ನವದೆಹಲಿ:ದೇಶದಲ್ಲಿ ಸಾಕಷ್ಟು ವಿವಾದ ಮತ್ತು ವಿರೋಧಕ್ಕೆ ಕಾರಣವಾದ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಅನುಷ್ಠಾನ ಇನ್ನೂ ಅನಿಶ್ಚಿತತೆಯಿಂದ ಕೂಡಿದೆ. ಈ ಕಾಯ್ದೆಯಡಿ ರೂಪಿಸಬೇಕಾದ ನಿಯಮಗಳು ಇನ್ನೂ ಕೇಂದ್ರ ಸರ್ಕಾರ ಅಂತಿಮಗೊಳಿಸಿಲ್ಲ. ಈ ನಿಯಮಗಳ ರೂಪಿಸಲು ಮತ್ತುಷ್ಟ ಕಾಲ ತೆಗೆದುಕೊಳ್ಳುವ ಸಾಧ್ಯತೆ ಇದೆ.
ಸಿಎಎ ಕಾಯ್ದೆಯು 2019ರ ಡಿಸೆಂಬರ್ 11ರಂದು ಸಂಸತ್ತಿನಲ್ಲಿ ಅಂಗೀಕರವಾಗಿತ್ತು. ಇದರ ಮರು ದಿನವೇ ಅಂದರೆ 12ರಂದು ರಾಷ್ಟ್ರಪತಿ ರಮಾನಾಥ ಕೋವಿಂದ್ ಒಪ್ಪಿಗೆ ಸೂಚಿಸಿದ್ದರು. 2020ರ ಜನವರಿ 1ರಿಂದಲೇ ಈ ಕಾಯ್ದೆ ಜಾರಿ ಬಂದಿದೆ. ಆದರೆ, ಈ ಕಾಯ್ದೆ ಅನ್ವಯದ ನಿಯಮಗಳು ಇನ್ನೂ ರೂಪಿಸಿಲ್ಲ.
ಈ ನಿಮಯಗಳ ರೂಪಿಸಿ, ಭಾರತದ ಗೆಜೆಟ್ನಲ್ಲಿ ಪ್ರಕಟಿಸುವ ಸಂಬಂಧ ಸಂಸತ್ತಿನ ಲೋಕಸಭೆ ಮತ್ತು ರಾಜ್ಯಸಭೆಯ ಸಮಿತಿಗಳಿಗೆ ಕೇಂದ್ರ ಗೃಹ ಸಚಿವಾಲಯವು 2021ರ ಏಪ್ರಿಲ್ 9ರವರೆಗೆ ಸಮಯ ಕೋರಿತ್ತು. ಬಳಿಕ ಜುಲೈವರೆಗೂ ಕಾಲಾವಕಾಶವನ್ನು ಪಡೆಯಲಾಗಿತ್ತು. ಆದರೂ, ಇನ್ನೂ ಕಾರ್ಯ ಪೂರ್ಣಗೊಂಡಿಲ್ಲ ಎಂದು 'ಈಟಿವಿ ಭಾರತ'ಕ್ಕೆ ಮೂಲಗಳು ಖಚಿತ ಪಡಿಸಿವೆ.