ಮಾವ್(ಉತ್ತರ ಪ್ರದೇಶ): ಉತ್ತರಪ್ರದೇಶದ ಮಾಜಿ ಕಾಂಗ್ರೆಸ್ ಶಾಸಕ, ದಿವಂಗತ ಕೇದಾರ್ ಸಿಂಗ್ ಅವರ ಮೊಮ್ಮಗನನ್ನು ಕೊಲೆಗೈದಿರುವ ಘಟನೆ ರಾಜ್ಯದ ಮಾವ್ ಜಿಲ್ಲೆಯಲ್ಲಿ ನಡೆದಿದೆ. ಮೃತರನ್ನು ಹಿಮಾಂಶು ಸಿಂಗ್(35) ಎಂದು ಗುರುತಿಸಲಾಗಿದೆ. 'ಮಾವ್ ಜಿಲ್ಲೆಯ ಡೊನ್ವಾರ್ ಗ್ರಾಮದ ಪಂಚಾಯತ್ ಬಳಿ ಗುಂಪೊಂದರ ಜೊತೆ ಹಿಮಾಂಶ್ ಜಗಳವಾಡಿದ್ದರು. ಆ ಗುಂಪಿನ ಏಳೆಂಟು ಜನ ದೊಣ್ಣೆಯಿಂದ ಹೊಡೆದು ಕೊಲೆಗೈದಿದ್ದಾರೆ. ಅರೆಬರೆ ಜೀವವಿದ್ದ ಹಿಮಾಂಶು ಅವರನ್ನು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಅವರ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಕೃತ್ಯದ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಸಂಬಂಧಿತ ಸೆಕ್ಷನ್ಗಳ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ' ಎಂದು ಅಲ್ಲಿನ ಪೊಲೀಸ್ ವರಿಷ್ಠಾಧಿಕಾರಿ ಮಾಹಿತಿ ನೀಡಿದ್ದಾರೆ.
ಉತ್ತರ ಪ್ರದೇಶ: ಮಾಜಿ ಕಾಂಗ್ರೆಸ್ ಶಾಸಕನ ಮೊಮ್ಮಗನ ಹತ್ಯೆ - ಈಟಿವಿ ಭಾರತ ಕನ್ನಡ
ಉತ್ತರ ಪ್ರದೇಶದ ಹಿಮಾಂಶ್ ಸಿಂಗ್ ಎಂಬವರನ್ನು ಏಳೆಂಟು ಮಂದಿ ದುಷ್ಕರ್ಮಿಗಳು ಸೇರಿ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕೊಲೆ
TAGGED:
beaten to death in UP