ಪಶ್ಚಿಮ ಬಂಗಾಳ:ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಮೂರನೇ ಹಂತದ ಮತದಾನ ನಡೆಯುತ್ತಿದೆ. ಈ ಮಧ್ಯೆ, ಉಲುಬೇರಿಯಾ ಉತ್ತರ ವಿಧಾನಸಭಾ ಕ್ಷೇತ್ರದ ಟಿಎಂಸಿ ನಾಯಕನ ಮನೆಯಲ್ಲಿ ಇವಿಎಂ ಮತ್ತು ವಿವಿಪ್ಯಾಟ್ ಯಂತ್ರಗಳು ಪತ್ತೆಯಾಗಿವೆ.
ಬಂಗಾಳ: ಟಿಎಂಸಿ ನಾಯಕನ ಮನೆಯಲ್ಲಿ ವೋಟಿಂಗ್ ಮಷಿನ್- ವಿವಿಪ್ಯಾಟ್ ಪತ್ತೆ!
ಉಲುಬೇರಿಯಾ ಉತ್ತರ ವಿಧಾನಸಭಾ ಕ್ಷೇತ್ರದ ಟಿಎಂಸಿ ನಾಯಕನ ಮನೆಯಲ್ಲಿ ಎಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್ (ಇವಿಎಂ) ಮತ್ತು ವೋಟರ್-ವೆರಿಫೈಡ್ ಪೇಪರ್ ಆಡಿಟ್ ಟ್ರೈಲ್ (ವಿವಿಪ್ಯಾಟ್) ಯಂತ್ರಗಳು ಪತ್ತೆಯಾಗಿವೆ.
ಇವಿಎಂ- ವಿವಿಪ್ಯಾಟ್
ಟಿಎಂಸಿ ನಾಯಕ ಗೌತಮ್ ಘೋಷ್ ತಮ್ಮ ಮನೆಯಲ್ಲಿ ಯಂತ್ರಗಳನ್ನು ಅಡಗಿಸಿಟ್ಟಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಚಿರನ್ ಬೇರಾ ಆರೋಪಿಸಿದ್ದರು. ಈ ಬಳಿಕ ಸ್ಥಳೀಯರು ಖಚಿತ ಮಾಹಿತಿ ಪಡೆದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
ಆದರೆ ಸ್ಥಳದಲ್ಲಿದ್ದ ಕಾರ್ಯಕರ್ತರ ನಡುವೆ ಗಲಭೆ ಏರ್ಪಡುತ್ತಿದ್ದಂತೆ ಪೊಲೀಸರು ಲಘು ಲಾಠಿ ಚಾರ್ಜ್ ನಡೆಸಿದ್ದಾರೆ.