ಕರ್ನಾಟಕ

karnataka

ETV Bharat / bharat

Weekly Horoscope: ಈ ರಾಶಿಯವರಿಗೆ ವಾರಪೂರ್ತಿ ಯೋಗ, ತುಸು ಎಚ್ಚರಿಕೆ ಒಳ್ಳೆಯದು - ಪಂಚಾಂಗ

Etv Bharat weekly horoscope: ವಾರದ ನಿಮ್ಮ ರಾಶಿ ಮತ್ತು ಭವಿಷ್ಯ ಹೀಗಿದೆ.

Etv Bharat weekly horoscope
Etv Bharat weekly horoscope

By

Published : Aug 20, 2023, 5:33 AM IST

Etv Bharat weekly horoscope: ಈ ವಾರ ನಿಮ್ಮ ದಿನಚರಿ ಹೇಗೆಲ್ಲ ಇರಲಿದೆ, ಮಾನಸಿಕ ಮತ್ತು ಆರ್ಥಿಕ ಸ್ಥಿತಿಗತಿ ಬಗ್ಗೆ ತಿಳಿದುಕೊಳ್ಳಲು ಮುಂದೆ ಓದಿ.

ಮೇಷ:ಈ ವಾರದ ಆರಂಭದಲ್ಲಿ ನಿಮ್ಮ ಜೀವನ ಸಂಗಾತಿಯ ಆರೋಗ್ಯದ ಕುರಿತು ನಿಮಗೆ ಚಿಂತೆ ಕಾಡಬಹುದು. ಏಕೆಂದರೆ, ಅವರು ಅನಾರೋಗ್ಯಕ್ಕೆ ತುತ್ತಾಗಬಹುದು. ಅವರು ಮಾನಸಿಕ ಜರ್ಝರಿತರಾಗುವ ಕಾರಣ ಅವರಿಗೆ ಮಾನಸಿಕ ಆಪ್ತಸಮಾಲೋಚನೆಯ ಅಗತ್ಯ ಬೀಳಬಹುದು. ಕೆಲಸದಲ್ಲಿ ನೀವು ಉತ್ತಮ ಸ್ಥಾನವನ್ನು ಗಳಿಸಲಿದ್ದೀರಿ. ಕೆಲಸದಲ್ಲಿ ಯಶಸ್ಸನ್ನು ಅನುಭವಿಸಬಹುದು. ನಿಮ್ಮ ಎಲ್ಲಾ ಕೆಲಸಗಳು ಸಕಾಲದಲ್ಲಿ ಪೂರ್ಣಗೊಳ್ಳಲಿವೆ. ನೀವು ವಿಶೇಷ ಚೈತನ್ಯ ಗಳಿಸಲಿದ್ದು ಫಲಿತಾಂಶವು ನಿಮ್ಮನ್ನು ಸಂತುಷ್ಟಪಡಿಸಲಿದೆ. ವ್ಯವಹಾರದಲ್ಲಿ ಏರುಪೇರು ಉಂಟಾಗಬಹುದು. ಇದನ್ನು ಸರಿಪಡಿಸಿ ಮುನ್ನುಗ್ಗಲು ಒಂದಷ್ಟು ಪ್ರಯತ್ನದ ಅಗತ್ಯವಿದೆ. ಮನೆಯಲ್ಲಿ ಸಂತಸ ನೆಲೆಸಲಿದೆ. ಮನೆಯ ಸೌಲಭ್ಯಗಳನ್ನು ವೃದ್ಧಿಸಲು ನೀವು ಗೃಹೋಪಯೋಗಿ ವಸ್ತುಗಳಿಗಾಗಿ ಹಣ ಖರ್ಚು ಮಾಡಲಿದ್ದೀರಿ. ಮನೆಗೆ ಪ್ರಯೋಜನಕಾರಿ ಎನಿಸುವ ಕೆಲವೊಂದು ಹೊಸ ವಸ್ತುಗಳನ್ನು ನೀವು ಖರೀದಿಸಲಿದ್ದೀರಿ. ಈ ಅವಧಿಯಲ್ಲಿ ಪ್ರಣಯ ಬದುಕು ಪ್ರಗತಿಯನ್ನು ಸಾಧಿಸಲಿದೆ. ನಿಮ್ಮ ನಮಸ್ಸಿನಲ್ಲಿ ಉಲ್ಲಾಸ ನೆಲೆಸಲಿದೆ. ನಿಮ್ಮ ಪ್ರೇಮಿಯ ಜಾಣ್ಮೆಯನ್ನು ಕಂಡು ಸಾಕಷ್ಟು ಸಂತಸವನ್ನು ಅನುಭವಿಸಲಿದ್ದೀರಿ. ನೀವು ಅವರಿಗೆ ಒಳ್ಳೆಯ ಉಡುಗೊರೆಯನ್ನು ಕೊಡಬಹುದು. ಕುಟುಂಬದ ಪರವಾಗಿ ಜೀವನ ಸಂಗಾತಿಯು ದನಿ ಎತ್ತಲಿದ್ದಾರೆ.

ವೃಷಭ:ಈ ವಾರದಲ್ಲಿ ನಿಮಗೆ ಸಾಕಷ್ಟು ಪ್ರಯೋಜನ ಉಂಟಾಗಲಿದೆ. ಏಕೆಂದರೆ, ಈ ಬಾರಿ ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಸಾಕಷ್ಟು ಸುಧಾರಣೆ ಉಂಟಾಗಲಿದೆ. ಈ ವಾರದ ಆರಂಭದಲ್ಲಿ ನಿಮಗೆ ಸಾಕಷ್ಟು ಅವಕಾಶ ಲಭಿಸಲಿದೆ. ಇದರಿಂದಾಗಿ ನಿಮ್ಮ ಆದಾಯದಲ್ಲಿ ಹೆಚ್ಚಳ ಉಂಟಾಗಲಿದೆ. ಹಣಕಾಸಿನ ಸ್ಥಿತಿಯು ಈ ಬಾರಿ ಚೆನ್ನಾಗಿರಲಿದೆ. ನಿಮ್ಮ ವ್ಯವಹಾರ ಪಾಲುದಾರರ ಉತ್ತಮ ಸಮನ್ವಯ ಮತ್ತು ಕೆಲಸದ ಜಾರಿಯ ಕಾರಣ ನಿಮ್ಮ ಆದಾಯದಲ್ಲಿ ಹೆಚ್ಚಳ ಉಂಟಾಗಲಿದೆ. ವಿದ್ಯಾರ್ಥಿಗಳ ಪಾಲಿಗೆ ಇದು ಸಾಮಾನ್ಯ ವಾರವೆನಿಸಲಿದೆ. ತಾಂತ್ರಿಕ ಅಥವಾ ಆಡಳಿತ ನಿರ್ವಹಣೆಯ ವಿಷಯಗಳನ್ನು ಕಲಿಯುತ್ತಿರುವವರಿಗೆ ಈ ಸಮಯವು ತುಂಬಾ ನಿರ್ಣಾಯಕ. ಇತರರು ಒಂದಷ್ಟು ಸಮಸ್ಯೆಗಳನ್ನು ಎದುರಿಸಬೇಕಾದೀತು. ಉದ್ಯೋಗದಲ್ಲಿ ತೊಡಗಿಸಿಕೊಂಡಿರುವವರು ಈ ಅವಧಿಯಲ್ಲಿ ಪ್ರಯೋಜನ ಗಳಿಸಲಿದ್ದಾರೆ. ವಿವಾದಗಳಿಂದ ದೂರವಿರಿ. ವಿವಾಹಿತರಿಗೆ ಈ ಸಮಯವು ಅನುಕೂಲಕರವಾಗಿದೆ. ನಿಮ್ಮ ಜೀವನ ಸಂಗಾತಿಯು ನಿಮಗೆ ಸಹಾಯ ಮಾಡಲಿದ್ದಾರೆ. ನಿಮ್ಮಿಬ್ಬರ ನಡುವೆ ಸಾಕಷ್ಟು ಪ್ರೀತಿ ನೆಲೆಸಲಿದೆ. ಈ ಅವಧಿಯಲ್ಲಿ ಪ್ರಣಯ ಸಂಬಂಧದಲ್ಲಿ ಸಾಕಷ್ಟು ಏರುಪೇರು ಉಂಟಾಗಬಹುದು.

ಮಿಥುನ: ನಿಮ್ಮ ಪಾಲಿಗೆ ಈ ವಾರವು ಅನುಕೂಲಕರವಾಗಿದೆ. ರಿಯಲ್‌ ಎಸ್ಟೇಟ್‌ ವ್ಯವಹಾರಕ್ಕೆ ಸಂಬಂಧಿಸಿದಂತೆ ನಿಮಗೆ ಯಶಸ್ಸು ದೊರೆಯಬಹುದು. ದೊಡ್ಡದಾದ ಜಮೀನನ್ನು ಖರೀದಿಸುವಲ್ಲಿ ನೀವು ಯಶಸ್ಸನ್ನು ಗಳಿಸಲಿದ್ದೀರಿ. ಕೆಲಸದ ವಿಚಾರದಲ್ಲಿ ಹೇಳುವುದಾದರೆ ಭವಿಷ್ಯವು ಆಶಾದಾಯಕವಾಗಿದೆ. ಆದರೆ, ನಿಮ್ಮ ಕೋಪದ ಕುರಿತು ನೀವು ಎಚ್ಚರಿಕೆಯಿಂದ ಇರಬೇಕು. ಇಲ್ಲದಿದ್ದರೆ ಅನಗತ್ಯ ಘರ್ಷಣೆ ಉಂಟಾಗಿ ಕೆಲಸದ ಸ್ಥಳದಲ್ಲಿ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ವ್ಯವಹಾರದಲ್ಲಿ ತೊಡಗಿಸಿಕೊಂಡಿರುವವರಿಗೆ ಈ ವಾರವು ಹೊಸದಾಗಿ ಆದಾಯವನ್ನು ತಂದು ಕೊಡಲಿದೆ. ನಿಮ್ಮ ಉಪಕ್ರಮಗಳು ವ್ಯವಹಾರಕ್ಕೆ ವೇಗ ನೀಡಲಿವೆ. ವ್ಯವಹಾರ ಪಾಲುಗಾರಿಕೆಯು ಪ್ರಗತಿ ಕಾಣಲಿದೆ. ವಿವಾಹಿತ ಜನರು ತಮ್ಮ ಕೌಟುಂಬಿಕ ಜೀವನದಲ್ಲಿ ಸಂತಸ ಅನುಭವಿಸಲಿದ್ದಾರೆ. ನಿಮ್ಮ ಜೀವನ ಸಂಗಾತಿಯು ನಿಮಗೆ ಪ್ರಗತಿ ಸಾಧಿಸಲು ಉತ್ತೇಜನ ನೀಡಲಿದ್ದಾರೆ ಹಾಗೂ ಕೌಟುಂಬಿಕ ಜವಾಬ್ದಾರಿಯನ್ನು ನಿಭಾಯಿಸುವ ವಿಚಾರದಲ್ಲಿಯೂ ನಿಮಗೆ ಸಹಾಯ ಮಾಡಲಿದ್ದಾರೆ. ಪ್ರೇಮ ಜೀವನದಲ್ಲಿ ಏರುಪೇರು ಕಾಣಿಸಿಕೊಳ್ಳಬಹುದು. ಹೀಗಾಗಿ ಎಚ್ಚರಿಕೆಯಿಂದ ಹೆಜ್ಜೆ ಇಡಿ. ಸಹಾಯಕ್ಕಾಗಿ ನಿಮ್ಮ ಸ್ನೇಹಿತರನ್ನು ನೀವು ಕೇಳಿಕೊಳ್ಳಬಹುದು. ವಾರದ ಮೊದಲ ಎರಡು ದಿನಗಳಲ್ಲಿ ಪ್ರಯಾಣಿಸುವುದು ಪ್ರಯೋಜನಕಾರಿ. ಅಧ್ಯಯನದ ವಿಚಾರದಲ್ಲಿ ಸಾಕಷ್ಟು ಏಕಾಗ್ರತೆಯ ಅಗತ್ಯವಿದೆ.

ಕರ್ಕಾಟಕ: ನೀವು ಈ ವಾರದಲ್ಲಿ ಹೊಸ ಅವಕಾಶಗಳನ್ನು ಪಡೆಯಲಿದ್ದೀರಿ. ನೀವು ಹೆಚ್ಚಿನ ಸಾಮರ್ಥ್ಯ ಗಳಿಸಲಿದ್ದು ಅಪಾಯವನ್ನು ಎದುರಿಸಲು ಇಚ್ಛೆ ತೋರಲಿದ್ದೀರಿ. ನಿಮ್ಮ ಆತ್ಯಸ್ಥೈರ್ಯವು ಉತ್ತುಂಗದಲ್ಲಿರಲಿದೆ. ವ್ಯವಹಾರದಲ್ಲಿ ಏನಾದರೂ ಹೊತಸನ್ನು ಮಾಡಲು ಹಾಗೂ ದೊಡ್ಡದಾದ ನಿರೀಕ್ಷೆಯನ್ನು ಹೊಂದಲು ಇದು ನಿಮಗೆ ಉತ್ತೇಜಿಸಲಿದೆ. ಈ ಅವಧಿಯು ಉದ್ಯೋಗದಲ್ಲಿರುವವರಿಗೂ ಅನುಕೂಲಕರ. ನಿಮ್ಮ ತಂಡದ ಸದಸ್ಯರು ನಿಮಗೆ ಸಾಕಷ್ಟು ಸಹಕಾರವನ್ನು ನೀಡಲಿದ್ದು ನಿಮ್ಮ ಕೆಲಸವನ್ನು ಸಕಾಲದಲ್ಲಿ ಮುಗಿಸಲು ನಿಮಗೆ ಸಾಧ್ಯವಾಗಲಿದೆ. ನಿಮ್ಮ ಕಾರ್ಯಕ್ಷಮತೆಯಲ್ಲಿ ವೃದ್ಧಿ ಉಂಟಾಗಲಿದೆ. ಆದರೆ ದೇಹದ ಉಷ್ಣತೆಯಲ್ಲಿ ಹೆಚ್ಚಳ ಕಾಣಿಸಿಕೊಳ್ಳಬಹುದು. ಇದೇ ವೇಳೆ ನಿಮ್ಮಲ್ಲಿ ತೃಪ್ತಿ ಕಾಣಿಸಿಕೊಳ್ಳಲಿದೆ. ಬದುಕಿನ ಆನಂದವನ್ನು ಸವಿಯಲು ಎಲ್ಲಾ ಪ್ರಯತ್ನವನ್ನು ಮಾಡಿರಿ. ವೈವಾಹಿಕ ಜೀವನದಲ್ಲಿ ಖಂಡಿತವಾಗಿಯೂ ಪ್ರಣಯ ನೆಲೆಸಲಿದೆ. ನಿಮ್ಮ ಜೀವನ ಸಂಗಾತಿಯ ಜೊತೆ ಮಾತನಾಡಿದ ನಂತರ, ಅವರು ನಿಮಗೆ ಸಂಪೂರ್ಣವಾಗಿ ಸಮರ್ಪಿಸಿಕೊಂಡಿದ್ದಾರೆ ಎನ್ನುವುದು ನಿಮ್ಮ ಅರಿವಿಗೆ ಬರುತ್ತದೆ. ಅಲ್ಲದೆ ನಿಮ್ಮ ಪ್ರೇಮ ಜೀವನದಲ್ಲಿ ಯಶಸ್ಸು ಕಾಣಿಸಿಕೊಳ್ಳುತ್ತದೆ. ನಿಮ್ಮ ಪ್ರೇಮಿಯು ನಿಮ್ಮ ಕುರಿತು ಯಾವ ಭಾವನೆಯನ್ನು ಹೊಂದಿದ್ದಾರೆ ಎನ್ನುವುದು ನಿಮ್ಮ ಅರಿವಿಗೆ ಬರುತ್ತದೆ. ನಿಮ್ಮ ಪ್ರಣಯ ಜೀವನದಲ್ಲಿ ಇನ್ನಷ್ಟು ಸುಧಾರಣೆ ತರಲು ನಿಮ್ಮ ಸಂಗಾತಿ ನಿಮಗೆ ಸಹಾಯ ಮಾಡಲಿದ್ದಾರೆ.

ಸಿಂಹ:ರಿಯಲ್‌ ಎಸ್ಟೇಟ್‌ ಕ್ಷೇತ್ರದಲ್ಲಿ ಹೂಡಿಕೆ ಮಾಡುವ ಮೂಲಕ ಈ ವಾರದಲ್ಲಿ ನೀವು ಒಳ್ಳೆಯ ಲಾಭ ಗಳಿಸಲಿದ್ದೀರಿ. ಅಲ್ಲದೆ ರಿಯಲ್‌ ಎಸ್ಟೇಟ್‌ ಗೆ ಸಂಬಂಧಿಸಿದ ಕೆಲಸಗಳಲ್ಲಿ ನೀವು ಯಶಸ್ಸು ಗಳಿಸಲಿದ್ದೀರಿ. ನಿಮ್ಮ ದೈಹಿಕ ಯೋಗಕ್ಷೇಮದಲ್ಲಿ ವೃದ್ಧಿ ಉಂಟಾಗಲಿದೆ. ನಿಮ್ಮ ಆರೋಗ್ಯದ ಕುರಿತು ನೀವು ಕಾಳಜಿ ವಹಿಸಲಿದ್ದೀರಿ. ನಿಮ್ಮ ದಿನಚರಿಯಲ್ಲಿ ಬೆಳಗ್ಗಿನ ಜಾಗಿಂಗ್‌ ಮತ್ತು ವ್ಯಾಯಾಮವನ್ನು ಸೇರಿಸಿಕೊಳ್ಳಲಿದ್ದೀರಿ. ಜೀವನ ವೆಚ್ಚದಲ್ಲಿ ಹೆಚ್ಚಳ ಉಂಟಾಗಬಹುದು. ಸಂತಸ ಪಡೆಯುವುದಕ್ಕಾಗಿ ನೀವು ಹಣ ಖರ್ಚು ಮಾಡಬಹುದು. ಹೊಸ ವಸ್ತುಗಳನ್ನು ನೀವು ಖರೀದಿಸಿ ತರಬಹುದು. ವೈವಾಹಿಕ ಜೀವನದಲ್ಲಿ ಯಶಸ್ಸು ಸಾಧಿಸಬೇಕಾದರೆ ವಿವಾಹಿತ ವ್ಯಕ್ತಿಗಳು ಅಹಂನಿಂದ ದೂರವಿರಬೇಕು. ಇಲ್ಲದಿದ್ದರೆ ಅನಗತ್ಯ ವಾಗ್ವಾದಗಳಲ್ಲಿ ಸಮಯ ಪೋಲಾಗಲಿದೆ. ಈ ಅವಧಿಯಲ್ಲಿ ಪ್ರಣಯ ಬದುಕು ಪ್ರಗತಿಯನ್ನು ಸಾಧಿಸಲಿದೆ. ಅನ್ಯೋನ್ಯತೆ ಹೆಚ್ಚಿದಂತೆ ನೀವು ಅವರಿಗೆ ತೆರೆದುಕೊಳ್ಳಲಿದ್ದೀರಿ ಹಾಗೂ ನಿಮ್ಮ ಮನದಾಳದ ಭಾವನೆಗಳನ್ನು ಹಂಚಿಕೊಳ್ಳಲಿದ್ದೀರಿ. ಉದ್ಯೋಗದಲ್ಲಿರುವವರಿಗೆ ಈ ವಾರವು ಸಾಕಷ್ಟು ಚಟುವಟಿಕೆಯಿಂದ ಕೂಡಿರಲಿದೆ. ನೀವು ಸಾಕಷ್ಟು ಪ್ರಯಾಣಿಸುತ್ತಿದ್ದರೆ ದಣಿವು ಉಂಟಾಗಬಹುದು. ವ್ಯಾಪಾರೋದ್ಯಮಿಗಳು ಸರ್ಕಾರಿ ಗುತ್ತಿಗೆ ಪಡೆಯಲು ಯತ್ನಿಸಬೇಕು. ಆದರೆ ಸರ್ಕಾರಿ ಉದ್ಯೋಗಿಯ ಜೊತೆಗೆ ವಾದ ಮಾಡಬೇಡಿ.

ಕನ್ಯಾ:ಇದರಿಂದ ನಿಮಗೆ ಸಾಕಷ್ಟು ಲಾಭ ಉಂಟಾಗಲಿದೆ. ರಿಯಲ್‌ ಎಸ್ಟೇಟ್‌ ವ್ಯವಹಾರಕ್ಕೆ ಸಂಬಂಧಿಸಿದಂತೆ ನಿಮಗೆ ಯಶಸ್ಸು ದೊರೆಯಬಹುದು. ದೊಡ್ಡದಾದ ಜಮೀನನ್ನು ಖರೀದಿಸುವಲ್ಲಿ ನೀವು ಯಶಸ್ಸನ್ನು ಗಳಿಸಲಿದ್ದೀರಿ. ಆದರೆ ಮಾನಸಿಕ ಒತ್ತಡದ ಕಾರಣ ಸ್ವಲ್ಪ ಪ್ರಮಾಣದಲ್ಲಿ ನಿಮ್ಮ ಮನಸ್ಸಿನಲ್ಲಿ ಆಕ್ರೋಶ ಉಂಟಾಗಬಹುದು. ನೀವು ಈ ವಿಚಾರಕ್ಕೆ ಸಾಕಷ್ಟು ಗಮನ ಹರಿಸಬೇಕು. ಕಾಲಕ್ರಮೇಣ ವೆಚ್ಚಗಳಲ್ಲಿ ಇಳಿಕೆ ಉಂಟಾಗಲಿದೆ. ಸಂಬಳದಲ್ಲಿ ಉಂಟಾಗುವ ಹೆಚ್ಚಳವು ನಿಮ್ಮಲ್ಲಿ ಸಂತಸವನ್ನುಂಟು ಮಾಡಲಿದೆ. ನೀವು ಹೆಚ್ಚಿನ ಹಣವನ್ನು ಪಡೆಯುತ್ತಿದ್ದೀರಿ ಎನ್ನುವ ಭಾವನೆ ನಿಮ್ಮಲ್ಲಿ ಉಂಟಾಗಬಹುದು. ಹಣವು ಲಭ್ಯವಿರುವುದರಿಂದ ನಿಮ್ಮ ಕೆಲಸವನ್ನು ಪೂರ್ಣಗೊಳಿಸಲು ನಿಮಗೆ ಸಾಧ್ಯವಾಗಲಿದೆ. ನಿಮಗೆ ಸ್ನೇಹಿತೆಯೊಬ್ಬಳ ಸಹಕಾರ ಲಭಿಸಲಿದೆ. ಉದ್ಯೋಗದಲ್ಲಿರುವವರಿಗೆ ಇದು ಸಕಾಲ. ನಿಮ್ಮ ಕಾರ್ಯತಂತ್ರಗಳಿಗೆ ಯಶಸ್ಸು ದೊರೆಯಲಿದೆ. ವ್ಯಾಪಾರೋದ್ಯಮಿಗಳು ಈ ಸಮಯವನ್ನು ಆನಂದಿಸಲಿದ್ದಾರೆ. ನಿಮ್ಮ ಕೆಲಸದಲ್ಲಿ ನೀವು ಅನುಭವಿಸುತ್ತಿದ್ದ ಜಡತೆಯು ಸಹಜವಾಗಿಯೇ ದೂರಗೊಂಡು ಪರಿಸ್ಥಿತಿಯು ಅತ್ಯಂತ ಶೀಘ್ರವಾಗಿ ಸುಧಾರಣೆಗೊಳ್ಳಲಿದೆ. ಕೌಟುಂಬಿಕ ಬದುಕಿನ ಕುರಿತು ವಿವಾಹಿತ ವ್ಯಕ್ತಿಗಳ ಮನದಲ್ಲಿ ಮನೆ ಮಾಡಿರುವ ಭೀತಿಯು ದೂರಗೊಳ್ಳಲಿದ್ದು ಹೊಸ ವಿಚಾರಗಳನ್ನು ಅವರು ಪರಿಗಣಿಸಲಿದ್ದಾರೆ.

ತುಲಾ:ಈ ವಾರವನ್ನು ನೀವು ಸಾಕಷ್ಟು ಚಟುವಟಿಕೆಯಿಂದ ಕಳೆಯಲಿದ್ದೀರಿ. ಮಾನಸಿಕ ಒತ್ತಡವು ನಿಮ್ಮನ್ನು ಕಾಡದಂತೆ ನೋಡಿಕೊಳ್ಳಿ ಹಾಗೂ ನಿಮ್ಮ ಕುರಿತು ಕಾಳಜಿ ವಹಿಸಿ. ಇಲ್ಲದಿದ್ದರೆ ನಿಮ್ಮ ಆರೋಗ್ಯದಲ್ಲಿ ಕುಸಿತ ಕಾಣಿಸಿಕೊಳ್ಳಬಹುದು. ವಿವಾಹಿತ ಜನರು ತಮ್ಮ ಕೌಟುಂಬಿಕ ಜೀವನದಲ್ಲಿ ಸಂತಸ ಅನುಭವಿಸಲಿದ್ದಾರೆ. ನಿಮ್ಮ ಜೀವನ ಸಂಗಾತಿಗೆ ನಿರ್ದಿಷ್ಟ ನಡವಳಿಕೆಯನ್ನು ತೋರಿಸಲು ನೀವು ಪ್ರಯತ್ನವನ್ನು ಮಾಡುತ್ತೀರಿ. ನಿಮ್ಮ ಪ್ರೇಮ ಜೀವನದಲ್ಲಿ ಭವಿಷ್ಯವು ಆಶಾದಾಯಕವಾಗಿದೆ. ಆದರೆ ನಿಮ್ಮ ಮನೋಸ್ಥಿತಿಯಲ್ಲಿ ಉಂಟಾಗುವ ಬದಲಾವಣೆಯು ಪರಿಣಾಮವನ್ನುಂಟು ಮಾಡಬಹುದು. ವ್ಯವಹಾರದ ವಿಚಾರದಲ್ಲಿ ಇದು ಸಕಾಲ. ನಿಮ್ಮ ಕಲ್ಪನೆಗಳನ್ನು ಕಾರ್ಯಗತಗೊಳಿಸಲು ಇದು ಸಕಾಲ. ವಿದ್ಯಾರ್ಥಿಗಳು ಕಠಿಣ ಶ್ರಮ ಪಡಲಿದ್ದು ಅಧ್ಯಯನಕ್ಕೆ ಸಾಕಷ್ಟು ಗಮನ ನೀಡಲಿದ್ದಾರೆ. ಇದರಿಂದಾಗಿ ಉತ್ತಮ ಫಲಿತಾಂಶ ದೊರೆಯಲಿದೆ. ವಾರದ ನಡುವೆ ಪ್ರಯಾಣಿಸುವುದು ಒಳ್ಳೆಯದು.

ವೃಶ್ಚಿಕ: ನಿಮ್ಮ ಪಾಲಿಗೆ ಈ ವಾರವು ಅನುಕೂಲಕರವಾಗಿದೆ. ನಿಮ್ಮ ಆದಾಯ ಹೆಚ್ಚಿದಂತೆಯೇ ನಿಮ್ಮ ಒತ್ತಡವು ದೂರಗೊಳ್ಳಲಿದೆ. ಇದರಿಂದಾಗಿ ನಿಮ್ಮ ಆರ್ಥಿಕ ಸಮಸ್ಯೆಗಳು ದೂರಗೊಳ್ಳಲಿವೆ. ನಿಮ್ಮ ವೆಚ್ಚ ಹಾಗೆಯೇ ಉಳಿದರೂ ನಿಮ್ಮ ಅಧಿಕ ಆದಾಯದ ಕಾರಣ ಇದು ಹೆಚ್ಚಿನ ಪರಿಣಾಮವನ್ನುಂಟು ಮಾಡುವುದಿಲ್ಲ. ಹಣಕಾಸಿನ ನಿರ್ವಹಣೆಗೆ ನೀವು ಸಾಕಷ್ಟು ಗಮನ ನೀಡಿದರೆ ಇನ್ನೂ ಹೆಚ್ಚಿನ ಯಶಸ್ಸನ್ನು ನೀವು ಗಳಿಸಲಿದ್ದೀರಿ. ಆರೋಗ್ಯದಲ್ಲಿ ಕುಸಿತ ಉಂಟಾಗಬಹುದು. ನಿಮ್ಮ ಆರೋಗ್ಯ ತಪಾಸಣೆ ನಡೆಸಿ. ಏಕೆಂದರೆ ಹೊಟ್ಟೆಗೆ ಸಂಬಂಧಿಸಿದ ರೋಗಗಳು ನಿಮ್ಮನ್ನು ಕಾಡಬಹುದು. ಉದ್ಯೋಗದಲ್ಲಿರುವವರು ತಮ್ಮ ಮೆದುಳಿಗೆ ಕೆಲಸ ನೀಡಲಿದ್ದು ತಮ್ಮ ವೃತ್ತಿಯಲ್ಲಿ ಯಶಸ್ಸನ್ನು ಸಾಧಿಸಲಿದ್ದಾರೆ. ವ್ಯವಹಾರದಲ್ಲಿ ತೊಡಗಿಸಿಕೊಂಡಿರುವವರು ಈ ಬಾರಿ ಪ್ರಗತಿ ಸಾಧಿಸಲಿದ್ದಾರೆ. ನಿಮ್ಮ ಕೆಲಸಕ್ಕೆ ಯೋಗ್ಯ ಸಂಭಾವನೆ ದೊರೆಯಲಿದ್ದು ಇದು ನಿಮಗೆ ಇಷ್ಟವಾಗಲಿದೆ. ವ್ಯಾಪಾರಿಗಳು ಉತ್ತಮ ಲಾಭ ಗಳಿಸಲಿದ್ದಾರೆ. ವಿವಾಹಿತ ವ್ಯಕ್ತಿಗಳ ಮನೆಯು ಉತ್ಸಾಹದಿಂದ ಕೂಡಿರಲಿದ್ದು ನೀವಿಬ್ಬರೂ ಪರಸ್ಪರ ಪ್ರೀತಿಸಲಿದ್ದೀರಿ. ಪ್ರೇಮ ಸಂಬಂಧದಲ್ಲಿರುವವರಿಗೆ ಈ ವಾರವು ಸಂಕೀರ್ಣತೆಯಿಂದ ಕೂಡಿರಲಿದೆ.

ಧನು:ಈ ವಾರದಲ್ಲಿ ನಿಮಗೆ ಲಾಭ ದೊರೆಯಲಿದೆ. ರಿಯಲ್‌ ಎಸ್ಟೇಟ್‌ ವಿಚಾರದಲ್ಲಿ ನೀವು ಯಶಸ್ಸನ್ನು ಗಳಿಸಲಿದ್ದೀರಿ. ಅಂದರೆ ಈ ಕ್ಷೇತ್ರದತ್ತ ನೀವು ಸೆಳೆಯಲ್ಪಡುವಿರಿ. ದೊಡ್ಡ ಗಾತ್ರದ ಆಸ್ತಿಯನ್ನು ಖರೀದಿಸಲು ನಿಮಗೆ ಸಾಧ್ಯವಾಗಲಿದೆ. ಆರೋಗ್ಯವು ಚೆನ್ನಾಗಿರಲಿದೆ. ನೀವು ರಹಸ್ಯವಾಗಿ ಏನಾದರೂ ವಸ್ತುವನ್ನು ಖರೀದಿಸಲಿದ್ದೀರಿ. ಸೌಕರ್ಯಗಳನ್ನು ವೃದ್ಧಿಸಲು ಗಮನ ಹರಿಸಲಿದ್ದೀರಿ. ಕೆಲಸದ ಪರಿಸರವು ಅನುಕೂಲಕರವಾಗಿದೆ. ನಿಮ್ಮ ಸ್ಥಾನದಲ್ಲಿ ಸುಧಾರಣೆ ಉಂಟಾಗಲಿದೆ. ನಿಮ್ಮ ವರ್ಚಸ್ಸು ವೃದ್ಧಿಸಲಿದೆ. ಅದೃಷ್ಟದ ಸಂಪೂರ್ಣ ಬೆಂಬಲ ನಿಮಗಿದೆ. ತಂದೆಯ ಜೊತೆಗಿನ ಸಂಬಂಧದಲ್ಲಿ ಬಿರುಕು ಕಾಣಿಸಿಕೊಳ್ಳಬಹುದು. ನಿಮ್ಮ ಕಂಪನಿಯು ಪ್ರಗತಿಯನ್ನು ಸಾಧಿಸಲಿದ್ದು ನಿಮ್ಮ ಪ್ರಯತ್ನಕ್ಕೆ ತಕ್ಕುದಾದ ಫಲ ದೊರೆಯಲಿದೆ. ಹೆಚ್ಚಿನ ಕೆಲಸವನ್ನು ಮಾಡುವ ಆತ್ಮಸ್ಥೈರ್ಯವನ್ನು ನೀವು ಬೆಳೆಸಿಕೊಳ್ಳಲಿದ್ದೀರಿ. ಇದರಿಂದಾಗಿ ನಿಮ್ಮನ್ನು ಜನರು ಮೆಚ್ಚಿಕೊಳ್ಳಲಿದ್ದಾರೆ. ವಿವಾಹಿತ ಜನರು ತಮ್ಮ ವೈವಾಹಿಕ ಜೀವನದಲ್ಲಿ ಸಂತಸ ಅನುಭವಿಸಲಿದ್ದಾರೆ. ಆದರೆ ಪ್ರೇಮ ಸಂಬಂಧದಲ್ಲಿರುವವರಿಗೆ ತಮ್ಮ ಭಾವನೆಗಳನ್ನು ಸಂಗಾತಿಯೊಂದಿಗೆ ಹಂಚಿಕೊಳ್ಳಲು ಸ್ವಲ್ಪ ಸಮಯ ಬೇಕಾದೀತು. ಮಾತುಕತೆ ನಡೆಸುವಾಗ ಸಮಸ್ಯೆ ಕಾಣಿಸಿಕೊಳ್ಳಬಹುದು. ವಾರದ ಆರಂಭಿಕ ದಿನಗಳು ಪ್ರಯಾಣಿಸಲು ಸೂಕ್ತ.

ಮಕರ:ಈ ವಾರದಲ್ಲಿ ನಿಮಗೆ ಲಾಭ ದೊರೆಯಲಿದೆ. ರಿಯಲ್‌ ಎಸ್ಟೇಟ್‌ ವ್ಯವಹಾರದಲ್ಲಿ ನೀವು ನಿಮ್ಮ ಅದೃಷ್ಟ ಪರೀಕ್ಷೆಯನ್ನು ನಡೆಸಲಿದ್ದು ಯಶಸ್ಸನ್ನು ಗಳಿಸಲಿದ್ದೀರಿ. ಮನೆಯನ್ನು ಬಾಡಿಗೆ ನೀಡುವುದರಿಂದಲೂ ನೀವು ಹಣ ಗಳಿಸಬಹುದು. ಕೆಲಸದಲ್ಲಿ ನಿಮ್ಮ ಸ್ಥಾನದಲ್ಲಿ ಮೆಲ್ಲನೆ ಪ್ರಗತಿ ಉಂಟಾಗಲಿದೆ. ನಿಮ್ಮ ಜಾಣ್ಮೆಯ ಶ್ರಮಕ್ಕೆ ಲಾಭ ದೊರೆಯಲಿದೆ. ಉದ್ಯೋಗಿಗಳ ಆತ್ಮವಿಶ್ವಾಸದಲ್ಲಿ ವೃದ್ಧಿ ಉಂಟಾಗುವ ಕಾರಣ ವ್ಯವಹಾರದಲ್ಲಿ ಪ್ರಗತಿ ಉಂಟಾಗಲಿದೆ. ವಿವಾಹಿತ ಜೋಡಿಗಳು ಪರಸ್ಪರ ಪ್ರೀತಿ ತೋರಲಿದ್ದು ವೈವಾಹಿಕ ಜೀವನವನ್ನು ಆನಂದಿಸಲಿದ್ದಾರೆ. ಇದರಿಂದಾಗಿ ಜೀವನದಲ್ಲಿ ಪ್ರಗತಿ ಉಂಟಾಗಲಿದೆ. ವಿವಾಹೇತರ ಸಂಬಂಧದಿಂದ ದೂರವಿರಬೇಕು. ಇಲ್ಲದಿದ್ದರೆ ಸಮಸ್ಯೆಗಳು ಉಂಟಾಗಬಹುದು. ಪ್ರಣಯ ಬದುಕಿಗೆ ಸಮಯವು ಅನುಕೂಲಕರವಾಗಿದೆ. ಅವರಿಗೆ ಎಲ್ಲವನ್ನೂ ಹೇಳುವ ಮೂಲಕ ಅವರನ್ನು ನಿಮ್ಮದಾಗಿಸುವ ಅವಕಾಶವನ್ನು ಪಡೆಯಲಿದ್ದೀರಿ. ನಿಮಗೆ ಮದುವೆಯ ಯೋಗವಿದೆ. ವಾರದ ಮೊದಲ ದಿನಗಳು ಪ್ರಯಾಣಿಸಲು ಅನುಕೂಲಕರ. ವಿದ್ಯಾರ್ಥಿಗಳು ಉನ್ನತ ಶಿಕ್ಷಣದಲ್ಲಿ ಯಶಸ್ಸನ್ನು ಸಾಧಿಸಲಿದ್ದಾರೆ.

ಕುಂಭ: ಈ ವಾರದಲ್ಲಿ ನೀವು ಸಾಕಷ್ಟು ಏರುಪೇರನ್ನು ಅನುಭವಿಸಲಿದ್ದೀರಿ. ವಾರದ ಆರಂಭಿಕ ದಿನಗಳು ಆಲಸ್ಯದಿಂದ ಕೂಡಿರಬಹುದು. ಅನಗತ್ಯ ಖರ್ಚು ಮತ್ತು ಮಾನಸಿಕ ಒತ್ತಡ ಉಂಟಾದರೂ ವಾರದ ನಡುವಿನ ದಿನಗಳು ಅನುಕೂಲಕರ. ಆದರೆ ಇಡೀ ವಾರದಲ್ಲಿ ಆತಂಕವು ನಿಮ್ಮನ್ನು ಕಾಡಬಹುದು. ಇದರಿಂದ ಹೊರಬರಲು ನೀವು ಯತ್ನಿಸಬೇಕು. ಮಾನಸಿಕ ಒತ್ತಡಕ್ಕೆ ಒಳಗಾಗದಂತೆ ನೋಡಿಕೊಳ್ಳಿ. ಇಲ್ಲದಿದ್ದರೆ ನಿಮ್ಮ ಯೋಗಕ್ಷೇಮದ ಮೇಲೆ ಇದು ಪರಿಣಾಮ ಬೀರಬಹುದು. ರಕ್ತದೊತ್ತಡದ ಸಮಸ್ಯೆಗಳನ್ನು ನೀವು ಅನುಭವಿಸಬಹುದು. ಉದ್ಯೋಗದಲ್ಲಿರುವವರಿಗೆ ಇದು ಸಾಮಾನ್ಯ ವಾರ ಎನಿಸಲಿದೆ. ಕಠಿಣ ಶ್ರಮ ಪಡುವ ಜೊತೆಗೆ ಕೆಲಸದಲ್ಲಿ ನಿರಂತರತೆಯನ್ನು ಕಾಪಾಡಿ. ಆದರೆ ನಿಮ್ಮ ಮಾಲೀಕರ ಕೋಪಕ್ಕೆ ಒಳಗಾಗುವ ಯಾವುದೇ ಕೆಲಸವನ್ನು ಮಾಡಬೇಡಿ. ವ್ಯವಹಾರದಲ್ಲಿ ತೊಡಗಿಸಿಕೊಂಡಿರುವವರು ಈ ಅವಧಿಯಲ್ಲಿ ಪ್ರಗತಿಯನ್ನು ಸಾಧಿಸಲಿದ್ದಾರೆ. ನಿಮ್ಮ ಸಂಸ್ಥಯು ವಿಸ್ತರಣೆಯನ್ನು ಕಾಣಲಿದೆ. ನಿಮ್ಮ ವಿಚಾರಗಳನ್ನು ಕಾರ್ಯರೂಪಕ್ಕೆ ತರುವ ಮೂಲಕ ನೀವು ಲಾಭ ಗಳಿಸಲಿದ್ದೀರಿ. ಈ ಅವಧಿಯಲ್ಲಿ ನೀವು ಮತ್ತು ನಿಮ್ಮ ಜೀವನ ಸಂಗಾತಿಯ ಜೊತೆಗೆ ಸಂಘರ್ಷ ಉಂಟಾಗುವ ಕಾರಣ ವಿವಾಹಿತ ವ್ಯಕ್ತಿಗಳ ಬದುಕಿನಲ್ಲಿ ಸಮಸ್ಯೆ ಉಂಟಾಗಬಹುದು. ಪ್ರೇಮ ಜೀವನವು ಸರಾಗವಾಗಿ ಮುಂದುವರಿಯಲಿದೆ. ಹೊರಗಿನವರಿಗೆ ಹಸ್ತಕ್ಷೇಪ ಮಾಡಲು ನೀವು ಅವಕಾಶ ನೀಡದೆ ಇದ್ದಾಗ ನಿಮ್ಮ ಸಂಬಂಧವು ಸರಾಗವಾಗಿ ಮುಂದುವರಿಯಲಿದೆ. ವಾರದ ನಡುವಿನ ದಿನಗಳಲ್ಲಿ ಪ್ರಯಾಣಿಸುವುದು ಒಳ್ಳೆಯದು. ಈ ಅವಧಿಯಲ್ಲಿ ವಿದ್ಯಾರ್ಥಿಗಳು ಸಾಕಷ್ಟು ಶ್ರಮ ಪಡಬೇಕು.

ಮೀನ: ನಿಮ್ಮ ಪಾಲಿಗೆ ಈ ವಾರವು ಅನುಕೂಲಕರವಾಗಿದೆ. ವಾರದ ಆರಂಭದಲ್ಲಿ ನಿಮ್ಮ ಅಧ್ಯಯನದಲ್ಲಿ ನೀವು ಉತ್ತಮ ಸಾಧನೆ ಮಾಡಲಿದ್ದೀರಿ. ವೇಳಾಪಟ್ಟಿಗೆ ಅನುಗುಣವಾಗಿ, ನಿಮ್ಮ ಸಹಪಾಠಿಗಳೊಂದಿಗೆ ಸೇರಿಕೊಂಡು ನೀವು ಸಾಕಷ್ಟು ಸಮಯವನ್ನು ಅಧ್ಯಯನಕ್ಕಾಗಿ ಖರ್ಚು ಮಾಡಲಿದ್ದೀರಿ. ವಿವಾಹಿತ ವ್ಯಕ್ತಿಗಳು ಈ ಸಮಯವನ್ನು ಆನಂದಿಸಲಿದ್ದಾರೆ. ನಿಮ್ಮ ಜೀವನ ಸಂಗಾತಿಯು ನಿಮ್ಮ ಜೊತೆಗೆ ಪ್ರೀತಿಯಿಂದ ಮಾತನಾಡಲಿದ್ದಾರೆ. ನಿಮಗಿಬ್ಬರಿಗೂ ಇದರಿಂದ ಲಾಭ ಉಂಟಾಗಲಿದೆ. ನಿಮ್ಮ ಆದಾಯದಲ್ಲಿ ವೃದ್ಧಿ ಉಂಟಾಗಲಿದೆ. ವೆಚ್ಚದಲ್ಲಿ ಹೆಚ್ಚಳ ಉಂಟಾಗಲಿದೆ. ಪರಸ್ಪರ ಸಂತಸವನ್ನು ಹೆಚ್ಚಿಸಲು ಏನಾದರೂ ಹೊಸ ವಸ್ತುವನ್ನು ನೀವು ಖರೀದಿಸಲಿದ್ದೀರಿ. ಮನೆಗೆ ವಾಶಿಂಗ್‌ ಮಶೀನ್‌, ಇನ್ವರ್ಟರ್‌ ಮುಂತಾದ ಸಾಧನಗಳನ್ನು ನೀವು ಖರೀದಿಸಲಿದ್ದೀರಿ. ಪ್ರಣಯ ಸಂಬಂಧದಲ್ಲಿರುವವರು ಈ ಸಮಯವನ್ನು ಆನಂದಿಸಲಿದ್ದಾರೆ. ನೀವು ಪರಸ್ಪರ ಅನ್ಯೋನತೆಯನ್ನು ತೋರಲಿದ್ದೀರಿ. ಅಲ್ಲದೆ ಪರಸ್ಪರ ಅರ್ಥಮಾಡಿಕೊಳ್ಳುವಲ್ಲಿ ಯಶಸ್ವಿಯಾಗಲಿದ್ದೀರಿ. ಈ ವಾರದಲ್ಲಿ ವ್ಯಾಪಾರೋದ್ಯಮಿಗಳಿಗೆ ಲಾಭ ಉಂಟಾಗಲಿದೆ. ಅಲ್ಲದೆ ಆದಾಯದಲ್ಲಿ ಹೆಚ್ಚಳ ಉಂಟಾಗಲಿದೆ. ಉದ್ಯೋಗದಲ್ಲಿರುವವರು ಗುಣಮಟ್ಟದ ಕೆಲಸಕ್ಕೆ ಒತ್ತು ನೀಡಲಿದ್ದಾರೆ.

ಇದನ್ನೂ ಓದಿ:ನೀರಿನಿಂದಲೇ ಜೀವನ, ಆರೋಗ್ಯ.. ದಿನವೊಂದಕ್ಕೆ ಒಬ್ಬ ವ್ಯಕ್ತಿ ಎಷ್ಟು ನೀರು ಕುಡಿಯಬೇಕು ಗೊತ್ತಾ?

ABOUT THE AUTHOR

...view details