ಕರ್ನಾಟಕ

karnataka

ETV Bharat / bharat

10 ಕೋಟಿ ರೂ. ಅವ್ಯವಹಾರ ಆರೋಪ : TMC ಬಿಟ್ಟು BJP ಸೇರಿದ್ದ ಮಾಜಿ ಸಚಿವನ ಬಂಧನ

ವಿಚಾರಣೆ ವೇಳೆ ಪೊಲೀಸರು ಕೇಳಿದ ಪ್ರಶ್ನೆಗಳಿಗೂ ಸರಿಯಾದ ಉತ್ತರ ನೀಡಲು ಶ್ಯಾಮ್‌ ಪ್ರಸಾದ್ ಮುಖರ್ಜಿ ವಿಫಲವಾದ ಕಾರಣ ಅವರನ್ನು ಬಂಧಿಸಲಾಗಿದೆ ಎಂದು ಬಂಕುರಾ ಪೊಲೀಸ್​ ವರಿಷ್ಠಾಧಿಕಾರಿ ಧೃತಿಮಾನ್ ಸರ್ಕಾರ್ ತಿಳಿಸಿದ್ದಾರೆ..

Ex-TMC minister, who joined BJP, arrested on graft charge
ಶ್ಯಾಮಪ್ರಸಾದ್ ಮುಖರ್ಜಿ

By

Published : Aug 22, 2021, 4:09 PM IST

ಬಂಕುರಾ (ಪಶ್ಚಿಮಬಂಗಾಳ): ಈ ವರ್ಷದ ವಿಧಾನಸಭಾ ಚುನಾವಣೆಗೆ ಮುನ್ನ ತೃಣಮೂಲ ಕಾಂಗ್ರೆಸ್​ (ಟಿಎಂಸಿ) ಬಿಟ್ಟು ಬಿಜೆಪಿಗೆ ಸೇರ್ಪಡೆಗೊಂಡಿದ್ದ ಪಶ್ಚಿಮ ಬಂಗಾಳದ ಮಾಜಿ ಸಚಿವ ಶ್ಯಾಮ್‌ ಪ್ರಸಾದ್ ಮುಖರ್ಜಿ ಅವರನ್ನು ಅಕ್ರಮ ಹಣಕಾಸು ವ್ಯವಹಾರದ ಆರೋಪದ ಮೇಲೆ ಬಂಧಿಸಲಾಗಿದೆ.

ಬಿಷ್ಣುಪುರದ ಮಾಜಿ ಶಾಸಕರಾಗಿದ್ದ ಶ್ಯಾಮ್‌ ಪ್ರಸಾದ್ ಮುಖರ್ಜಿ ಅವರು 2020ರಲ್ಲಿ ಸ್ಥಳೀಯ ಸಂಸ್ಥೆಯೊಂದರಲ್ಲಿ ಅಧ್ಯಕ್ಷರಾಗಿದ್ದಾಗ ಇ-ಟೆಂಡರ್ ಮತ್ತು ಇತರ ವ್ಯವಹಾರಗಳಲ್ಲಿ ಬರೋಬ್ಬರಿ 9.91 ಕೋಟಿ ರೂ. ಹಣ ದುರುಪಯೋಗ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಈ ಸಂಬಂಧ ತನಿಖೆ ಕೈಗೊಂಡಿದ್ದ ಪೊಲೀಸರು ಇದೀಗ ಅವರನ್ನು ಅರೆಸ್ಟ್ ಮಾಡಿದ್ದಾರೆ.

ಇದನ್ನೂ ಓದಿ: ಯುವತಿ ಜೊತೆಗಿನ ನಗ್ನ ವಿಡಿಯೋ ಇದೆ ಎಂದು ಬಿಜೆಪಿ ಮುಖಂಡನಿಗೆ ಬ್ಲ್ಯಾಕ್ ಮೇಲ್!

ವಿಚಾರಣೆ ವೇಳೆ ಪೊಲೀಸರು ಕೇಳಿದ ಪ್ರಶ್ನೆಗಳಿಗೂ ಸರಿಯಾದ ಉತ್ತರ ನೀಡಲು ಶ್ಯಾಮ್‌ ಪ್ರಸಾದ್ ಮುಖರ್ಜಿ ವಿಫಲವಾದ ಕಾರಣ ಅವರನ್ನು ಬಂಧಿಸಲಾಗಿದೆ ಎಂದು ಬಂಕುರಾ ಪೊಲೀಸ್​ ವರಿಷ್ಠಾಧಿಕಾರಿ ಧೃತಿಮಾನ್ ಸರ್ಕಾರ್ ತಿಳಿಸಿದ್ದಾರೆ.

ABOUT THE AUTHOR

...view details