ಕೊಯಮತ್ತೂರು, ತಮಿಳುನಾಡು :ಉಕ್ರೇನ್ ಪರವಾಗಿ ಯುದ್ಧದಲ್ಲಿ ಭಾಗವಹಿಸಲು ತೆರಳಿರುವ ಕೊಯಮತ್ತೂರಿನ 21 ವರ್ಷದ ವಿದ್ಯಾರ್ಥಿ ಸೈನಿಕೇಶ್ ಭಾರತಕ್ಕೆ ಮರಳುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ ಎಂದು ಸೈನಿಕೇಶ್ ತಂದೆ ರವಿಚಂದ್ರನ್ ಸ್ಪಷ್ಟಪಡಿಸಿದ್ದಾರೆ.
ಈಟಿವಿ ಭಾರತದೊಂದಿಗೆ ಮಾತನಾಡಿರುವ ಅವರು, ಸೇನೆಯಲ್ಲಿ ಸೇವೆ ಸಲ್ಲಿಸುವ ಆಸೆ ಈಡೇರಿದ್ದು, ಯುದ್ಧ ನಡೆಯುತ್ತಿರುವುದರಿಂದ ಮಾತು ಮುಂದುವರಿಸಲು ಸಾಧ್ಯವಾಗುತ್ತಿಲ್ಲ ಎಂದು ಸೈನಿಕೇಶ್ ದೂರವಾಣಿಯಲ್ಲಿ ತಿಳಿಸಿದ್ದಾನೆ ಎಂದು ಮಾಹಿತಿ ನೀಡಿದ್ದಾರೆ.
ಉಕ್ರೇನ್ ಸೇನೆಯಲ್ಲಿ ಸೈನಿಕೇಶ್ ರಷ್ಯಾ ವಿರುದ್ಧದ ಯುದ್ಧದಲ್ಲಿ ಉಕ್ರೇನ್ ಪರವಾಗಿ ಬೇರೆ ದೇಶಗಳ ಜನರೂ ಭಾಗವಹಿಸಬಹುದು ಎಂದು ಉಕ್ರೇನ್ ಸರ್ಕಾರ ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಉಕ್ರೇನಿಯನ್ ಅರೆಸೇನಾ ಪಡೆಗಳನ್ನು ಸೈನಿಕೇಶ್ ಸೇರಿದ್ದಾನೆ ಎಂದು ಕೇಂದ್ರ ಮತ್ತು ತಮಿಳುನಾಡು ಗುಪ್ತಚರ ಅಧಿಕಾರಿಗಳು ಖಚಿತಪಡಿಸಿದ್ದಾರೆ.
ಭಾರತೀಯ ಸೇನೆಗೆ ಸೇರಲು ಸಾಕಷ್ಟು ಎತ್ತರದ ದೇಹ ಇಲ್ಲದ ಕಾರಣದಿಂದ ಆತ ಉಕ್ರೇನ್ ಸೇನೆ ಸೇರುವ ಮೂಲಕ ತನ್ನ ಆಸೆಯನ್ನು ಈಡೇರಿಸಿಕೊಂಡಿದ್ದಾನೆ ಎನ್ನಲಾಗಿದೆ. ಆತನನ್ನು ಭಾರತೀಯ ರಾಯಭಾರ ಕಚೇರಿ ಮತ್ತು ಸುದ್ದಿಸಂಸ್ಥೆಗಳು ಸಂಪರ್ಕಿಸಲು ಪ್ರಯತ್ನಿಸುತ್ತಿವೆ.
ಇದನ್ನೂ ಓದಿ:ತಾಯಿ ನಿದ್ರಿಸುತ್ತಿದ್ದಾಳೆ ಎಂದು ಭಾವಿಸಿ, ಮೃತದೇಹದೊಂದಿಗೆ ನಾಲ್ಕು ದಿನ ಕಳೆದ ಬಾಲಕ