ವಾರಣಾಸಿ (ಉತ್ತರ ಪ್ರದೇಶ): ಎರಡು ದಿನಗಳ ಭೇಟಿಗಾಗಿ ಕಾಶಿಗೆ ತೆರಳಿರುವ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರು ಇಂದು ಬಾಬಾ ಕಾಲ ಭೈರವ, ವಿಶ್ವನಾಥ ದೇವಸ್ಥಾನ ಮತ್ತು ಅನ್ನಪೂರ್ಣ ದೇವಸ್ಥಾನಕ್ಕೆ ಭೇಟಿ ನೀಡಿ, ದರ್ಶನ ಪಡೆದರು.
ಈ ಸಮಯದಲ್ಲಿ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಮಾಧ್ಯಮದವರೊಂದಿಗೆ ಮಾತನಾಡುತ್ತಾ, ಪ್ರಧಾನಿ ಹುದ್ದೆ ತೊರೆದ ನಂತರ ಇದು ವಾರಾಣಸಿಗೆ ನನ್ನ ಎರಡನೇ ಭೇಟಿ ಎಂದು ಹೇಳಿದರು.
ಕಾಶಿಯಲ್ಲಿ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವುದು ಹೀಗೆ.. ರಾಜ್ಯ ಸರ್ಕಾರಕ್ಕೆ ಧನ್ಯವಾದಗಳು ಮತ್ತು ನನ್ನ ಭದ್ರತೆಯಲ್ಲಿ ತೊಡಗಿರುವ ಎಲ್ಲ ಆಡಳಿತ, ಪೊಲೀಸ್ ಅಧಿಕಾರಿಗಳು ಹಾಗೂ ಎಸ್‌ಪಿಜಿ ಸಿಬ್ಬಂದಿಗೆ ಧನ್ಯವಾದಗಳು. ಈ ಕಾರಣದಿಂದ ನನ್ನ ಮತ್ತು ನನ್ನ ಕುಟುಂಬದ ಧಾರ್ಮಿಕ ಪ್ರಯಾಣ ಯಶಸ್ವಿಯಾಗಿದೆ ಎಂದು ಅವರು ಹೇಳಿದರು.
ಕಾಶಿ ತುಂಬಾ ಬದಲಾಗಿದೆ, ಬಹಳ ಸುಧಾರಣೆಯಾಗಿದೆ. ನನ್ನ ಕಾಶಿ ಪ್ರವಾಸದಿಂದ ನನಗೆ ತುಂಬಾ ತೃಪ್ತಿಯಾಗಿದೆ ಮತ್ತು ಇಂದು ಬೆಂಗಳೂರಿಗೆ ಹೊರಡುತ್ತೇನೆ ಎಂದು ಅವರು ಹೇಳಿದರು.