ನವದೆಹಲಿ:ಸಾಮಾಜಿಕ ಕಾರ್ಯಗಳಿಂದ ಜನಪ್ರಿಯತೆ ಗಳಿಸಿರುವ ಬಾಲಿವುಡ್ ನಟ ಸೋನು ಸೂದ್, ಮುಂದಿನ ಯೋಜನೆಗಳು, ತಮ್ಮ ವಿರುದ್ಧ ಕೇಳಿ ಬಂದ ಆರೋಪಗಳು ಹಾಗು ರಾಜಕೀಯ ಸೇರುವ ಕುರಿತ ಪ್ರಶ್ನೆಗಳಿಗೆ ಉತ್ತರಿಸಿದರು.
1.ಕೋವಿಡ್‌ಗೂ ಮೊದಲು ಕೇವಲ ಸೋನು ಸೂದ್ ಆಗಿದ್ರಿ, ಇದೀಗ ನಿಮಗೆ ಸೂಪರ್ ಮ್ಯಾನ್ ಅಂತಾರಲ್ಲಾ?
ನಾನು ತುಂಬಾ ಸಾಮಾನ್ಯ ವ್ಯಕ್ತಿ. ಸಾಮಾನ್ಯ ಜನರೊಂದಿಗೆ ಸಂಪರ್ಕ ಹೊಂದಿದಾಗ ಮಾತ್ರ ನೈಜತೆ ಗೊತ್ತಾಗುತ್ತದೆ. ಅಗತ್ಯವಿರುವವರಿಗೆ ಸಹಾಯ ಮಾಡಿರುವುದು ನೆಮ್ಮದಿ ನೀಡಿದೆ. ಯಾರು, ಯಾವ ಹೆಸರಿಟ್ಟರು ಎಂಬುದು ಮುಖ್ಯವಲ್ಲ. ಅವರು ನಿಮ್ಮನ್ನು ತಮ್ಮವರೆಂದು ಪರಿಗಣಿಸಿದರೆ ಸಾಕು.
2. ಜನರು ನಿಮ್ಮ ಮೇಲಿಟ್ಟಿರುವ ನಂಬಿಕೆ ಈಡೇರಿಸಿದ್ದೀರಿ, ಮುಂದಿನ ಯೋಜನೆಗಳೇನು?
ಬಡವರಿಗೆ ಸಹಾಯ ಯಾವಾಗಲೂ ಅಗತ್ಯವಿದೆ. ಕೊರೊನಾ ಸಂದರ್ಭದಲ್ಲಿ ಜನರ ಸಮಸ್ಯೆಗಳು ಬೆಳಕಿಗೆ ಬಂದವು. ವಲಸೆ ಕಾರ್ಮಿಕರು ತಮ್ಮ ಮಕ್ಕಳೊಂದಿಗೆ ನಡೆದುಕೊಂಡು ಹೋಗುವುದನ್ನು ನೋಡಿದ್ದೇವೆ. ಈ ವೇಳೆ ನನ್ನ ಕೈಲಾದ ಸಹಾಯ ಮಾಡಿದ್ದೇನೆ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಜನರು ತೊಂದರೆ ಅನುಭವಿಸಿದ್ದಾರೆ. ಅವರಿಗೆ ನನ್ನಿಂದಾದ ಸಹಾಯ ಮಾಡಿರುವ ನೆಮ್ಮದಿ ಇದೆ. ಯಾವುದೇ ಮುಂದಾಲೋಚನೆ ಇಟ್ಟುಕೊಂಡು ಈ ಕೆಲಸ ಮಾಡಿಲ್ಲ.
3. ಸರ್ಕಾರಗಳೇ ಆರ್ಥಿಕತೆ ತೊಂದರೆ ಅನುಭವಿಸಿದಾಗ ನಿಮ್ಮ ಬಳಿ ಇಷ್ಟೊಂದು ಹಣ ಎಲ್ಲಿಂದ ಬಂತು ಎಂಬ ಪ್ರಶ್ನೆ ಕೇಳಿ ಬಂತಲ್ಲಾ?
ಸಹಾಯ ಮಾಡಲು ನಾನು ನನ್ನದೇ ಆದ ಹಾದಿ ಮಾಡಿಕೊಂಡಿದ್ದೇನೆ. ನನಗಿಂತಲೂ ಹೆಚ್ಚಿನ ಸಂಪನ್ಮೂಲ ಹೊಂದಿರುವ ಜನರು ನನ್ನ ಸುತ್ತಲೂ ಇದ್ದಾರೆ. ಅವರು ಸಹ ನನ್ನೊಂದಿಗೆ ಕೈ ಜೋಡಿಸಿದ್ದಾರೆ.
4. ಇಷ್ಟೊಂದು ಜನಮನ್ನಣೆ ಪಡೆದುಕೊಂಡಿರುವ ನೀವು ಚುನಾವಣೆಯಲ್ಲಿ ಏಕೆ ಸ್ಪರ್ಧಿಸಬಾರದು?
ರಾಜಕೀಯ ಒಂದು ಅದ್ಭುತ ಕ್ಷೇತ್ರ. ಆದರೆ, ಅಲ್ಲಿ ಸೇವೆ ಸಲ್ಲಿಸುತ್ತಿರುವ ಜನರಿಗೆ ವಿವಿಧ ರೀತಿಯ ಹೆಸರು ನೀಡಿದ್ದಾರೆ. ನಾನು ರಾಜಕೀಯ ವಿರೋಧಿಯಲ್ಲ. ಆದರೆ, ನಟನಾಗಿ ಇನ್ನೂ ಬಹಳಷ್ಟು ಮಾಡಬೇಕಾಗಿರುವುದು ಬಾಕಿ ಉಳಿದಿದೆ. ಅದಕ್ಕಾಗಿ ಸ್ವಂತ ಹಾದಿ ನಿರ್ಮಿಸಿಕೊಂಡು ನಂತರ ನಿರ್ಧಾರ ಕೈಗೊಳ್ಳುತ್ತೇನೆ. ಸದ್ಯದ ಪರಿಸ್ಥಿತಿಯಲ್ಲಿ ರಾಜಕೀಯ ಸೇರಲು ನಾನು ಸಿದ್ಧಗೊಂಡಿಲ್ಲ. ಈಗಲೂ ಜನರಿಗೆ ಸಹಾಯ ಮಾಡಲು ಸಿದ್ಧನಿದ್ದೇನೆ. ಆದರೆ, ರಾಜಕಾರಣಿಯಾಗುವಷ್ಟರ ಮಟ್ಟಿಗೆ ರೆಡಿಯಾಗಿಲ್ಲ.
5. ಸರ್ಕಾರಗಳಿಗಿಂತಲೂ ಜನರಿಗೆ ನಿಮ್ಮ ಮೇಲೆ ಹೆಚ್ಚಿನ ನಂಬಿಕೆ ಇದೆ, ಏನಂತೀರಿ?