ಕರ್ನಾಟಕ

karnataka

ETV Bharat / bharat

ಕಠಿಣ ಪರಿಸ್ಥಿತಿಯ ಹೊರತಾಗಿಯೂ 8,000 ಭಾರತೀಯರನ್ನು ಸ್ಥಳಾಂತರಿಸಲು ಸಾಧ್ಯವಾಯಿತು : ಅರಿಂದಮ್ ಬಾಗ್ಚಿ - ಉಕ್ರೇನ್​ ಪರಿಸ್ಥಿತಿ ಬಗ್ಗೆ ಮಾತನಾಡಿದ ಎಂಇಎ ವಕ್ತಾರ ಅರಿಂದಮ್ ಬಾಗ್ಚಿ

ನಾವು ನಮ್ಮ ಮೌಲ್ಯಮಾಪನ ಪ್ರಕ್ರಿಯೆಯನ್ನು ವೇಗಗೊಳಿಸಲು ಸಮರ್ಥರಾಗಿದ್ದೇವೆ. ಪರಿಣಾಮ ನಾವು ಸಲಹೆಯನ್ನು ನೀಡಿದ ನಂತರ ಸುಮಾರು 8,000 ಭಾರತೀಯರು ಉಕ್ರೇನ್ ತೊರೆದಿದ್ದಾರೆ ಎಂದು ವಿದೇಶಾಂಗ ಇಲಾಖೆಯ ವಕ್ತಾರ ಅರಿಂದಮ್ ಬಾಗ್ಚಿ ವಿವರಿಸಿದ್ದಾರೆ.

ಉಕ್ರೇನ್​ ಪರಿಸ್ಥಿತಿ ಬಗ್ಗೆ ಮಾತನಾಡಿದ  ಎಂಇಎ ವಕ್ತಾರ ಅರಿಂದಮ್ ಬಾಗ್ಚಿ
ಉಕ್ರೇನ್​ ಪರಿಸ್ಥಿತಿ ಬಗ್ಗೆ ಮಾತನಾಡಿದ ಎಂಇಎ ವಕ್ತಾರ ಅರಿಂದಮ್ ಬಾಗ್ಚಿ

By

Published : Feb 28, 2022, 7:39 PM IST

ನವದೆಹಲಿ: ಉಕ್ರೇನ್‌ನಲ್ಲಿ ನಡೆಯುತ್ತಿರುವ ಭೀಕರ ಯುದ್ಧದ ನಡುವೆ ಹಾಗೂ ಹಲವಾರು ಸಂಕೀರ್ಣತೆಗಳ ನಡುವೆಯೂ ಎಂಇಎ ಸ್ಥಳಾಂತರಿಸುವ ಪ್ರಕ್ರಿಯೆಯನ್ನು ವೇಗಗೊಳಿಸಲು ಮತ್ತು ಸುಮಾರು 8,000 ಭಾರತೀಯರನ್ನು ಯಶಸ್ವಿಯಾಗಿ ಮರಳಿ ಕರೆತರಲಾಗಿದೆ ಎಂದು ಎಂಇಎ ವಕ್ತಾರ ಅರಿಂದಮ್ ಬಾಗ್ಚಿ ಹೇಳಿದ್ದಾರೆ.

ಈಗಾಗಲೇ ಸುಮಾರು 1400 ಭಾರತೀಯ ನಾಗರಿಕರನ್ನು ಹೊತ್ತ ಆರು ವಿಮಾನಗಳು ಆಗಮಿಸಿವೆ. ನಾಲ್ಕು ವಿಮಾನಗಳು ಬುಕಾರೆಸ್ಟ್ (ರೊಮೇನಿಯಾ) ಮತ್ತು ಬುಡಾಪೆಸ್ಟ್ (ಹಂಗೇರಿ) ನಿಂದ ಎರಡು ವಿಮಾನಗಳು ಆಗಮಿಸಿವೆ ಎಂದು ವಿವರಿಸಿದರು.

ನಾವು ನಮ್ಮ ಮೌಲ್ಯಮಾಪನ ಪ್ರಕ್ರಿಯೆಯನ್ನು ವೇಗಗೊಳಿಸಲು ಸಮರ್ಥರಾಗಿದ್ದೇವೆ. ಪರಿಣಾಮ ನಾವು ಸಲಹೆಯನ್ನು ನೀಡಿದ ನಂತರ ಸುಮಾರು 8,000 ಭಾರತೀಯರು ಉಕ್ರೇನ್ ತೊರೆದಿದ್ದಾರೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ:ಮಕ್ಕಳಿಲ್ಲದ ದಂಪತಿಗಳೇ ಈ ನಕಲಿ ವೈದ್ಯ ದಂಪತಿಗಳ ಟಾರ್ಗೆಟ್​: ಔಷಧ ತಿಂದವರ ಆರೋಗ್ಯ ಸ್ಥಿತಿ ಗಂಭೀರ!

ಉಕ್ರೇನ್ ಗಡಿಯಲ್ಲಿರುವ ನಾಲ್ಕು ದೇಶಗಳಿಗೆ ವಿಶೇಷ ಪ್ರತಿನಿಧಿಗಳನ್ನು ನಿಯೋಜಿಸಲು ವಿದೇಶಾಂಗ ಇಲಾಖೆ ನಿರ್ಧರಿಸಿದೆ. ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ರೊಮೇನಿಯಾಗೆ, ಕಿರಣ್ ರಿಜಿಜು ಸ್ಲೋವಾಕ್ ಗಣರಾಜ್ಯಕ್ಕೆ, ಹರ್ದೀಪ್ ಪುರಿ ಹಂಗೇರಿಗೆ ಮತ್ತು ವಿ ಕೆ ಸಿಂಗ್ ಪೋಲೆಂಡ್‌ಗೆ ಸ್ಥಳಾಂತರಿಸುವ ಪ್ರಕ್ರಿಯೆಯನ್ನು ಸಂಘಟಿಸಲು ಮತ್ತು ಮೇಲ್ವಿಚಾರಣೆ ಮಾಡಲು ಅಲ್ಲಿಗೆ ತೆರಳಲಿದ್ದಾರೆ ಎಂದು ಬಾಗ್ಚಿ ಮಾಹಿತಿ ನೀಡಿದರು.

ಇದೇ ವೇಳೆ, ಉಕ್ರೇನಿಯನ್ ರಾಯಭಾರಿ ವಿನಂತಿಸಿದಂತೆ ನಾವು ಔಷಧಗಳು ಸೇರಿದಂತೆ ಮಾನವೀಯ ನೆರವನ್ನು ಉಕ್ರೇನ್‌ಗೆ ಕಳುಹಿಸುತ್ತೇವೆ ಎಂದು ಹೇಳಿದರು.

For All Latest Updates

TAGGED:

ABOUT THE AUTHOR

...view details