ಕರ್ನಾಟಕ

karnataka

ETV Bharat / bharat

ಅಧಿಕಾರಿ ಮೇಲೆ ಹಲ್ಲೆ ಕೇಸ್​: ಮಹಾರಾಷ್ಟ್ರ ಮಾಜಿ ಸಚಿವನಿಗೆ ಬೇಲ್​ ತಿರಸ್ಕಾರ​, ನ್ಯಾಯಾಂಗ ಬಂಧನ

ಅಧಿಕಾರಿಯ ಮೇಲೆ ಹಲ್ಲೆ ಪ್ರಕರಣದಲ್ಲಿ ಮಹಾರಾಷ್ಟ್ರ ಮಾಜಿ ಸಚಿವ ಬಚ್ಚು ಕಾಡು ಅವರಿಗೆ ಕೋರ್ಟ್​ ಜಾಮೀನು ನಿರಾಕರಿಸಿದ ಹಿನ್ನೆಲೆ, 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.

case-of-assaulting-officer
ಅಧಿಕಾರಿ ಮೇಲೆ ಹಲ್ಲೆ ಕೇಸ್

By

Published : Sep 14, 2022, 5:17 PM IST

ಮುಂಬೈ, ಮಹಾರಾಷ್ಟ್ರ:ಸಚಿವಾಲಯದ ಅಧಿಕಾರಿಯೊಬ್ಬರ ಮೇಲೆ 2016 ರಲ್ಲಿ ಹಲ್ಲೆ ನಡೆಸಿದ ಪ್ರಕರಣದಲ್ಲಿ ಜಾಮೀನು ತಿರಸ್ಕಾರವಾದ ಕಾರಣ ಮಹಾರಾಷ್ಟ್ರದ ಮಾಜಿ ಸಚಿವ, ಸ್ವತಂತ್ರ್ಯ ಶಾಸಕ ಬಚ್ಚು ಕಾಡು ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.

ಏನಾಗಿತ್ತು?:2016 ರ ಮಾರ್ಚ್​ನಲ್ಲಿ ಆಡಳಿತ ಇಲಾಖೆ ಸಚಿವಾಲಯದ ಅಧಿಕಾರಿಯನ್ನು ಮಾಜಿ ಸಚಿವ ಬಚ್ಚು ಕಾಡು ನಿಂದಿಸಿ ಥಳಿಸಿದ್ದರು. ಇದರ ವಿರುದ್ಧ ಅಧಿಕಾರಿಗಳ ಸಂಘ ಧರಣಿ ನಡೆಸಿತ್ತು. ಸಚಿವಾಲಯದೊಳಗೆ ಅಧಿಕಾರಿ ಥಳಿಸಿದ್ದರ ವಿರುದ್ಧ ಸಂಘ ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು. ಅಲ್ಲದೇ ಸಚಿವರ ವಿರುದ್ಧ ಕ್ರಮ ತೆಗೆದುಕೊಳ್ಳುವವರೆಗೆ ಕೆಲಸಕ್ಕೆ ಹಾಜರಾಗಲ್ಲ ಎಂದು ಪಟ್ಟು ಹಿಡಿದಿದ್ದರು.

ಕಾಮಗಾರಿಯಲ್ಲಿ ಅಕ್ರಮ ನಡೆಸುವಂತೆ ಸಚಿವರು ಒತ್ತಾಯ ಮಾಡುತ್ತಿದ್ದಾರೆ ಎಂಬ ಆರೋಪವನ್ನು ಅಧಿಕಾರಿಗಳ ಸಂಘ ಬಚ್ಚು ಕಾಡು ವಿರುದ್ಧ ಹೊರಿಸಿತ್ತು. ಈ ಘಟನೆ ವಿಧಾನ ಪರಿಷತ್ತಿನಲ್ಲಿಯೂ ಚರ್ಚೆಗೆ ಬಂದಿತ್ತು. ಬಳಿಕ ಅಧಿಕಾರಿಗಳ ಸಂಘದ ಒತ್ತಡಕ್ಕೆ ಮಣಿದು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಬಳಿಕ ಪ್ರಕರಣ ಕೋರ್ಟ್​ ಮೆಟ್ಟಿಲೇರಿತ್ತು. ಪ್ರಕರಣದ ವಿಚಾರಣೆ ನಡೆಸಿದ ಗಿರ್ಗಾಂವ್ ನ್ಯಾಯಾಲಯ ಬಚ್ಚು ಕಾಡು ಪರ ವಕೀಲರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ತಿರಸ್ಕರಿಸಿತು. ವಿಚಾರಣೆಗಾಗಿ 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಿ ಕೋರ್ಟ್​ ಆದೇಶಿಸಿತು.

ಓದಿ:ಜಮೀನು ಉಳಿಸಿಕೊಡುವಂತೆ ಡಿಸಿ ಕಾಲಿಗೆ ಬಿದ್ದ ಮಹಿಳೆಯರು

ABOUT THE AUTHOR

...view details