ವಾಷಿಂಗ್ಟನ್: ವಾಷಿಂಗ್ಟನ್ ವಿಶ್ವವಿದ್ಯಾನಿಲಯದ ಸಂಶೋಧನೆಯು ವೃದ್ಧರಲ್ಲಿ ವ್ಯಾಯಾಮದ ಪರಿಣಾಮ ಮತ್ತು ಪ್ರಯೋಜನ ಕುರಿತು ಅಧ್ಯಯನ ನಡೆಸಿದೆ. ಅದರ ವರದಿ ಪ್ರಕಾರ ಬುದ್ಧಿಮಾಂದ್ಯತೆ ಇಲ್ಲದ ಆರೋಗ್ಯವಂತ ವಯಸ್ಸಾದ ಜನರಲ್ಲಿ ವ್ಯಾಯಾಮವು ಸಾವಧಾನತೆಯ ಧ್ಯಾನವಲ್ಲ, ಅರಿವಿನ ಕಾರ್ಯಕ್ಷಮತೆಯನ್ನು ಸುಧಾರಿಸುತ್ತದೆ ಎಂದು ತಿಳಿಸಿತ್ತು.
ಈ ಸಂಗತಿ 65-84 ವರ್ಷ ವಯಸ್ಸಿನ 585 ಜನರ ಮೇಲೆ ಈ ಅಧ್ಯಯನವನ್ನು ನಡೆಸಿ ನಂತರ ದೃಢಪಟ್ಟಿತ್ತು. ಆದರೆ ಇದೀಗ ಅದೇ ವಿಷಯದ ಮೇಲೆ ಪುನಃ ಅಧ್ಯಯನದ ನಂತರ ವ್ಯಾಯಾಮವು ವಯಸ್ಸಾದ ವಯಸ್ಕರಲ್ಲಿ ಹೃದಯ ರಕ್ತನಾಳದ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡುತ್ತದೆ, ಮೂಳೆಗಳನ್ನು ಬಲಪಡಿಸುತ್ತದೆ ಮತ್ತು ಸಕಾರಾತ್ಮಕ ಭಾವನೆಗಳನ್ನು ಉಂಟುಮಾಡುತ್ತದೆ.