ಕರ್ನಾಟಕ

karnataka

ETV Bharat / bharat

ನೀಟ್ ಪರೀಕ್ಷೆ ಎದುರಿಸುವುದು ಹೇಗೆ?: ದೇಶಕ್ಕೇ ಮೊದಲ ರ‍್ಯಾಂಕ್​ ಪಡೆದ ವರುಣ್ ಚಕ್ರವರ್ತಿ ವಿಶೇಷ ಸಂದರ್ಶನ

ನೀಟ್​ ಪರೀಕ್ಷೆಯಲ್ಲಿ ದೇಶಕ್ಕೆ ಆಂಧ್ರಪ್ರದೇಶದ ಶ್ರೀಕಾಕುಳಂನ ವರುಣ್ ಚಕ್ರವರ್ತಿ ನಂಬರ್​ 1 ರ‍್ಯಾಂಕ್​ ಪಡೆದು ಸೈ ಎನಿಸಿಕೊಂಡಿದ್ದಾರೆ. ಅವರು ಪರೀಕ್ಷೆಗೆ ಅನುಸರಿಸಿದ ಮಾರ್ಗದ ಬಗ್ಗೆ ಇಲ್ಲಿ ಮಾತನಾಡಿದ್ದಾರೆ. ಪರೀಕ್ಷೆ ತೆಗೆದುಕೊಳ್ಳುವ ವಿದ್ಯಾರ್ಥಿಗಳು ಇದನ್ನು ಅನುಸರಿಸಬಹುದು.

ವರುಣ್ ಚಕ್ರವರ್ತಿ ವಿಶೇಷ ಸಂದರ್ಶನ
ವರುಣ್ ಚಕ್ರವರ್ತಿ ವಿಶೇಷ ಸಂದರ್ಶನ

By

Published : Jun 19, 2023, 12:46 PM IST

ಹೈದರಾಬಾದ್:ನೀಟ್​(NEET) ಪರೀಕ್ಷೆ ಬರೆಯುವುದು ಅಷ್ಟು ಸುಲಭ ಸಾಧ್ಯವೇನೂ ಅಲ್ಲ. ವೈದ್ಯರಾಗುವ ಕನಸನ್ನು ನನಸು ಮಾಡಿಕೊಳ್ಳಲು ಹಲವು ವಿದ್ಯಾರ್ಥಿಗಳು ಪ್ರತಿ ವರ್ಷ ನೀಟ್ ಯುಜಿ ಪರೀಕ್ಷೆ ಬರೆಯುತ್ತಾರೆ. ಅಲ್ಲಿ ಕೆಲವರು ಯಶಸ್ವಿಯಾದರೆ, ಇನ್ನು ಕೆಲವರು ವಿಫಲರಾಗುತ್ತಾರೆ. ತೆಲುಗು ರಾಜ್ಯಗಳಲ್ಲಿಯೂ ಸಾಕಷ್ಟು ಮಂದಿ ಈ ಬಾರಿ ಯಶಸ್ವಿಯಾಗಿದ್ದಾರೆ. ಅದರಲ್ಲೂ ಶ್ರೀಕಾಕುಳಂನ ವರುಣ್ ಚಕ್ರವರ್ತಿ ಈ ಬಾರಿಯ ಪರೀಕ್ಷೆಯಲ್ಲಿ ದೇಶಕ್ಕೇ ಪ್ರಥಮ ರ‍್ಯಾಂಕ್ ಗಳಿಸಿದ್ದಾರೆ. ದೇಶಾದ್ಯಂತ ಲಕ್ಷಗಟ್ಟಲೆ ಜನರೊಂದಿಗೆ ಸ್ಪರ್ಧಿಸಿ ಮೊದಲ ರ‍್ಯಾಂಕ್ ಪಡೆದಿದ್ದು, ಇದಕ್ಕಾಗಿ ತಾವು ಪಟ್ಟ ಕಷ್ಟವನ್ನು ಅವರ ಮಾತಿನಲ್ಲೇ ನೋಡೋಣ.

ಉತ್ತಮ ರ‍್ಯಾಂಕ್ ಬರುತ್ತೆ ಅಂತ ಮೊದಲೇ ಭಾವಿಸಿದ್ದೆ. ಪರೀಕ್ಷೆ ಬರೆದ ಬಳಿಕ ಮೊದಲ ಕೀ ಉತ್ತರಗಳಲ್ಲಿ 715 ಅಂಕಗಳು ಬರುತ್ತವೆ ಎಂದು ಅಂದಾಜಿಸಿದ್ದೆ. ಅದಾದ ಬಳಿಕ ಎರಡನೇ ಬಾರಿ ಕೀ ಉತ್ತರ ಬಿಡುಗಡೆಯಾದ ನಂತರ ನಾನು ದೇಶಕ್ಕೆ ಮೊದಲ ರ‍್ಯಾಂಕ್ ಸಿಗುತ್ತದೆ ಎಂದು ಗೊತ್ತಾಗಿತ್ತು. ಫಲಿತಾಂಶ ಪ್ರಕಟವಾಗಿದ್ದು, 720ಕ್ಕೆ 720 ಅಂಕ ಬಂದಿವೆ. ಇದು ಆಕಸ್ಮಿಕ ಫಲಿತಾಂಶವಲ್ಲ. ಇದಕ್ಕಾಗಿ ನಾನು 2 ವರ್ಷಗಳಿಂದ ಅವಿರತ ಶ್ರಮ ಹಾಕಿದ್ದೇನೆ. ನೂರಾರು ಪರೀಕ್ಷೆಗಳನ್ನು ಬರೆದಿದ್ದೇನೆ. ಇದೆಲ್ಲದರ ಫಲವೇ ಈ ರ‍್ಯಾಂಕ್​ ಆಗಿದೆ.

10ನೇ ತರಗತಿಯಲ್ಲಿ ಗಣಿತ ವಿಷಯ ನನಗೆ ಕಷ್ಟವಾಗಿತ್ತು. ಅದೇ ಸಮಯದಲ್ಲಿ ಜೀವಶಾಸ್ತ್ರದಲ್ಲಿ ಆಸಕ್ತಿ ಬೆಳೆಸಿಕೊಂಡೆ. ಹಾಗಾಗಿ ಪಿಯುಸಿಯಲ್ಲಿ ಎಂಪಿಸಿ ಬದಲು ಬಿಐಪಿಸಿ ತೆಗೆದುಕೊಂಡೆ. ಮೊದಲ ವರ್ಷದ ಆರಂಭದಿಂದಲೇ ಸಾಮಾನ್ಯ ಪಠ್ಯಕ್ರಮದ ಜೊತೆಗೆ ನೀಟ್‌ಗೆ ಸಿದ್ಧತೆ ನಡೆಸಿದೆ. ವಾರಕ್ಕೊಮ್ಮೆ ಕಾಲೇಜಿನಲ್ಲಿ ಪರೀಕ್ಷೆ ಬರೆಯುತ್ತಿದ್ದೆ.

ಮೊದಲ ವರ್ಷದ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ಗಳಿಸುವತ್ತ ಸಂಪೂರ್ಣವಾಗಿ ಗಮನಹರಿಸಿದ್ದೆ. ಅಲ್ಲದೇ, ಎರಡನೇ ವರ್ಷದಲ್ಲಿ ಮೊದಲ ಮೂರು ತಿಂಗಳೊಳಗೆ ಪಠ್ಯಕ್ರಮವನ್ನೆಲ್ಲಾ ಓದಿ ಮುಗಿಸಿದೆ. ಬಳಿಕ ನಿರಂತರವಾಗಿ ನೀಟ್​ ಪರೀಕ್ಷೆ ಬರೆಯುವುದೇ ಕೆಲಸ ಮಾಡಿಕೊಂಡೆ. ನೀಟ್​ಗೆ 2 ತಿಂಗಳು ಬಾಕಿ ಇದ್ದರಿಂದ ಪ್ರತಿದಿನ ಗ್ರ್ಯಾಂಡ್ ಪರೀಕ್ಷೆಗಳನ್ನು ಬರೆಯುತ್ತಿದ್ದೆ. ಪ್ರತಿ ಪರೀಕ್ಷೆಯಲ್ಲಿ 700 ರಿಂದ 720 ಅಂಕಗಳನ್ನು ಪಡೆಯುತ್ತಿದ್ದೆ. ಮೊದಲಿನಿಂದಲೂ ಕೋಚಿಂಗ್ ತೆಗೆದುಕೊಂಡಿದ್ದರಿಂದ ಈ ರ‍್ಯಾಂಕ್​ ಗಳಿಸುವುದು ಕಷ್ಟವಾಗಲಿಲ್ಲ ಎಂದು ಅರುಣ್​ ಹೇಳುತ್ತಾರೆ.

NEET ರಾಷ್ಟ್ರೀಯ ಮಟ್ಟದ ಪರೀಕ್ಷೆಯಾಗಿರುವುದರಿಂದ ರಾಜ್ಯ ಪಠ್ಯಕ್ಕಿಂತ ಭಿನ್ನವಾಗಿತ್ತದೆ. NEET ಗಾಗಿ NCERT ಪುಸ್ತಕಗಳನ್ನು ಓದಬೇಕು. ಆ ಪಠ್ಯದಿಂದಲೇ ಪರೀಕ್ಷೆಯ ಎಲ್ಲ ಪ್ರಶ್ನೆಗಳು ಬರುತ್ತವೆ. ನಿರಂತರ ಅಭ್ಯಾಸ ಮಾಡುವುದು ಕಡ್ಡಾಯ. ನನ್ನ ಬಳಿ 'ಎರರ್ ಬುಕ್' ಎಂಬ ಪುಸ್ತಕವಿತ್ತು. ಪ್ರತಿ ಬಾರಿ ಪರೀಕ್ಷೆ ಬರೆಯುವಾಗ ಯಾವ ಪ್ರಶ್ನೆಗಳಿಗೆ ತಪ್ಪು ಉತ್ತರ ಬರೆದೆ, ಎಲ್ಲಿ ಅಂಕ ಕಳೆದುಕೊಂಡೆ ಎಂದು ಬರೆದುಕೊಳ್ಳುತ್ತಿದ್ದೆ. ನಾನು ಅವುಗಳನ್ನು ಮತ್ತೊಮ್ಮೆ ಓದುತ್ತಿದ್ದೆ. ಆ ಪ್ರಶ್ನೆಗಳನ್ನು ಮತ್ತೆ ಅಭ್ಯಾಸ ಮಾಡುತ್ತಿದ್ದೆ. ಅದೇ ತಪ್ಪು ಮರುಕಳಿಸಿದಂತೆ ಎಚ್ಚರ ವಹಿಸಿದ್ದೆ ಎಂದರು.

ರಸಾಯನಶಾಸ್ತ್ರ:ರಸಾಯನಶಾಸ್ತ್ರವನ್ನು NCERT ಪುಸ್ತಕಗಳಿಂದ ನೀಡಲಾಗುತ್ತದೆ. ಸಾವಯವ, ಅಜೈವಿಕ, ಭೌತಿಕ ಸೇರಿದಂತೆ ಎಲ್ಲ ವಿಭಾಗಗಳ ಪ್ರಶ್ನೆಗಳು ಬರುತ್ತವೆ. ಅನ್ವಯಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ. ಉಳಿದವು ಸಿದ್ಧಾಂತ ಆಧಾರಿತವಾಗಿವೆ. ಪುಸ್ತಕದಲ್ಲಿರುವಂತೆಯೇ ಓದಿ. ನಾನೂ ಅದನ್ನೇ ಮಾಡಿದೆ. ಇದು ತುಸು ಕಷ್ಟವಾದರೂ ನೆನಪಿಟ್ಟುಕೊಳ್ಳಬೇಕು. NEET ನಲ್ಲಿ ಹೆಚ್ಚಿನ ಪ್ರಶ್ನೆಗಳು ಸಿದ್ಧಾಂತದ ಆಧಾರಿತ ಪ್ರಶ್ನೆಗಳು ಬರುವುದರಿಂದ ನಾನು ಅದಕ್ಕೆ ಹೆಚ್ಚು ಗಮನ ಹರಿಸಿದ್ದೆ. ಅದಕ್ಕೆ ತಕ್ಕಂತೆ ತಯಾರಿ ನಡೆಸಿದ್ದೆ.

ಭೌತಶಾಸ್ತ್ರಕ್ಕೆ:ಭೌತಶಾಸ್ತ್ರದಲ್ಲಿ ಸಿದ್ಧಾಂತಗಳು ಮತ್ತು ಅಪ್ಲಿಕೇಶನ್ ಎರಡನ್ನೂ ಅಭ್ಯಾಸ ಮಾಡಿದೆ. ಲೆಕ್ಕಾಚಾರಗಳನ್ನು ಅಭ್ಯಾಸ ಮಾಡುವುದರ ಜೊತೆಗೆ, ನಾನು ಎನ್‌ಸಿಇಆರ್‌ಟಿ ಪುಸ್ತಕಗಳನ್ನು ಓದುವ ಮೂಲಕವೂ ತಯಾರಿ ನಡೆಸಿದೆ. ಹಿಂದಿನ ವರ್ಷದ ಎಲ್ಲ ಪತ್ರಿಕೆಗಳನ್ನು ಪುನಃ ಅಭ್ಯಾಸ ಮಾಡುತ್ತಿದ್ದೆ. ಅನೇಕ ವಿದ್ಯಾರ್ಥಿಗಳು ಲೆಕ್ಕಾಚಾರ ಆಧಾರಿತ ಪ್ರಶ್ನೆಗಳನ್ನು ತ್ವರಿತವಾಗಿ ಕಲಿಯುತ್ತಾರೆ. ಆದರೆ, ಸಿದ್ಧಾಂತ ಆಧಾರಿತವಾದವುಗಳ ಮೇಲೆ ಹೆಚ್ಚು ಗಮನಹರಿಸುವುದಿಲ್ಲ. ಆದರೆ, ಇದು ಸರಿಯಾದ ಕ್ರಮವಲ್ಲ ಎಂದು ನಾನು ಭಾವಿಸಿದೆ. ಆರಂಭದಲ್ಲಿ ಥಿಯರಿ ಆಧಾರಿತ ಪ್ರಶ್ನೆಗಳನ್ನು ಚೆನ್ನಾಗಿ ಕಲಿತರೆ ಲೆಕ್ಕಾಚಾರ ಆಧಾರಿತ ಪ್ರಶ್ನೆಗಳು ಸುಲಭವಾಗುತ್ತವೆ.

ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ:ಜೀವಶಾಸ್ತ್ರವು ಕಂಠಪಾಠಕ್ಕೆ ಸಂಬಂಧಿಸಿದೆ. ಪರೀಕ್ಷೆಗಳಲ್ಲಿಯೂ ಸಹ, ವಿದ್ಯಾರ್ಥಿಗಳು ಸಮಾನ ಅಂಕಗಳನ್ನು ಪಡೆದಾಗ, ರ‍್ಯಾಂಕ್ ನೀಡಲು ಈ ವಿಭಾಗದ ಅಂಕಗಳನ್ನು ಮಾತ್ರ ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಹಾಗಾಗಿ ನಾನು ಈ ವಿಷಯವನ್ನು ಅತ್ಯಂತ ಮಹತ್ವದಿಂದ ಅಧ್ಯಯನ ಮಾಡಿದೆ. ರಾಜ್ಯ ಪಠ್ಯಕ್ರಮ ಮತ್ತು ಎನ್‌ಸಿಇಆರ್‌ಟಿ ಪುಸ್ತಕಗಳ ನಡುವಿನ ವ್ಯತ್ಯಾಸವನ್ನು ವಿಶ್ಲೇಷಿಸಿ, ಪರೀಕ್ಷೆ ಮತ್ತು ಪ್ರಶ್ನೆಗಳಿಗೆ ಸೂಕ್ತ ಉತ್ತರಗಳನ್ನು ಅಭ್ಯಾಸ ಮಾಡಿದೆ.

ಪರೀಕ್ಷೆಯಲ್ಲಿ ಮೊದಲು ಜೀವಶಾಸ್ತ್ರ ವಿಭಾಗವನ್ನು ಪೂರ್ಣಗೊಳಿಸುವುದು ಉತ್ತಮ. ಅದರ ನಂತರ ಭೌತಶಾಸ್ತ್ರ ಮತ್ತು ಅಂತಿಮವಾಗಿ ರಸಾಯನಶಾಸ್ತ್ರವನ್ನು ಬರೆಯಿರಿ. ಲೆಕ್ಕಾಚಾರಗಳನ್ನು ಮಾಡುವಾಗ ಸಮಯ ವ್ಯರ್ಥವಾಗದಂತೆ ನೋಡಿಕೊಳ್ಳಿ ಎಂದು ಸಲಹೆ ನೀಡಿದರು.

ಪರೀಕ್ಷೆಗೆ ವರುಣ್​ ನೀಡಿದ ಸಲಹೆಗಳು

  • ಪ್ರಶ್ನೆಯನ್ನು ಓದುವಾಗ ತಪ್ಪು ಮಾಡಬೇಡಿ. ಪ್ರಶ್ನೆಯನ್ನು ಸರಿಯಾಗಿ ಓದಿ ಅರ್ಥಮಾಡಿಕೊಳ್ಳಬೇಕು
  • ಎಲ್ಲ ಪ್ರಶ್ನೆಗಳಿಗೂ ಉತ್ತರ ಗೊತ್ತಿದ್ದರೂ, ಅದನ್ನು ಖಚಿತಪಡಿಸಿಕೊಂಡ ನಂತರವೇ ಬರೆಯಬೇಕು
  • ದಿನಕ್ಕೆ 8 ರಿಂದ 11 ಗಂಟೆಗಳವರೆಗೆ ಅಧ್ಯಯನ ಮಾಡಬೇಕು
  • ಮೊಬೈಲ್ ಫೋನ್ ಮತ್ತು ಸಾಮಾಜಿಕ ಮಾಧ್ಯಮಗಳಿಂದ ಸಂಪೂರ್ಣವಾಗಿ ದೂರವಿರಿ
  • ಪ್ರತಿದಿನ ಸುದ್ದಿ ಪತ್ರಿಕೆಗಳನ್ನು ಓದುವುದನ್ನು ಕಡ್ಡಾಯ ಮಾಡಿಕೊಳ್ಳಿ
  • ಪರೀಕ್ಷೆಯ ಅವಧಿಯನ್ನು 20 ನಿಮಿಷ ಹೆಚ್ಚಿಸಿದರೆ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಅದಕ್ಕೆ ತಕ್ಕಂತೆ ಯೋಜನೆ ರೂಪಿಸಬಹುದು

ಇದನ್ನೂ ಓದಿ:Heat Waves: ಬಾಯಾರಿಕೆ ಇಲ್ಲದಿದ್ದರೂ ನೀರು ಕುಡಿಯಿರಿ, ತಲೆಗೆ ವಸ್ತ್ರ ಕಟ್ಟಿಕೊಳ್ಳಿ.. IMD 'ಆರೆಂಜ್​' ಅಲರ್ಟ್​!!

ABOUT THE AUTHOR

...view details