ಕೊಡೆರ್ಮಾ (ಜಾರ್ಖಂಡ್):ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಬುಲಂದ್ಶಹರ್ನ ಚಂಕಿ ರಾಹಿ ಎಂಬವರು ಸೇನೆಯನ್ನು ತೊರೆದ ನಂತರ 'ಸಿಂಗಲ್ ಯೂಸ್ ಪಾಲಿಥಿನ್ ಬ್ಯಾಗ್'ಗಳ ದುಷ್ಪರಿಣಾಮದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಬೈಸಿಕಲ್ ಯಾತ್ರೆಯನ್ನು ಕೈಗೊಂಡಿದ್ದಾರೆ. ಜತೆಗೆ ಪರಿಸರ ಸಂರಕ್ಷಣೆಗಾಗಿ ಸಸಿಗಳನ್ನು ನೆಡುವಂತೆಯೂ ತಮ್ಮ ಯಾತ್ರೆಯಲ್ಲಿ ಜನರಿಗೆ ಮನವಿ ಮಾಡುತ್ತಿದ್ದಾರೆ. ಇವರು 18,000 ಕಿ.ಮೀ. ಕ್ರಮಿಸುವ ಗುರಿ ಹೊಂದಿದ್ದಾರೆ.
ಸೋಮವಾರ ಚಂಕಿ ರಾಹಿ ಅವರ ಸೈಕಲ್ ಯಾತ್ರೆ ಜಾರ್ಖಂಡ್‌ನ ಕೊಡೆರ್ಮಾವನ್ನು ತಲುಪಿದ್ದು, ಸ್ಥಳೀಯರು ಆತ್ಮೀಯವಾಗಿ ಸ್ವಾಗತಿಸಿಕೊಂಡಿದ್ದಾರೆ. ಚಾರ್ಧಾಮ್ ಸೇರಿದಂತೆ ಭಾರತದ 12 ಜ್ಯೋತಿರ್ಲಿಂಗಗಳ ದರ್ಶನ ಪಡೆಯಲು ಸೈಕಲ್ ಮೂಲಕ ಪ್ರವಾಸ ಹೊರಟಿರುವ ರಾಹಿ, ದೇವರ ಮೇಲಿನ ಭಕ್ತಿಯೊಂದಿಗೆ ಪ್ರಕೃತಿ ಮೇಲಿನ ಭಕ್ತಿಯನ್ನೂ ಸಾಕಾರಗೊಳಿಸಲು ಪಣ ತೊಟ್ಟಿದ್ದಾರೆ.