ಕೋಯಿಕ್ಕೋಡ್/ಕೇರಳ :ಪುಣೆ ವೈರಾಲಜಿ ಇನ್‌ಸ್ಟಿಟ್ಯೂಟ್‌ನ ತಜ್ಞರ ತಂಡವು ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ನಿಫಾ ವೈರಸ್ ಮೂಲವನ್ನು ಕಂಡು ಹಿಡಿಯಲು ಕೋಯಿಕ್ಕೋಡ್ನಲ್ಲಿ ಬಾವಲಿಗಳನ್ನು ಹಿಡಿಯಲು ಬಲೆಗಳನ್ನು ಹಾಕಿದೆ. ಕೊಡಿಯತ್ತೂರು ಪಂಚಾಯತ್‌ನ ಕುಟ್ಟಿಯೊಟ್ಟುಪರಂಬುವಿನಲ್ಲಿ ಬಾವಲಿಗಳನ್ನು ಸೆರೆ ಹಿಡಿಯಲು ಅಲ್ಲಲ್ಲಿ ಬಲೆಗಳನ್ನು ಹಾಕಲಾಗಿದೆ.
NIPAH ಆತಂಕ : ಬಾವಲಿಗಳಿಗೆ ಬಲೆ ಹಾಕಿದ ಪುಣೆ ವೈರಾಲಜಿ ಸಂಸ್ಥೆ ಮತ್ತು ಅರಣ್ಯ ಇಲಾಖೆಯ ತಜ್ಞರು
ಸದ್ಯ ಕೇರಳ ನಿಟ್ಟುಸಿರು ಬಿಟ್ಟಿದ್ದು, ಚತಮಂಗಲದ ಮನೆಗಳಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಈವರೆಗೆ ಆ ಸಂಬಂಧಿತ ಯಾವುದೇ ಸಾವುಗಳು ವರದಿ ಆಗಿಲ್ಲ. ಆದರೂ, ಚತಮಂಗಲಂ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜಾಗ್ರತೆ ವಹಿಸಲಾಗಿದೆ..
ಇನ್ನು, ನಿಫಾ ಸೋಂಕಿಗೆ ತುತ್ತಾದ 12 ವರ್ಷದ ಬಾಲಕನ ನಿಕಟ ಸಂಪರ್ಕದಲ್ಲಿದ್ದ ಎಲ್ಲಾ ಜನರ ರಿಪೋರ್ಟ್ ನೆಗೆಟಿವ್ ಬಂದಿದ್ದು, ರಾಜ್ಯವು ಸದ್ಯ ನಿಫಾದಿಂದ ಮುಕ್ತವಾಗಿದೆ. ಈವರೆಗೆ, 88 ಜನರ ವರದಿ ನೆಗೆಟಿವ್ ಬಂದಿದೆ. ಪುಣೆಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಗೆ ಕಳುಹಿಸಲಾದ ಇನ್ನೂ ಇಬ್ಬರ ಟೆಸ್ಟ್ ರಿಪೋರ್ಟ್ ಶೀಘ್ರದಲ್ಲೇ ಬರಲಿವೆ.
ಸದ್ಯ ಕೇರಳ ನಿಟ್ಟುಸಿರು ಬಿಟ್ಟಿದ್ದು, ಚತಮಂಗಲದ ಮನೆಗಳಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಈವರೆಗೆ ಆ ಸಂಬಂಧಿತ ಯಾವುದೇ ಸಾವುಗಳು ವರದಿ ಆಗಿಲ್ಲ. ಆದರೂ, ಚತಮಂಗಲಂ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜಾಗ್ರತೆ ವಹಿಸಲಾಗಿದೆ.