ನವದೆಹಲಿ:ಕೊರೊನಾ ವೈರಸ್ 2ನೇ ಅಲೆ ಹಾವಳಿ ಹೆಚ್ಚಾಗಿದ್ದರಿಂದ ಭಾರತದಿಂದ ಯುರೋಪ್ ರಾಷ್ಟ್ರಗಳ ಪ್ರವಾಸಕ್ಕೆ ತೆರಳಲು ಹಾಕಲಾಗಿದ್ದ ನಿರ್ಬಂಧಗಳನ್ನ ಈಗ ಸಡಿಲಗೊಳಿಸಲಾಗುತ್ತಿದೆ. ಭಾರತದಲ್ಲಿ ಉತ್ಪಾದನೆಯಾಗುತ್ತಿರುವ ಕೋವಿಶೀಲ್ಡ್ ಅಥವಾ ಕೋವ್ಯಾಕ್ಸಿನ್ ಲಸಿಕೆ ಪಡೆದುಕೊಂಡವರು ಇನ್ನು ಮುಂದೆ ಯುರೋಪ್ನ 9 ರಾಷ್ಟ್ರಗಳಿಗೆ ಯಾವುದೇ ತೊಂದರೆ, ತಕರಾರಿಲ್ಲದೆ ಪ್ರಯಾಣ ಬೆಳೆಸಬಹುದು.
ಆಸ್ಟ್ರಿಯಾ, ಜರ್ಮನಿ, ಗ್ರೀಸ್, ಐಸ್ಲ್ಯಾಂಡ್, ಐರ್ಲೆಂಡ್, ಸ್ಪೇನ್, ಸ್ಲೊವೇನಿಯಾ, ಸ್ವಿಟ್ಜರ್ಲೆಂಡ್ ಹಾಗೂ ಎಸ್ಟೋನಿಯಾ ದೇಶಗಳಿಗೆ ಭಾರತದಿಂದ ಇನ್ನು ಮುಂದೆ ಪ್ರವಾಸ ಕೈಗೊಳ್ಳಬಹುದು. ಆದರೆ ಇಲ್ಲಿರುವ ಷರತ್ತು ಇಷ್ಟೇ. ಇದಕ್ಕಾಗಿ ಕೋವಿಶೀಲ್ಡ್ ಅಥವಾ ಕೋವ್ಯಾಕ್ಸಿನ್ ಲಸಿಕೆ ಪಡೆದುಕೊಂಡಿರಬೇಕು. ಭಾರತದಲ್ಲಿ ಕೊರೊನಾ ವೈರಸ್ ಮಿನಿಮೀರಿದ್ದರ ಪರಿಣಾಮವಾಗಿ ಈ ಮೇಲಿನ ಎಲ್ಲ ರಾಷ್ಟ್ರಗಳು ಭಾರತದಿಂದ ಬರುವವರಿಗೆ ನಿರ್ಬಂಧ ವಿಧಿಸಿದ್ದವು.