ನವದೆಹಲಿ: ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಗಳ ಎಕ್ಸಿಟ್ ಪೋಲ್ ಫಲಿತಾಂಶ ಹೊರಬರುತ್ತಿದೆ. ವಿವಿಧ ಸಂಸ್ಥೆಗಳು ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ, ಛತ್ತೀಸ್‌ಗಢ ಮತ್ತು ಮಿಜೋರಾಂ ರಾಜ್ಯಗಳ ಚುನಾವಣೋತ್ತರ ಸಮೀಕ್ಷೆ ಹಾಗೂ ಮತಗಟ್ಟೆಗಳ ಸಮೀಕ್ಷೆಯ ವರದಿ ನೀಡುತ್ತಿವೆ. ರಾಜಸ್ಥಾನದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ನಿರೀಕ್ಷೆ ಇದೆ. ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ಏರ್ಪಟ್ಟಿದ್ದರೆ, ತೆಲಂಗಾಣದಲ್ಲಿ ಬಿಆರ್‌ಎಸ್ ಹಿನ್ನಡೆ ಸಾಧಿಸಲಿದೆ. ಛತ್ತೀಸ್‌ಗಢದಲ್ಲಿ ಕಾಂಗ್ರೆಸ್ ಮತ್ತೆ ಆಡಳಿತದ ಚುಕ್ಕಾಣಿ ಹಿಡಿಯುವ ಬಗ್ಗೆ ಭವಿಷ್ಯ ನುಡಿಯಲಾಗಿದೆ.
ಐದು ರಾಜ್ಯಗಳಿಗೆ ಏಕಕಾಲದಲ್ಲಿ ಚುನಾವಣೆ ಘೋಷಣೆ ಮಾಡಲಾಗಿತ್ತು. ನ.7ರಂದು ಮಿಜೋರಾಂನ ಎಲ್ಲ 40 ವಿಧಾನಸಭಾ ಸ್ಥಾನಗಳಿಗೆ ಮತದಾನ ನಡೆದಿತ್ತು. ಛತ್ತೀಸ್‌ಗಢದ 90 ಕ್ಷೇತ್ರಗಳಿಗೆ ನ.7 ಮತ್ತು ನ.17ರಂದು ಎರಡು ಹಂತದಲ್ಲಿ ಚುನಾವಣೆ ನಡೆಸಲಾಗಿತ್ತು. ನ.17ರಂದು ಮಧ್ಯಪ್ರದೇಶದಲ್ಲಿ ಒಂದೇ ಹಂತದಲ್ಲಿ ಎಲ್ಲ 230 ಕ್ಷೇತ್ರಗಳಿಗೆ ಮತದಾನ ನಡೆದಿತ್ತು. ರಾಜಸ್ಥಾನದ 200 ವಿಧಾನಸಭಾ ಕ್ಷೇತ್ರಗಳ ಪೈಕಿ 199 ಕ್ಷೇತ್ರಗಳಿಗೆ ನ.25ರಂದು ಮತದಾನವಾಗಿತ್ತು. ಇಂದು, ನ.30ರಂದು ತೆಲಂಗಾಣದ 119 ಕ್ಷೇತ್ರಗಳಿಗೆ ಮತದಾನ ಪೂರ್ಣಗೊಂಡಿದೆ. ಇದರ ಬೆನ್ನಲ್ಲೆ ಸಮೀಕ್ಷೆಗಳ ವರದಿಗಳು ಹೊರ ಬರುತ್ತಿವೆ.
ಛತ್ತೀಸ್‌ಗಢ ಎಕ್ಸಿಟ್ ಪೋಲ್: (ಒಟ್ಟು ಸ್ಥಾನ-90, ಮ್ಯಾಜಿಕ್ ನಂಬರ್-46)
- ಟಿವಿ9:ಬಿಜೆಪಿಗೆ 30-40, ಕಾಂಗ್ರೆಸ್‌ಗೆ 46-56, ಇತರರು 03-05 ಸ್ಥಾನ
- ಇಂಡಿಯಾ ಟುಡೇ - ಆಕ್ಸಿಸ್ ಮೈ ಇಂಡಿಯಾ: ಕಾಂಗ್ರೆಸ್‌ಗೆ 40-50, ಬಿಜೆಪಿಗೆ 36-46, ಇತರರು 1-5 ಸ್ಥಾನ
- ಮ್ಯಾಟ್ರಿಜ್: ಎಕ್ಸಿಟ್ ಪೋಲ್: ಬಿಜೆಪಿಗೆ 34-42 ಸ್ಥಾನ, ಕಾಂಗ್ರೆಸ್‌ಗೆ 44-52, ಇತರರು 0-2 ಸ್ಥಾನ
- ಟುಡೇಸ್ ಚಾಣಕ್ಯ: ಕಾಂಗ್ರೆಸ್‌ಗೆ 57, ಬಿಜೆಪಿಗೆ 33, ಇತರರು 0 ಸ್ಥಾನ
ಮಧ್ಯಪ್ರದೇಶದ ಎಕ್ಸಿಟ್ ಪೋಲ್: (ಒಟ್ಟು ಸ್ಥಾನ-230, ಮ್ಯಾಜಿಕ್ ನಂಬರ್-116)
- ಟಿವಿ9:ಬಿಜೆಪಿಗೆ 106-116, ಕಾಂಗ್ರೆಸ್‌ಗೆ 111-121, ಇತರರು 00-06 ಸ್ಥಾನ
- ರಿಪಬ್ಲಿಕ್ ಟಿವಿ: ಬಿಜೆಪಿಗೆ 118-130, ಕಾಂಗ್ರೆಸ್‌ಗೆ 97-107, ಇತರರು 0-2 ಸ್ಥಾನ
- ಪೋಲ್ಸ್ಟಾರ್: ಬಿಜೆಪಿಗೆ 106-116, ಕಾಂಗ್ರೆಸ್‌ಗೆ 111-121, ಇತರರು 0-6 ಸ್ಥಾನ
- ಜನ್ ಕಿ ಬಾತ್:ಬಿಜೆಪಿಗೆ 100-123, ಕಾಂಗ್ರೆಸ್‌ಗೆ 102-125, ಇತರರು 5 ಸ್ಥಾನ
- ಮ್ಯಾಟ್ರಿಜ್: ಬಿಜೆಪಿಗೆ 118-130, ಕಾಂಗ್ರೆಸ್‌ಗೆ 97-107, ಇತರರು 0-2 ಸ್ಥಾನ
- ಟುಡೇಸ್ ಚಾಣಕ್ಯ: ಬಿಜೆಪಿಗೆ 151 ± 12, ಕಾಂಗ್ರೆಸ್‌ಗೆ 74 ± 12, ಇತರರು 5 ± 4 ಸ್ಥಾನ