ಕರ್ನಾಟಕ

karnataka

ETV Bharat / bharat

ಬಿಜೆಪಿ ಸೇರಿದ ಮಾಜಿ ಸಂಸದ ಕೊಂಡ ವಿಶ್ವೇಶ್ವರ ರೆಡ್ಡಿ: ಮೋದಿ ಸಮಾವೇಶದಲ್ಲಿ ಗದ್ದರ್ ಪ್ರತ್ಯಕ್ಷ - ಅಪೋಲೋ ಆಸ್ಪತ್ರೆಗಳ ವ್ಯವಸ್ಥಾಪಕ ನಿರ್ದೇಶಕಿ ಸಂಗೀತಾ ರೆಡ್ಡಿ

ವಿಶ್ವೇಶ್ವರ ರೆಡ್ಡಿ ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದು, ಅಮೆರಿಕದ ನ್ಯೂಜೆರ್ಸಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಸಹಾಯಕ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಅಲ್ಲದೇ, ಎಂಜಿನಿಯರಿಂಗ್ ಸಂಶೋಧನೆ ಮತ್ತು ಅಭಿವೃದ್ಧಿ ಕಂಪನಿಯಾದ ಸಿಟಾಡೆಲ್ ರಿಸರ್ಚ್ ಆ್ಯಂಡ್​ ಸೊಲ್ಯೂಷನ್ಸ್​ನ ಸ್ಥಾಪಕರಾಗಿದ್ದಾರೆ.

ex-telangana-mp-vishweshwar-reddy-joins-bjp
ಬಿಜೆಪಿ ಸೇರಿದ ಮಾಜಿ ಸಂಸದ ಕೊಂಡ ವಿಶ್ವೇಶ್ವರ ರೆಡ್ಡಿ: ಮೋದಿ ಸಮಾವೇಶದಲ್ಲಿ ಗದ್ದರ್ ಪ್ರತ್ಯಕ್ಷ

By

Published : Jul 3, 2022, 8:25 PM IST

ಹೈದರಾಬಾದ್​ (ತೆಲಂಗಾಣ): ದೇಶದ ಶ್ರೀಮಂತ ರಾಜಕಾರಣಿಗಳಲ್ಲಿ ಒಬ್ಬರಾದ ಮಾಜಿ ಸಂಸದ ಕೊಂಡ ವಿಶ್ವೇಶ್ವರ ರೆಡ್ಡಿ ಇಂದು ಹೈದರಾಬಾದ್​​ನಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಪ್ರಧಾನಿ ಮೋದಿ ಭಾಗವಹಿಸಿದ್ದ ಬೃಹತ್ ಸಮಾವೇಶದಲ್ಲಿ ರೆಡ್ಡಿ ಕಮಲ ಪಕ್ಷಕ್ಕೆ ಸೇರಿದರು.

ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಭಾಗವಾಗಿ ಇಲ್ಲಿನ ಪರೇಡ್​ ಮೈದಾನದಲ್ಲಿ ನಡೆದ ಬೃಹತ್​ ಸಮಾವೇಶದಲ್ಲಿ ಗೃಹ ಸಚಿವ ಅಮಿತ್​ ಶಾ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ರೆಡ್ಡಿ ಅವರನ್ನು ಪಕ್ಷಕ್ಕೆ ಸ್ವಾಗತಿಸಿದರು.

ಕಳೆದ ವಾರ ತೆಲಂಗಾಣ ಬಿಜೆಪಿ ರಾಜ್ಯಾಧ್ಯಕ್ಷ ಬಂಡಿ ಸಂಜಯ್​ ಮತ್ತು ಪಕ್ಷದ ರಾಷ್ಟ್ರೀಯ ಪ್ರಧಾನಿ ಕಾರ್ಯದರ್ಶಿ ತರುಣ್​ ಚುಗ್ ಅವರನ್ನು ವಿಶ್ವೇಶ್ವರ ರೆಡ್ಡಿ ಭೇಟಿ ಮಾಡಿ, ಕೇಸರಿ ಪಡೆ ಸೇರುವ ಬಗ್ಗೆ ನಿರ್ಧಾರ ಕೈಗೊಂಡಿದ್ದರು. ಈ ವೇಳೆ ಮಾತನಾಡಿದ್ದ ಅವರು ತೆಲಂಗಾಣದಲ್ಲಿ ಆಡಳಿತಾರೂಢ ಟಿಆರ್‌ಎಸ್​ಗೆ ಬಿಜೆಪಿ ಮಾತ್ರವೇ ಪರ್ಯಾಯ ಶಕ್ತಿ ಎಂದಿದ್ದರು.

ಬಿಜೆಪಿ ಸೇರಿದ ಮಾಜಿ ಸಂಸದ ಕೊಂಡ ವಿಶ್ವೇಶ್ವರ ರೆಡ್ಡಿ

ಯಾರು ಈ ರೆಡ್ಡಿ?: ವೃತ್ತಿಯಲ್ಲಿ ಇಂಜಿನಿಯರ್ ಆಗಿ ವಿಶ್ವೇಶ್ವರ ರೆಡ್ಡಿ, ಅಪೋಲೋ ಆಸ್ಪತ್ರೆಗಳ ವ್ಯವಸ್ಥಾಪಕ ನಿರ್ದೇಶಕಿ ಸಂಗೀತಾ ರೆಡ್ಡಿ ಅವರ ಪತಿ. 2019ರ ಚುನಾವಣೆಯಲ್ಲಿ ತಮಗೆ 895 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಇದೆ ಎಂದು ಘೋಷಿಸಿದ್ದರು.

2014ರಲ್ಲಿ ಟಿಆರ್‌ಎಸ್​ ಅಭ್ಯರ್ಥಿಯಾಗಿ ಚೆವೆಲ್ಲಾ ಕ್ಷೇತ್ರದಿಂದ ಸ್ಪರ್ಧಿಸಿ ಲೋಕಸಭೆಗೆ ಪ್ರವೇಶಿಸಿದ್ದರು. ನಂತರ ಅವರು 2019ರ ಚುನಾವಣೆಗೆ ಮೊದಲು ಟಿಆರ್​ಎಸ್​ ತೊರೆದು ಕಾಂಗ್ರೆಸ್ ಸೇರಿದ್ದರು. ಆಗ ಚೇವೆಲ್ಲಾ ಕ್ಷೇತ್ರದಿಂದ ಮತ್ತೊಮ್ಮೆ ಆಯ್ಕೆ ಬಯಸಿ ಸ್ಪರ್ಧಿಸಿದ್ದರು. ಆದರೆ, ಟಿಆರ್​ಎಸ್​​ ಅಭ್ಯರ್ಥಿ ಎದುರು ಸೋಲು ಕಂಡಿದ್ದರು. ಇತ್ತೀಚಿಗೆ ಅವರು ಹೊಸ ಪಕ್ಷ ಕಟ್ಟುವ ಸುಳಿವು ಸಹ ನೀಡಿದ್ದರು.

ಗದ್ದರ್ ಪ್ರತ್ಯಕ್ಷ: ತೆಲಂಗಾಣದ ಕ್ರಾಂತಿಕಾರಿ ಗಾಯಕ ಗದ್ದರ್ ಪ್ರತ್ಯಕ್ಷ ಬಿಜೆಪಿಯ ಬಹಿರಂಗ ಸಭೆಯಲ್ಲಿ ಪ್ರತ್ಯಕ್ಷವಾಗಿ ಅಚ್ಚರಿ ಮೂಡಿಸಿದರು. ಈ ವೇಳೆ ಮಾತನಾಡಿದ ಅವರು, ದೇಶ ಮತ್ತು ತೆಲಂಗಾಣದ ಕುರಿತು ಪ್ರಧಾನಿ ಮೋದಿ ಏನು ಮಾತನಾಡುತ್ತಾರೆ ಎಂದು ಕೇಳಲು ಬಂದಿರುವೆ ಎಂದಷ್ಟೇ ಹೇಳಿದರು.

ಇದನ್ನೂ ಓದಿ:ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ: ಖಾದ್ಯಗಳನ್ನು ಖುದ್ದಾಗಿ ಪರಿಶೀಲಿಸಿ ರುಚಿ ಸವಿದ ಪ್ರಧಾನಿ

ABOUT THE AUTHOR

...view details