ಕರ್ನಾಟಕ

karnataka

ETV Bharat / bharat

ಅಧಿಕಾರಿಗೆ ಒಂದು ಕೋಟಿ ಲಂಚದ ಆಮಿಷ ಆರೋಪ.. ಮಾಜಿ ಸಚಿವ ಅರೆಸ್ಟ್​, 50 ಲಕ್ಷ ರೂಪಾಯಿ ಜಪ್ತಿ - ಪಂಜಾಬ್ ವಿಜಿಲೆನ್ಸ್ ಬ್ಯೂರೋ

ವಿಜಿಲೆನ್ಸ್ ಬ್ಯೂರೋದ ಅಧಿಕಾರಿಗೆ ಒಂದು ಕೋಟಿ ರೂಪಾಯಿ ಲಂಚದ ಆಮಿಷವೊಡ್ಡಿ, 50 ಲಕ್ಷ ರೂಪಾಯಿ ನೀಡಲು ಮುಂದಾಗಿದ್ದ ಆರೋಪದಡಿ ಪಂಜಾಬ್​ನ ಮಾಜಿ ಸಚಿವ ಸುಂದರ್ ಶ್ಯಾಮ್​ ಅರೋರಾ ಅರೆಸ್ಟ್​ ಆಗಿದ್ದಾರೆ.

ex-punjab-minister-sundar-sham-arora-held-for-offering-bribe
ಅಧಿಕಾರಿಗೆ ಒಂದು ಕೋಟಿ ಲಂಚದ ಆಮಿಷ: ಮಾಜಿ ಸಚಿವ ಅರೆಸ್ಟ್​, 50 ಲಕ್ಷ ರೂಪಾಯಿ ಜಪ್ತಿ

By

Published : Oct 16, 2022, 5:43 PM IST

ಚಂಡೀಗಢ (ಪಂಜಾಬ್​): ಲಂಚದ ಆಮಿಷವೊಡ್ಡಿದ್ದ ಪಂಜಾಬ್​ನ ಮಾಜಿ ಸಚಿವ ಸುಂದರ್ ಶ್ಯಾಮ್​ ಅರೋರಾ ಅವರನ್ನು ವಿಜಿಲೆನ್ಸ್ ಬ್ಯೂರೋದ ಅಧಿಕಾರಿಗಳು ಬಂಧಿಸಿದ್ದಾರೆ. ಒಂದು ಕೋಟಿ ರೂಪಾಯಿ ಲಂಚದ ಆಮಿಷವೊಡ್ಡಿ ಅರೋರಾ, ಶನಿವಾರ 50 ಲಕ್ಷ ರೂಪಾಯಿ ನೀಡಲು ಮುಂದಾಗಿದ್ದರು ಎಂದು ತಿಳಿದು ಬಂದಿದೆ.

ಕಾಂಗ್ರೆಸ್​ನ ಮಾಜಿ ಸಚಿವರಾದ ಸುಂದರ್​ ಶ್ಯಾಮ್​ ಅರೋರಾ, ಸದ್ಯ ಬಿಜೆಪಿಯಲ್ಲಿದ್ದಾರೆ. ತಮ್ಮ ವಿರುದ್ಧ ದಾಖಲಾದ ಪ್ರಕರಣದ ವಿಚಾರಣೆಯನ್ನು ವಿಜಿಲೆನ್ಸ್ ಬ್ಯೂರೋ ನಡೆಸಿದ್ದು, ಇದರ ವಿಚಾರಣೆಯು ತಮ್ಮ ಪರವಾಗಿ ಮಾಡಬೇಕೆಂದು ಹೇಳಿ ಅಕ್ಟೋಬರ್​ 14ರಂದು ಸಹಾಯಕ ಇನ್ಸ್‌ಪೆಕ್ಟರ್ ಜನರಲ್ (ಎಐಜಿ) ಮನಮೋಹನ್ ಕುಮಾರ್ ಅವರನ್ನು ಭೇಟಿ ಮಾಡಿದ್ದರು ಎನ್ನಲಾಗ್ತಿದೆ.

ಅಲ್ಲದೇ, ಇದಕ್ಕಾಗಿ ಒಂದು ಕೋಟಿ ರೂಪಾಯಿ ಲಂಚದ ಆಮಿಷವನ್ನು ಮಾಜಿ ಸಚಿವ ಅರೋರಾ ಒಡ್ಡಿದ್ದರು. ಅಕ್ಟೋಬರ್​ 15ರಂದು ಒಂದು ಕೋಟಿ ಪೈಕಿ 50 ಸಾವಿರ ರೂಪಾಯಿ ಹಣ ನೀಡಲು ಮುಂದಾಗಿ, ಉಳಿದ ಹಣವನ್ನು ತದನಂತರ ನೀಡುವುದಾಗಿ ತಿಳಿಸಿದ್ದರು. ಈ ಬಗ್ಗೆ ಖುದ್ದು ಎಐಜಿ ಮನಮೋಹನ್ ಕುಮಾರ್ ಅವರೇ ದೂರು ನೀಡಿದ್ದು, ಇದರ ಆಧಾರದ ಮೇಲೆ ಮಾಜಿ ಸಚಿವರನ್ನು ಬಂಧಿಸಲಾಗಿದೆ ಎಂದು ಪಂಜಾಬ್ ವಿಜಿಲೆನ್ಸ್ ಬ್ಯೂರೋದ ಮುಖ್ಯ ನಿರ್ದೇಶಕ ವರೀಂದರ್ ಕುಮಾರ್ ಭಾನುವಾರ ತಿಳಿಸಿದ್ದಾರೆ.

ಪಂಜಾಬ್ ವಿಜಿಲೆನ್ಸ್ ಬ್ಯೂರೋದ ಪ್ರಕಟಣೆ

ಜೊತೆಗೆ ಎಐಜಿ ಮನಮೋಹನ್ ಕುಮಾರ್ ಹೇಳಿಕೆಯ ಮೇರೆಗೆ ಮಾಜಿ ಸಚಿವ ಅರೋರಾ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 8ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. 50 ಲಕ್ಷ ರೂ. ಹಣವನ್ನು ವಶಕ್ಕೆ ಪಡಯಲಾಗಿದ್ದು, ಈ ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ವಿಜಿಲೆನ್ಸ್ ಮುಖ್ಯಸ್ಥರು ತಿಳಿಸಿದ್ದಾರೆ.

ಇನ್ನೂ ಓದಿ:ಹಾಡಹಗಲೇ ಸಚಿವರ ಸಹೋದರನ ಮನೆಗೆ ನುಗ್ಗಿ ಒಂದು ಕೋಟಿ ರೂಪಾಯಿ ದರೋಡೆ

ABOUT THE AUTHOR

...view details