ಕರ್ನಾಟಕ

karnataka

ETV Bharat / bharat

ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಹೇರಿದ್ದು ತಪ್ಪೆಂದು ಎಲ್ಲರಿಗೂ ಗೊತ್ತು: ರಾಗಾ ಹೇಳಿಕೆಗೆ ಸಿಎಂ ನಿತೀಶ್​​ ಪ್ರತಿಕ್ರಿಯೆ - ಕಾಂಗ್ರೆಸ್​ ನಾಯಕ ಹಾಗೂ ಇಂದಿರಾ ಗಾಂಧಿ ಮೊಮ್ಮಗ ರಾಹುಲ್​ ಗಾಂಧಿ

ಇಂದಿರಾ ಗಾಂಧಿಯ ತುರ್ತು ಪರಿಸ್ಥಿತಿ ನಿರ್ಧಾರ ತಪ್ಪೆಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಇದನ್ನ ಬಿಟ್ಟು ರಾಹುಲ್​ ಗಾಂಧಿ ಬೇರೇ ಏನಾದರೂ ಮಾತನಾಡಲಿ ಎಂದು ಬಿಹಾರ ಸಿಎಂ ನಿತೀಶ್ ಕುಮಾರ್ ವ್ಯಂಗ್ಯವಾಡಿದರು.

Everyone knows imposing Emergency was wrong: Nitish on Rahul's remarks
ರಾಗಾ ಹೇಳಿಕೆಗೆ ಸಿಎಂ ನಿತಿನ್​ ಪ್ರತಿಕ್ರಿಯೆ

By

Published : Mar 4, 2021, 7:22 AM IST

ಪಾಟ್ನಾ (ಬಿಹಾರ): ಮಾಜಿ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರು ತುರ್ತು ಪರಿಸ್ಥಿತಿ ಹೇರಿದ್ದು ತಪ್ಪೆಂದು ಎಲ್ಲರಿಗೂ ತಿಳಿದಿದೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದರು.

ನಿನ್ನೆ ಅಮೆರಿಕದ ಕಾರ್ನೆಲ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಮತ್ತು ಭಾರತದ ಮಾಜಿ ಮುಖ್ಯ ಆರ್ಥಿಕ ಸಲಹೆಗಾರ ಕೌಶಿಕ್ ಬಸು ಅವರೊಂದಿಗಿನ ಸಂವಾದದಲ್ಲಿ ಮಾತನಾಡಿದ್ದ ಕಾಂಗ್ರೆಸ್​ ನಾಯಕ ಹಾಗೂ ಇಂದಿರಾ ಗಾಂಧಿ ಮೊಮ್ಮಗ ರಾಹುಲ್​ ಗಾಂಧಿ, 1975ರಲ್ಲಿ ಅಂದಿನ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ದೇಶದಲ್ಲಿ ಹೇರಿದ್ದ ತುರ್ತು ಪರಿಸ್ಥಿತಿ ನಿರ್ಣಯ ತಪ್ಪಿನಿಂದ ಕೂಡಿತ್ತು ಎಂದು ಹೇಳಿದ್ದರು.

ರಾಹುಲ್​ ಗಾಂಧಿ ಹೇಳಿಕೆಗೆ ಸಿಎಂ ನಿತೀಶ್​​ ಕುಮಾರ್​ ಪ್ರತಿಕ್ರಿಯೆ

ಇದನ್ನೂ ಓದಿ: ಇಂದಿರಾ ಗಾಂಧಿ ದೇಶದ ಮೇಲೆ ಹೇರಿದ್ದ ತುರ್ತು ಪರಿಸ್ಥಿತಿ ನಿರ್ಣಯ ತಪ್ಪು: ರಾಹುಲ್‌ ಗಾಂಧಿ

ರಾಗಾ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್​​, ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ತಾವೂ ಸೆರೆವಾಸ ಅನುಭವಿಸಿದ್ದನ್ನು ನೆನಪಿಸಿಕೊಂಡರು. 1974ರಲ್ಲಿ ನಾನು ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದು, ಜಯಪ್ರಕಾಶ್​ ನಾರಾಯಣ್​ ಅವರ ಚಳವಳಿಯಲ್ಲಿ ಉತ್ಸಾಹದಿಂದ ಭಾಗವಹಿಸಿದ್ದೆ. ಇಂದಿರಾ ಗಾಂಧಿಯ ತುರ್ತು ಪರಿಸ್ಥಿತಿ ನಿರ್ಧಾರ ತಪ್ಪೆಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಇದನ್ನ ಬಿಟ್ಟು ರಾಹುಲ್​ ಗಾಂಧಿ ಬೇರೇನಾದರೂ ಮಾತನಾಡಲಿ ಎಂದರು.

ABOUT THE AUTHOR

...view details