ಜಮ್ಶೆಡ್ಪುರ (ಜಾರ್ಖಂಡ್): ವಿದೇಶಿ ಹಾವುಗಳನ್ನು ಕಳ್ಳಸಾಗಣೆ ಮಾಡುತ್ತಿದ್ದ ಮಹಿಳೆಯೊಬ್ಬರನ್ನು ಜೆಮ್‌ಶೆಡ್‌ಪುರ ಟಾಟಾ ನಗರ ರೈಲು ನಿಲ್ದಾಣದಲ್ಲಿ ಪೊಲೀಸರು ಬಂಧಿಸಿದ್ದಾರೆ. ಜಮ್ಶೆಡ್ಪುರದ ಟಾಟಾನಗರ ಆರ್‌ಪಿಎಫ್‌ಗೆ ಮಹಿಳೆಯೊಬ್ಬರು ಹಾವುಗಳನ್ನು ಕಳ್ಳಸಾಗಣೆ ಮಾಡುತ್ತಿದ್ದಾರೆ ಎಂಬ ಸುದ್ದಿ ಬಂದ ಆಧಾರದಲ್ಲಿ ಪೊಲೀಸರು ಮಹಿಳೆಯನ್ನು ಬಂಧಿಸಿದ್ದಾರೆ.
ಮಹಿಳೆಯಿಂದ 28 ವಿದೇಶಿ ತಳಿಯ ಹಾವುಗಳನ್ನು ಹಾಗೂ ಕೀಟಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿ ಮಹಿಳೆ ಪೊಲೀಸ್ ವಶದಲ್ಲಿದ್ದು, ಅವರ ವಿಚಾರಣೆ ನಡೆಯುತ್ತಿದೆ. ಪ್ರಾಥಮಿಕ ವಿಚಾರಣೆ ವೇಳೆ ಮಹಿಳೆ, ಹಾವುಗಳನ್ನು ನಾಗಲ್ಯಾಂಡ್ನಿಂದ ತಂದಿದ್ದು, ದೆಹಲಿಗೆ ಸಾಗಿಸುತ್ತಿದ್ದರು. ಮಹಿಳೆಯಿಂದ ವಶಪಡಿಸಿಕೊಂಡ ಹಾವುಗಳು ವಿಷಪೂರಿತವಾಗಿವೆ ಎಂದು ಹೇಳಲಾಗುತ್ತಿದೆ. ಹಾವಿನ ವಿಷವನ್ನು ಅಮಲು ಪದಾರ್ಥ ತಯಾರಿಸಲು ಬಳಸುತ್ತಾರೆ ಎಂದು ಮಹಿಳೆ ಬಾಯ್ಬಿಟ್ಟಿದ್ದಾರೆ. ಸದ್ಯ ಆರ್‌ಪಿಎಫ್ ಮಹಿಳೆಯನ್ನು ವಿಚಾರಣೆ ನಡೆಸುತ್ತಿದೆ. ಈ ಪ್ರಕರಣದಲ್ಲಿ ದೊಡ್ಡ ಗ್ಯಾಂಗ್ ಕೈವಾಡವಿದೆ ಎಂದು ಆರ್‌ಪಿಎಫ್ ಈಗ ಆತಂಕ ವ್ಯಕ್ತಪಡಿಸಿದೆ.