ಕರ್ನಾಟಕ

karnataka

ETV Bharat / bharat

ಜೀವನದಲ್ಲಿ ಒಮ್ಮೆಯಾದ್ರೂ ರಾಮನುಜಾಚಾರ್ಯರ ಮೂರ್ತಿ ನೋಡಬೇಕು : ಅಮಿತ್ ಶಾ

ಸಮತಾಮೂರ್ತಿ ಕೇಂದ್ರದ ಸಂಸ್ಥಾಪಕ ಚಿನ್ನ ಜೀಯಾರ್​ ಸ್ವಾಮಿ ಗುಜರಾತ್ ಭೂಕಂಪ ಸಂತ್ರಸ್ತರಿಗೆ ಸಹಾಯ ಮಾಡಿದ್ದಾರೆ. ಒಂದು ಗ್ರಾಮವನ್ನು ಪುನರ್ನಿರ್ಮಿಸಿದ್ದಾರೆ. ಸ್ವಾಮಿಗಳ ಸೌಜನ್ಯವನ್ನು ನೋಡಿ ನನಗೆ ತುಂಬಾ ಸಂತೋಷವಾಯಿತು..

Amit Shah
ಅಮಿತ್ ಶಾ

By

Published : Feb 8, 2022, 10:57 PM IST

ಹೈದರಾಬಾದ್​(ತೆಲಂಗಾಣ) :ರಾಮಾನುಜಾಚಾರ್ಯರು ಸಮಾನತೆಯ ತತ್ವವನ್ನು ಸಾವಿರ ವರ್ಷಗಳ ಹಿಂದೆಯೇ ಬೋಧಿಸಿದ್ದರು. ಅವರ ಸಮತಾಮೂರ್ತಿಯನ್ನು ಜೀವನದಲ್ಲಿ ಒಂದು ಸಲವಾದರೂ ನೋಡಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಮುಚಿಂತಲ್​ ಎಂಬಲ್ಲಿ ಸ್ಥಾಪಿಸಲಾದ ಸಮಾನತಾವಾದಿ ರಾಮಾನುಜಾಚಾರ್ಯರ ಮೂರ್ತಿಯ ದರ್ಶನ ಪಡೆದ ಬಳಿಕ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅಮಿತ್​ ಶಾ, ರಾಮಾನುಜಾಚಾರ್ಯರು 120 ವರ್ಷ ಬದುಕಿದ್ದರು.

ಮನುಷ್ಯ 60 ವರ್ಷ ಬದುಕುವುದೇ ಕಷ್ಟ. ಇಂತಹ ಮಹಾನ್​ ಚೇತನ ಮೂರ್ತಿಯನ್ನು ಜೀವನದಲ್ಲಿ ಒಮ್ಮೆಯಾದರೂ ನೋಡಲೇಬೇಕು ಎಂದು ಹೇಳಿದ್ದಾರೆ.

ಜೀವನದಲ್ಲಿ ಒಮ್ಮೆಯಾದ್ರೂ ರಾಮನುಜಾಚಾರ್ಯರ ಮೂರ್ತಿ ನೋಡಬೇಕು : ಅಮಿತ್ ಶಾ

ರಾಮನುಜಾಚಾರ್ಯರು ವೇದಗಳಲ್ಲಿ ಹೇಳಿದಂತೆಯೇ ಬದುಕಿದ್ದರು. ಸಾವಿರಾರು ವರ್ಷಗಳ ಹಿಂದೆಯೇ ಅವರು ಜನಾಂಗೀಯ ಮತ್ತು ಭಾಷಿಕ ಭೇದವನ್ನು ತೊಡೆದು ಹಾಕಲು ಪ್ರಯತ್ನಿಸಿದರು ಎಂದು ನೆನಪಿಸಿಕೊಂಡರು.

ಸಮತಾಮೂರ್ತಿ ಕೇಂದ್ರದ ಸಂಸ್ಥಾಪಕ ಚಿನ್ನ ಜೀಯಾರ್​ ಸ್ವಾಮಿ ಗುಜರಾತ್ ಭೂಕಂಪ ಸಂತ್ರಸ್ತರಿಗೆ ಸಹಾಯ ಮಾಡಿದ್ದಾರೆ. ಒಂದು ಗ್ರಾಮವನ್ನು ಪುನರ್ನಿರ್ಮಿಸಿದ್ದಾರೆ. ಸ್ವಾಮಿಗಳ ಸೌಜನ್ಯವನ್ನು ನೋಡಿ ನನಗೆ ತುಂಬಾ ಸಂತೋಷವಾಯಿತು ಎಂದು ಅಮಿತ್​ ಶಾ ಹೇಳಿದ್ದಾರೆ.

ಹೈದರಾಬಾದ್‌ಗೆ ಹೆಮ್ಮೆಯ ಕ್ಷೇತ್ರದಲ್ಲಿ 1035 ಕುಂಡಲಗಳೊಂದಿಗೆ ಮಹಾಯಜ್ಞ ನಡೆಸಲಾಗುತ್ತಿದೆ. ಇಂದು ಮತ್ತು ನಾಳೆ ಧರ್ಮಾಚಾರ್ಯ ವಿಚಾರ ಸಂಕಿರಣ ನಡೆಯಲಿದೆ.

ಓದಿ:ಪುಷ್ಕರ್​ ಫ್ಲವರ್​ ಬೀ ಹೈ, ಫೈರ್​ ಬೀ ಹೈ.. ಕೇಂದ್ರ ರಕ್ಷಣಾ ಸಚಿವ ರಾಜನಾಥ್​ ಸಿಂಗ್​ರಿಂದ ಪುಷ್ಪ ಸಿನಿಮಾ ಡೈಲಾಗ್​

ABOUT THE AUTHOR

...view details