ಕರ್ನಾಟಕ

karnataka

ETV Bharat / bharat

2047 ರ ವೇಳೆಗೆ ಭಾರತದ ಕಟ್ಟ ಕಡೆಯ ಮಗುವೂ ಸುರಕ್ಷಿತವಾಗಿರುತ್ತದೆ ಮತ್ತು ಶಿಕ್ಷಣ ಪಡೆಯುತ್ತದೆ : ಕೈಲಾಶ್ ಸತ್ಯಾರ್ಥಿ

ಯಾವಾಗ ಉತ್ತರ ಪ್ರದೇಶ ಅಥವಾ ಬಿಹಾರದ ದೂರದ ಹಳ್ಳಿಗಳಿಂದ ಅಥವಾ ದಕ್ಷಿಣ ಭಾರತದಿಂದ, ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಸೇರಿದ ಬಾಲಕಿಯೊಬ್ಬಳು ಶಾಲೆಗೆ ಹೋಗಲು ಸ್ವತಂತ್ರಳಾಗಿದ್ದಾಳೆ ಮತ್ತು ತನ್ನ ಕನಸುಗಳನ್ನು ನನಸಾಗಿಸಲು ಅವಕಾಶಗಳನ್ನು ಪಡೆಯುತ್ತಾಳೆಯೋ ಆ ದಿನ ಭಾರತವು ಸಂಪೂರ್ಣವಾಗಿ ಸ್ವಾತಂತ್ರ್ಯವನ್ನು ಸಾಧಿಸುತ್ತದೆ ಎಂದು ಸತ್ಯಾರ್ಥಿ ಅಭಿಪ್ರಾಯಪಟ್ಟಿದ್ದಾರೆ..

every-child-in-india-will-be-safe-educated-by-2047-kailash-satyarthi
2047 ರ ವೇಳೆಗೆ ಭಾರತದ ಕಟ್ಟ ಕಡೆಯ ಮಗುವೂ ಸುರಕ್ಷಿತವಾಗಿರುತ್ತದೆ ಮತ್ತು ಶಿಕ್ಷಣ ಪಡೆಯುತ್ತದೆ: ಕೈಲಾಶ್ ಸತ್ಯಾರ್ಥಿ

By

Published : May 3, 2022, 11:34 AM IST

ವಾಷಿಂಗ್ಟನ್ (ಅಮೆರಿಕಾ) :ಭಾರತವು ನರೇಂದ್ರ ಮೋದಿ ನೇತೃತ್ವದಲ್ಲಿ ಬಾಲಕಾರ್ಮಿಕರ ವಿರುದ್ಧದ ಹೋರಾಟದಲ್ಲಿ ಹಿಂದಿನ ಸರಕಾರಗಳಿಗಿಂತ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸಿದೆ ಎಂದು ನೋಬೆಲ್ ಪ್ರಶಸ್ತಿ ಪುರಸ್ಕೃತ ಕೈಲಾಶ್ ಸತ್ಯಾರ್ಥಿ ಹೇಳಿದ್ದಾರೆ. ಇವರು ಅಮೆರಿಕಾದ ವಾಷಿಂಗ್ಟನ್‌ಗೆ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಮತ್ತು ಜೋ ಬೈಡನ್ ಅವರ ಸಂಪುಟ ಸಚಿವರನ್ನು ಭೇಟಿ ಮಾಡಲು ಆಗಮಿಸಿದ್ದರು.

2047ರ ಹೊತ್ತಿಗೆ ಭಾರತವು ತನ್ನ 100ನೇ ವರ್ಷದ ಸ್ವಾತಂತ್ರ್ಯವನ್ನು ಆಚರಿಸುವ ವೇಳೆಗೆ ದೇಶದ ಕಟ್ಟಕಡೆಯ ಮಗು ಸುರಕ್ಷಿತ,ಸ್ವತಂತ್ರ ಮತ್ತು ಶಿಕ್ಷಣವನ್ನು ಹೊಂದುವಂತೆ ಆಗುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಭಾರತದಲ್ಲಿ ಬಾಲಕಾರ್ಮಿಕತೆ ಕೊನೆಗೊಳಿಸಲು ಸಾಮಾಜಿಕ ಮತ್ತು ರಾಜಕೀಯ ಇಚ್ಛಾಶಕ್ತಿ ಅಗತ್ಯವಿದೆ. ಈ ಸಮಸ್ಯೆ ನಿರ್ಮೂಲನೆ ಮಾಡಲು ಸರ್ಕಾರಕ್ಕೆ ಸಮಾಜದ ಮತ್ತು ಖಾಸಗಿ ವಲಯದ ಬೆಂಬಲ ಅಗತ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.

ಭಾರತದ ಕಟ್ಟಕಡೆಯ ಮಗು ಸ್ವತಂತ್ರವಾಗಬೇಕು, ಸುರಕ್ಷಿತವಾಗಬೇಕು, ವಿದ್ಯಾವಂತವಾಗಬೇಕು. ಜೊತೆಗೆ ಎಲ್ಲಾ ರೀತಿಯ ರಕ್ಷಣೆ ಮತ್ತು ಅವಕಾಶಗಳನ್ನು ಅವರಿಗೆ ಒದಗಿಸುವಂತಾಗಬೇಕು. ಈ ಉದ್ಧೇಶ 2047 ಹೊತ್ತಿಗೆ ಸಾಕಾರವಾಗುತ್ತದೆ ಎಂಬ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ. ನಾನು ಸಮಾಜದ ಕಟ್ಟಕಡೆಯ ವ್ಯಕ್ತಿಯ ಬಗ್ಗೆ ಮಾತನಾಡುವಾಗ ನಮ್ಮ ಉದ್ದೇಶ ಮಹಾತ್ಮ ಗಾಂಧಿಯವರ ಆದರ್ಶಗಳಿಂದ ಪ್ರೇರಿತವಾಗಿದೆ.

ಯಾವಾಗ ಉತ್ತರ ಪ್ರದೇಶ ಅಥವಾ ಬಿಹಾರದ ದೂರದ ಹಳ್ಳಿಗಳಿಂದ ಅಥವಾ ದಕ್ಷಿಣ ಭಾರತದಿಂದ, ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಸೇರಿದ ಬಾಲಕಿಯೊಬ್ಬಳು ಶಾಲೆಗೆ ಹೋಗಲು ಸ್ವತಂತ್ರಳಾಗಿದ್ದಾಳೆ ಮತ್ತು ತನ್ನ ಕನಸುಗಳನ್ನು ನನಸಾಗಿಸಲು ಅವಕಾಶಗಳನ್ನು ಪಡೆಯುತ್ತಾಳೆಯೋ ಆ ದಿನ ಭಾರತವು ಸಂಪೂರ್ಣವಾಗಿ ಸ್ವಾತಂತ್ರ್ಯವನ್ನು ಸಾಧಿಸುತ್ತದೆ ಎಂದು ಸತ್ಯಾರ್ಥಿ ಅಭಿಪ್ರಾಯಪಟ್ಟಿದ್ದಾರೆ.

ಈಗಾಗಲೇ ಭಾರತವು ತನ್ನ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹೊಸ್ತಿಲಿನಲ್ಲಿದೆ. ವಿಶ್ವದಾದ್ಯಂತ ಇರುವ ಭಾರತೀಯರು ಈ ಅಮೃತ ಮಹೋತ್ಸವವನ್ನು ಆಚರಿಸುತ್ತಿದ್ದಾರೆ. ಈ ದೇಶದ ಅಭಿವೃದ್ಧಿಗೆ ಸಮಾಜದ ಜೊತೆಗೆ ಖಾಸಗಿ ವಲಯವು ಸಹಕರಿಸುವುದರಿಂದ ಪ್ರಗತಿ ಸಾಧಿಸಲು ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ.

ಓದಿ :ವಿಡಿಯೋ: ದೆಹಲಿಯ ಜಾಮಾ ಮಸೀದಿಯೆದುರು ಮುಸ್ಲಿಮರಿಂದ ಈದ್‌ಉಲ್‌ಫಿತ್ರ್ ನಮಾಜ್

For All Latest Updates

ABOUT THE AUTHOR

...view details