ಕರ್ನಾಟಕ

karnataka

ETV Bharat / bharat

ಸಮಾಜವಾದಿ ಪಕ್ಷದ ಉಚ್ಚಾಟಿತ ಶಾಸಕ ಬಿಜೆಪಿ ಸೇರ್ಪಡೆ - ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಗೋವಿಂದ್ ನರೈನ್ ಶುಕ್ಲಾ

ಉತ್ತರಪ್ರದೇಶದಲ್ಲಿ ಸಮಾಜವಾದಿ ಪಕ್ಷದ ಶಾಸಕರೊಬ್ಬರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಇವರಿಗೂ ಮುನ್ನ ಸೀತಾಪುರ ಸದರ್​ನ ಶಾಸಕ ರಾಕೇಶ್ ರಾಥೋಡ್ ಬಿಜೆಪಿ ಸೇರ್ಪಡೆಯಾಗಿದ್ದರು.

expelled-sp-mla-subhash-pasi-joins-bjp
ಸಮಾಜವಾದಿ ಪಕ್ಷದ ಉಚ್ಚಾಟಿತ ಶಾಸಕ ಬಿಜೆಪಿ ಸೇರ್ಪಡೆ

By

Published : Nov 2, 2021, 4:18 PM IST

ಲಖನೌ(ಉತ್ತರ ಪ್ರದೇಶ):ಮುಂದಿನ ವರ್ಷ ಉತ್ತರ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಸಾಕಷ್ಟು ರಾಜಕೀಯ ಮೇಲಾಟಗಳೂ ನಡೆಯುತ್ತಿವೆ. ಸಮಾಜವಾದಿ ಪಕ್ಷದಿಂದ ಹೊರಹಾಕಲ್ಪಟ್ಟಿದ್ದ ಶಾಸಕ ಸುಭಾಶ್ ಪಸಿ ತಮ್ಮ ಪತ್ನಿಯೊಂದಿಗೆ ಮಂಗಳವಾರ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

ಸಮಾಜವಾದಿ ಪಕ್ಷದ ಶಾಸಕ ಸುಭಾಶ್ ಪಸಿ ಮತ್ತು ಆಕೆಯ ಪತ್ನಿ ರೀನಾ ಪಸಿ ಉತ್ತರ ಪ್ರದೇಶ ಬಿಜೆಪಿ ಅಧ್ಯಕ್ಷ ಸ್ವತಂತ್ರದೇವ್ ಸಿಂಗ್ ಸಮ್ಮುಖದಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಗೋವಿಂದ್ ನರೈನ್ ಶುಕ್ಲಾ ತಿಳಿಸಿದ್ದಾರೆ.

ಶಾಸಕ ಸುಭಾಶ್ ಪಸಿ ಮತ್ತು ಆಕೆಯ ಪತ್ನಿ ರೀನಾ ಪಸಿ ಬಿಜೆಪಿಗೆ ಸೇರ್ಪಡೆಯಾದ ಕಾರಣದಿಂದ ಪಕ್ಷದ ಬಲ ಹೆಚ್ಚಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಸ್ವತಂತ್ರದೇವ್ ಸಿಂಗ್ ಹೇಳಿದರು.

ಇದಕ್ಕೂ ಮುನ್ನ ಸುಭಾಶ್ ಪಸಿ ಅವರನ್ನು ಪಕ್ಷ ವಿರೋಧಿ ಚಟುವಟಿಕೆಗಳ ಕಾರಣದಿಂದಾಗಿ ಸಮಾಜವಾದಿ ಪಕ್ಷದಿಂದ ಹೊರಹಾಕಲಾಗಿತ್ತು. ಘಾಜಿಪುರದ ಸಾದಿಪುರ ಕ್ಷೇತ್ರದಿಂದ ಸುಭಾಶ್ ಪಸಿ ಗೆಲುವು ಸಾಧಿಸಿದ್ದರು. ಅದರ ಜೊತೆಗೆ, ಸುಭಾಶ್ ಪಸಿ ಸಮಾಜವಾದಿ ಪಕ್ಷದ ಎಸ್​ಟಿ, ಎಸ್​​ಸಿ ವಿಂಗ್​ನ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿತ್ತು. ಸುಮಾರು ಒಂದು ವಾರಕ್ಕೆ ಹಿಂದೆ ಸೀತಾಪುರ ಸದರ್ ಬಿಜೆಪಿ ಶಾಸಕ ರಾಕೇಶ್ ರಾಥೋಡ್ ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಯಾಗಿದ್ದರು.

ಇದನ್ನೂ ಓದಿ:ಪಂಜಾಬ್‌ ಸಿಎಂ ವಿರುದ್ಧವೇ ತಿರುಗಿಬಿದ್ದ ನವಜೋತ್‌ ಸಿಂಗ್‌ ಸಿಧು ; ಚನ್ನಿ ಯೋಜನೆಗಳನ್ನು ಲಾಲಿಪಾಪ್‌ಗೆ ಹೋಲಿಸಿ ಟೀಕೆ

ABOUT THE AUTHOR

...view details