ಕರ್ನಾಟಕ

karnataka

ETV Bharat / bharat

ಮಧ್ಯಪ್ರದೇಶ ಬೈ ಎಲೆಕ್ಷನ್​ ಎಕ್ಸಿಟ್​ ಪೋಲ್​: ಬಿಜೆಪಿಗೆ 17, ಕಾಂಗ್ರೆಸ್​ 11 ಕ್ಷೇತ್ರಗಳಲ್ಲಿ ಜಯ - ಮಧ್ಯಪ್ರದೇಶ ಇತ್ತೀಚಿನ ಸುದ್ದಿ

ಮಧ್ಯಪ್ರದೇಶದಲ್ಲಿ ನಡೆದ ಉಪ ಚುನಾವಣೆಯ ಎಕ್ಸಿಟ್​ ಪೋಲ್ ಫಲಿತಾಂಶ ಬಹಿರಂಗಗೊಂಡಿದ್ದು, ಇದರ ಪ್ರಕಾರ ಭಾರತೀಯ ಜನತಾ ಪಾರ್ಟಿ ಗೆಲುವು ಸಾಧಿಸಲಿದೆ ಎನ್ನಲಾಗಿದೆ.

Exit polls project MP
Exit polls project MP

By

Published : Nov 7, 2020, 9:40 PM IST

ನವದೆಹಲಿ: ಮಧ್ಯಪ್ರದೇಶದ 28 ಕ್ಷೇತ್ರಗಳಿಗೆ ಉಪ ಚುನಾವಣೆ ನಡೆದಿದ್ದು, ಇದರ ಫಲಿತಾಂಶ ಬರುವ ನವೆಂಬರ್​ 10ರಂದು ಪ್ರಕಟಗೊಳ್ಳಲಿದೆ. ಈ ಮಧ್ಯೆ ಚುನಾವಣೋತ್ತರ ಸಮೀಕ್ಷೆ ಫಲಿತಾಂಶ ಬಹಿರಂಗಗೊಂಡಿದೆ.

ವಿವಿಧ ಸಮೀಕ್ಷೆಗಳ ಪ್ರಕಾರ ಭಾರತೀಯ ಜನತಾ ಪಾರ್ಟಿ 16ರಿಂದ 18 ಕ್ಷೇತ್ರಗಳಲ್ಲಿ ಗೆಲುವು ದಾಖಲು ಮಾಡಲಿದ್ದು, ಕಾಂಗ್ರೆಸ್​ 11ರಲ್ಲಿ ಜಯ ಸಾಧಿಸಲಿದೆ ಎಂದು ತಿಳಿದು ಬಂದಿದೆ. ಉಪ ಚುನಾವಣೆಯಲ್ಲಿ ಬಿಜೆಪಿ ಶೇ. 46ರಷ್ಟು ಮತ ಪಡೆದುಕೊಂಡಿದ್ದು, ಕಾಂಗ್ರೆಸ್​ ಶೇ. 43ರಷ್ಟು ಮತ ಪಡೆದುಕೊಂಡಿದೆ ಎಂದು ಸಮೀಕ್ಷೆಯಲ್ಲಿ ತಿಳಿದು ಬಂದಿದೆ. ಇನ್ನು ಬಿಎಸ್​ಪಿ 1 ಕ್ಷೇತ್ರದಲ್ಲಿ ಜಯ ದಾಖಲು ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಬಿಹಾರ ಎಕ್ಸಿಟ್​​ ಪೋಲ್​ ಫಲಿತಾಂಶ ಬಹಿರಂಗ: ಸಮೀಕ್ಷೆಗಳ ಪ್ರಕಾರ ಈ ಮೈತ್ರಿಗೆ ಗೆಲುವು!?

ಕಾಂಗ್ರೆಸ್​ನ 25 ಶಾಸಕರು ದಿಢೀರ್ ರಾಜೀನಾಮೆ ನೀಡಿ ಬಿಜೆಪಿ ಸೇರಿಕೊಂಡಿದ್ದರಿಂದ ಈ ಉಪ ಚುನಾವಣೆ ನಡೆದಿದ್ದು, ಸದ್ಯ ಮಧ್ಯಪ್ರದೇಶದಲ್ಲಿ ಬಿಜೆಪಿ ಸರ್ಕಾರ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಬಿಜೆಪಿ 107 ಶಾಸಕರನ್ನು ಹೊಂದಿದ್ದು, ಮ್ಯಾಜಿಕ್​ ನಂಬರ್​ ಪಡೆದುಕೊಳ್ಳಲು 9 ಸೀಟು ಅವಶ್ಯಕತೆ ಇದೆ. ಸದ್ಯ ಕಾಂಗ್ರೆಸ್​ 87 ಶಾಸಕರನ್ನು ಹೊಂದಿದ್ದು, ಮ್ಯಾಜಿಕ್​ ನಂಬರ್​ 116 ಆಗಿದೆ.

ಆಕ್ಸಿಸ್​ ಇಂಡಿಯಾ ಟುಡೇ ಸಮೀಕ್ಷೆ

  • ಬಿಜೆಪಿ-17
  • ಕಾಂಗ್ರೆಸ್​ 11

ABOUT THE AUTHOR

...view details