ಕರ್ನಾಟಕ

karnataka

By

Published : Dec 5, 2022, 4:56 PM IST

ETV Bharat / bharat

ಗುಜರಾತ್​ ವಿಧಾನಸಭೆ ಚುನಾವಣೆ : ಮತಗಟ್ಟೆಯಲ್ಲಿ ಕೈಕೊಟ್ಟ ಇವಿಎಂ ಯಂತ್ರ

ಗುಜರಾತ್ ವಿಧಾನಸಭೆಯ ಎರಡನೇ ಹಂತದ ಮತದಾನ ನಡೆಯುತ್ತಿದ್ದು, ಇಲ್ಲಿನ ಗರ್ಬಡಾ ವಿಧಾನಸಭಾ ಕ್ಷೇತ್ರದ ಬಿಲ್ವಾ ಗ್ರಾಮದ ಮತಗಟ್ಟೆಯಲ್ಲಿ ಇವಿಎಂ ಯಂತ್ರ ಕೈಕೊಟ್ಟಿದ್ದರಿಂದ ಅರ್ಧ ಗಂಟೆ ಮತದಾನ ಸ್ಥಗಿತಗೊಂಡಿತ್ತು.

evm-machine-malfunctioned-in-the-booth-bhilwa-village-of-garbada-taluka
ಗುಜರಾತ್​ ವಿಧಾನಸಭೆ ಚುನಾವಣೆ : ಮತಗಟ್ಟೆಯಲ್ಲಿ ಕೈಕೊಟ್ಟ ಇವಿಎಂ ಯಂತ್ರ

ದಾಹೋದ್ (ಗುಜರಾತ್​): ಗುಜರಾತ್ ವಿಧಾನಸಭೆಯ ಎರಡನೇ ಹಂತದ ಮತದಾನ ನಡೆಯುತ್ತಿದ್ದು, ಇಲ್ಲಿನ ದಾಹೋದ್​ ಜಿಲ್ಲೆಯಲ್ಲಿ ಬೆಳಗ್ಗೆಯಿಂದಲೇ ಮತದಾನ ಆರಂಭವಾಗಿದೆ. ಸುಮಾರು 14 ಜಿಲ್ಲೆಗಳ 93 ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದ್ದು, ಮತದಾರರು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ.

ಈ ನಡುವೆ ಗರ್ಬಡಾ ವಿಧಾನಸಭಾ ಕ್ಷೇತ್ರದ ಬಿಲ್ವಾ ಗ್ರಾಮದ ಮತಗಟ್ಟೆಯಲ್ಲಿ ಇವಿಎಂ ಯಂತ್ರ ಕೈಕೊಟ್ಟಿದ್ದರಿಂದ ಅರ್ಧ ಗಂಟೆ ಮತದಾನ ಸ್ಥಗಿತಗೊಂಡಿತ್ತು. ಇವಿಎಂ ಯಂತ್ರ ಹಾಳಾಗಿದ್ದರಿಂದ ಮತಗಟ್ಟೆಯಲ್ಲಿ ಉದ್ದನೆಯ ಸರತಿ ಸಾಲು ಕಂಡು ಬಂತು. ಬಳಿಕ ಸ್ಥಳಕ್ಕೆ ಆಗಮಿಸಿದ ಚುನಾವಣಾ ಸಿಬ್ಬಂದಿ ಯಂತ್ರವನ್ನು ಸರಿಪಡಿಸುವ ಮೂಲಕ ಮತದಾನಕ್ಕೆ ಅನುವು ಮಾಡಿಕೊಟ್ಟರು. ಇನ್ನು ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ಪ್ರಕ್ರಿಯೆ ಮುಂದುವರೆದಿದೆ.

ಇವಿಎಂ ಕೈ ಕೊಟ್ಟ ಬಗ್ಗೆ ತಿಳಿದ ಗರ್ಬಡಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಚಂದ್ರಿಕಾ ಬೆನ್ ಬರಿಯಾ ಬೂತ್‌ಗೆ ಆಗಮಿಸಿ ಪರಿಶೀಲಿಸಿದರು. ಮತದಾನ ಸ್ಥಗಿತಗೊಂಡಿದ್ದರಿಂದ ಮತಗಟ್ಟೆಯಲ್ಲಿದ್ದ ಮತದಾರರು ಅರ್ಧ ಗಂಟೆ ಸರತಿ ಸಾಲಿನಲ್ಲಿ ನಿಂತು ಕೊಳ್ಳಬೇಕಾಯಿತು.

ಇನ್ನು ಎರಡನೇ ಹಂತದ ಗುಜರಾತ್ ಚುನಾವಣೆಯಲ್ಲಿ ಅಪರಾಹ್ನ 3 ಗಂಟೆ ವೇಳೆಗೆ ಸುಮಾರು ಶೇ 50 ರಷ್ಟು ಮತದಾನವಾಗಿದೆ ಎಂದು ವರದಿ ಆಗಿದೆ.

ಇದನ್ನೂ ಓದಿ :ಗುಜರಾತ್​ ವಿಧಾನಸಭೆ ಚುನಾವಣೆ: 93 ಕ್ಷೇತ್ರಗಳಿಗೆ 2ನೇ ಹಂತದ ಮತದಾನ

ABOUT THE AUTHOR

...view details