ಮೇಷ : ನಿಮ್ಮ ಯಶಸ್ಸಿನ ರಹಸ್ಯಗಳನ್ನು ಹಂಚಿಕೊಳ್ಳುವುದು ಒಳ್ಳೆಯದು ಎಂದು ನೀವು ತಿಳಿಯುತ್ತೀರಿ. ನೀವು ಏನೆಲ್ಲ ನೀಡುತ್ತೀರೋ ಅದು ನಿಮಗೆ 9 ಪಟ್ಟು ಹೆಚ್ಚಾಗಿ ಹಿಂದಿರುಗುತ್ತದೆ. ಈಗ ನೀವು ಮುಕ್ತ ಹಾಗೂ ನೆರವು ನೀಡಬಲ್ಲವರಾಗಲು ಬಯಸುತ್ತೀರಿ. ನಿಮ್ಮ ದಾರಿಯಲ್ಲಿ ಹೆಚ್ಚಿನ ಗೌರವ ಲಭಿಸುವ ಸಾಧ್ಯತೆ ಇದೆ.
ವೃಷಭ : ಈ ದಿನ ವಿದ್ಯಾರ್ಥಿಗಳಿಗೆ ಕಷ್ಟಕರವಾಗಿರಲಿದೆ. ನಿಮ್ಮ ಮನಸ್ಸು ಇಂದು ಚಿಂತೆಯಿಂದ ಕೂಡಿರಲಿದೆ. ಉದರ ಸಂಬಂಧಿ ವ್ಯಾಧಿಗಳು ನಿಮ್ಮ ಚಿಂತೆಗೆ ಇನ್ನೊಂದು ಕಾರಣವಾಗಲಿದೆ. ಆದರೆ ಮಧ್ಯಾಹ್ನದ ಬಳಿಕ ಈ ವ್ಯಾಧಿಯಿಂದ ನೀವು ನೆಮ್ಮದಿ ಪಡೆಯುವಿರ. ಮಾನಸಿಕ ಒತ್ತಡಗಳಿಂದ ನೀವು ಮುಕ್ತಿ ಪಡೆಯುವಿರಿ. ನಿಮ್ಮ ಕಾರ್ಯಗಳು ಪ್ರಶಂಸೆಯನ್ನು ಗಳಿಸಲಿವೆ. ನಿಮ್ಮ ಹೆತ್ತವರಿಂದ ಶುಭಸುದ್ದಿ ಪಡೆಯುವ ಸಾಧ್ಯತೆ ಇದೆ.
ಮಿಥುನ: ಈ ದಿನ ನಿಮ್ಮ ಜೀವನದ ಪ್ರಮುಖ ಹಂತಗಳಲ್ಲಿ ಒಂದಾಗಿದೆ. ನೀವು ಕೆಲ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಿದ್ದೀರಿ. ಕೆಲಸದಲ್ಲಿ ನೀವು ಹಲವಾರು ಹೊಸ ಆಲೋಚನೆಗಳನ್ನು ಮಾಡುತ್ತೀರಾ. ಇದು ನಿಮ್ಮ ಇಚ್ಛಾಶಕ್ತಿಯೊಂದಿಗೆ ನಿಮ್ಮ ಕಂಪನಿಗೆ ಗೆಲ್ಲುವ ಸಂಯೋಜನೆ ನೀಡುತ್ತದೆ. ಸಂಜೆಯಲ್ಲಿ ನೀವು ಸೌಕರ್ಯಗಳು ಮತ್ತು ಮನರಂಜನೆಗೆ ಕೊಂಚ ಹಣ ಖರ್ಚು ಮಾಡಬೇಕಾಗಬಹುದು.
ಕರ್ಕಾಟಕ:ನೀವು ಇತರರಿಗೆ ಜೀವನದಲ್ಲಿ ಯಶಸ್ವಿಯಾಗುವುದು ಹೇಗೆಂದು ತೋರಿಸುತ್ತೀರಿ. ನಿಮ್ಮ ಮೇಲಧಿಕಾರಿಗಳೊಂದಿಗೆ ಸಂಘರ್ಷಕ್ಕೆ ಎಳಸುವುದರ ಬದಲಿಗೆ ನೀವು ಕೆಲಸದಲ್ಲಿ ಹೊಂದಿಕೊಳ್ಳುವ ಮತ್ತು ಸಹಕಾರ ನೀಡುವ ಸಾಧ್ಯತೆ ಇದೆ. ಸಂಜೆ ವೇಳೆಗೆ ನೀವು ಪರಿಚರೊಂದಿಗೆ ಬೆರೆಯುವ ಸಾಧ್ಯತೆಯಿದೆ. ನಿಮ್ಮ ಸಮಯವನ್ನು ಎಲ್ಲಾ ವ್ಯಾಪಾರ, ಕುಟುಂಬಕ್ಕೆ ಸಮಾನವಾಗಿ ಸಮಯ ಹಂಚಿಕೊಳ್ಳುವುದು ಸೂಕ್ತ.
ಸಿಂಹ : ಈ ದಿನ ಕಹಿಯಾಗಿ ಪ್ರಾರಂಭವಾಗುತ್ತದೆ. ನೀವು ಸಾಕಷ್ಟು ಸಂಗತಿಗಳನ್ನು ಸಾಧಿಸಲು ಬಯಸುತ್ತೀರಿ. ಆದಾಗ್ಯೂ ನೀವು ಬಯಸಿದ ಫಲಿತಾಂಶಗಳನ್ನು ಸಾಧಿಸಲು ಸಾಧ್ಯವಿಲ್ಲ. ದಿನದ ನಂತರವು ನಿಮ್ಮ ಎಲ್ಲಾ ಕೆಲಸಕ್ಕೆ ಸಂಬಂಧಿಸಿದ ಪ್ರಯತ್ನಗಳು ಸೂಕ್ತವಾಗಿದ್ದು, ಪ್ರಗತಿ ಸಾಧಿಸಲು ನರವಾಗಲಿದೆ.
ಕನ್ಯಾ :ನೀವು ಕಷ್ಟಪಟ್ಟು ಕೆಲಸ ಮಾಡುವುದು ಸೂಕ್ತ. ಇದರಿಂದ ನಿಮ್ಮ ಸಹೋದ್ಯೋಗಿಗಳು ಮತ್ತು ಮೇಲಾಧಿಕಾರಿಗಳು ನಿಮ್ಮ ಪ್ರಯತ್ನಗಳನ್ನು ಗುರುತಿಸುತ್ತಾರೆ. ಆದರೆ ಅದೇ ಪ್ರಮಾಣದಲ್ಲಿ ಮಾನ್ಯತೆ ಲಭಿಸುವುದಿಲ್ಲ. ನೀವು ಸಾಧ್ಯವಿರುವಷ್ಟು ಅತ್ಯುತ್ತಮ ಪ್ರಯತ್ನ ಮಾಡಿದ್ದೀರಿ ಎಂಬ ಸಮಾಧಾನದಲ್ಲಿ ನಿರಾಳವಾಗಬಹುದು.