ಕರ್ನಾಟಕ

karnataka

ETV Bharat / bharat

Weekly horoscope: ಉದ್ಯೋಗಸ್ಥರಿಗೆ ಇದು ಅದ್ಭುತ ವಾರ.. ಮಧ್ಯದಲ್ಲಿ ಚಿಂತೆಗಳು ದೂರ.. - weekly astrology

Weekly horoscope: ಈ ವಾರದ ರಾಶಿ ಭವಿಷ್ಯ ಹೀಗಿದೆ..

Etv bharat weekly horoscope
ವಾರದ ರಾಶಿ ಭವಿಷ್ಯ

By

Published : Aug 13, 2023, 6:52 AM IST

ಮೇಷ :ಈ ವಾರದಲ್ಲಿ ಸಣ್ಣದಾದ ಪ್ರವಾಸವನ್ನು ಕೈಗೊಳ್ಳಲು ಯತ್ನಿಸಿ. ಇದು ನಿಮಗೆ ಹೊಸ, ಉತ್ತೇಜಕ ಶಕ್ತಿಯನ್ನು ನೀಡಲಿದ್ದು ನೀವು ಸುದೃಢತೆಯನ್ನು ಅನುಭವಿಸಲಿದ್ದೀರಿ. ವ್ಯವಹಾರದಲ್ಲಿ ಗಣನೀಯ ಪ್ರಮಾಣದಲ್ಲಿ ಯಶಸ್ಸನ್ನು ಸಾಧಿಸಲು ಅವಕಾಶ ದೊರೆಯಬಹುದು. ಉದ್ಯೋಗದಲ್ಲಿರುವ ಜನರು ಸಾಕಷ್ಟು ಶ್ರಮ ಪಡಲಿದ್ದು ಕೆಲಸದಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಹಿರಿಯರು ನಿಮ್ಮ ಕಠಿಣ ಶ್ರಮಕ್ಕೆ ಗೌರವ ನೀಡಲಿದ್ದಾರೆ. ವೈವಾಹಿಕ ಬದುಕು ಸಾಗಿಸುತ್ತಿರುವವರು ತಮ್ಮ ಸಂಬಂಧದಲ್ಲಿ ತೃಪ್ತಿ ಅನುಭವಿಸಲಿದ್ದಾರೆ. ಆದರೆ ತಮ್ಮ ಸಂಗಾತಿಗೆ ಅನಗತ್ಯ ಕೋಪ ತೋರುವುದರಿಂದ ಮತ್ತು ಟೀಕೆ ಮಾಡುವುದರಿಂದ ಅವರು ಸಮಸ್ಯೆ ಎದುರಿಸಬಹುದು. ಅವರನ್ನು ಮನವೊಲಿಸಲು ಸಾಕಷ್ಟು ಸಮಯ ಬೇಕಾದೀತು. ಆದರೆ ಬೇಗನೆ ಕಾರ್ಯಪ್ರವೃತ್ತರಾಗಿ. ಏಕೆಂದರೆ ಸಾಂಗತ್ಯ ಮುರಿದು ಬೀಳುವ ಸಾಧ್ಯತೆ ಇದೆ. ಈ ವಾರವು ವಿದ್ಯಾರ್ಥಿಗಳಿಗೆ ದೃಢವಾದ ಆರಂಭವನ್ನು ಒದಗಿಸಲಿದೆ. ಅಧ್ಯಯನದ ಮೇಲಿನ ನಿಮ್ಮ ಗಮನ ಹೆಚ್ಚಲಿದೆ. ಹೀಗಾಗಿ ಈ ವಾರವು ಅಧ್ಯಯನದ ವಿಚಾರದಲ್ಲಿ ಅತ್ಯುತ್ತಮ ವಾರವೆನಿಸಲಿದೆ. ವಾರದ ಆರಂಭಿಕ ದಿನಗಳು ಪ್ರಯಾಣಿಸಲು ಸೂಕ್ತ. ನಿಮ್ಮ ಆರೋಗ್ಯದ ಕುರಿತು ವಿಶೇಷ ಕಾಳಜಿ ವಹಿಸಿ.

ವೃಷಭ :ಈ ವಾರವು ನಿಮ್ಮ ಪಾಲಿಗೆ ಚೆನ್ನಾಗಿದೆ. ಆದರೆ ಮನೆಯಲ್ಲಿ ಹೆಚ್ಚಿನ ಸಂಘರ್ಷ ಉಂಟಾಗಬಹುದು. ನೀವು ವಾಗ್ವಾದಕ್ಕೆ ಇಳಿಯುವ ಸಾಧ್ಯತೆ ಇದೆ. ನಿಮ್ಮ ತಾಯಿಯ ಆರೋಗ್ಯದಲ್ಲಿ ಕುಸಿತ ಉಂಟಾಗಬಹುದು. ತಂದೆಯ ಜೊತೆಗೆ ಅಭಿಪ್ರಾಯ ಭೇದ ಉಂಟಾಗಬಹುದು. ಗೆಳೆಯನ ಜೊತೆಗೆ ಮಾತನಾಡಿದ ಯಾವುದೇ ಗುಟ್ಟಿನ ವಿಚಾರವು ನಿಮ್ಮ ಪಾಲಿಗೆ ದುಬಾರಿಯಾಗಬಹುದು. ಈ ವಾರವು ಉದ್ಯೋಗಿಗಳ ಪಾಲಿಗೆ ಸಮಸ್ಯೆಗಳನ್ನುಂಟು ಮಾಡಬಹುದು. ಏನಾದರೂ ಅನಗತ್ಯ ಮಾತನ್ನು ಹೇಳುವ ಕಾರಣ ಯಾರಾದರೂ ವ್ಯಕ್ತಿಯ ಜೊತೆಗೆ ಸಂಘರ್ಷ ಉಂಟಾಗಬಹುದು. ವ್ಯವಹಾರಕ್ಕೆ ಸಂಬಂಧಿಸಿದಂತೆ ಸಮಯವು ಅನುಕೂಲಕರವಾಗಿದೆ. ಅಂತರಾಷ್ಟ್ರೀಯ ವ್ಯಾಪಾರದಿಂದ ನಿಮಗೆ ಲಾಭ ದೊರೆಯಲಿದೆ. ವೈಯಕ್ತಿಕ ಸಂಬಂಧದ ಕುರಿತು ಮಾತನಾಡುವುದಾರೆ, ವೈವಾಹಿಕ ಜೀವನಕ್ಕೆ ಕಾಲಿಡಲು ಇದು ಸೂಕ್ತ ಸಮಯ. ಆದರೆ ನೀವು ಎಚ್ಚರಿಕೆಯಿಂದ ಮಾತನಾಡಬೇಕು. ಪ್ರೇಮದ ಸಂಬಂಧದಲ್ಲಿರುವವರಿಗೆ ಈ ಈ ವಾರವು ತುಂಬಾ ಅನುಕೂಲಕರ. ನೀವು ಖಂಡಿತವಾಗಿಯೂ ಅನುಕೂಲಕರ ಸ್ಥಾನದಲ್ಲಿ ಇರುತ್ತೀರಿ. ವಿವಾಹಿತ ವ್ಯಕ್ತಿಗಳು ಮಗುವನ್ನು ಸ್ವಾಗತಿಸಲು ಸಿದ್ಧತೆ ನಡೆಸಲಿದ್ದಾರೆ. ಈ ವಾರದಲ್ಲಿ ಪ್ರಯಾಣಿಸುವ ಸಾಧ್ಯತೆ ಇದೆ. ವಾರದ ಕೊನೆಯ ಎರಡು ದಿನಗಳನ್ನು ಹೊರತುಪಡಿಸಿ ಉಳಿದ ದಿನಗಳು ಮಕ್ಕಳ ಪಾಲಿಗೆ ಏರುಪೇರಿನಿಂದ ಕೂಡಿರಲಿವೆ. ನಿಮ್ಮ ಪಾಲಿಗೆ ಅಧ್ಯಯನವು ಸವಾಲಿನಿಂದ ಕೂಡಿರಲಿದೆ. ನಿಮ್ಮ ಕುರಿತು ಕಾಳಜಿ ವಹಿಸಿ.

ಮಿಥುನ :ನಿಮ್ಮ ಪಾಲಿಗೆ ಈ ವಾರವು ಅನುಕೂಲಕರವಾಗಿದೆ. ನಿಮಗೆ ಸಾಕಷ್ಟು ಹಣ ಗಳಿಕೆ ಉಂಟಾಗಲಿದೆ. ಕುಟುಂಬದ ಸದಸ್ಯರು ನಿಮಗೆ ಹಣ ನೀಡಲಿದ್ದಾರೆ. ಇದು ಉಡುಗೊರೆಯ ರೂಪದಲ್ಲಿರಬಹುದು ಅಥವಾ ನಿಮ್ಮ ತಂದೆಯ ಆರ್ಥಿಕ ನೆರವು ಆಗಿರಬಹುದು. ಅದೃಷ್ಟವು ನಿಮ್ಮ ಪರವಾಗಿದೆ. ನೀವು ಕೆಲಸದಲ್ಲಿ ಯಶಸ್ಸನ್ನು ಸಾಧಿಸಲಿದ್ದೀರಿ. ಕೆಲಸದಲ್ಲಿ ನಿಮಗೆ ಹೊಸ ಜವಾಬ್ದಾರಿಯನ್ನು ನೀಡಲಾಗುವುದು. ಇದು ಉನ್ನತ ಶ್ರೇಣಿ ಮತ್ತು ಗೌರವವನ್ನು ಗಳಿಸಲು ನಿಮಗೆ ನೆರವಾಗಲಿದೆ. ನೀವು ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದರೆ ನಿಮ್ಮ ಉದ್ಯಮವನ್ನು ಬೆಳೆಸಲು ಇದು ಸಕಾಲ. ವಿವಾಹಿತ ವ್ಯಕ್ತಿಗಳು ತಮ್ಮ ಜೀವನ ಸಂಗಾತಿಯಿಂದ ಕೆಲವೊಂದು ಹೊಸ ಕೌಶಲ್ಯಗಳನ್ನು ಪಡೆದುಕೊಳ್ಳಲಿದ್ದಾರೆ ಹಾಗೂ ಒಟ್ಟಿಗೆ ಪ್ರಯಾಣಿಸಲು ಯೋಜನೆ ರೂಪಿಸಲಿದ್ದಾರೆ. ಸುಂದರ ಹಾಗೂ ರಮಣೀಯ ಸ್ಥಳಕ್ಕೆ ನೀವು ಭೇಟಿ ನೀಡಬಹುದು. ಪ್ರೇಮ ಜೀವನಕ್ಕೆ ಈ ಸಂದರ್ಭದಲ್ಲಿ ಪ್ರಯೋಜನ ಉಂಟಾಗಲಿದೆ. ನಿಮ್ಮ ಪ್ರಯತ್ನಕ್ಕೆ ನೀವು ವೇಗ ನೀಡಬಹುದು. ನಿಮ್ಮ ಸಂಗಾತಿಗೆ ಮದುವೆಯಾಗುವಂತೆ ಒಲಿಸುವಲ್ಲಿ ನೀವು ಯಶಸ್ವಿಯಾಗಬಹುದು. ವಿದ್ಯಾರ್ಥಿಗಳಿಗೆ ಅಧ್ಯಯನಕ್ಕೆ ಸಾಕಷ್ಟು ಸಮಯ ದೊರೆಯಲಿದೆ. ಈ ವಾರವು ಪ್ರಯಾಣಿಸಲು ಅನುಕೂಲಕರ.

ಕರ್ಕಾಟಕ :ನಿಮ್ಮ ಪಾಲಿಗೆ ಈ ವಾರವು ಅನುಕೂಲಕರವಾಗಿದೆ. ನಿಮ್ಮ ಉದ್ಯೋಗದಲ್ಲಿ ನಿಮ್ಮ ತಳಹದಿಯು ಗಟ್ಟಿಗೊಳ್ಳಲಿದೆ. ವಾರದ ಆರಂಭದಲ್ಲಿ ಕೆಲವೊಂದು ಚಿಂತೆಗಳು ಮತ್ತು ವೆಚ್ಚಗಳು ಇರಬಹುದು. ಆದರೆ ವಾರದ ಮಧ್ಯದಲ್ಲಿ ಅವು ದೂರಗೊಳ್ಳಲಿವೆ. ವಿಪರೀತ ಆತ್ಮವಿಶ್ವಾಸ ತೋರಬೇಡಿ. ಖರ್ಚಿನಲ್ಲಿ ಸ್ಥಿರತೆ ಇದ್ದರೂ ಆದಾಯವು ಚೆನ್ನಾಗಿರಲಿದೆ. ಇದು ನಿಮ್ಮ ಚಿಂತೆಗಳನ್ನು ತಗ್ಗಿಸಲಿದೆ ಹಾಗೂ ಸಾಕಷ್ಟು ತೃಪ್ತಿಯನ್ನು ನೀಡಲಿದೆ. ಕೆಲಸದ ಹೊಸ ಅಭ್ಯಾಸಗಳೊಂದಿಗೆ ಪ್ರಯೋಗ ಮಾಡಲು ಇದು ಸಕಾಲ. ಕೆಲಸದಲ್ಲಿ ಹೊಸ ನಿಯೋಜನೆಗಳು ನಿಮಗೆ ಲಭಿಸಲಿದ್ದು ಅವುಗಳನ್ನು ಪೂರ್ಣಗೊಳಿಸಲು ನೀವು ಹೆಣಗಾಡಲಿದ್ದೀರಿ. ಈ ಕ್ಷಣದಲ್ಲಿ ವ್ಯವಹಾರವು ಮಂದಗತಿಯಲ್ಲಿ ನಡೆಯಲಿದೆ. ವೈವಾಹಿಕ ಬದುಕಿನಲ್ಲಿ ಈ ಸಂದರ್ಭದಲ್ಲಿ ಪ್ರೇಮ ಮತ್ತು ಒತ್ತಡ ಎರಡೂ ಕಾಣಿಸಿಕೊಳ್ಳಲಿವೆ. ಹೀಗಾಗಿ ಯಾರೊಂದಿಗೂ ವಾಗ್ವಾದದಲ್ಲಿ ತೊಡಗಬೇಡಿ. ಅಲ್ಲದೆ ತಂಡವನ್ನು ಬಿಡಬೇಡಿ. ನಿಮ್ಮ ಜೀವನ ಸಂಗಾತಿಯ ಜೊತೆಗೆ ಅನ್ಯೋನ್ಯತೆಯನ್ನು ಕಾಪಾಡಲು ಯತ್ನಿಸಿ. ಪ್ರೇಮವನ್ನು ಕಾಣುವ ವಿಚಾರದಲ್ಲಿ ಸಮಯವು ನಿಮ್ಮ ಪರವಾಗಿದೆ. ನಿಮ್ಮ ಸಂಬಂಧದಲ್ಲಿರುವ ಪ್ರಣಯದಲ್ಲಿ ವೃದ್ಧಿಯಾಗಲಿದೆ.

ಸಿಂಹ :ಉತ್ತಮ ಆರೋಗ್ಯವನ್ನು ಕಾಪಾಡಲು ಆರೋಗ್ಯ ಕ್ರಮ, ನಡಿಗೆ ಮುಂತಾದ ಹೊಸ ವಿಚಾರಗಳನ್ನು ನೀವು ಯತ್ನಿಸಬೇಕು. ಹೊರಗಡೆ ವ್ಯಾಯಾಮ ಮಾಡುವುದರಿಂದ ನಿಮಗೆ ಪ್ರಯೋಜನವಾಗಲಿದೆ. ನಿಮ್ಮ ಕೋಪವನ್ನು ನಿಯಂತ್ರಿಸಿ. ಯಾರನ್ನೂ ನಿಮ್ಮ ಮಾತಿನ ಮೂಲಕ ನೋಯಿಸಬೇಡಿ. ಮುಖ್ಯವಾಗಿ ನಿಮ್ಮ ಜೀವನ ಸಂಗಾತಿಯ ಕುರಿತು ಎಚ್ಚರಿಕೆಯಿಂದ ಇರಿ. ಇಲ್ಲದಿದ್ದರೆ ಇದು ನಿಮ್ಮ ವೈವಾಹಿಕ ಜೀವನದಲ್ಲಿ ಸಂಘರ್ಷವನ್ನುಂಟು ಮಾಡಬಹುದು. ಪ್ರೇಮವನ್ನು ಕಾಣುವ ವಿಚಾರದಲ್ಲಿ ಸಮಯವು ನಿಮ್ಮ ಪರವಾಗಿದೆ. ನಿಮ್ಮ ನವೀನ ಯೋಚನೆಯ ಕಾರಣ ನಿಮ್ಮ ಸಂಬಂಧದಲ್ಲಿ ಎಲ್ಲರನ್ನು ಸಂತುಷ್ಟಪಡಿಸಲು ನೀವು ಎಲ್ಲಾ ಪ್ರಯತ್ನವನ್ನು ಮಾಡಲಿದ್ದೀರಿ. ನಿಮ್ಮನ್ನು ಸಂತುಷ್ಟಪಡಿಸಲು ಅವರು ಎಲ್ಲಾ ಪ್ರಯತ್ನವನ್ನು ಮಾಡಲಿದ್ದಾರೆ. ಸ್ಥಾನವನ್ನು ಗಳಿಸಲು ಹೆಣಗಾಡಬೇಕಾದೀತು. ಅಲ್ಲದೆ ಹೊರಗೆ ಹೋಗುವ ಅವಕಾಶ ನಿಮಗೆ ದೊರೆಯಬಹುದು. ಈ ಅವಕಾಶ ನಿಮ್ಮ ಕೈ ತಪ್ಪದಂತೆ ನೋಡಿಕೊಳ್ಳಿ. ಒಂದಷ್ಟು ಖರ್ಚುವೆಚ್ಚಗಳು ಉಂಟಾಗಬಹುದು. ಆದರೆ ಆದಾಯವು ತೃಪ್ತಿಕರವಾಗಿರುತ್ತದೆ. ನೀವು ವ್ಯವಹಾರದ ಕೆಲವು ಡೀಲುಗಳನ್ನು ಮುಗಿಸಬೇಕಾದೀತು. ಅಲ್ಲದೆ ಬಾಕಿ ಉಳಿದಿರುವ ಕೆಲಸಗಳನ್ನು ಪೂರ್ಣಗೊಳಿಸಲು ನಿಮಗೆ ಅವಕಾಶ ಲಭಿಸಲಿದೆ.

ಕನ್ಯಾ :ಈ ವಾರದಲ್ಲಿ ಕೆಲಸದ ಮೇಲೆ ಗಮನ ನೀಡಲು ನಿಮಗೆ ಸಾಧ್ಯವಾಗಲಿದೆ. ಅಲ್ಲದೆ ನಿಮ್ಮ ಆದಾಯ ಮತ್ತು ವೆಚ್ಚವನ್ನು ಸರಿಯಾಗಿ ನಿಭಾಯಿಸಲು ನಿಮ್ಮೆಲ್ಲ ಪ್ರಯತ್ನವನ್ನು ಮಾಡಲಿದ್ದೀರಿ. ಇದು ನಿಮ್ಮ ವೆಚ್ಚವನ್ನು ಸರಿಯಾದ ವ್ಯಾಪ್ತಿಯಲ್ಲಿ ಸಂಭಾಳಿಸಲು ನಿಮಗೆ ಸಹಾಯ ಮಾಡಲಿದೆ. ಆರೋಗ್ಯದ ವಿಚಾರದಲ್ಲಿ ಸಮಯವು ದುರ್ಬಲವಾಗಿದೆ. ಹೀಗಾಗಿ ನಿಮ್ಮ ದೇಹದ ಕ್ಷಮತೆಯನ್ನು ವೃದ್ಧಿಸಲು ನಿಮ್ಮ ಆಹಾರಕ್ರಮವನ್ನು ಮಾರ್ಪಡಿಸಿ ಮತ್ತು ಒಂದಷ್ಟು ವ್ಯಾಯಾಮವನ್ನು ಮಾಡಿ. ಉದ್ಯೋಗದಲ್ಲಿರುವವರಿಗೆ ಇದು ಅದ್ಭುತ ವಾರ ಎನಿಸಲಿದೆ. ನಿಮ್ಮ ಪ್ರಯತ್ನಕ್ಕೆ ತಕ್ಕುದಾದ ಫಲ ನಿಮಗೆ ದೊರೆಯಲಿದೆ. ನಿಮಗೆ ಭಡ್ತಿ ದೊರೆಯಲು ನಿಮ್ಮ ಮಾಲೀಕರು ನಿಮಗೆ ಸಹಾಯ ಮಾಡಲಿದ್ದಾರೆ. ನಿಮಗೆ ಭಡ್ತಿ ದೊರೆಯುವ ಎಲ್ಲಾ ಸಾಧ್ಯತೆಗಳಿವೆ. ವ್ಯವಹಾರದಲ್ಲಿ ತೊಡಗಿಸಿಕೊಂಡಿರುವ ಜನರು ಕಠಿಣ ಶ್ರಮ ತೋರಲಿದ್ದಾರೆ. ನೀವು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿರುವ ಕೆಲವೊಂದು ಯೋಜನೆಗಳಿಗೆ ಫಲ ದೊರೆಯಲಿದೆ. ತಮ್ಮ ಕೌಟುಂಬಿಕ ಬದುಕಿನಲ್ಲಿ ಸಮಸ್ಯೆಯನ್ನು ಎದುರಿಸುತ್ತಿರುವ ವಿವಾಹಿತ ವ್ಯಕ್ತಿಗಳು ದೇವರ ಕೃಪೆಯನ್ನು ಕೋರಬೇಕು. ದೇವಸ್ಥಾನಕ್ಕೆ ಭೇಟಿ ನೀಡುವ ಮೂಲಕ ಮನಸ್ಸಿಗೆ ಶಾಂತಿ ದೊರೆಯಲಿದೆ. ಪ್ರೇಮ ಜೀವನವು ಸರಾಗವಾಗಿ ಮುಂದುವರಿಯಲಿದೆ.

ತುಲಾ :ಈ ವಾರದಲ್ಲಿ ನಿಮಗೆ ಒಳ್ಳೆಯ ಫಲ ಲಭಿಸಲಿದೆ. ಈ ವಾರದ ಆರಂಭದಲ್ಲಿ ದೀರ್ಘ ಪ್ರಯಾಣವನ್ನು ಕೈಗೊಳ್ಳುವ ಅವಕಾಶ ನಿಮಗೆ ಲಭಿಸಬಹುದು. ನಿಮ್ಮ ಕೆಲಸದಲ್ಲಿ ಸಹೋದ್ಯೋಗಿಗಳನ್ನು ಚೆನ್ನಾಗಿ ನೋಡಿಕೊಂಡರೆ ಕಂಪನಿಯಲ್ಲಿ ನಿಮ್ಮ ವರ್ಚಸ್ಸು ಗಟ್ಟಿಗೊಳ್ಳಲಿದೆ. ನೀವು ಮತ್ತು ನಿಮ್ಮ ಹಿರಿಯರ ಜೊತೆಗಿನ ಬಂಧವು ಗಟ್ಟಿಗೊಳ್ಳಲಿದೆ. ಸಂಘರ್ಷದಿಂದ ದೂರವಿರಲು ಯತ್ನಿಸಿ. ಸಣ್ಣಪುಟ್ಟ ವೆಚ್ಚಗಳು ಉಂಟಾಗಬಹುದು. ಆದರೆ ಅಧಿಕ ಆದಾಯದ ಕಾರಣ ಯಾವುದೇ ಸಮಸ್ಯೆ ಕಾಣಿಸಿಕೊಳ್ಳದು. ಸಮಯವು ನಿಮಗೆ ಅನುಕೂಲಕರವಾಗಿದೆ. ವಿವಾಹಿತ ವ್ಯಕ್ತಿಗಳು ಪ್ರಯಾಣಕ್ಕೆ ಹೋಗಬಹುದು ಹಾಗೂ ತಮ್ಮ ಕೌಟುಂಬಿಕ ಬದುಕಿಗೆ ಸಂತಸವನ್ನು ಧಾರೆಯೆರೆಯಬಹುದು. ನಿಮ್ಮ ನಡುವೆ ಅಷ್ಟೊಂದು ಅನುರಾಗ ಕಾಣಿಸಿಕೊಳ್ಳದು. ನಿಮ್ಮ ಸಂಗಾತಿಯು ಅನೇಕ ವಿಚಾರಗಳನ್ನು ನಿಮಗೆ ಹೇಳದೆ ಇರಬಹುದು. ಹೀಗಾಗಿ ನೀವು ಅವರೊಂದಿಗೆ ಮಾತನಾಡಬೇಕು. ಈ ವಾರದಲ್ಲಿ ವಿದ್ಯಾರ್ಥಿಗಳು ತಮ್ಮ ಕೌಶಲ್ಯಗಳನ್ನು ಅಭ್ಯಸಿಸಬೇಕು. ಕೆಲವೊಂದು ಆನ್ಲೈನ್‌ ಕೋರ್ಸುಗಳು ನಿಮ್ಮ ಪಾಲಿಗೆ ಉಪಯುಕ್ತ ಎನಿಸಲಿವೆ. ವಾರದ ಆರಂಭದಲ್ಲಿ ಪ್ರಯಾಣಿಸುವುದು ಒಳ್ಳೆಯದು.

ವೃಶ್ಚಿಕ :ಈ ವಾರದಲ್ಲಿ ನೀವು ಸಾಕಷ್ಟು ಏರುಪೇರನ್ನು ಅನುಭವಿಸಲಿದ್ದೀರಿ. ಈ ವಾರದ ಆರಂಭದಲ್ಲಿ ಯಾವುದೇ ಪ್ರಮುಖ ನಿರ್ಧಾರವನ್ನು ಕೈಗೊಳ್ಳಬೇಡಿ. ಏಕೆಂದರೆ ಇದು ನಿಮ್ಮ ವಿರುದ್ಧವಾಗಿ ತಿರುಗಿ ಬೀಳಬಹುದು. ವಾರದ ಆರಂಭದಲ್ಲಿ ಹಣಕಾಸಿನ ನಷ್ಟ ಉಂಟಾಗುವ ಸಾಧ್ಯತೆ ಇದೆ. ಖರ್ಚಿನಲ್ಲಿ ಹೆಚ್ಚಳ ಉಂಟಾಗಿ ಆದಾಯದಲ್ಲಿ ಇಳಿಕೆ ಉಂಟಾಗುವ ಕಾರಣ ಹೀಗೆ ಆಗುವ ಸಾಧ್ಯತೆ ಇದೆ. ಉದ್ಯೋಗದಲ್ಲಿರುವವರು ಕಾರ್ಯರೂಪಕ್ಕೆ ಇಳಿಯಲು ಇದು ಸಕಾಲ. ಪೊಳ್ಳು ಸಮರ್ಥನೆಗಳನ್ನು ಮಾಡುವ ಬದಲಿಗೆ ಕಾರ್ಯರೂಪಕ್ಕೆ ಇಳಿದು ನಿಮ್ಮ ಬದ್ಧತೆಯನ್ನು ತೋರಿಸಿ. ವ್ಯವಹಾರದಲ್ಲಿ ತೊಡಗಿಸಿಕೊಂಡಿರುವವರು ವ್ಯವಹಾರದ ಉದ್ದೇಶಕ್ಕಾಗಿ ಆಗಾಗ್ಗೆ ಪ್ರಯಾಣಿಸಬೇಕಾದೀತು. ಆದರೆ ದೀರ್ಘ ಕಾಲದಿಂದ ಬಾಕಿ ಉಳಿದಿರುವ ಡೀಲ್‌ ಒಂದನ್ನು ಕುದುರಿಸಲು ಇದರ ಅಗತ್ಯವಿದೆ. ವಿವಾಹಿತ ವ್ಯಕ್ತಿಗಳು ಕೌಟುಂಬಿಕ ಬದುಕನ್ನು ಆನಂದಿಸಲಿದ್ದಾರೆ. ನಿಮ್ಮ ಜೀವನ ಸಂಗಾತಿಯನ್ನು ಎಲ್ಲಿಗಾದರೂ ವಾಕ್‌ ಗೆ ಕರೆದುಕೊಂಡು ಹೋಗಬಹುದು. ಇದು ನಿಮ್ಮ ಸಂಬಂಧದಲ್ಲಿ ಪ್ರಣಯದ ಕಿಡಿಯನ್ನು ಹೊತ್ತಿಸಲಿದ್ದು ನಿಮ್ಮಿಬ್ಬರಲ್ಲಿ ಅನ್ಯೋನ್ಯತೆಯನ್ನು ತರಲಿದೆ. ಪ್ರೇಮ ಸಂಬಂಧದಲ್ಲಿರುವವರ ಪಾಲಿಗೆ ಈ ವಾರವು ಸಂತಸದಿಂದ ಕೂಡಿರಲಿದೆ.

ಧನು :ನಿಮ್ಮ ಪಾಲಿಗೆ ಈ ವಾರವು ವಿಶಿಷ್ಟವೆನಿಸಲಿದೆ. ವಾರದ ಆರಂಭದಲ್ಲಿ ವ್ಯವಹಾರಕ್ಕೆ ಸಂಬಂಧಿಸಿದ ವಿಷಯವು ಮುನ್ನೆಲೆಗೆ ಬರಲಿದೆ. ನಿಮ್ಮ ಕಂಪನಿಯಲ್ಲಿ ಯಾವುದಾದರೂ ಮಹಿಳೆಯು ಹೂಡಿಕೆ ಮಾಡಬಹುದು. ಉದ್ಯೋಗದಲ್ಲಿರುವವರಿಗೆ ಈ ವಾರವು ದುರ್ಬಲ ಎನಿಸಲಿದೆ. ನಿಮ್ಮ ಕಚೇರಿಯಲ್ಲಿ ನೀವು ಯಾರೊಂದಿಗಾದರೂ ವಾಗ್ವಾದಕ್ಕೆ ಇಳಿಯಬಹುದು. ಹೀಗಾಗಿ ನಿಮಗೆ ವರ್ಗಾವಣೆಯ ಶಿಕ್ಷೆ ಲಭಿಸಬಹುದು ಅಥವಾ ನೀವು ಕೆಲಸವನ್ನು ಕಳೆದುಕೊಳ್ಳಬಹುದು. ಆರೋಗ್ಯದಲ್ಲಿ ಕುಸಿತ ಉಂಟಾಗಬಹುದು. ಆಹಾರ ಹಾಗೂ ಪಾನೀಯ ಸೇವನೆಯ ವಿಚಾರದಲ್ಲಿ ಗಮನ ನೀಡುವುದು ಅಗತ್ಯ. ವಿವಾಹಿತ ವ್ಯಕ್ತಿಗಳು ಬದುಕನ್ನು ಆನಂದಿಸಲಿದ್ದಾರೆ. ಅಲ್ಲದೆ ಸಂಬಂಧದಲ್ಲಿ ಪ್ರಣಯವು ನೆಲೆಸಲಿದೆ ಹಾಗೂ ನೀವು ಆಪ್ತತೆಯನ್ನು ಅನುಭವಿಸಲಿದ್ದೀರಿ. ನಿಮ್ಮ ಪ್ರೇಮಿಗೆ ಏನನ್ನು ಹೇಳಲು ಇಚ್ಛಿಸುವಿರೋ ಆ ಕುರಿತು ಸ್ಪಷ್ಟತೆ ಇರಲಿ. ವಾರದ ಆರಂಭದಲ್ಲಿ ಮತ್ತು ಕೊನೆಯ ದಿನಗಳಲ್ಲಿ ಪ್ರಯಾಣಿಸುವುದು ಪ್ರಯೋಜನಕಾರಿ. ಸಾಕಷ್ಟು ಪರಿಶ್ರಮದ ನಂತರ ವಿದ್ಯಾರ್ಥಿಗಳು ಮುನ್ನಡೆ ಸಾಧಿಸಲಿದ್ದಾರೆ.

ಮಕರ :ನಿಮಗೆ ಈ ವಾರದಲ್ಲಿ ಸಾಮಾನ್ಯ ಫಲ ದೊರೆಯಲಿದೆ. ನಿಮಗೆ ಸಾಕಷ್ಟು ಖರ್ಚು ಉಂಟಾಗಲಿದೆ. ಒಂದಷ್ಟು ಮಾನಸಿಕ ಒತ್ತಡ ಇರಬಹುದು. ವೈವಾಹಿಕ ಜೀವನದಲ್ಲಿ ಸಮತೋಲನ ಕಳೆದುಕೊಳ್ಳುವ ಕಾರಣ ಸಂವಹನಕ್ಕೆ ಸಂಬಂಧಿಸಿದ ಸಮಸ್ಯೆಗಳು ಉಂಟಾಗಬಹುದು. ನಿಮ್ಮ ಜೀವನ ಸಂಗಾತಿಗಾಗಿ ಕೆಲವೊಂದು ದುಬಾರಿ ವಸ್ತುಗಳನ್ನು ನೀವು ಖರೀದಿಸಬಹುದು. ಒಳ್ಳೆಯ ಮೊಬೈಲ್‌ ಫೋನ್‌ ಖರೀದಿಸುವ ಸಾಧ್ಯತೆ ಇದೆ. ಪ್ರೇಮ ಜೀವನಕ್ಕೆ ಸಂಬಂಧಿಸಿದಂತೆ ಭವಿಷ್ಯವು ಭರವಸೆಯಿಂದ ಕೂಡಿದೆ. ಪ್ರೇಮಿಯೊಂದಿಗೆ ಪ್ರಣಯಭರಿತ ಕ್ಷಣಗಳನ್ನು ಕಳೆಯಲು ನಿಮಗೆ ಸಾಧ್ಯವಾಗಲಿದೆ. ವ್ಯಾಪಾರಿಗಳ ಪಾಲಿಗೆ ಇದು ಅದ್ಭುತ ಸಮಯವೆನಿಸಲಿದೆ. ನಿಮ್ಮ ಕಂಪನಿಯಲ್ಲಿ ಏನಾದರೂ ಹೊತಸನ್ನು ಪ್ರಯತ್ನಿಸಲು ಯತ್ನಿಸಿದರೆ ನಿಮಗೆ ಅನುಕೂಲಕರವಾಗುತ್ತದೆ. ಮಾಲೀಕರಿಗೆ ಒಂದಷ್ಟು ಅಡಚಣೆಗಳು ಉಂಟಾಗಬಹುದು. ಹೀಗಾಗಿ ನಿಮ್ಮ ಪ್ರಗತಿಯಲ್ಲಿ ವಿಳಂಬ ಉಂಟಾಗಬಹುದು. ಕೆಲಸದ ಮೇಲೆ ಗಮನ ನೀಡಿದರೆ ಯಶಸ್ಸು ದೊರೆಯಲಿದೆ. ವಾರದ ಕೊನೆಯ ದಿನಗಳಲ್ಲಿ ಪ್ರಯಾಣಿಸುವುದು ಒಳ್ಳೆಯದು. ವಿದ್ಯಾರ್ಥಿಗಳ ಪಾಲಿಗೆ ಸಮಯವು ಸ್ವಲ್ಪ ಚೆನ್ನಾಗಿದೆ. ಅಧ್ಯಯನಕ್ಕೆ ನೀವು ಗಮನ ನೀಡಬೇಕು. ಹೊರಗಡೆ ಊಟ ಮಾಡುವಾಗ ಕರಿದ ಆಹಾರವನ್ನು ಹೆಚ್ಚು ಸೇವಿಸಬೇಡಿ.

ಕುಂಭ :ನಿಮಗೆ ಈ ವಾರದಲ್ಲಿ ಸಾಮಾನ್ಯ ಫಲ ದೊರೆಯಲಿದೆ. ತಮ್ಮ ಜೀವನ ಸಂಗಾತಿಯ ನೋಯಿಸುವ ಮಾತುಗಳಿಂದಾಗಿ ವಿವಾಹಿತ ವ್ಯಕ್ತಿಗಳು ಒಂದಷ್ಟು ಕೌಟುಂಬಿಕ ಸಂಘರ್ಷವನ್ನು ಅನುಭವಿಸಬಹುದು. ಪ್ರಣಯಭರಿತ ಸಂಬಂಧಗಳಿಗೆ ಸಮಯವು ಅನುಕೂಲಕರವಾಗಿದೆ. ಆದರೆ ಸಂಘರ್ಷಗಳಿಂದ ದೂರವಿರಿ ಹಾಗೂ ಇತರರ ವಿಚಾರದಲ್ಲಿ ಮೂಗು ತೂರಿಸಬೇಡಿ. ಉದ್ಯೋಗದಲ್ಲಿರುವವರು ಗುಣಮಟ್ಟದ ಕೆಲಸಕ್ಕೆ ಒತ್ತು ನೀಡಲಿದ್ದಾರೆ. ನಿಮ್ಮ ಕಠಿಣ ಶ್ರಮಕ್ಕೆ ತಕ್ಕ ಫಲ ದೊರೆಯಲಿದೆ. ನಿಮ್ಮ ಭಡ್ತಿ ಸಿಗುವ ಸಾಧ್ಯತೆಗಳು ನಿಚ್ಚಳವಾಗಿವೆ. ವ್ಯಾಪಾರೋದ್ಯಮಿಗಳು ಯಶಸ್ಸನ್ನು ಸಾಧಿಸಲಿದ್ದಾರೆ. ನಿಮ್ಮ ಶ್ರಮಕ್ಕೆ ದೊರೆಯುವ ಫಲಿತಾಂಶವು ನಿಮಗೆ ಸಾಕಷ್ಟು ಸಂತಸ ನೀಡಲಿದೆ. ಆದರೆ ನಿಮ್ಮ ವ್ಯವಹಾರ ಪಾಲುದಾರರೊಂದಿಗಿನ ಸಂಬಂಧಕ್ಕೆ ಯಾವುದೇ ಧಕ್ಕೆಯುಂಟಾಗದಂತೆ ನೋಡಿಕೊಳ್ಳಿ. ವಾರದ ಮೊದಲ ಎರಡು ದಿನಗಳು ಪ್ರವಾಸಕ್ಕೆ ಹೋಗಲು ಅತ್ಯುತ್ತಮ. ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ ಒಂದಷ್ಟು ಅಡಚಣೆಗಳು ಉಂಟಾಗಬಹುದು.

ಮೀನ :ನಿಮ್ಮ ಪಾಲಿಗೆ ಈ ವಾರವು ಅನುಕೂಲಕರವಾಗಿದೆ. ವಾರದ ಆರಂಭದಲ್ಲಿ ನಿಮಗೆ ಪ್ರಗತಿ ದೊರೆಯಲಿದೆ. ಇದು ನಿಮಗೆ ಇನ್ನಷ್ಟು ಆತ್ಮವಿಶ್ವಾಸವನ್ನು ನೀಡಲಿದೆ. ನಿಮ್ಮ ಸಂಸ್ಥೆಯನ್ನು ಬೆಳೆಸುವುದಕ್ಕಾಗಿ ನೀವು ಹೊಸ ಡೀಲುಗಳಿಗೆ ಕೈ ಹಾಕಲಿದ್ದೀರಿ. ನೀವು ಹೊಸ ನಿಯಮಗಳನ್ನು ರೂಪಿಸಲಿದ್ದೀರಿ. ಇದರಿಂದ ನಿಮಗೆ ಸಾಕಷ್ಟು ಲಾಭ ಉಂಟಾಗಲಿದೆ. ಉದ್ಯೋಗದಲ್ಲಿರುವವರು ತಮ್ಮ ವ್ಯವಹಾರಕ್ಕೆ ಮಾತ್ರವೇ ಗಮನ ನೀಡಬೇಕು ಹಾಗೂ ತಮ್ಮ ಕೆಲಸದಲ್ಲಿ ಸಾಕಷ್ಟು ಶ್ರಮ ಪಡಬೇಕು. ನೀವು ಇದರಿಂದ ಉತ್ತಮ ಫಲಿತಾಂಶ ಪಡೆಯಲಿದ್ದೀರಿ. ನಿಮ್ಮ ಆರೋಗ್ಯವು ಹಿಂದಿಗಿಂತಲೂ ಚೆನ್ನಾಗಿರಲಿದೆ. ಆದರೆ ನಿಮ್ಮ ಆರೋಗ್ಯದ ಕುರಿತು ನೀವು ಎಚ್ಚರ ವಹಿಸಬೇಕು. ಇಲ್ಲದಿದ್ದರೆ ನೀವು ಸಮಸ್ಯೆ ಎದುರಿಸಬಹುದು. ವಿವಾಹಿತ ವ್ಯಕ್ತಿಗಳು ಸಂತಸದ ಜೀವನ ನಡೆಸಲಿದ್ದಾರೆ. ಅವರ ನಡುವಿನ ಬಂಧವು ಇನ್ನಷ್ಟು ಗಟ್ಟಿಗೊಳ್ಳಲಿದ್ದು ಸಂಬಂಧದಲ್ಲಿ ಸುಧಾರಣೆ ಉಂಟಾಗಲಿದೆ. ಪ್ರೇಮ ಜೀವನ ಸಾಗಿಸುತ್ತಿರುವ ಜನರು ತಮ್ಮ ಸಂಬಂಧದಲ್ಲಿ ತೃಪ್ತಿ ಅನುಭವಿಸಲಿದ್ದಾರೆ. ತನ್ನ ಪ್ರೇಮಿಯನ್ನು ಇವರು ಮನಸಾರೆ ಪ್ರೀತಿಸಲಿದ್ದಾರೆ. ವಾರದ ಮಧ್ಯ ಭಾಗವು ಪ್ರವಾಸಕ್ಕೆ ಹೋಗಲು ಅತ್ಯುತ್ತಮ. ನಿಮ್ಮ ಅಧ್ಯಯನದಲ್ಲಿ ಮುನ್ನಡೆ ಸಾಧಿಸಲಿದ್ದೀರಿ.

ABOUT THE AUTHOR

...view details