ಕರ್ನಾಟಕ

karnataka

ETV Bharat / bharat

ಎಲ್ಲರ ಹೃದಯವೂ ಒಂದೇ ಸಮನೆ ಮಿಡಿಯುವುದಿಲ್ಲ..! ಯಾಕೆ ಗೊತ್ತಾ..? - ಹೃದಯ ಬಡಿತದ ಮಾದರಿ

ಸ್ವಲ್ಪ ಸಮಯದಲ್ಲಿ ದೀರ್ಘ ಉಸಿರಾಟ, ದಿನಕ್ಕೆ ಅರ್ಧ ಗಂಟೆ ವ್ಯಾಯಾಮ, ಉತ್ತಮ ಪೋಷಣೆ, ತೂಕವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು, ಮದ್ಯ ಮತ್ತು ಕೆಫೀನ್ ಅನ್ನು ಅತಿಯಾಗಿ ಸೇವಿಸದಿರುವುದು ಮತ್ತು ಧೂಮಪಾನವನ್ನು ತ್ಯಜಿಸುವುದರಿಂದ ಹೃದಯ ಬಡಿತ ಹಾಗೂ ಹೃದಯಾರೋಗ್ಯವನ್ನು ಸುಧಾರಿಸಬಹುದು.

Everyone's heart doesn't beat the same
ಎಲ್ಲರ ಹೃದಯವೂ ಒಂದೇ ಸಮನೆ ಮಿಡಿಯುವುದಿಲ್ಲ

By

Published : Aug 31, 2022, 1:18 PM IST

ಹೃದಯ ಬಡಿತ ಎಲ್ಲಾ ಸಮಯದಲ್ಲೂ ಒಂದೇ ರೀತಿ ಇರುವುದಿಲ್ಲ. ಎಲ್ಲರ ಹೃದಯಗಳ ಬಡಿತವೂ ಒಂದೇ ರೀತಿ ಆಗಿರುವುದಿಲ್ಲ. ದಿನವಿಡೀ ನಾವು ಏನು ಮಾಡುತ್ತೇವೆ ಎಂಬುದರ ಮೇಲೆ ವೇಗವು ಬದಲಾಗುತ್ತದೆ. ವಯಸ್ಸಾದಂತೆ ಹೃದಯ ಬಡಿತವೂ ಬದಲಾಗುತ್ತದೆ ಎನ್ನುತ್ತಾರೆ ವೈದ್ಯರು. ಹೃದಯ ಬಡಿತವನ್ನು ಪರೀಕ್ಷಿಸುವ ಮೂಲಕ ಆರೋಗ್ಯವನ್ನು ಮೌಲ್ಯಮಾಪನ ಮಾಡಲಾಗುತ್ತದೆ. ಹೃದಯ ಬಡಿತದ ಮಾದರಿಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳೋಣ

  • ಹೃದಯವು ಸಾಮಾನ್ಯವಾಗಿ ನಿಮಿಷಕ್ಕೆ 72 ಬಾರಿ ಬಡಿಯುತ್ತದೆ. ವೇಗವಾಗಿ ಓಡುವಾಗ ಹೃದಯ ಬಡಿತ ಮತ್ತಷ್ಟು ಹೆಚ್ಚಾಗುತ್ತದೆ. ವಿಶ್ರಾಂತಿಯಲ್ಲಿದ್ದಾಗ ನಿಧಾನವಾಗಿ ಕಾರ್ಯನಿರ್ವಹಿಸುತ್ತದೆ.
  • ವಿಶ್ರಾಂತಿಯಲ್ಲಿರುವ ಆರೋಗ್ಯವಂತ ಜನರಲ್ಲಿ 60-100 ರ ನಡುವೆ ಹೃದಯ ಬಡಿತಗೊಳ್ಳುತ್ತದೆ.
  • ವಿಶ್ರಾಂತಿಯಲ್ಲೂ ಹೃದಯ ವೇಗವಾಗಿ ಕೆಲಸ ಮಾಡುತ್ತಿದ್ದರೆ ಒಂದು ಲೋಟ ನೀರು ಕುಡಿದರೆ ನಿಧಾನವಾಗುತ್ತದೆ.
  • ಸ್ವಲ್ಪ ಸಮಯದಲ್ಲಿ ದೀರ್ಘ ಉಸಿರಾಟ, ದಿನಕ್ಕೆ ಅರ್ಧ ಗಂಟೆ ವ್ಯಾಯಾಮ, ಉತ್ತಮ ಪೋಷಣೆ, ತೂಕವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು, ಮದ್ಯ ಮತ್ತು ಕೆಫೀನ್ ಅನ್ನು ಅತಿಯಾಗಿ ಸೇವಿಸದಿರುವುದು ಮತ್ತು ಧೂಮಪಾನವನ್ನು ತ್ಯಜಿಸುವುದರಿಂದ ಹೃದಯ ಬಡಿತ ಹಾಗೂ ಹೃದಯಾರೋಗ್ಯವನ್ನು ಸುಧಾರಿಸಬಹುದು.
  • ಒತ್ತಡ ನಿವಾರಿಸುವ ಯೋಗಾಸನಗಳು ಪ್ರಾಣಾಯಾಮ ಮತ್ತು ಧ್ಯಾನಕ್ಕೆ ಒಳ್ಳೆಯದು.
  • ನಿಮ್ಮ ವಯಸ್ಸನ್ನು 220ರಲ್ಲಿ ಕಳೆದರೆ ಬರುವ ಸಂಖ್ಯೆಯನ್ನು ಗರಿಷ್ಠ ಹೃದಯ ಬಡಿತ ಎಂದು ಕರೆಯಲಾಗುತ್ತದೆ
  • ಶಾಖ ಮತ್ತು ತೇವಾಂಶದಂತಹ ಪರಿಸ್ಥಿತಿಗಳು ಹೃದಯ ಬಡಿತವನ್ನು ಹೆಚ್ಚಿಸುತ್ತವೆ. ತೀವ್ರವಾದ ಭಾವನೆಗಳು ಮತ್ತು ಆತಂಕದಿಂದಲೂ ಹೃದಯ ಬಡಿತ ಹೆಚ್ಚಾಗುತ್ತದೆ.

ABOUT THE AUTHOR

...view details