ಕರ್ನಾಟಕ

karnataka

ETV Bharat / bharat

ಹಳ್ಳಿಗಳ ಅಭಿವೃದ್ಧಿ ಆಶಯ.. 'ಈಟಿವಿ ಭಾರತ'ದೊಂದಿಗೆ UPSC 1st Rank​​ ಸಾಧಕ ಶುಭಂ ಕುಮಾರ್ ಮಾತು - Kathihar bihar

ಬಾಲ್ಯದಿಂದಲೇ ಐಎಎಸ್​ ಅಧಿಕಾರಿ ಆಗಬೇಕೆಂದು ಕನಸು ಕಂಡಿದ್ದೆ. ಯಾವ ಹುದ್ದೆ ನೀಡಿದರೂ ಮಾಡುವೆ. ಅದರಲ್ಲಿಯೂ ಗ್ರಾಮೀಣಾಭಿವೃದ್ಧಿಗಾಗಿ ಕೆಲಸ ಮಾಡಲು ಅವಕಾಶ ಸಿಕ್ಕರೆ ತುಂಬಾ ಒಳ್ಳೆಯದು ಎಂದು ಯುಪಿಎಸ್​ಸಿ (UPSC) ಪರೀಕ್ಷೆಯಲ್ಲಿ ಮೊದಲ ರ‍್ಯಾಂಕ್ ಪಡೆದ ಶುಭಂ ಕುಮಾರ್ ಹೇಳಿದ್ದಾರೆ.

ಈಟಿವಿ ಭಾರತದೊಂದಿಗೆ ಯುಪಿಎಸ್​ಸಿ 1st ರ‍್ಯಾಂಕ್​​ ಸಾಧಕನ ಮಾತು
ಈಟಿವಿ ಭಾರತದೊಂದಿಗೆ ಯುಪಿಎಸ್​ಸಿ 1st ರ‍್ಯಾಂಕ್​​ ಸಾಧಕನ ಮಾತು

By

Published : Sep 25, 2021, 12:36 PM IST

Updated : Sep 25, 2021, 1:30 PM IST

ಪುಣೆ (ಮಹಾರಾಷ್ಟ್ರ):ಶುಕ್ರವಾರ ಸಂಜೆ ಕೇಂದ್ರ ನಾಗರಿಕ ಸೇವಾ ಆಯೋಗ (ಯುಪಿಎಸ್​ಸಿ) ತನ್ನ 2020ನೇ ಸಾಲಿನ ನಾಗರಿಕ ಸೇವೆಗಳ ಪರೀಕ್ಷೆಯ ಫಲಿತಾಂಶ ಪ್ರಕಟಿಸಿದ್ದು, 24 ವರ್ಷದ ಶುಭಂ ಕುಮಾರ್ ಮೊದಲ ರ‍್ಯಾಂಕ್ ಪಡೆದಿದ್ದಾರೆ.

ಈಟಿವಿ ಭಾರತದೊಂದಿಗೆ ಯುಪಿಎಸ್​ಸಿ 1st ರ‍್ಯಾಂಕ್​​ ಸಾಧಕನ ಮಾತು

ಬಿಹಾರದ ಕತಿಹಾರ ಮೂಲದ ಶುಭಂ ಕುಮಾರ್ ತನ್ನ ಮೂರನೇ ಪ್ರಯತ್ನದಲ್ಲಿ ಯಶಸ್ಸು ಪಡೆದುಕೊಂಡಿದ್ದಾರೆ. ಐಐಟಿ ಬಾಂಬೆಯಿಂದ ಬಿ.ಟೆಕ್ (ಸಿವಿಲ್ ಎಂಜಿನಿಯರಿಂಗ್) ಪದವಿ ಪಡೆದ ಶುಭಂ, ಪ್ರಸ್ತುತ ಪುಣೆಯ ನ್ಯಾಷನಲ್ ಅಕಾಡೆಮಿ ಆಫ್ ಡಿಫೆನ್ಸ್ ಫೈನಾನ್ಶಿಯಲ್ ಮ್ಯಾನೇಜ್‌ಮೆಂಟ್ (NADFM)ನಲ್ಲಿ ತರಬೇತಿ ಪಡೆಯುತ್ತಿದ್ದಾರೆ.

ಶುಭಂ ಕುಮಾರ್ ಕುಟುಂಬ

ಇದನ್ನೂ ಓದಿ: UPSC ನಾಗರಿಕ ಸೇವೆಗಳ ಪರೀಕ್ಷೆ ಫಲಿತಾಂಶ ಪ್ರಕಟ: ಶುಭಂ ಕುಮಾರ್​ಗೆ 1st ರ‍್ಯಾಂಕ್​​

ಈ ಬಗ್ಗೆ 'ಈಟಿವಿ ಭಾರತ'ದೊಂದಿಗೆ ಮಾತನಾಡಿದ ಶುಭಂ ಕುಮಾರ್, ಫಲಿತಾಂಶದ ಬಗ್ಗೆ ತುಂಬಾ ಖುಷಿ ಆಗ್ತಾ ಇದೆ. ನಮ್ಮ ಕುಟುಂಬದ ಎಲ್ಲರೂ ಬಹಳ ಸಂತೋಷದಲ್ಲಿದ್ದಾರೆ. ನನ್ನ ತಂದೆ ಬ್ಯಾಂಕ್​ ಮ್ಯಾನೇಜರ್​. ಬಾಲ್ಯದಿಂದಲೇ ಐಎಎಸ್​ ಅಧಿಕಾರಿ ಆಗಬೇಕೆಂದು ಕನಸು ಕಂಡಿದ್ದೆ. ಈಗ ಅದು ಈಡೇರಿದೆ. ನನಗೆ ಯಾವ ಹುದ್ದೆ ನೀಡಿದರೂ ಮಾಡುವೆ. ಅದರಲ್ಲಿಯೂ ಗ್ರಾಮೀಣಾಭಿವೃದ್ಧಿಗಾಗಿ ಕೆಲಸ ಮಾಡಲು ಅವಕಾಶ ಸಿಕ್ಕರೆ ತುಂಬಾ ಒಳ್ಳೆಯದು ಎಂದು ಹೇಳಿದ್ದಾರೆ.

ಶುಭಂ ಕುಮಾರ್ ಸ್ನೇಹಿತರ ಸಂಭ್ರಮ
Last Updated : Sep 25, 2021, 1:30 PM IST

ABOUT THE AUTHOR

...view details