂತಾರೆ ತಜ್ಞರು
Experts make a case for continued mask use

ನವದೆಹಲಿ: ವಾತಾವರಣದಲ್ಲಿ ಒಂಚೂರು ಚಳಿ ಕಾಣಿಸಿಕೊಳ್ಳುತ್ತಿದ್ದಂತೆ ಜನರಿಗೆ ನೆಗಡಿ ಜಾಸ್ತಿಯಾಗುವುದು ಸಹಜ. ಆದರೆ ಇದರೊಂದಿಗೆ ಕೋವಿಡ್​-19 ಪ್ರಕರಣಗಳು ಕೂಡ ಹೆಚ್ಚಾಗುವುದು ಆಶ್ಚರ್ಯಕರ ವಿಷಯವಾದರೂ, ಇದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೆ ಇದು ನಿತ್ಯ ಇರುವಂಥದ್ದೇ ಎಂದು ನಿರಾಳವಾಗುತ್ತಿದ್ದೇವೆ. ಋತುಮಾನ ಬದಲಾಗುತ್ತಿದ್ದಂತೆಯೇ ನೆಗಡಿ ಜ್ವರದ ಪ್ರಕರಣಗಳು ಹೆಚ್ಚಾಗಲಾರಂಭಿಸುತ್ತವೆ. ಆದರೆ, ಈ ಬಾರಿ ಇಂಥ ಪ್ರಕರಣಗಳು ತುಸು ಹೆಚ್ಚಾಗಿಯೇ ಕಂಡು ಬಂದವು. ಇನ್ನು ಈ ಬಾರಿಯ ಕೋವಿಡ್-19 ಪ್ರಕರಣಗಳಲ್ಲಿ ಸೋಂಕಿನ ಲಕ್ಷಣಗಳು ಕೂಡ ತೀವ್ರವಾಗಿದ್ದವು.

ಕೋವಿಡ್-19 ಪ್ರಕರಣಗಳ ಹೆಚ್ಚಳ, ಬರಲಿರುವ ರಜಾ ಅವಧಿ ಇದೆಲ್ಲ ಸೇರಿ ಸಮಸ್ಯೆ ಉಂಟಾಗದಂತೆ ಮುಂಜಾಗ್ರತೆ ವಹಿಸುವುದು ಸೂಕ್ತ ಎನ್ನುತ್ತಾರೆ ವೈದ್ಯರು. ಕೋವಿಡ್​-19 ಹಾಗೂ ಇನ್ನಿತರ ಯಾವುದೇ ಶ್ವಾಸಕೋಶ ಸೋಂಕು ತಡೆಗಟ್ಟಲು ಮಾಸ್ಕ್​ಗಳು ಅತಿ ಪ್ರಮುಖ ಸಾಧನಗಳಾಗಿವೆ. ಇತ್ತೀಚೆಗೆ ಸೋಂಕು ಹೆಚ್ಚಾಗುತ್ತಿರುವುದರಿಂದ ಮನೆಯಿಂದ ಹೊರಬೀಳುವಾಗ ಮಾಸ್ಕ್ ಧರಿಸುವುದು ಉತ್ತಮ.

ಶೀತಜ್ವರ ಬರದಂತೆ ತಡೆಯಲು ಮಾಸ್ಕ್:ಹಬ್ಬದ ಕಾಲವು ಹತ್ತಿರದಲ್ಲೇ ಇರುವುದು ಮತ್ತು ಬಂಧು - ಬಾಂಧವರೊಂದಿಗೆ ಬೆರೆಯುವ ಸಮಯ ಇದಾಗಿರುವುದರಿಂದ ಕೋವಿಡ್-19 ಮತ್ತು ಸಾಮಾನ್ಯ ಶೀತಜ್ವರ ಬರದಂತೆ ತಡೆಯಲು ಮಾಸ್ಕ್ ಧರಿಸುವುದು ಸೂಕ್ತವಾಗಿದೆ. ಸರಿಯಾದ ಮಾಸ್ಕ್​​ ಅನ್ನು ಸರಿಯಾದ ರೀತಿಯಲ್ಲಿ ಧರಿಸುವುದು ಅತ್ಯಂತ ಮುಖ್ಯವಾಗಿದೆ ಎನ್ನುತ್ತಾರೆ ಜನರಲ್ ಫಿಸಿಷಿಯನ್ ಡಾ. ಎಸ್‌ಸಿ ಅಜ್ಮಾನಿ. ಮಾಸ್ಕ್​ ಎಂಥವು ಮತ್ತು ಅವು ನಿಮ್ಮ ಮುಖಕ್ಕೆ ಎಷ್ಟು ಸರಿಯಾಗಿ ಫಿಟ್ ಆಗುತ್ತವೆ ಎಂಬುದು ಕೂಡ ಮುಖ್ಯ.

FFP2 ಮಾಸ್ಕ್​ಗಳು ಸರ್ಜಿಕಲ್ ಮಾಸ್ಕ್​ಗಳಿಗಿಂತ ಹೆಚ್ಚು ಸುರಕ್ಷಿತ:ವೈದ್ಯಕೀಯ ಸಂಸ್ಥೆಯ ಸಂಶೋಧನೆಯೊಂದರ ಪ್ರಕಾರ ಬಿಗಿಯಾಗಿ ಕುಳಿತುಕೊಳ್ಳುವ FFP2 ಮಾಸ್ಕ್​ಗಳು ಸರ್ಜಿಕಲ್ ಮಾಸ್ಕ್​ಗಳಿಗಿಂತ 75 ಪಟ್ಟು ಹೆಚ್ಚು ಸುರಕ್ಷತೆ ನೀಡುತ್ತವೆಯಂತೆ. ಬಟ್ಟೆಯಿಂದ ತಯಾರಿಸಿದ ಅಥವಾ ಸರ್ಜಿಕಲ್ ಮಾಸ್ಕ್​ಗಳಿಗಿಂತ FFP2 ಉತ್ತಮ ರಕ್ಷಣೆ ನೀಡುತ್ತವೆ.

ವೈರಸ್‌ಗಳು, ಬ್ಯಾಕ್ಟೀರಿಯಾ, ಧೂಳು, ಮಾಲಿನ್ಯಕಾರಕಗಳು, ಅಲರ್ಜಿನ್‌ಗಳು ಮತ್ತು ಪರಾಗದಿಂದ ಸೆವ್ಲಾನ್​​ನಂಥ ಬಿಐಎಸ್​ ಅನುಮೋದಿತ FFP2 S ಮಾಸ್ಕ್‌ಗಳು ಹೆಚ್ಚಿನ ರಕ್ಷಣೆ ನೀಡುತ್ತವೆ. ಈ ಮಾಸ್ಕ್​​ಗಳು 0.3 ಮೈಕ್ರಾನ್‌ಗಿಂತ ದೊಡ್ಡದಾದ ಕಣಗಳಿರುವ ಏರೋಸಾಲ್‌ಗಳಿಂದ ಶೇ 95 ರಷ್ಟು ರಕ್ಷಣೆ ನೀಡುತ್ತವೆ.

ಸಾಮಾನ್ಯ ಮಾಸ್ಕ್​ಗಳಿಗೆ ಹೋಲಿಸಿದರೆ ಈ ಮಾಸ್ಕ್​ಗಳು ಉತ್ತಮವಾದ ಫಿಲ್ಟರಿಂಗ್ ನೀಡಲು ಎಲೆಕ್ಟ್ರೋ ಸ್ಟ್ಯಾಟಿಕ್ ಚಾರ್ಜ್ ಮಾಡಲಾದ ಫಿಲ್ಟರ್​ಗಳನ್ನು ಹೊಂದಿರುತ್ತವೆ. ವಿವಿಧ ಚರ್ಮದ ಪ್ರಕಾರಗಳಿಗೆ ಈ ಮಾಸ್ಕ್​ಗಳ ಸೌಕರ್ಯ ಮತ್ತು ಸೂಕ್ತತೆ ಸಹ ಪರೀಕ್ಷಿಸಲಾಗಿದೆ. ಸಾವ್ಲಾನ್ FFP2 S ಮಾಸ್ಕ್​ಗಳು ಬಿಐಎಸ್ ಪ್ರಮಾಣೀಕೃತವಾಗಿವೆ.

ಸೋಂಕಿತ ವ್ಯಕ್ತಿಯೊಬ್ಬ ಜನಜಂಗುಳಿಯ ವಾತಾವರಣದಲ್ಲಿ ಸೀನಿದಾಗ ಅಥವಾ ಕೆಮ್ಮಿದಾಗ ಕೋವಿಡ್-19 ವೈರಸ್ ಮತ್ತು ಇನ್ ಫ್ಲುಯೆಂಜಾ ವೈರಸ್ ತ್ವರಿತವಾಗಿ ಹರಡುತ್ತದೆ ಎಂಬುದು ನಮಗೆ ತಿಳಿದಿದೆ. N95 ಅಥವಾ FFP2 S ಮಾಸ್ಕ್ ಧರಿಸುವುದರ ಮೂಲಕ ಮೊದಲ ಹಂತದ ರಕ್ಷಣೆಯು ಖಾತ್ರಿಯಾಗುತ್ತದೆ. ವಿಶೇಷವಾಗಿ ಅಲರ್ಜಿ, ಅಸ್ವಸ್ಥತೆ, ದುರ್ಬಲಗೊಂಡ ಪ್ರತಿರಕ್ಷಣಾ ವ್ಯವಸ್ಥೆಗಳು ಅಥವಾ ತೀವ್ರವಾದ ರೋಗಲಕ್ಷಣಗಳನ್ನು ಅನುಭವಿಸುವ ಜನರಿಗೆ ಮಾಸ್ಕ್‌ಗಳ ಬಳಕೆ ಜೀವನ ಕ್ರಮವಾಗಬೇಕು.

ಇದನ್ನೂ ಓದಿ: ಜುವೆಲ್ಲರಿ ಎಕ್ಸಿಬಿಷನ್​​ನಲ್ಲಿ ಚಿನ್ನದ ಮಾಸ್ಕ್​​​: ಕೇವಲ 2 ದಿನದಲ್ಲಿ 10 ಕೆಜಿ ಬಂಗಾರ ಮಾರಾಟ

ABOUT THE AUTHOR

...view details