ಕರ್ನಾಟಕ

karnataka

ETV Bharat / bharat

ಕೊರೊನಾ ಸಂಕಷ್ಟ... ಭಾರತದ ಇಂದಿನ ದುಃಸ್ಥಿತಿಗೆ ಮೋದಿ ಸರ್ಕಾರದ ನೀತಿಗಳೇ ಕಾರಣ: ಲ್ಯಾನ್ಸೆಟ್ ವರದಿ - Karnataka covid death

ಕೋವಿಡ್-19 ಮೊದಲ ಅಲೆ ಹತೋಟಿಗೆ ಬಂದ ಬಳಿಕ ಎರಡನೇ ಅಲೆಯ ನಿರ್ವಹಣೆಯಲ್ಲಿ ಮೋದಿ ಸರ್ಕಾರ ವಿಫಲವಾಗಿದ್ದರಿಂದ ಭಾರತ ಇಂದು ಈ ಸಮಸ್ಯೆ ಎದುರಿಸುತ್ತಿದೆ ಎಂದು ಕೇಂದ್ರದ ವಿರುದ್ಧ ಲ್ಯಾನ್ಸೆಟ್ ಬೆರಳು ತೋರಿಸಿದೆ.

corona
corona

By

Published : May 9, 2021, 2:25 AM IST

ಹೈದರಾಬಾದ್: ಭಾರತದಲ್ಲಿ ಸದ್ಯ ಕೊರೊನಾ ಎರಡನೇ ಅಲೆ ಹೆಚ್ಚಾಗಲು ಕೇಂದ್ರ ಸರ್ಕಾರದ ಕಳಪೆ ಯೋಜನೆಗಳೇ ಕಾರಣ ಎಂದು ಅಂತಾರಾಷ್ಟ್ರೀಯ ವೈದ್ಯಕೀಯ ಜರ್ನಲ್ ದಿ ಲ್ಯಾನ್ಸೆಟ್ ವರದಿ ನೀಡಿದೆ.

ಕೋವಿಡ್-19 ಮೊದಲ ಅಲೆ ಹತೋಟಿಗೆ ಬಂದ ಬಳಿಕ ಎರಡನೇ ಅಲೆಯ ನಿರ್ವಹಣೆಯಲ್ಲಿ ಮೋದಿ ಸರ್ಕಾರ ವಿಫಲವಾಗಿದ್ದರಿಂದ ಭಾರತ ಇಂದು ಈ ಸಮಸ್ಯೆ ಎದುರಿಸುತ್ತಿದೆ ಎಂದು ಕೇಂದ್ರದ ವಿರುದ್ಧ ಲ್ಯಾನ್ಸೆಟ್ ಬೆರಳು ತೋರಿಸಿದೆ.

ಅಂತಾರಾಷ್ಟ್ರೀಯ ವೈದ್ಯಕೀಯ ಜರ್ನಲ್ ದಿ ಲ್ಯಾನ್ಸೆಟ್ ಪ್ರಕಟಿಸುವ ವರದಿಯಲ್ಲಿ, ಭಾರತದಲ್ಲಿ ಕೋವಿಡ್ ನಿರ್ವಹಣೆ ಕುರಿತು ಅಸಮಾಧಾನ ವ್ಯಕ್ತಪಡಿಸಿದೆ. ಕೋವಿಡ್ ಮಹಾಮಾರಿಯಿಂದ ಇಂದು ಭಾರತ ಸಂಕಷ್ಟಕ್ಕೆ ಸಿಲುಕಲು ಕೇಂದ್ರ ಸರ್ಕಾರದ ಯೋಜನೆಗಳೇ ಕಾರಣವಾಗಿವೆ. ಸರ್ಕಾರ ಈಗಲೂ ಎಚ್ಚೆತ್ತುಕೊಳ್ಳದಿದ್ದರೆ ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ ಎಂದು ವರದಿಯಲ್ಲಿ ಎಚ್ಚರಿಕೆ ನೀಡಿದೆ.

ಆಗಸ್ಟ್ ವೇಳೆಗೆ ದೇಶದಲ್ಲಿ ಕೊರೊನಾ ಸೋಂಕಿಗೆ ಬಲಿಯಾಗುವವರ ಸಂಖ್ಯೆ 10 ಲಕ್ಷಕ್ಕೆ ಏರಲಿದೆ. ಒಂದು ವೇಳೆ ಹೀಗಾದ್ರೆ ಇದಕ್ಕೆ ಮೋದಿ ಸರ್ಕಾರವೇ ನೇರ ಹೊಣೆಯಾಗುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ.

ತಜ್ಞರು ಎಚ್ಚರಿಕೆ ನೀಡಿದ್ರೂ ಮೈಮರೆತ ಕೇಂದ್ರ ಸರ್ಕಾರ:

ತಜ್ಞರು ಎಚ್ಚರಿಕೆ ನೀಡಿದ್ರೂ ದೇಶದಲ್ಲಿ ಕುಂಭ ಮೇಳದಂತಹ ಧಾರ್ಮಿಕ ಕಾರ್ಯಕ್ರಮ, ಜಾತ್ರೆ, ಸಭೆ, ಪಂಚರಾಜ್ಯ ಚುನಾವಣಾ ಮೆರವಣಿಗೆಗಳಿಗೆ ಅವಕಾಶ ನೀಡಿದ್ದು. ಇವುಗಳಿಗೆ ನಿರ್ಬಂಧ ಹೇರಿದ್ರೆ ಸದ್ಯ ಈ ಪರಿಸ್ಥಿತಿ ಇರುತ್ತಿರಲಿಲ್ಲ. ಜೊತೆಗೆ ದೇಶದಲ್ಲಿ ಸದ್ಯ ವೈದ್ಯಕೀಯ ಮೂಲಸೌಕರ್ಯದ ಕೊರತೆಯಾಗಿದ್ದು ಆತಂಕ ಮೂಡಿಸಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಭಾರತದಲ್ಲಿ ಕೋವಿಡ್ ಮೊದಲೇ ಅಲೆಯ ಬಳಿಕ ಸೋಂಕಿತರ ಪ್ರಕರಣಗಳ ಸಂಖ್ಯೆ ಇಳಿಕೆಯಾಗಿತ್ತು. ಇದರಿಂದ ದೇಶ ಕೊರೊನಾ ವಿರುದ್ಧ ಗೆದ್ದಿದೆ ಎನ್ನುವ ಅಭಿಪ್ರಾಯಕ್ಕೆ ಸರ್ಕಾರ ಬಂದಿತ್ತು. ಆದ್ರೆ ತಜ್ಞರು ಎರಡನೇ ಅಲೆಯ ಬಗ್ಗೆ ಎಚ್ಚರಿಕೆ ನೀಡಿದ್ದರೂ ಮುನ್ನೆಚ್ಚರಿಕೆ ವಹಿಸಲಿಲ್ಲ. ಇದರಿಂದಾಗಿ ಈಗ ಕೊರೊನಾ ಸೋಂಕಿತರಿಂದ ಆಸ್ಪತ್ರೆಗಳು ತುಂಬಿವೆ. ವೈದ್ಯಕೀಯ ಸಿಬ್ಬಂದಿ ಬಳಲಿದ್ದು, ಹತಾಶರಾಗುತ್ತಿದ್ದಾರೆ. ವೈದ್ಯಕೀಯ ಆಮ್ಲಜನಕ, ಹಾಸಿಗೆ ಹಾಗೂ ಇತರೆ ಸೌಕರ್ಯಗಳ ಕೊರತೆಯಾಗಿದೆ ಎಂದು ವರದಿಯಲ್ಲಿ ತಿಳಿಸಿದೆ.

ಆಕ್ಸಿಜನ್ ಸಿಲಿಂಡರ್ ವ್ಯವಸ್ಥೆಯನ್ನ ಸರಿಯಾಗಿ ಮಾಡಲು ಸರ್ಕಾರ ವಿಫಲವಾಗಿದೆ. ಜೊತೆಗೆ ಸರಿಯಾಗಿ ಮೂಲಸೌಕರ್ಯ ನೀಡದ ಹಿನ್ನೆಲೆ ಕೊರೊನಾ ಸೋಂಕು ಹರಡಿದೆ ಎಂದೂ ಕೂಡ ವರದಿ ಹೇಳಿದೆ.

ಕಳಪೆ ಯೋಜನೆ:

ವಿಶ್ವದ ಬೇರೆ ದೇಶಗಳು ವ್ಯಾಕ್ಸಿನೇಷನ್ ಮಾಡಲು ಸರಿಯಾದ ಕ್ರಮ ಕೈಗೊಂಡಿವೆ. ಆದ್ರೆ ವ್ಯಾಕ್ಸಿನೇಷನ್ ಮಾಡಲು ಸರ್ಕಾರ ಅಗತ್ಯವಿರುವಷ್ಟು ವ್ಯಾಕ್ಸಿನ್ ತಯಾರಿಕೆ ಕ್ರಮ ಕೈಗೊಳ್ಳಲಿಲ್ಲ. ಇದರಿಂದ ದೇಶದಲ್ಲಿ ವ್ಯಾಕ್ಸಿನ್ ಕೊರತೆಯಾಯಿತು ಎಂದು ನವದೆಹಲಿ ಅಶೋಕ್ ವಿವಿಯ ತಜ್ಞರು ಹೇಳಿದ್ದಾರೆ.

ABOUT THE AUTHOR

...view details