ಕರ್ನಾಟಕ

karnataka

ETV Bharat / bharat

ಈಟಿವಿ ಭಾರತ್​ಗೆ ದಕ್ಷಿಣ ಏಷ್ಯಾದ ಡಿಜಿಟಲ್​ ಮೀಡಿಯಾ ಪ್ರಶಸ್ತಿ - ಈಟಿವಿ ಭಾರತ್ ಹೈದರಾಬಾದ್

ದೇಶದ ಅತಿದೊಡ್ಡ ಡಿಜಿಟಲ್ ನೆಟ್‌ವರ್ಕ್ ಆಗಿರುವ ಈಟಿವಿ ಭಾರತ್ ಭಾರತದ ಮೂಲೆ ಮೂಲೆಯಿಂದ ಸುದ್ದಿ ತರಲು ಮತ್ತು ಧ್ವನಿರಹಿತರ ಧ್ವನಿಯಾಗಲು ಶ್ರಮಿಸುತ್ತಿದೆ.

etv bharat
ಈಟಿವಿ ಭಾರತ್​

By

Published : Mar 4, 2021, 11:32 PM IST

Updated : Mar 5, 2021, 10:20 AM IST

ಹೈದರಾಬಾದ್: 'ಈಟಿವಿ ಭಾರತ್'​ ಹಿರಿಮೆಗೆ ಮತ್ತೊಂದು ಗರಿ ಸೇರಿದೆ. ಸುದ್ದಿ ಸಾಕ್ಷರತೆ ವಿಭಾಗದ ಅತ್ಯುತ್ತಮ ಯೋಜನೆಯಲ್ಲಿ ವಾನ್- ಇನ್ಫ್ರಾ ಸೌತ್ ಏಷಿಯನ್ ಡಿಜಿಟಲ್ ಮೀಡಿಯಾ ಅವಾರ್ಡ್ಸ್​​-2020 ನೀಡುವ ಡಿಜಿಟಲ್ ಡಿವೈಡ್ ಪುರಸ್ಕಾರಕ್ಕೆ ಈಟಿವಿ ಭಾರತ್ ಪಾತ್ರವಾಗಿದೆ.

ನಗರ ಪ್ರದೇಶಗಳಲ್ಲಿನ ಶ್ರೀಮಂತ ಮತ್ತು ಮಧ್ಯಮ ವರ್ಗದ ಕುಟುಂಬಗಳು ಮತ್ತು ಗ್ರಾಮೀಣ ಪ್ರದೇಶಗಳಲ್ಲಿನ ಬಡವರ ನಡುವಿನ ಸುದ್ದಿ ಸಾಕ್ಷರತೆ ಕಡಿಮೆ ಎಂಬುದನ್ನು ಡಿಜಿಟಲ್​ ಡಿವೈಡ್ ಸೂಚಿಸುತ್ತದೆ.

ಇದನ್ನೂ ಓದಿ:EXPLAINER: ಜಾಗತಿಕ ಆರ್ಥಿಕ ಸ್ವಾತಂತ್ರ್ಯ ಸೂಚ್ಯಂಕ-2021 ಹಾಗೂ ಭಾರತದ ಸ್ಥಾನ

ಆನ್‌ಲೈನ್ ಶಿಕ್ಷಣವು ಮಾಹಿತಿಯ ಪ್ರಸರಣದ ಪ್ರಮುಖ ಮೂಲವಾಗಿ ಮಾರ್ಪಟ್ಟಿದೆ ಮತ್ತು ಕೊರೊನಾದಿಂದಾಗಿ ಸಾಕಷ್ಟು ಮಂದಿ ನಷ್ಟಕ್ಕೆ ಒಳಗಾಗಿರುವುದು ಮಾತ್ರವಲ್ಲದೇ ಶೇಕಡಾ 60ರಷ್ಟು ವಿದ್ಯಾರ್ಥಿಗಳ ಮೇಲೆ ಕೊರೊನಾ ಪರಿಣಾಮ ಬೀರಿದೆ. ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯ ಮೇಲಿನ ನಂಬಿಕೆ ಬಹುಮಟ್ಟಿಗೆ ನಾಶವಾಗುತ್ತಿದೆ ಎಂದು ಯುನೆಸ್ಕೋದ ಅಧ್ಯಯನವೊಂದು ತಿಳಿಸಿದೆ.

ಆನ್​ಲೈನ್ ಶಿಕ್ಷಣದಿಂದ ಬಡವರ ಮಕ್ಕಳು ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾಯಿತು. ಇದೇ ವೇಳೆ ಸರ್ಕಾರ ಮತ್ತು ಖಾಸಗಿ ಸಂಸ್ಥೆಗಳು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವ ಅನಿವಾರ್ಯತೆಯನ್ನು ಈಟಿವಿ ಭಾರತ್​​ ರಿಯಾಲಿಟಿ ಚೆಕ್​ ನಡೆಸಿ, ಬಹಿರಂಗಪಡಿಸಿತು. ಈ ಪರಿಸ್ಥಿತಿಯನ್ನು ಸರಿಪಡಿಸಲು ಆಡಳಿತ ಸಂಸ್ಥೆಗಳು, ಖಾಸಗಿ ವ್ಯಕ್ತಿಗಳು ಒಲವು ತೋರಿದರು.

ದೇಶದ ಅತಿದೊಡ್ಡ ಡಿಜಿಟಲ್ ನೆಟ್‌ವರ್ಕ್ ಆಗಿರುವ ಈಟಿವಿ ಭಾರತ್ ಭಾರತದ ಮೂಲೆ ಮೂಲೆಯಿಂದ ಸುದ್ದಿ ತರಲು ಮತ್ತು ಧ್ವನಿರಹಿತರ ಧ್ವನಿಯಾಗಲು ಶ್ರಮಿಸುತ್ತಿದೆ. ಡಿಜಿಟಲ್ ಮಾಧ್ಯಮ ಮತ್ತು ಮೊಬೈಲ್ ಟೆಕ್ನಾಲಜಿ ಮೂಲಕ ಜನರನ್ನು ತಲುಪುತ್ತಿರುವ ಈ ಬೃಹತ್ ಸಂಸ್ಥೆಯನ್ನು ಅನೇಕ ಪುರಸ್ಕಾರ, ಪ್ರಶಸ್ತಿಗಳು ಅರಸಿ ಬಂದಿವೆ.

Last Updated : Mar 5, 2021, 10:20 AM IST

ABOUT THE AUTHOR

...view details