ಕರ್ನಾಟಕ

karnataka

ETV Bharat / bharat

ಅಬಕಾರಿ ನೀತಿ ಪ್ರಕರಣ: ದೆಹಲಿ ಸಿಎಂ ಕೇಜ್ರಿವಾಲ್​ಗೆ ಸಿಬಿಐ ಸಮನ್ಸ್

ಅಬಕಾರಿ ನೀತಿ ಪ್ರಕರಣದಲ್ಲಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರಿಗೆ ಸಿಬಿಐ ಸಮನ್ಸ್ ಜಾರಿಗೊಳಿಸಿದೆ.

Excise policy case: CBI summons Delhi CM Arvind Kejriwal
ದೆಹಲಿ ಸಿಎಂ ಕೇಜ್ರಿವಾಲ್​ಗೆ ಸಿಬಿಐ ಸಮನ್ಸ್

By

Published : Apr 14, 2023, 5:40 PM IST

Updated : Apr 14, 2023, 5:57 PM IST

ನವದೆಹಲಿ: ಸಾಕಷ್ಟು ವಿವಾದಕ್ಕೆ ಕಾರಣವಾಗಿರುವ ಅಬಕಾರಿ ನೀತಿ ಪ್ರಕರಣದಲ್ಲಿ ಆಮ್​ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರಿಗೆ ಸಿಬಿಐ ಸಮನ್ಸ್ ಜಾರಿ ಮಾಡಿದೆ. ಏಪ್ರಿಲ್ 16ರಂದು ಬೆಳಗ್ಗೆ 11ಕ್ಕೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.

ಇದನ್ನೂ ಓದಿ:ಸಾರ್ವಜನಿಕ ಆಸ್ತಿಗಳ ಮೇಲೆ ಅಕ್ರಮವಾಗಿ ಪೋಸ್ಟರ್ ಅಂಟಿಸಿದ ಪ್ರಕರಣ: ಕೇಜ್ರಿವಾಲ್​ಗೆ ನೋಟಿಸ್​ ಜಾರಿ

ದೆಹಲಿ ಸರ್ಕಾರವು ಜಾರಿಗೆ ತರಲು ಹೊರಟಿದ್ದ ಅಬಕಾರಿ ನೀತಿ ಹಗರಣದ ಬಗ್ಗೆ ಸಿಬಿಐ ಮತ್ತು ಜಾರಿ ನಿರ್ದೇಶನಾಲಯವು ಪ್ರತ್ಯೇಕವಾಗಿ ತನಿಖೆ ನಡೆಸುತ್ತಿದೆ. ಇದೇ ಪ್ರಕರಣದಲ್ಲಿ ಡಿಸಿಎಂ ಆಗಿದ್ದ ಮನೀಶ್​ ಸಿಸೋಡಿಯಾರನ್ನು ತನಿಖಾ ಸಂಸ್ಥೆಗಳು ಬಂಧಿಸಿವೆ. ಅಲ್ಲದೇ, ತೆಲಂಗಾಣ ಸಿಎಂ ಕೆ.ಚಂದ್ರಶೇಖರ್ ರಾವ್​ ಪುತ್ರಿ ಕವಿತಾ ಸೇರಿ ಹಲವು ರಾಜಕಾರಣಿಗಳನ್ನು ಕೇಂದ್ರೀಯ ತನಿಖಾ ಸಂಸ್ಥೆಗಳು ವಿಚಾರಣೆಗೆ ಒಳಪಡಿಸಿವೆ. ಇದರ ನಡುವೆ ಇಂದು ಖುದ್ದು ಸಿಎಂ ಕೇಜ್ರಿವಾಲ್ ಅವರಿಗೆ ಸಿಬಿಐ ಸಮನ್ಸ್​ ಜಾರಿಗೊಳಿಸಿದೆ.

ಇದನ್ನೂ ಓದಿ:ಕೇಜ್ರಿವಾಲ್ ಸಂಪುಟಕ್ಕೆ ಡಿಸಿಎಂ ಸಿಸೋಡಿಯಾ, ಸಚಿವ ಸತ್ಯೇಂದ್ರ ಜೈನ್ ರಾಜೀನಾಮೆ

ಇದೇ ಪ್ರಕರಣ ಸಂಬಂಧ ಇಂದು ಬೆಳಗ್ಗೆ ಮಾತನಾಡಿದ್ದ ಕೇಜ್ರಿವಾಲ್, ಜಾರಿ ನಿರ್ದೇಶನಾಲಯವು ಸುಳ್ಳು ಸಾಕ್ಷ್ಯಗಳೊಂದಿಗೆ ನ್ಯಾಯಾಲಯವನ್ನು ''ತಪ್ಪು ದಾರಿಗೆಳೆಯುತ್ತಿದೆ'' ಎಂದು ಆರೋಪಿಸಿದ್ದರು. ''ಜನರಿಗೆ ಚಿತ್ರಹಿಂಸೆ ನೀಡಿ ಒತ್ತಡ ಹೇರುವ ಮೂಲಕ ಇಡಿ ಸುಳ್ಳು ಹೇಳಿಕೆಗಳನ್ನು ನೀಡುತ್ತಿದೆ. ಸಂಜಯ್ ಸಿಂಗ್ ಪ್ರಕರಣದಲ್ಲೂ ಆರೋಪಿಗಳು ವಿಭಿನ್ನ ಹೇಳಿಕೆ ನೀಡಿದ್ದು, ಚಾರ್ಜ್​ಶೀಟ್​ನಲ್ಲಿ ಇಡಿ ಇನ್ನೇನೋ ಬರೆದಿರುವುದು ಬೆಳಕಿಗೆ ಬಂದಿದೆ'' ಎಂದು ಕೇಜ್ರಿವಾಲ್ ದೂರಿದ್ದರು.

ಇದೇ ಸಂದರ್ಭದಲ್ಲಿ ಮಾಜಿ ಡಿಸಿಎಂ ಮನೀಶ್ ಸಿಸೋಡಿಯಾ ತಮ್ಮ ಮೊಬೈಲ್ ಫೋನ್‌ಗಳನ್ನು ನಾಶಪಡಿಸಿದ್ದಾರೆ ಎಂದು ಇಡಿ ಆರೋಪದ ಕುರಿತು ಪ್ರಶ್ನೆಗೆ ಪ್ರತಿಕ್ರಿಯಿಸಿದ್ದ ಅವರು, ಸಿಸೋಡಿಯಾ ಅವರ ಫೋನ್‌ಗಳನ್ನು ಒಡೆದಿದ್ದಾರೆ ಎಂದು ಇಡಿ ಹೇಳಿಕೊಂಡಿದೆ. ಆದರೆ, ಅವುಗಳಲ್ಲಿ ಹಲವು ಫೋನ್‌ಗಳು ಏಜೆನ್ಸಿಯ ವಶದಲ್ಲಿವೆ. ಇಡಿ ಸುಳ್ಳು ಸಾಕ್ಷ್ಯಗಳೊಂದಿಗೆ ನ್ಯಾಯಾಲಯವನ್ನು ದಾರಿ ತಪ್ಪಿಸುತ್ತಿದೆ. ಸುಳ್ಳು ಹೇಳಿಕೆಗಳನ್ನು ತೆಗೆದುಕೊಳ್ಳುತ್ತಿದೆ. ಇಡೀ ವಿಷಯವು ಕಟ್ಟುಕಥೆಯಾಗಿದೆ ಮತ್ತು ಸುಳ್ಳು ಸಾಕ್ಷ್ಯವನ್ನು ಆಧರಿಸಿದೆ. ಇದು ಒಳ್ಳೆಯದಲ್ಲ ಎಂದು ಅಸಮಾಧಾನ ಹೊರ ಹಾಕಿದ್ದರು.

ಇದನ್ನೂ ಓದಿ:ದೆಹಲಿ ಅಬಕಾರಿ ನೀತಿ ಹಗರಣ: ಮನೀಶ್​ ಸಿಸೋಡಿಯಾ ಬಂಧನ 14 ದಿನ ವಿಸ್ತರಣೆ

Last Updated : Apr 14, 2023, 5:57 PM IST

ABOUT THE AUTHOR

...view details