ಕರ್ನಾಟಕ

karnataka

ETV Bharat / bharat

ಅಫ್ಘಾನಿಸ್ತಾನದಲ್ಲಿನ ಎಲ್ಲ ಭಾರತೀಯರನ್ನ ಕರೆತರಲಾಗಿದೆ: ವಿದೇಶಾಂಗ ಇಲಾಖೆ ಸ್ಪಷ್ಟನೆ

ಅಫ್ಘಾನಿಸ್ತಾನದಲ್ಲಿ ಭಾರತದ ಯಾವುದೇ ಪ್ರಜೆಗಳು ಉಳಿದುಕೊಂಡಿಲ್ಲ. ಅಲ್ಲಿನ ಎಲ್ಲ ನಾಗರಿಕರನ್ನ ಈಗಾಗಲೇ ಕರೆತರಲಾಗಿದೆ ಎಂದು ಕೇಂದ್ರ ವಿದೇಶಾಂಗ ಇಲಾಖೆ ಮಾಹಿತಿ ನೀಡಿದೆ.

MEA
MEA

By

Published : Aug 27, 2021, 6:05 PM IST

ನವದೆಹಲಿ: ಅಫ್ಘಾನಿಸ್ತಾನದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿರುವ ತಾಲಿಬಾನ್​​ ರಕ್ತದೋಕುಳಿ ನಡೆಸಿದ್ದು, ಅನೇಕ ಅಮಾಯಕರ ಪ್ರಾಣ ಬಲಿ ಪಡೆದುಕೊಳ್ಳುತ್ತಿದೆ. ನಿನ್ನೆಯಷ್ಟೇ ನಡೆದ ಸರಣಿ ಬಾಂಬ್​ ಸ್ಫೋಟ ಪ್ರಕರಣದಲ್ಲಿ 85ಕ್ಕೂ ಅಧಿಕ ಜನರು ಸಾವನ್ನಪ್ಪಿ, ನೂರಾರು ಜನರು ಗಾಯಗೊಂಡಿದ್ದಾರೆ.

ಬಾಂಬ್​ ಸ್ಫೋಟ ನಡೆಯುತ್ತಿದ್ದಂತೆ ಬೇರೆ ಬೇರೆ ದೇಶಗಳು ಸ್ಥಳಾಂತರ ಕಾರ್ಯ ಚುರುಕುಗೊಳಿಸಿವೆ. ಇದೇ ವಿಚಾರವಾಗಿ ಮಾತನಾಡಿರುವ ಭಾರತದ ವಿದೇಶಾಂಗ ಇಲಾಖೆ, ಅಫ್ಘಾನಿಸ್ತಾನದಲ್ಲಿ ಭಾರತದ ಯಾವುದೇ ನಾಗರಿಕರು ಉಳಿದುಕೊಂಡಿಲ್ಲ ಎಂದು ಹೇಳಿದೆ.

ಇದನ್ನೂ ಓದಿರಿ: ಪೊಲೀಸ್​ ಪೇದೆ​ ಆಗಿರುವ ಬಿಗ್​ ಬಿ​​ ಬಾಡಿಗಾರ್ಡ್​​ ವಾರ್ಷಿಕ ವೇತನ 1.5 ಕೋಟಿ ರೂ: ತನಿಖೆಗೆ ಆದೇಶ

ವಿದೇಶಾಂಗ ಇಲಾಖೆ ವಕ್ತಾರ ಅರಿಂದಮ್ ಬಾಗ್ಚಿ ಮಾತನಾಡಿದ್ದು, ಅಫ್ಘಾನಿಸ್ತಾನದಲ್ಲಿನ ಪರಿಸ್ಥಿತಿ ಬಗ್ಗೆ ಸೂಕ್ಷ್ಮವಾಗಿ ಗಮನಿಸುತ್ತಿದ್ದು, ನಮ್ಮ ಯಾವುದೇ ಪ್ರಜೆ ಅಲ್ಲಿ ಉಳಿದುಕೊಂಡಿಲ್ಲ ಎಂದು ತಿಳಿಸಿದ್ದಾರೆ. ಭಾರತಕ್ಕೆ ಬಂದ ಕೊನೆ ವಿಮಾನದಲ್ಲಿ 40 ಜನರು ಆಗಮಿಸಿದ್ದು, ಅಲ್ಲಿ ಅರಾಜಕತೆ ಉಂಟಾಗಲು ಆರಂಭಗೊಂಡಾಗಿನಿಂದಲೂ ನಾವು ನಮ್ಮ ಪ್ರಜೆಗಳನ್ನ ಕರೆತರುವ ಕೆಲಸದಲ್ಲಿ ಮಗ್ನರಾಗಿದ್ದೆವು ಎಂದಿದ್ದಾರೆ.

ಇಲ್ಲಿಯವರೆಗೆ 550 ಜನರ ಕರೆತರಲಾಗಿದ್ದು, ಇದರಲ್ಲಿ 260 ಜನರು ಭಾರತೀಯರು ಹಾಗೂ ಉಳಿದವರು ಇತರ ದೇಶದ ನಾಗರಿಕರು ಆಗಿದ್ದಾರೆ ಎಂದು ಮಾಹಿತಿ ಹಂಚಿಕೊಂಡರು.

ಟ್ರಂಪ್​ ಪ್ರತಿಕ್ರಿಯೆ

ಕಾಬೂಲ್ ಏರ್​ಪೋರ್ಟ್​ನಲ್ಲಿ ಸಂಭವಿಸಿರುವ ಸರಣಿ ಬಾಂಬ್​ ಸ್ಫೋಟಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಅಮೆರಿಕ ಮಾಜಿ ಅಧ್ಯಕ್ಷ ಡೋನಾಲ್ಡ್​ ಟ್ರಂಪ್​, ಒಂದು ವೇಳೆ ನಾನು ಅಧ್ಯಕ್ಷನಾಗಿದ್ದರೆ ಈ ಘಟನೆ ನಡೆಯುತ್ತಿರಲಿಲ್ಲ ಎಂದು ಹೇಳಿಕೊಂಡಿದ್ದಾರೆ.

ABOUT THE AUTHOR

...view details