ಕರ್ನಾಟಕ

karnataka

ETV Bharat / bharat

ಓವೈಸಿ ರಕ್ಷಿಸುತ್ತಿರುವ ಪ್ರತಿಯೊಬ್ಬ ರೋಹಿಂಗ್ಯಾನನ್ನು ಹೊರಹಾಕುತ್ತೇವೆ: ತೇಜಸ್ವಿ ಸೂರ್ಯ - AIMIM chief

ಜಿಹೆಚ್​​​ಎಂಸಿ( ಗ್ರೇಟರ್​ ಹೈದರಾಬಾದ್​​​​ ಮಹಾನಗರ ಪಾಲಿಕೆ) ಚುನಾವಣೆಯಲ್ಲಿ ಉಭಯ ಪಕ್ಷಗಳ ಪ್ರಚಾರ ಕಾರ್ಯ ಭರದಿಂದ ಸಾಗಿದೆ. ಚುನಾವಣಾ ಕಣದಲ್ಲೀಗ ರಾಷ್ಟ್ರೀಯ ನಾಯಕರ ನಡುವೆ ವಾಕ್ಸಮರ ಏರ್ಪಟ್ಟಿದ್ದು, ಮಹಾನಗರ ಪಾಲಿಕೆ ಚುನಾವಣೆ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ.

Tejaswi surya
ತೇಜಸ್ವಿ ಸೂರ್ಯ

By

Published : Nov 25, 2020, 12:05 PM IST

ಹೈದರಾಬಾದ್​ (ತೆಲಂಗಾಣ): ಗ್ರೇಟರ್ ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆಯ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಬಿಜೆಪಿ ನಾಯಕರು ನಿರಂತರ ಪ್ರಚಾರದಲ್ಲಿ ತೊಡಗಿದ್ದಾರೆ.

ಶತಾಯಗತಾಯ ಮಹಾನಗರ ಪಾಲಿಕೆ ಗದ್ದುಗೆ ಏರಲು ರಾಷ್ಟ್ರೀಯ ನಾಯಕರ ಮೊರೆ ಹೋಗಿದ್ದು, ಸ್ಟಾರ್ ಪ್ರಚಾರಕರೇ ಕಣದಲ್ಲಿದ್ದಾರೆ. ಕಳೆದೊಂದು ವಾರದಿಂದ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸುತ್ತಿರುವ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ, ಟಿಆರ್​ಎಸ್​​ ಹಾಗೂ ಎಐಎಂಐಎಂ ಪಕ್ಷಗಳ ವಿರುದ್ಧ ಸಮರ ಸಾರಿದ್ದಾರೆ.

ಅಸಾದುದ್ದೀನ್ ಓವೈಸಿ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ಸೂರ್ಯ, ಓವೈಸಿ ಕಾಪಾಡಿಕೊಂಡು ಬಂದಿರುವ ರೋಹಿಂಗ್ಯಾಗಳನ್ನು ದೇಶದಿಂದ ಹೊರಹಾಕಲಾಗುತ್ತದೆ ಇದರಲ್ಲಿ ಯಾವುದೇ ಅನುಮಾನವಿಲ್ಲ ಎಂದಿದ್ದಾರೆ.

ದೇಶದಲ್ಲಿ ಅಕ್ರಮವಾಗಿ ನೆಲೆಸಿರುವ ಪ್ರತಿಯೊಬ್ಬ ವಲಸಿಗರನ್ನೂ ದೇಶದಿಂದ ಹೊರಹಾಕಲಾಗುತ್ತದೆ. ಓವೈಸಿ ರಕ್ಷಿಸಲು ಪ್ರಯತ್ನಿಸುತ್ತಿರುವ ಪ್ರತಿಯೊಬ್ಬ ರೋಹಿಂಗ್ಯಾ ವಲಸಿಗರನ್ನು ಹೊರಹಾಕಲಾಗುತ್ತದೆ ಎಂದಿದ್ದಾರೆ.

ಹೈದರಾಬಾದ್ ಹೆಸರನ್ನು ಭಾಗ್ಯನಗರ ಎಂದು ಬದಲಿಸುವ ಕುರಿತು ಪ್ರತಿಕ್ರಿಯಿಸಿ, ಆ ರೀತಿಯ ಹೆಸರು ಬದಲಾವಣೆಯ ಕುರಿತಂತೆ ಅಲ್ಲ. ಓಲ್ಡ್​ ಹೈದರಾಬಾದ್​ನಲ್ಲಿ ವಾಸವಿದ್ದ ಹಿಂದೂ ಕುಟುಂಬಗಳನ್ನು ಅಲ್ಲಿಂದ ಹೊಸ ನಗರಕ್ಕೆ ಬಂದು ವಾಸಿಸಲು ಹೇಳಲಾಗುತ್ತಿದೆ. ಹೀಗ್ಯಾಕೆ ಮಾಡಲಾಗುತ್ತಿದೆ. ಹಳೆಯ ಕಾಲೋನಿಗಳಿಂದ ಹೊರಬರುವಂತೆ ಯಾಕೆ ಒತ್ತಾಯಿಸಲಾಗುತ್ತಿದೆ.? ಈ ರಾಜಕೀಯಕ್ಕೆ ಯಾರು ಕಾರಣ..? ಇದಕ್ಕೆಲ್ಲ ಓವೈಸಿ ಕಾರಣ ಎಂದಿದ್ದಾರೆ.

ಚುನಾವಣಾ ರ‍್ಯಾಲಿಯ ವೇಳೆ ಬಿಜೆಪಿ ಗೆದ್ದರೆ ಹೈದರಾಬಾದ್​​ನ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡಲಾಗುತ್ತದೆ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಓವೈಸಿ, ನಾನು ಬಿಜೆಪಿ ನಾಯಕರಲ್ಲಿ ಕೇಳಲು ಇಚ್ಛಿಸುತ್ತೇನೆ. ಅವರು ಯಾರ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡಲಿದ್ದಾರೆ..? ಇಲ್ಲಿ ವಾಸಿಸುತ್ತಿರುವವರು ಭಾರತೀಯ ನಾಗರಿಕರು, ನಾನು ಅವರಿಗೆ 24 ಗಂಟೆ ಸಮಯಾವಕಾಶ ನೀಡುತ್ತೇನೆ, ಇಲ್ಲಿ ಎಷ್ಟು ಜನ ರೋಹಿಂಗ್ಯಾಗಳು, ಪಾಕಿಸ್ತಾನಿಗಳಿದ್ದಾರೆ ಎಂಬುವುದನ್ನು ತಿಳಿಸಲಿ ಎಂದು ಸವಾಲು ಹಾಕಿದ್ದಾರೆ.

ಇದನ್ನೂ ಓದಿ: ಅಸಾದುದ್ದೀನ್ ಓವೈಸಿ ಮಹಮ್ಮದ್​ ಅಲಿ ಜಿನ್ನಾರ ಇನ್ನೊಂದು ಅವತಾರ: ತೇಜಸ್ವಿ ಸೂರ್ಯ ಟೀಕಾ ಪ್ರಹಾರ

ABOUT THE AUTHOR

...view details