ಕರ್ನಾಟಕ

karnataka

ETV Bharat / bharat

ಚಾಂಪಿಯನ್‌ ದೀದಿ ಸೋತರೂ ಬಂಗಾಳದ ಮುಖ್ಯಮಂತ್ರಿ: ಹೇಗೆ ಗೊತ್ತೇ? - BJP candidate Suvendu Adhikari

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ 213 ಸ್ಥಾನಗಳನ್ನು ಟಿಎಂಸಿ ಪಡೆದು, ನಂದಿಗ್ರಾಮದಲ್ಲಿ ಮಮತಾ ಸೋಲುತ್ತಿದ್ದಂತೆಯೇ ಎಲ್ಲರಲ್ಲಿ ಉದ್ಭವಿಸಿದ ಪ್ರಶ್ನೆ ದೀದಿ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆಯೇ? ಎಂಬುದು. ಮಮತಾ ಬ್ಯಾನರ್ಜಿ ಸೋತಿದ್ದರೂ ಬಂಗಾಳದ ಸಿಎಂ ಆಗಬಹುದು, ಅದಕ್ಕೆ ಮಾರ್ಗಗಳಿವೆ..

Mamata Banerjee Can Still be Chief Minister Of West Bengal
ಮಮತಾ ಬ್ಯಾನರ್ಜಿ

By

Published : May 3, 2021, 9:15 AM IST

ಕೋಲ್ಕತ್ತಾ:ವಿಧಾನಸಭೆ ಕದನದಲ್ಲಿ ಬಿಜೆಪಿಯ ಸುವೇಂದು ಅಧಿಕಾರಿ ವಿರುದ್ಧ ನಂದಿಗ್ರಾಮದಲ್ಲಿ ಸಿಎಂ ಮಮತಾ ಬ್ಯಾನರ್ಜಿ ಸೋತಿದ್ದರೂ ಕೂಡ ತಮ್ಮ ನೇತೃತ್ವದಲ್ಲಿ ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷಕ್ಕೆ ಪ್ರಚಂಡ ಜಯ ಗಳಿಸಿಕೊಡುವಲ್ಲಿ ಸಫಲರಾಗಿದ್ದಾರೆ.

ನಿನ್ನೆ ಅಂತಿಮ ಸುತ್ತಿನ ಮತಎಣಿಕೆ ಆಗುತ್ತಿದ್ದಂತೆಯೇ ಅನೇಕ ಮಾಧ್ಯಮಗಳು ನಂದಿಗ್ರಾಮದಲ್ಲಿ ದೀದಿ ಗೆದ್ದಿದ್ದಾರೆಂದು ಸುದ್ದಿ ಪ್ರಸಾರ ಮಾಡಿದ್ದವು. ಆದರೆ ತಕ್ಷಣವೇ ಸುದ್ದಿಗೋಷ್ಠಿ ನಡೆಸಿದ ಮಮತಾ ತಮ್ಮ ಸೋಲು ಒಪ್ಪಿಕೊಂಡು ನಾನು ನಂದಿಗ್ರಾಮ ತೀರ್ಪನ್ನು ಸ್ವೀಕರಿಸುತ್ತೇನೆ ಎಂದಿದ್ದರು. ಆದರೆ ಎಣಿಕೆ ಇನ್ನೂ ಪ್ರಗತಿಯಲ್ಲಿದೆ ಎಂದು ಟಿಎಂಸಿ ಟ್ವೀಟ್ ಮಾಡಿ ಮತ್ತಷ್ಟು ಗೊಂದಲಕ್ಕೆ ಎಡೆ ಮಾಡಿಕೊಟ್ಟಿತ್ತು. ಕೆಲ ಕ್ಷಣಗಳ ಬಳಿಕ ಸುವೇಂದು ಅಧಿಕಾರಿ ಗೆಲುವು ಖಚಿತವಾಗಿತ್ತು.

213 ಸ್ಥಾನಗಳನ್ನು ಟಿಎಂಸಿ ಪಡೆದು, ನಂದಿಗ್ರಾಮದಲ್ಲಿ ಮಮತಾ ಸೋಲುತ್ತಿದ್ದಂತೆಯೇ ಎಲ್ಲರಲ್ಲಿ ಉದ್ಭವಿಸಿದ ಪ್ರಶ್ನೆ ದೀದಿ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆಯೇ? ಎಂಬುದು. ಮಮತಾ ಬ್ಯಾನರ್ಜಿ ಸೋತಿದ್ದರೂ ಬಂಗಾಳದ ಸಿಎಂ ಆಗಬಹುದು, ಅದಕ್ಕೆ ಮಾರ್ಗಗಳಿವು..

ಇದನ್ನೂ ಓದಿ: ರಿಸಲ್ಟ್​​ ಗೊಂದಲ: ಜನರ ತೀರ್ಪು ಸ್ವೀಕರಿಸುತ್ತೇನೆಂದು ಹೇಳಿ, ಕೋರ್ಟ್​ ಮೆಟ್ಟಿಲೇರಲು ಸಜ್ಜಾದ ದೀದಿ

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಇವರೆಲ್ಲರೂ ವಿಧಾನ ಪರಿಷತ್​ನ ಸದಸ್ಯರಾಗಿದ್ದಾರೆ. ಇವರು ಮುಖ್ಯಮಂತ್ರಿಯಾಗಲು ನೇರವಾಗಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿಲ್ಲ. ವಿಧಾನ ಪರಿಷತ್​ ಮೂಲಕವೇ ಆಯ್ಕೆಯಾಗಿದ್ದಾರೆ.

ಸಂವಿಧಾನದ 164ನೇ ವಿಧಿ ಹೇಳುವುದೇನು?

ಪಶ್ಚಿಮ ಬಂಗಾಳದಲ್ಲಿ ವಿಧಾನ ಪರಿಷತ್​ ಇಲ್ಲ. ಹೀಗಾಗಿ ದೀದಿ ಮತ್ತೆ ಸಿಎಂ ಗದ್ದುಗೆಗೆ ಏರುವುದು ಅಸಾಧ್ಯ. ಭಾರತ ಸಂವಿಧಾನದ 164ನೇ ವಿಧಿಯಡಿ, ರಾಜ್ಯದ ಶಾಸಕಾಂಗದ ಸದಸ್ಯರಲ್ಲದ ಸಚಿವರು 6 ತಿಂಗಳ ಅವಧಿಯೊಳಗೆ ತಮ್ಮ ಸದಸ್ಯತ್ವವನ್ನು ಸಾಬೀತು ಮಾಡಬಹುದಾಗಿದೆ. ಇದೇ ನಿಯಮ ಸಿಎಂ ಅಭ್ಯರ್ಥಿಗೂ ಅನ್ವಯವಾಗಲಿದೆ. ಹೀಗಾಗಿ ಆರು ತಿಂಗಳೊಳಗೆ ಯಾವುದಾದರೂ ಸ್ಥಾನವನ್ನು ಖಾಲಿಗೊಳಿಸಿ ಅಥವಾ ಖಾಲಿಯಾಗಿರುವ ವಿಧಾನಸಭೆ ಕ್ಷೇತ್ರದಲ್ಲಿ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಶಾಸಕಾಂಗದ ಸದಸ್ಯತ್ವ ಪಡೆಯಬಹುದಾಗಿದೆ.

ಅಭ್ಯರ್ಥಿಗಳ ನಿಧನದಿಂದ ಪಶ್ಚಿಮ ಬಂಗಾಳದ ಖಾರ್ದಾಹಾ ಸೇರಿದಂತೆ ಎರಡು ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯಬೇಕಿದೆ. ಬಂಗಾಳದಲ್ಲಿ ಪರಿಷತ್ ಇಲ್ಲದಿರುವುದರಿಂದ ಮಮತಾ ಬ್ಯಾನರ್ಜಿ ಉಪಚುನಾವಣೆ ನಡೆಯಬೇಕಿರುವ ಕ್ಷೇತ್ರದಿಂದ ಸ್ಪರ್ಧಿಸಿ ವಿಧಾನಸಭೆಯ ಸದಸ್ಯರಾಗಬಹುದು.

ABOUT THE AUTHOR

...view details