ಮೇಷ: ಈ ವಾರ ನಿಮಗೆ ಉತ್ತಮ ಫಲ ದೊರೆಯಲಿದೆ. ವಿವಾಹಿತ ವ್ಯಕ್ತಿಗಳು ತಮ್ಮ ಕೌಟುಂಬಿಕ ಜೀವನವನ್ನು ಆನಂದಿಸಲಿದ್ದು ತಮ್ಮ ಜೀವನ ಸಂಗಾತಿಯ ಸಂತಸಕ್ಕಾಗಿ ಸಾಕಷ್ಟು ಶ್ರಮ ವಹಿಸಲಿದ್ದಾರೆ. ಒಟ್ಟಿಗೆ ಶಾಪಿಂಗ್ ಗೆ ಹೋಗಲು, ಚಲನಚಿತ್ರವನ್ನು ವೀಕ್ಷಿಸಲು ಅಥವಾ ಪ್ರವಾಸಕ್ಕೆ ಹೋಗಲು ಯೋಜನೆ ರೂಪಿಸಬಹುದು. ಮನೆಯಲ್ಲಿ ಒತ್ತಡದ ನಡುವೆಯೂ ಪ್ರೇಮವು ಬೆಳೆಯಲಿದೆ. ಈ ವಾರದ ಆರಂಭದಲ್ಲಿ ನಿಮ್ಮ ಹೃದಯ ಭಾವನೆಗಳನ್ನು ನೀವು ಆಲಿಸಲಿದ್ದೀರಿ ಹಾಗೂ ಏನಾದರೂ ಸೃಜನಶೀಲ ಕೆಲಸದಲ್ಲಿ ಪಾಲ್ಗೊಳ್ಳಲಿದ್ದೀರಿ. ನಿಮ್ಮ ಯಾವುದೇ ವಿಶೇಷ ಇಚ್ಛೆಯನ್ನು ಈಡೇರಿಸಲು ನೀವು ಯತ್ನಿಸಲಿದ್ದೀರಿ. ಇದು ನಿಮಗೆ ಶಾಂತಿಯನ್ನು ನೀಡಲಿದೆ. ರಿಯಲ್ ಎಸ್ಟೇಟ್ ಗೆ ಸಂಬಂಧಿಸಿದ ವಿಚಾರದಲ್ಲಿ ಯಶಸ್ಸು ದೊರೆಯಲಿದೆ. ಹಠಾತ್ ಆಗಿ ಹಣಕಾಸಿನ ಲಾಭ ಅಥವಾ ವೀಲು ಪಡೆಯುವ ಸಾಧ್ಯತೆ ಇದೆ. ವ್ಯಾಪಾರೋದ್ಯಮಿಗಳು ತಮ್ಮ ಜಾಣ್ಮೆಯ ಸಂಪೂರ್ಣ ಪ್ರಯೋಜನವನ್ನು ಪಡೆಯಲಿದ್ದಾರೆ. ಇದರಿಂದ ನೀವು ದೊಡ್ಡ ಪ್ರಮಾಣದ ಡೀಲನ್ನು ಪಡೆಯಬಹುದು. ಇದರಿಂದಾಗಿ ನಿಮ್ಮ ಹಣಕಾಸಿನ ಸ್ಥಿತಿಯಲ್ಲಿ ಸಾಕಷ್ಟು ಪ್ರಗತಿ ಕಾಣಿಸಿಕೊಳ್ಳಲಿದೆ. ವಿದ್ಯಾರ್ಥಿಗಳ ವಿಚಾರದಲ್ಲಿ ಹೇಳುವುದಾದರೆ ಈ ವಾರವು ಅವರಿಗೆ ಒಳ್ಳೆಯದು. ಅಧ್ಯಯನದಲ್ಲಿ ಆಸಕ್ತಿ ಉಂಟಾಗಲಿದೆ. ಇದರಿಂದಾಗಿ ಉತ್ತಮ ಫಲಿತಾಂಶ ಲಭಿಸಲಿದೆ.
ವೃಷಭ:ಈ ವಾರ ನಿಮಗೆ ಉತ್ತಮ ಫಲ ದೊರೆಯಲಿದೆ. ವಾರದ ಆರಂಭಿಕ ದಿನಗಳಲ್ಲಿ ಕುಟುಂಬದ ಅಗತ್ಯತೆಗಳಿಗೆ ಗಮನ ಹರಿಸಲಿದ್ದೀರಿ. ಕೌಟುಂಬಿಕ ಕೆಲಸದಲ್ಲಿ ನೆರವು ನೀಡಲಿದ್ದೀರಿ. ನಿಮ್ಮ ತಾಯಿಯೊಂದಿಗೆ ವಿಶೇಷ ಮಮತೆಯ ಭೇಟಿ ಮತ್ತು ಸಂಭಾಷಣೆ ನಡೆಯಲಿದೆ. ವಾರದ ಆರಂಭವು ಪ್ರಯಾಣಿಸಲು ಅನುಕೂಲಕರ. ಈ ವಾರವು ಪ್ರೇಮ ಜೀವನಕ್ಕೆ ಒಳ್ಳೆಯದು. ನಿಮ್ಮ ಸಂಬಂಧದಲ್ಲಿ ಪ್ರೇಮವು ಹೆಚ್ಚಲಿದೆ. ನಿಮ್ಮ ಸಂಬಂಧವು ವಿಶೇಷ ಎನಿಸಲಿದೆ. ವಿವಾಹಿತ ವ್ಯಕ್ತಿಗಳು ತಮ್ಮ ವೈವಾಹಿಕ ಜೀವನದಲ್ಲಿ ಸಿಹಿತನವನ್ನು ಹೆಚ್ಚಿಸಲು ತಮ್ಮ ಜೀವನ ಸಂಗಾತಿಗೆ ಒಳ್ಳೆಯ ಉಡುಗೊರೆಯನ್ನು ನೀಡಬೇಕು. ನೀವು ಯಾವುದಾದರೂ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದರೆ, ಪ್ರಯಾಣದ ಮೂಲಕ ನೀವು ಕೆಲವು ಹೊಸ ಸಂಪರ್ಕಗಳನ್ನು ಬೆಳೆಸಿಕೊಳ್ಳಬೇಕು. ಇದು ನಿಮ್ಮ ಪಾಲಿಗೆ ಉಪಯುಕ್ತ ಎನಿಸಲಿದೆ. ವಿದ್ಯಾರ್ಥಿಗಳ ವಿಚಾರದಲ್ಲಿ ಹೇಳುವುದಾದರೆ ಅವರ ಪಾಲಿಗೆ ಈ ವಾರವು ಅತ್ಯಂತ ಪ್ರಮುಖ ಎನಿಸಲಿದೆ. ಈ ಹಿಂದೆ ನೀವು ಮಾಡಿದ ಕಠಿಣ ಶ್ರಮಕ್ಕೆ ತಕ್ಕುದಾದ ಫಲವನ್ನು ನೀವು ಪಡೆಯಲಿದ್ದೀರಿ ಹಾಗೂ ಉತ್ತಮ ಅಂಕಗಳನ್ನು ಪಡೆಯಲಿದ್ದೀರಿ.
ಮಿಥುನ:ಈ ವಾರ ನಿಮಗೆ ಅತ್ಯುತ್ತಮ ಫಲ ದೊರೆಯಲಿದೆ. ವೈವಾಹಿಕ ಬದುಕು ಸಂತಸದಿಂದ ಕೂಡಿರಲಿದೆ. ಪ್ರೇಮ ಜೀವನದಲ್ಲಿಯೂ ಸಂತಸದ ಕ್ಷಣಗಳು ಕಾಣಿಸಿಕೊಳ್ಳಲಿವೆ. ಪರಸ್ಪರ ಸಮಯ ಕಳೆಯಲು ಸಾಕಷ್ಟು ಅವಕಾಶಗಳು ದೊರೆಯಲಿವೆ. ಈ ವಾರದಲ್ಲಿ ಪ್ರಯಾಣವು ನಿಮಗೆ ಪ್ರಯೋಜನಕಾರಿ ಎನಿಸಲಿದೆ. ಉದ್ಯೋಗದಲ್ಲಿರುವವರಿಗೆ ಇದು ಉತ್ತಮ ವಾರ ಎನಿಸಲಿದೆ. ನಿಮ್ಮ ಅನುಭವ ಮತ್ತು ದಕ್ಷತೆಯು ನಿಮ್ಮ ಪರವಾದ ಫಲಿತಾಂಶವನ್ನು ನೀಡಲಿದೆ. ನಿಮ್ಮ ಬಾಸ್ ನಿಮ್ಮ ಕುರಿತು ಮೆಚ್ಚುಗೆ ವ್ಯಕ್ತಪಡಿಸಲಿದ್ದಾರೆ. ಆದರೆ ಆಡಳಿತ ಮಂಡಳಿಗೆ ಸೇರಿದ ಯಾರಾದರೂ ವ್ಯಕ್ತಿಯು ನಿಮ್ಮನ್ನು ಇಷ್ಟಪಡದೆ ಇರಬಹುದು. ಅವರೊಂದಿಗೆ ಉತ್ತಮ ಸಂಬಂಧವನ್ನು ಬೆಳೆಸಿಕೊಳ್ಳಲು ಯತ್ನಿಸಿ. ನಿಮ್ಮ ಖರ್ಚುವೆಚ್ಚಗಳಲ್ಲಿ ಹೆಚ್ಚಳ ಉಂಟಾಗಲಿದೆ. ಆದರೆ ಆದಾಯವು ಚೆನ್ನಾಗಿರಲಿದೆ. ವಿದ್ಯಾರ್ಥಿಗಳ ವಿಚಾರದಲ್ಲಿ ಹೇಳುವುದಾದರೆ ಅವರ ಪಾಲಿಗೆ ಸಮಯವು ಒಳ್ಳೆಯದು. ಅವರು ಅಧ್ಯಯನಕ್ಕೆ ಗಮನ ನೀಡಲಿದ್ದಾರೆ. ಯಾರ ಬಗ್ಗೆಯೂ ಕೆಟ್ಟದಾಗಿ ಮಾತನಾಡಬೇಡಿ. ಆಗ ನಿಮ್ಮ ಮನಸ್ಸು ಅಧ್ಯಯನದತ್ತ ಕೇಂದ್ರೀಕೃತಗೊಳ್ಳಲಿದೆ. ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ, ನಿಮ್ಮ ಆರೋಗ್ಯದಲ್ಲಿ ಏರುಪೇರು ಉಂಟಾಗುವ ಸಾಧ್ಯತೆ ಇದೆ.
ಕರ್ಕಾಟಕ:ಈ ವಾರವು ನಿಮಗೆ ಅನುಕೂಲಕರ. ವೈವಾಹಿಕ ಬದುಕಿನಲ್ಲಿ ಒತ್ತಡದಿಂದ ಮುಕ್ತಿ ದೊರೆಯಲಿದೆ. ನಿಮ್ಮ ಸಂಬಂಧದಲ್ಲಿ ಪ್ರೇಮವು ಹೆಚ್ಚಲಿದೆ. ಏನಾದರೂ ಹೊಸ ಕೆಲಸವನ್ನು ಪ್ರಾರಂಭಿಸಲು ಜೀವನ ಸಂಗಾತಿಯು ನಿಮ್ಮನ್ನು ಆಗ್ರಹಿಸಬಹುದು. ಅವರೊಂದಿಗೆ ನಿಮ್ಮ ಅನ್ಯೋನ್ಯತೆಯು ಗಟ್ಟಿಗೊಳ್ಳಲಿದೆ. ಈಗ ನಿಮ್ಮ ಆದಾಯವು ಚೆನ್ನಾಗಿರಲಿದೆ. ಹೀಗಾಗಿ ಮನೆಯ ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆ ಉಂಟಾಗಲಿದೆ. ಕೆಲಸದಲ್ಲಿ ನಿಮ್ಮ ಸ್ಥಿತಿಯಲ್ಲಿ ಸುಧಾರಣೆಗೊಳ್ಳಲಿದೆ. ನಿಮ್ಮ ಸ್ಥಾನವು ಗಟ್ಟಿಗೊಳ್ಳಲಿದೆ. ವ್ಯವಹಾರದಲ್ಲಿ ತೊಡಗಿಸಿಕೊಂಡವರು ತಮ್ಮ ಕೆಲಸದಲ್ಲಿ ಯಶಸ್ಸನ್ನು ಪಡೆಯಲಿದ್ದಾರೆ ಹಾಗೂ ಈ ಹಿಂದೆ ಮಾಡಿದ ತಪ್ಪುಗಳನ್ನು ಅರಿತುಕೊಳ್ಳಲು ಅವರಿಗೆ ಅವಕಾಶ ದೊರೆಯಲಿದೆ. ಇದು ಭವಿಷ್ಯದಲ್ಲಿ ಅವರ ಪರಿಸ್ಥಿತಿಯನ್ನು ಸುಧಾರಿಸಲಿದೆ. ವಿದ್ಯಾರ್ಥಿಗಳ ವಿಚಾರದಲ್ಲಿ ಹೇಳುವುದಾದರೆ ನಿಮಗೆ ಈ ವಾರವು ಒಳ್ಳೆಯದು. ಆದರೆ ನೀವು ಶ್ರದ್ಧೆಯಿಂದ ಕಲಿತರೆ ಮಾತ್ರವೇ ನಿಮಗೆ ಒಳ್ಳೆಯ ಫಲಿತಾಂಶ ದೊರೆಯುತ್ತದೆ. ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ, ನಿಮ್ಮ ಆರೋಗ್ಯದಲ್ಲಿ ಏರುಪೇರು ಉಂಟಾಗುವ ಸಾಧ್ಯತೆ ಇದೆ. ಹೀಗಾಗಿ ನಿಮ್ಮ ಕುರಿತು ಕಾಳಜಿ ವಹಿಸಿ.
ಸಿಂಹ:ವಾರದ ಆರಂಭಿಕ ದಿನಗಳು ನಿಮಗೆ ಅನುಕೂಲಕರ. ವೈವಾಹಿಕ ಬದುಕಿನಲ್ಲಿ ಸ್ವಲ್ಪ ಒತ್ತಡ ಕಾಣಿಸಿಕೊಳ್ಳಲಿದೆ. ನಿಮ್ಮ ಜೀವನ ಸಂಗಾತಿಯು ನಿಮಗೆ ಒಂದಷ್ಟು ಸಲಹೆಯನ್ನು ನೀಡಬೇಕಾದರೆ ನೀವು ಸಂಪೂರ್ಣ ಅವಕಾಶವನ್ನು ನೀಡಬೇಕು. ಏಕೆಂದರೆ ಅವರ ಸಲಹೆಯು ನಿಮಗೆ ತುಂಬಾ ಉಪಯುಕ್ತ ಎನಿಸಲಿದೆ. ನೀವು ಹೊಸ ಕೆಲಸವನ್ನು ಸಂಪೂರ್ಣ ಉತ್ಸಾಹದಿಂದ ಪ್ರಾರಂಭಿಸಲಿದ್ದೀರಿ. ಅವುಗಳನ್ನು ಮುಂದಕ್ಕೆ ಕೊಂಡೊಯ್ಯುವುದರಲ್ಲಿ ನೀವು ಯಶಸ್ಸನ್ನು ಪಡೆಯಲಿದ್ದೀರಿ. ಇದರಿಂದಾಗಿ ನಿಮ್ಮ ಆತ್ಮವಿಶ್ವಾಸದಲ್ಲಿ ವೃದ್ಧಿ ಉಂಟಾಗಲಿದೆ. ಉದ್ಯೋಗದಲ್ಲಿರುವವರು ತಮ್ಮ ಕೆಲಸದ ಕಾರಣ ಸಾಕಷ್ಟು ಪ್ರಯಾಣ ಮಾಡಬೇಕಾದೀತು. ನೀವು ವಿದೇಶಕ್ಕೆ ಹೋಗುವ ಸಾಧ್ಯತೆ ಇದೆ. ಸದ್ಯಕ್ಕೆ ಏನಾದರೂ ಹೊಸತನ್ನು ನೀವು ಯೋಚಿಸಬೇಕು. ವಿದ್ಯಾರ್ಥಿಗಳ ಕುರಿತು ಮಾತನಾಡುವುದಾದರೆ, ಅವರು ತಮ್ಮ ಅಧ್ಯಯನದಲ್ಲಿ ಸಮಸ್ಯೆ ಎದುರಿಸಬಹುದು. ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ, ನಿಮ್ಮ ಆರೋಗ್ಯ ಚೆನ್ನಾಗಿರಲಿದೆ.
ಕನ್ಯಾ:ಈ ವಾರವು ನಿಮಗೆ ಮಿಶ್ರ ಫಲ ನೀಡಲಿದೆ. ವಿವಾಹಿತ ವ್ಯಕ್ತಿಗಳು ತಮ್ಮ ಕೌಟುಂಬಿಕ ಜೀವನದಲ್ಲಿ ತಮ್ಮ ಜೀವನ ಸಂಗಾತಿಯ ವರ್ತನೆಯನ್ನು ನೋಡಲಿದ್ದಾರೆ ಹಾಗೂ ತಮ್ಮ ಮನಸ್ಸಿನ ಭಾವನೆಯನ್ನು ಹಂಚಲಿದ್ದಾರೆ. ಇದು ಸಂಬಂಧಕ್ಕೆ ಮೆರುಗು ನೀಡಲಿದೆ. ಅವರೊಂದಿಗೆ ಯಾವುದಾದರೂ ಒಂದು ಒಳ್ಳೆಯ ಸ್ಥಳಕ್ಕೆ ಹೋಗಲು ಯೋಜನೆ ರೂಪಿಸಲಿದ್ದಾರೆ. ನಿಮ್ಮ ಪ್ರೇಮ ಜೀವನಕ್ಕೆ ಇದು ಸಕಾಲ. ನಿಮ್ಮ ಸಂಬಂಧದಲ್ಲಿ ಇನ್ನಷ್ಟು ಅನ್ಯೋನ್ಯತೆಯನ್ನು ತರಲು ನೀವು ಸಾಕಷ್ಟು ಪ್ರಯತ್ನವನ್ನು ಮಾಡಲಿದ್ದೀರಿ. ಅಲ್ಲದೆ ಯಾವುದಾದರೂ ಒಳ್ಳೆಯ ರೆಸ್ಟೋರಂಟ್ ಗೆ ನಿಮ್ಮ ಪ್ರೇಮಿಯನ್ನು ಕರೆದು ಕೊಂಡು ಹೋಗಿ ನಿಮ್ಮ ಪ್ರೇಮವನ್ನು ನಿವೇದಿಸಿಕೊಳ್ಳಲಿದ್ದೀರಿ. ನಿಮ್ಮ ಇಚ್ಛೆಯು ಈಡೇರುವ ಕಾರಣ ನಿಮ್ಮ ಸಂತಸ ಇಮ್ಮಡಿಗೊಳ್ಳಲಿದೆ ಹಾಗೂ ಎಲ್ಲಾ ಕೆಲಸವನ್ನು ಸಂಪೂರ್ಣ ಆತ್ಮವಿಶ್ವಾಸದಿಂದ ಮಾಡಲಿದ್ದೀರಿ. ಯಾರೊಂದಿಗೂ ತಪ್ಪು ಮಾತುಗಳನ್ನು ಆಡಬೇಡಿ. ಏಕೆಂದರೆ ಇದು ನಿಮ್ಮ ವೈಯಕ್ತಿಕ ಮತ್ತು ವೃತ್ತಿಪರ ಬದುಕಿನ ಮೇಲೆ ಪರಿಣಾಮ ಬೀರಲಿದೆ. ಇದನ್ನು ನಿಮಗೆ ಹಾನಿಯನ್ನುಂಟು ಮಾಡಬಹುದು. ಉದ್ಯೋಗದಲ್ಲಿರುವವರಿಗೆ ಇದು ಉತ್ತಮ ಕಾಲ. ಆದಾಯದ ಹೆಚ್ಚಳವು ಸಂಪೂರ್ಣವಾಗಿ ಗೋಚರಿಸಲಿದೆ. ವ್ಯವಹಾರದಲ್ಲಿಯೂ ಏರುಪೇರಿನೊಂದಿ ಪರಿಸ್ಥಿತಿಯು ಮುಂದೆ ಸಾಗಲಿದೆ. ಅಲ್ಲದೆ ನೀವು ಹೊಸ ಅವಕಾಶಗಳಿಗಾಗಿ ಎದುರು ನೋಡಲಿದ್ದೀರಿ. ವಿದ್ಯಾರ್ಥಿಗಳು ಅಧ್ಯಯನದಲ್ಲಿ ಆಸಕ್ತಿ ತೋರಲಿದ್ದಾರೆ.