ಕಾನ್ಪುರ(ಉತ್ತರಪ್ರದೇಶ) :ಪುಟ್ಟ ಇತಿಹಾಸಕಾರನ ಪ್ರತಿಭೆ ಬೆರಗು ಹುಟ್ಟಿಸುವಂತಿದೆ. ಕಾನ್ಪುರದ 11 ವರ್ಷದ ಇತಿಹಾಸಕಾರ ಚೈಲ್ಡ್ ಪ್ರಾಡಿಜಿ ಯಶವರ್ಧನ್ ಪ್ರಪಂಚದಾದ್ಯಂತ ಅಭಿಮಾನಿಗಳನ್ನು ಸೆಳೆದಿದ್ದಾರೆ. ಶಿವಕತ್ರದ ನಿವಾಸಿ ಯಶವರ್ಧನ್ ಅವರು ಚಿಕ್ಕ ವಯಸ್ಸಿನಲ್ಲೇ ಹಲವು ಸಾಧನೆಗಳನ್ನು ತಮ್ಮ ಹೆಸರಿನಲ್ಲಿ ನೋಂದಾಯಿಸಿಕೊಂಡಿದ್ದಾರೆ.
ಕೆಲವು ದಿನಗಳ ಹಿಂದೆ ನಾಸಾ ಚಂದ್ರನತ್ತ ಬಾಹ್ಯಾಕಾಶ ನೌಕೆಯನ್ನು ಕಳುಹಿಸಿತ್ತು. ಅದರಲ್ಲಿ ಯಶವರ್ಧನ್ ಅವರ ಹೆಸರು ಸಹ ಸೇರಿತ್ತು. ಅಂತೆಯೇ, ಅವರು ಲಂಡನ್‌ನ ಹಾರ್ವರ್ಡ್ ಸಂಸ್ಥೆಯಿಂದ ಕಿರಿಯ ಇತಿಹಾಸಕಾರ ಪ್ರಶಸ್ತಿ ಸಹ ಪಡೆದಿದ್ದಾರೆ. ಅನೇಕ ನಾಗರಿಕ ಸೇವೆಗಳ ಆಕಾಂಕ್ಷಿಗಳಿಗೆ ಇತಿಹಾಸ, ಅಂತಾರಾಷ್ಟ್ರೀಯ ಸಂಬಂಧಗಳಂತಹ ವಿಷಯಗಳನ್ನು ಕಲಿಸುತ್ತಿದ್ದಾರೆ ಎಂಬುದು ಆಶ್ಚರ್ಯಕರ ವಿಷಯ. ಯಶವರ್ಧನ್ ಅವರ ತಂದೆ ಡಾ. ಆಯುಷ್ಮಾನ್ ಇವರು ಫಿಸಿಯೋಥೆರಪಿಸ್ಟ್ ಆಗಿದ್ದರೆ, ತಾಯಿ ಕಾಂಚನ್ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ.