ಪಿಥೋರಗಢ: ದೇವಲಥಾಲ್ ಪ್ರದೇಶದ ಲೋಹ್ಕೋಟ್ ಗ್ರಾಮದ ನಿವಾಸಿ 86 ವರ್ಷದ ವೃದ್ಧೆ ಪರುಲಿ ದೇವಿ ಎಂಬುವವರು 69 ವರ್ಷಗಳ ನಂತರ ಕೌಟಂಬಿಕ ಪಿಂಚಣಿ ಯೋಜನೆ ಹಣ ಪಡೆದಿದ್ದಾರೆ.
83 ವರ್ಷದ ಪರುಲಿ ದೇವಿಯ ಪತಿ ಗಗನ್ ಸಿಂಗ್ ಅವರನ್ನು ಭಾರತೀಯ ಸೇನೆಗೆ ನೇಮಕವಾಗಿದ್ದರು. 12ನೇ ವಯಸ್ಸಿನಲ್ಲಿ ಪರುಲಿ ದೇವಿ ಗಗನ್ ಸಿಂಗ್ ಅವರನ್ನು ಮದುವೆಯಾದರು. ಪತಿ ಗಗನ್ 1952ರಲ್ಲಿ ಸೇನೆಯಲ್ಲಿ ಕರ್ತವ್ಯದಲ್ಲಿ ಇದ್ದಾಗ ಮೃತರಾದರು.
ಸರ್ಕಾರಿ ಆಡಳಿತದ ನಿರ್ಲಕ್ಷ್ಯದಿಂದಾಗಿ ಅವರಿಗೆ ಕಳೆದ 69 ವರ್ಷಗಳಿಂದ ಸೇನೆಯ ಕೌಟಂಬಿಕ ಪಿಂಚಣಿ ಹಣ ಸಿಕ್ಕಿರಲಿಲ್ಲ. ಪಿಥೋರಗಢ ಟ್ರಸರರಿ ನಿವೃತ್ತ ಉಪ ಖಜಾಂಚಿ ಡಿ.ಎಸ್.ಭಂಡಾರಿ ಅವರ ಪ್ರಯತ್ನದಿಂದ ಪರುಲಿ ದೇವಿ ಈಗ ಪಿಂಚಣಿ ಪಡೆಯುತ್ತಿದ್ದಾರೆ. 1977ರಿಂದ 44 ವರ್ಷಗಳ ಕಾಲ ಬಾಕಿ ಉಳಿಸಿಕೊಂಡಿದ್ದ ಪಿಂಚಣಿ ಮೊತ್ತ ಸುಮಾರು 20 ಲಕ್ಷ ರೂ. ಅನ್ನು ಪರುಲಿ ಅವರಿಗೆ ಪಾವತಿಸಲಾಗಿದೆ.
ಪರುಲಿ ದೇವಿಯ ಅವರ ಮನೆ ಪಿಥೋರಗಢ ಜಿಲ್ಲಾ ಕೇಂದ್ರದಲ್ಲಿ ಇರುವ ಲಿಥಿಡಾ ಗ್ರಾಮದಲ್ಲಿದೆ. ಪರುಲಿ ದೇವಿ ದೇವಲಥಾಲ್ ಪ್ರದೇಶದ ಲೋಹಕೋಟ್ ನಿವಾಸಿ ಸೈನಿಕ ಗಗನ್ ಸಿಂಗ್ ಅವರನ್ನು 1952ರ ಮಾರ್ಚ್ 10ರಂದು ವಿವಾಹವಾದರು. ಗಗನ್ ಸಿಂಗ್ ಅವರು ಮದುವೆಯಾದ ಎರಡು ತಿಂಗಳ ನಂತರ, 1952ರ ಮೇ 14ರಂದು ಕರ್ತವ್ಯದಲ್ಲಿ ಇದ್ದಾಗ ಹುತಾತ್ಮರಾದರು. ಪರುಲಿ ದೇವಿ 12ನೇ ವಯಸ್ಸಿನಲ್ಲಿ ವಿಧವೆಯಾದರು.
ಈ ಬಳಿಕ ಪರುಲಿ ದೇವಿ ಅವರು ಲಿಂತುಡಾದ ತನ್ನ ತಾಯಿಯ ಮನೆಯಲ್ಲಿ ವಾಸಿಸಲು ಪ್ರಾರಂಭಿಸಿದರು. ಭಾರತೀಯ ಸೇನೆಯಲ್ಲಿ ನೇಮಕವಾಗಿ ಮೃತಪಟ್ಟ ಬಳಿಕವೂ ಆಕೆಗೆ ಪಿಂಚಣಿ ಸಿಗಲಿಲ್ಲ. 1985ರಿಂದ ಅರ್ಜಿ ಸಲ್ಲಿಸುತ್ತಾ ಬಂದ ಕುಟುಂಬಕ್ಕೆ ಪಿಂಚಣಿ ಚಿಗಲಿಲ್ಲ. ಪಾರುಲಿ ದೇವಿಗೆ ಪಿಂಚಣಿ ಮಂಜೂರು ಮಾಡುವಲ್ಲಿ ಪಿಥೋರಗಢದ ನಿವೃತ್ತ ಉಪ ಖಜಾಂಚಿ ಡಿ.ಎಸ್. ಭಂಡಾರಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಸಾಕಷ್ಟು ತೊಂದರೆಗಳನ್ನು ಎದುರಿಸಿ ನಂತರ ಪಿಂಚಣಿ ಅನುಮೋದನೆ ಆದೇಶವನ್ನು (ಪಿಪಿಒ) ಪ್ರಧಾನ ನಿಯಂತ್ರಕ ಆಫ್ ಡಿಫೆನ್ಸ್ ಅಕೌಂಟ್ಸ್ ಪಿಂಚಣಿ ಪ್ರಯಾಗರಾಜ್ 2021ರ ಜನವರಿ 18ರಂದು ಹೊರಡಿಸಿತು. 1977ರ ಸೆಪ್ಟೆಂಬರ್ 22ರಿಂದ ಬಾಕಿ ಉಳಿದಿದ್ದ ಪಿಂಚಣಿಯನ್ನು ಪರುಲಿ ಅವರು ಸ್ವೀಕರಿಸಿದ್ದಾರೆ. 44 ವರ್ಷಗಳ ಪಿಂಚಣಿ ಬಾಕಿ 19 ರಿಂದ 20 ಲಕ್ಷ ರೂ.ನಷ್ಟಿದೆ. ಪತಿಯ ಮರಣದ 69 ವರ್ಷಗಳ ನಂತರ ತನ್ನ 83ನೇ ವಯಸ್ಸಿನಲ್ಲಿ ಪಿಂಚಣಿ ಪಡೆದದ್ದು ಪರುಲಿ ದೇವಿಗೆ ಸಂತೋಷವಾಗಿದೆ ಎಂದು ಡಿ.ಎಸ್. ಭಂಡಾರಿ ಹೇಳಿದರು.