ಕರ್ನಾಟಕ

karnataka

ETV Bharat / bharat

ವಾರದ ಭವಿಷ್ಯ : ನಿಮ್ಮ ಸಂಗಾತಿ ಜೊತೆ ಅನ್ಯೋನ್ಯತೆ ಇರಲಿದೆ, ವೀಕೆಂಡ್​ನಲ್ಲಿ ಎಚ್ಚರ ಅಗತ್ಯ - ವಾರದ ಶುಭ ದಿನಗಳು

ಈ ವಾರದ ರಾಶಿ ಭವಿಷ್ಯ ತಿಳಿದುಕೊಳ್ಳಿ..

etv bharat weekly horoscope
ವಾರದ ಭವಿಷ್ಯ : ನಿಮ್ಮ ಸಂಗಾತಿ ಜೊತೆ ಅನ್ಯೋನ್ಯತೆ, ವೀಕೆಂಡ್​ನಲ್ಲಿ ಎಚ್ಚರ ಅಗತ್ಯ

By

Published : Apr 30, 2023, 3:01 AM IST

ಮೇಷ :ಈ ವಾರದಲ್ಲಿ ನಿಮ್ಮ ಆತ್ಮವಿಶ್ವಾಸದಲ್ಲಿ ವೃದ್ಧಿ ಉಂಟಾಗಲಿದೆ. ವಿವಾಹಿತ ವ್ಯಕ್ತಿಗಳು ತಮ್ಮ ಜೀವನ ಸಂಗಾತಿಯ ಜೊತೆಗೆ ಎಲ್ಲಾದರೂ ಹೋಗಬಹುದು ಹಾಗೂ ಮನೆಯ ಕೆಲಸದಲ್ಲಿ ಕೈ ಜೋಡಿಸಬಹುದು. ಪ್ರೇಮಕ್ಕೆ ಸಂಬಂಧಿಸಿದ ವಿಚಾರಗಳಲ್ಲಿ ನಿಮ್ಮ ಸೃಜನಶೀಲತೆಯು ಉಪಯುಕ್ತ ಎನಿಸಲಿದೆ. ಇದಕ್ಕೆ ಕೋಪಗೊಂಡಿರುವ ನಿಮ್ಮ ಪ್ರೇಮಿಯು ಒಪ್ಪಿಕೊಳ್ಳಬಹುದು ಹಾಗೂ ನೀವಿಬ್ಬರು ಒಟ್ಟಾಗಿ ಎಲ್ಲಾದರೂ ಹೋಗಬಹುದು. ನಿಮ್ಮ ವರ್ಚಸ್ಸನ್ನು ವೃದ್ಧಿಸಲು ನೀವು ಕಠಿಣ ಪ್ರಯತ್ನ ಮಾಡಲಿದ್ದೀರಿ. ಯಾವುದಾದರೂ ಹೊಸ ಸ್ಥಳದಲ್ಲಿ ಕೆಲಸದ ಸಂದರ್ಶನಕ್ಕೆ ನೀವು ಹಾಜರಾಗಬಹುದು. ಇದರಲ್ಲಿ ನೀವು ಯಶಸ್ಸನ್ನು ಗಳಿಸಲಿದ್ದೀರಿ. ಹೊಸ ಕೆಲಸ ಪಡೆಯುವಲ್ಲಿ ಯಶಸ್ಸು ಸಾಧಿಸಲಿದ್ದೀರಿ. ವ್ಯವಹಾರದಲ್ಲಿ ತೊಡಗಿಸಿಕೊಂಡಿರುವ ಜನರು ತುಂಬಾ ಸಂತಸ ಪಡಲಿದ್ದಾರೆ. ನಿಮ್ಮ ವ್ಯವಹಾರದ ಪ್ರಗತಿಯನ್ನು ನೋಡಿ ನಿಮಗೆ ಸಂತಸ ಉಂಟಾಗಲಿದೆ. ಈ ನಿಟ್ಟಿನಲ್ಲಿ ನೀವು ಇನ್ನಷ್ಟು ಪ್ರಯತ್ನವನ್ನು ಮಾಡಲಿದ್ದೀರಿ. ವಿದ್ಯಾರ್ಥಿಗಳ ಕುರಿತು ಮಾತನಾಡುವುದಾದರೆ, ಅವರು ಅಧ್ಯಯನದಲ್ಲಿ ಒಂದಷ್ಟು ಸಮಸ್ಯೆ ಎದುರಿಸಬಹುದು. ಏಕಾಗ್ರತೆಯಲ್ಲಿ ನಿಮಗೆ ಸಮಸ್ಯೆ ಎದುರಾಗಬಹುದು. ಇದಕ್ಕಾಗಿ ನಿಮಗೆ ಧ್ಯಾನದ ಅಗತ್ಯವಿದೆ. ಆರೋಗ್ಯದ ಕುರಿತು ಹೇಳುವುದಾದರೆ, ಯಾವುದೇ ಗಂಭೀರ ಆರೋಗ್ಯ ಸಮಸ್ಯೆ ನಿಮ್ಮನ್ನು ಸದ್ಯಕ್ಕೆ ಕಾಡದು.

ವೃಷಭ :ಈ ವಾರವನ್ನು ನೀವು ಆನಂದಿಸಲಿದ್ದೀರಿ. ವಿವಾಹಿತ ವ್ಯಕ್ತಿಗಳ ಪಾಲಿಗೆ ಸಮಯವು ಚೆನ್ನಾಗಿದೆ. ವೈವಾಹಿಕ ಬದುಕಿನಲ್ಲಿ ನೀವು ಸಂತಸ ಅನುಭವಿಸಲಿದ್ದೀರಿ. ಪರಸ್ಪರರ ನಡುವೆ ಸಾಕಷ್ಟು ಅನ್ಯೋನ್ಯತೆ ಇರಲಿದೆ. ಪ್ರೇಮ ಸಂಬಂಧದಲ್ಲಿರುವವರು ಕೆಲವೊಂದು ಸಮಸ್ಯೆಗಳನ್ನು ಎದುರಿಸಲಿದ್ದಾರೆ. ಪರಸ್ಪರ ಸಾಮರಸ್ಯ ಸಾಧಿಸುವಲ್ಲಿಯೂ ಸಮಸ್ಯೆ ಉಂಟಾಗಲಿದೆ. ಮನೆಯ ಖರ್ಚುವೆಚ್ಚಗಳು ಮತ್ತು ಗೃಹಕೃತ್ಯಗಳಿಗೆ ಹೆಚ್ಚಿನ ಗಮನ ನೀಡಲಿದ್ದೀರಿ. ರಿಯಲ್‌ ಎಸ್ಟೇಟ್‌ ಗೆ ಸಂಬಂಧಿಸಿದ ವಿಚಾರಗಳು ನಿಮ್ಮ ಗಮನವನ್ನು ಸೆಳೆಯಲಿವೆ. ಈ ಕುರಿತು ಸಾಕಷ್ಟು ಖರ್ಚುವೆಚ್ಚ ಉಂಟಾಗಲಿದೆ. ಈ ವಾರದಲ್ಲಿ ನೀವು ಖರ್ಚುವೆಚ್ಚದ ಜಾಲದಲ್ಲಿ ಸಿಲುಕಿಕೊಳ್ಳಲಿದ್ದೀರಿ. ನಿಮ್ಮ ಆದಾಯದಲ್ಲಿ ಕುಸಿತ ಉಂಟಾಗಲಿದೆ ಹಾಗೂ ಖರ್ಚುವೆಚ್ಚಗಳಲ್ಲಿ ಹೆಚ್ಚಳ ಉಂಟಾಗಲಿದೆ. ಈ ಖರ್ಚುವೆಚ್ಚಗಳು ನಿಮ್ಮ ಕೈ ಮೀರಿ ಹೋಗಲಿವೆ. ಇದು ನಿಮ್ಮ ಸಮಸ್ಯೆಗೆ ಕಾರಣವಾಗಲಿದ್ದು ಎಚ್ಚರಿಕೆಯಿಂದ ಹೆಜ್ಜೆ ಹಾಕಿ. ಈ ಸಂದರ್ಭದಲ್ಲಿ ಯಾವುದೇ ಹೊಸ ಸಾಲವನ್ನು ತೆಗೆದುಕೊಳ್ಳಬೇಡಿ. ಇಲ್ಲದಿದ್ದರೆ ಸಮಸ್ಯೆ ಉಂಟಾದೀತು. ಕೆಲಸದಲ್ಲಿ ನಿಮ್ಮ ಸ್ಥಾನವು ಚೆನ್ನಾಗಿರಲಿದೆ. ಯಾರೊಂದಿಗೂ ವಾಗ್ವಾದಕ್ಕೆ ಇಳಿಯಬೇಡಿ. ವ್ಯವಹಾರದಲ್ಲಿ ಯಶಸ್ಸು ದೊರೆಯಲಿದೆ.

ಮಿಥುನ :ಈ ವಾರ ನಿಮಗೆ ಉತ್ತಮ ಫಲ ದೊರೆಯಲಿದೆ. ವಿವಾಹಿತ ಜನರು ತಮ್ಮ ವೈವಾಹಿಕ ಜೀವನದಲ್ಲಿ ಸಂತಸ ಅನುಭವಿಸಲಿದ್ದಾರೆ. ಮಕ್ಕಳನ್ನು ಪಡೆಯುವ ಆಸೆಯು ಚಿಗುರಲಿದೆ. ಪ್ರೇಮ ಸಂಬಂಧದಲ್ಲಿ ಸಾಕಷ್ಟು ಏರುಪೇರು ಕಾಣಿಸಿಕೊಂಡರೂ ಸಂಬಂಧವು ಸಾಮರಸ್ಯದಿಂದ ಮುಂದೆ ಸಾಗಲಿದೆ. ವಾರದ ಆರಂಭದಲ್ಲಿ ನಿಮ್ಮ ಗೆಳೆಯರೊಂದಿಗೆ ನೀವು ವಾಕ್‌ ಗೆ ಹೋಗಬಹುದು. ನಿಮ್ಮ ನೆರೆಹೊರೆಯವರೊಂದಿಗೆ ಸಂಬಂಧವು ಚೆನ್ನಾಗಿರಲಿದೆ. ನಿಮ್ಮ ಕುಟುಂಬದ ಎಳೆಯ ಒಡಹುಟ್ಟಿದವರಿಂದ ನಿಮಗೆ ಒಳ್ಳೆಯ ಬೆಂಬಲ ದೊರೆಯಲಿದೆ. ನಿಮ್ಮ ಆದಾಯದಲ್ಲಿ ಹೆಚ್ಚಳ ಉಂಟಾಗಲಿದ್ದು ಇದು ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ಬಲಪಡಿಸಲಿದೆ. ನಿಮ್ಮ ಉದ್ಯೋಗದಲ್ಲಿ ಕೆಲ ಜನರ ಕುರಿತು ನೀವು ಸಾಕಷ್ಟು ಎಚ್ಚರಿಕೆ ವಹಿಸಬೇಕು. ಅವರು ನಿಮ್ಮ ಹಿರಿಯ ಆಡಳಿತ ಮಂಡಳಿಗೆ ಸೇರಿರಬಹುದು. ಯಾರೊಂದಿಗೂ ಕೋಪದಿಂದ ಮಾತನಾಡಬೇಡಿ. ಅಲ್ಲದೆ ವಿಷಯವನ್ನು ಚೆನ್ನಾಗಿ ಅರಿತುಕೊಂಡ ನಂತರವೇ ಮುಂದೆ ಸಾಗಿರಿ. ವ್ಯವಹಾರದಲ್ಲಿ ತೊಡಗಿಸಿಕೊಂಡಿರುವ ವ್ಯಕ್ತಿಗಳಿಗೆ ಈ ವಾರವು ತುಂಬಾ ಪ್ರಮುಖವಾದುದು. ನಿಮ್ಮ ಕೆಲಸದಲ್ಲಿ ನೀವು ವೇಗವಾಗಿ ಮುಂದೆ ಸಾಗಲಿದ್ದೀರಿ. ವಿದ್ಯಾರ್ಥಿಗಳ ಕುರಿತು ಮಾತನಾಡುವುದಾದರೆ, ಅವರು ತಮ್ಮ ಅಧ್ಯಯನದಲ್ಲಿ ಸಕ್ರಿಯರಾಗಲಿದ್ದಾರೆ.

ಕರ್ಕಾಟಕ :ಈ ವಾರ ನಿಮಗೆ ಉತ್ತಮ ಫಲ ದೊರೆಯಲಿದೆ. ವಿವಾಹಿತ ವ್ಯಕ್ತಿಗಳು ತಮ್ಮ ವೈವಾಹಿಕ ಬದುಕಿನಲ್ಲಿ ಕೆಲವೊಂದು ಹೊಸ ಅನುಭವವನ್ನು ಹೊಂದಿರಲಿದ್ದಾರೆ. ಆದರೆ ನಿಮ್ಮ ಜೀವನ ಸಂಗಾತಿಯ ವರ್ತನೆಯ ಕಾರಣ ನೀವು ಕೆಲವೊಂದು ಸಮಸ್ಯೆಗಳನ್ನು ಎದುರಿಸಬಹುದು. ಏಕೆಂದರೆ ನಿಮ್ಮ ಜೀವನ ಸಂಗಾತಿಯು ಸಣ್ಣಪುಟ್ಟ ವಿಚಾರಗಳಿಗಾಗಿ ನಿಮ್ಮ ಮೇಲೆ ಕೋಪಗೊಳ್ಳಬಹುದು. ಪ್ರೇಮ ಜೀವನದ ಕುರಿತು ಮಾತನಾಡುವುದಾದರೆ, ನೀವು ಉತ್ತಮ ಸ್ಥಿತಿಯಲ್ಲಿ ಇರಲಿದ್ದೀರಿ. ನಿಮ್ಮ ಸಂಬಂಧವು ಸದೃಢವಾಗಿರಲಿದೆ. ಪರಸ್ಪರ ನಂಬಿಕೆಯು ಹೆಚ್ಚಲಿದೆ. ನಿಮ್ಮ ಪ್ರೇಮ ಸಂಬಂಧದಲ್ಲಿ ನೀವು ಸಾಕಷ್ಟು ಮಟ್ಟಿಗೆ ತೃಪ್ತಿಯನ್ನು ಪಡೆಯಲಿದ್ದೀರಿ. ಇದು ನಿಮಗೆ ಏನಾದರೂ ಹೊಸ ವಿಚಾರಕ್ಕೆ ಕೈ ಹಾಕಲು ಅವಕಾಶ ನೀಡಲಿದೆ ಹಾಗೂ ನಿಮ್ಮ ಗಮನವು ಇದರತ್ತ ಕೇಂದ್ರೀಕೃತಗೊಳ್ಳಲಿದೆ. ನಿಮ್ಮ ಶಕ್ತಿಯು ವೃದ್ಧಿಸಲಿದೆ. ಕೆಲವೊಂದು ಹೊಸ ಕೆಲಸಗಳಲ್ಲಿ ನಿಮ್ಮ ಅದೃಷ್ಟ ಪರೀಕ್ಷೆಯನ್ನು ನೀವು ಮಾಡಲಿದ್ದೀರಿ. ಇದು ನಿಮಗೆ ಸಂತಸವನ್ನು ನೀಡಲಿದೆ. ಅಲ್ಲದೆ ಏನಾದರೂ ಹೊಸತನ್ನು ಸಾಧಿಸಲು ನಿಮಗೆ ಇದು ಅವಕಾಶ ನೀಡಲಿದೆ. ಉದ್ಯೋಗದಲ್ಲಿರುವವರು ತಮ್ಮ ಕೆಲಸದಲ್ಲಿ ದೃಢತೆ ತೋರಲಿದ್ದಾರೆ. ಆದರೆ ಕೆಲ ವ್ಯಕ್ತಿಗಳು ನಿಮ್ಮ ದಾರಿಗೆ ಅಡ್ಡ ಬರಬಹುದು.

ಸಿಂಹ :ಈ ವಾರ ನಿಮಗೆ ಉತ್ತಮ ಫಲ ದೊರೆಯಲಿದೆ. ವಿವಾಹಿತ ಜನರು ತಮ್ಮ ವೈವಾಹಿಕ ಜೀವನದಲ್ಲಿ ಪ್ರೀತಿಯನ್ನು ಅನುಭವಿಸಲಿದ್ದಾರೆ. ದೀರ್ಘ ಸಮಯದ ನಂತರ ನಿಮ್ಮ ಜೀವನ ಸಂಗಾತಿಯ ಜೊತೆ ಸಮಯವನ್ನು ಚೆನ್ನಾಗಿ ಕಳೆಯಲಿದ್ದೀರಿ. ಪ್ರೇಮ ಸಂಬಂಧದಲ್ಲಿರುವವರು ತಮ್ಮ ಸಂಬಂಧದಲ್ಲಿ ಬಲ ಪಡೆಯಲಿದ್ದಾರೆ. ನಿಮ್ಮ ಸಂಬಂಧದ ಮೇಲೆ ದೇವರ ಆಶೀರ್ವಾದ ಇರಲಿದೆ. ಇದರಿಂದಾಗಿ ನಿಮ್ಮ ಸಂಬಂಧವು ಬಲವಾಗಿ ಮುಂದೆ ಸಾಗಲಿದೆ. ನಿಮ್ಮ ಪ್ರೇಮಿಗೆ ನಿಮ್ಮ ಮದುವಿನ ಪ್ರಸ್ತಾಪವನ್ನು ನೀವು ಇರಿಸಬಹುದು. ನಿಮಗೆ ಏನು ಬೇಕೋ ಅದನ್ನು ಮಾಡಲು ನೀವು ಯತ್ನಿಸಬಹುದು. ಈ ಕೆಲಸದಲ್ಲಿ ನೀವು ಪ್ರಯೋಜನ ಹಾಗೂ ಲಾಭವನ್ನು ಪಡೆಯಲಿದ್ದೀರಿ. ಗೆಳೆಯರೊಂದಿಗೆ ಸಂಭ್ರಮಿಸಲಿದ್ದೀರಿ. ಯಾವುದಾದರೂ ಧಾರ್ಮಿಕ ಸ್ಥಳಕ್ಕೆ ನೀವು ಭೇಟಿ ನೀಡಬಹುದು. ನಿಮ್ಮ ಆದಾಯದಲ್ಲಿ ವಿಶೇಷ ಹೆಚ್ಚಳ ಉಂಟಾಗಲಿದ್ದು ಇದು ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ಬಲಪಡಿಸಲಿದೆ. ಉದ್ಯೋದಲ್ಲಿರುವವರಾಗಲಿ ಅಥವಾ ವ್ಯವಹಾರದಲ್ಲಿ ತೊಡಗಿಸಿಕೊಂಡಿರುವವರಾಗಲಿ, ಅವರು ಪರಿಪಕ್ವತೆಯನ್ನು ತೋರಲಿದ್ದಾರೆ. ತಮ್ಮ ಪರಿಪಕ್ವತೆಯ ಕಾರಣ ಅವರು ಹೊಸ ಸಂಪರ್ಕವನ್ನು ಸಾಧಿಸಲಿದ್ದು ವ್ಯವಹಾರವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲಿದ್ದಾರೆ.

ಕನ್ಯಾ : ಈ ವಾರ ನಿಮಗೆ ಮಿಶ್ರ ಫಲ ದೊರೆಯಲಿದೆ. ವಿವಾಹಿತ ಜನರು ತಮ್ಮ ವೈವಾಹಿಕ ಜೀವನದಲ್ಲಿ ಪ್ರೀತಿಯನ್ನು ಅನುಭವಿಸಲಿದ್ದಾರೆ. ಅತ್ತೆ ಮಾವಂದಿರ ಜೊತೆಗಿನ ಸಂಬಂಧವು ಚೆನ್ನಾಗಿರಲಿದೆ. ಆದರೆ ಸಣ್ಣಪುಟ್ಟ ವಾಗ್ವಾದಗಳು ಉಂಟಾಗಬಹುದು. ಜೀವನ ಸಂಗಾತಿಯ ಆರೋಗ್ಯವು ಚೆನ್ನಾಗಿರಲಿದೆ. ಯಾವುದೇ ರೀತಿಯ ಸಮಸ್ಯೆಯನ್ನು ದೂರ ಮಾಡಲು ನೀವು ಯತ್ನಿಸಬಹುದು. ಈ ವಾರವು ಪ್ರೇಮ ಸಂಬಂಧದಲ್ಲಿ ಉತ್ತಮ ಫಲ ನೀಡಲಿದೆ. ನಿಮ್ಮ ಪ್ರೇಮಿಯು ನಿಮ್ಮ ಜೊತೆಗೆ ಮಾತನಾಡುವುದಕ್ಕೆ ಹಿಂಜರಿಯುವುದಿಲ್ಲ. ನಿಮ್ಮ ಆತ್ಮವಿಶ್ವಾಸದ ಕೊರತೆ ಕಾಣಿಸಿಕೊಳ್ಳಬಹುದು. ಇದರಿಂದಾಗಿ ಅನೇಕ ಸ್ಥಳದಲ್ಲಿ ನಿಮ್ಮ ಕೆಲಸವು ಬಾಕಿ ಉಳಿಯಬಹುದು. ಉದ್ಯೋಗದಲ್ಲಿರುವವರಿಗೆ ಇದು ಉತ್ತಮ ಕಾಲ. ಬೃಹತ್‌ ಸವಾಲಿಗೆ ಮೈಯೊಡ್ಡಿ ನೀವು ಮುಂದಕ್ಕೆ ಸಾಗಲಿದ್ದೀರಿ. ವ್ಯವಹಾರದಲ್ಲಿ ತೊಡಗಿಸಿಕೊಂಡವರು ತಮ್ಮ ಕೆಲಸವನ್ನು ಮುಂದುವರಿಸಲು ಪಾಲುದಾರರ ಅಗತ್ಯವಿದೆ. ವಿದ್ಯಾರ್ಥಿಗಳ ಕುರಿತು ಹೇಳುವುದಾದರೆ, ಅವರು ಈಗ ಅಧ್ಯಯನದ ಕುರಿತು ಹೆಚ್ಚಿನ ಗಮನ ನೀಡಬೇಕು. ಸದ್ಯಕ್ಕೆ ಅವರು ಅಧ್ಯಯನಗಳಲ್ಲಿ ಕೆಲವೊಂದು ಸಮಸ್ಯೆಗಳನ್ನು ಎದುರಿಸಲಿದ್ದಾರೆ.

ತುಲಾ :ಈ ವಾರ ನಿಮಗೆ ಉತ್ತಮ ಫಲ ದೊರೆಯಲಿದೆ. ಆದರೂ ನೀವು ಕೌಟುಂಬಿಕ ಬದುಕಿನಿಂದ ಒಂದಷ್ಟು ಅಂತರವನ್ನು ಕಾಯ್ದುಕೊಳ್ಳಲಿದ್ದೀರಿ. ನಿಮ್ಮ ವೈವಾಹಿಕ ಬದುಕಿನಲ್ಲಿ ಸ್ವಲ್ಪ ಒತ್ತಡ ಕಂಡು ಬರಬಹುದು. ಇದನ್ನು ದೂರ ಮಾಡುವುದು ಅಗತ್ಯ. ಇಲ್ಲದಿದ್ದರೆ ವಿವಾದ ಉಂಟಾಗಬಹುದು. ಪ್ರೇಮದ ಸಂಬಂಧದಲ್ಲಿರುವವರಿಗೆ ಈ ಈ ವಾರವು ತುಂಬಾ ಅನುಕೂಲಕರ. ನಿಮ್ಮ ಪರಿಸ್ಥಿತಿಯ ಕುರಿತು ನಿಮ್ಮ ಪ್ರೇಮಿಗೆ ನೀವು ತಿಳಿಸಲಿದ್ದೀರಿ. ನಿಮ್ಮ ಮನಸ್ಸಿನಲ್ಲಿ ಧಾರ್ಮಿಕ ಯೋಚನೆಗಳು ಬರಲಿವೆ. ನೀವು ಯಾವುದಾದರೂ ದೇವಸ್ಥಾನ ಅಥವಾ ಧಾರ್ಮಿಕ ಸ್ಥಳಕ್ಕೆ ಭೇಟಿ ನೀಡಲಿದ್ದು ದೀರ್ಘ ಕಾಲ ಧ್ಯಾನದಲ್ಲಿ ಸಮಯ ಕಳೆಯಲಿದ್ದೀರಿ. ಉದ್ಯೋಗದಲ್ಲಿರುವವರು ಕೆಲಸದ ಸ್ಥಳದಲ್ಲಿ ತಮ್ಮ ಬಾಸೆ ಜೊತೆ ಕಾಲ ಕಳೆಯಲಿದ್ದಾರೆ. ವ್ಯವಹಾರದಲ್ಲಿ ತೊಡಗಿಸಿಕೊಂಡವರು ತಮ್ಮ ವ್ಯವಹಾರವನ್ನು ವೃದ್ಧಿಸುವ ಕುರಿತು ಯೋಚಿಸಲಿದ್ದಾರೆ. ವಿದ್ಯಾರ್ಥಿಗಳ ಕುರಿತು ಮಾತನಾಡುವುದಾದರೆ, ಅವರು ತಮ್ಮ ಅಧ್ಯಯನದಲ್ಲಿ ಸಕ್ರಿಯರಾಗಲಿದ್ದಾರೆ. ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ, ನಿಮ್ಮ ಒತ್ತಡದಿಂದ ದೂರವುಳಿಯಬೇಕು.

ವೃಶ್ಚಿಕ :ಈ ವಾರವು ಸಾಕಷ್ಟು ಮಟ್ಟಿಗೆ ನಿಮ್ಮ ಪಾಲಿಗೆ ಒಳ್ಳೆಯದು. ಪ್ರೇಮದ ಸಂಬಂಧದಲ್ಲಿರುವವರಿಗೆ ಈ ವಾರವು ಒಳ್ಳೆಯದು. ನಿಮ್ಮ ಪ್ರೇಮ ಸಂಬಂಧವನ್ನು ಇನ್ನಷ್ಟು ಸುಂದರಗೊಳಿಸಲು ನಿಮ್ಮ ಕೆಲವು ಗೆಳೆಯರು ಸಹಾಯ ಮಾಡಲಿದ್ದಾರೆ. ವಿವಾಹಿತ ಜನರು ತಮ್ಮ ಕೌಟುಂಬಿಕ ಜೀವನವನ್ನು ಆನಂದಿಸಲಿದ್ದಾರೆ. ಜೀವನ ಸಂಗಾತಿಯ ನೆರವು ದೊರೆಯಲಿದೆ. ನಿಮ್ಮ ಸಂಬಂಧದಲ್ಲಿ ಪ್ರಣಯವು ನೆಲೆಸಲಿದೆ. ನೀವು ನಿಮ್ಮ ಕೆಲಸದಲ್ಲಿ ಯಶಸ್ಸನ್ನು ಪಡೆಯಲಿದ್ದೀರಿ. ಅದೃಷ್ಟದ ಬಲದ ಕಾರಣ ನಿಮ್ಮ ಮನಸ್ಸಿನಲ್ಲಿ ಸಂತಸದ ಭಾವನೆ ಇರಲಿದೆ. ಕೆಲಸಕ್ಕೆ ಸಂಬಂಧಿಸಿದಂತೆ ಮಾಡಿದ ಪ್ರಯತ್ನಗಳಿಗೆ ಯಶಸ್ಸು ದೊರೆಯಲಿದೆ. ನಿಮ್ಮ ಸ್ಥಾನವು ಗಟ್ಟಿಗೊಳ್ಳಲಿದೆ. ವ್ಯವಹಾರಕ್ಕೆ ವೇಗ ದೊರೆಯಲಿದೆ. ಇದು ನಿಮ್ಮ ಸಂತಸಕ್ಕೆ ಕಾರಣವಾಗಲಿದೆ. ವಿದ್ಯಾರ್ಥಿಗಳ ವಿಚಾರದಲ್ಲಿ ಹೇಳುವುದಾದರೆ ಈ ವಾರದಲ್ಲಿ ಅವರು ಸಾಕಷ್ಟು ಏರುಪೇರನ್ನು ಎದುರಿಸಬಹುದು. ಈ ಕುರಿತು ಎಚ್ಚರಿಕೆ ವಹಿಸಿ. ನಿಮ್ಮ ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ, ನಿಮ್ಮ ಆರೋಗ್ಯದ ಕುರಿತು ನೀವು ಕಾಳಜಿ ವಹಿಸುವುದು ಅಗತ್ಯ. ಸದ್ಯಕ್ಕೆ ನೀವು ಕಾಯಿಲೆಗೆ ತುತ್ತಾಗುವ ಸಾಧ್ಯತೆ ಇದೆ.

ಧನು :ಈ ವಾರವು ನಿಮಗೆ ಪ್ರಯೋಜನಕಾರಿ ಎನಿಸಲಿದೆ. ಪ್ರೇಮದ ಸಂಬಂಧದಲ್ಲಿರುವವರಿಗೆ ಈ ವಾರವು ದುರ್ಬಲ ಎನಿಸಲಿದೆ. ಪರಸ್ಪರರ ನಡುವೆ ಸಾಕಷ್ಟು ತಪ್ಪು ಗ್ರಹಿಕೆ ಉಂಟಾಗಬಹುದು. ವಿವಾಹಿತ ವ್ಯಕ್ತಿಗಳು ತಮ್ಮ ಜೀವನ ಸಂಗಾತಿಯ ಜೊತೆಗೆ ಸಾಕಷ್ಟು ಸಾಮರಸ್ಯವನ್ನು ಸಾಧಿಸಲಿದ್ದಾರೆ. ಈಗ ಅವರ ಇಚ್ಛೆಯು ಈಡೇರಲಿದೆ. ಅದೃಷ್ಟದ ಬಲದ ಕಾರಣ ಬಾಕಿ ಉಳಿದಿರುವ ನಿಮ್ಮ ಕೆಲಸವು ಪೂರ್ಣಗೊಳ್ಳಲಿದೆ. ನೀವು ಯಾವುದೇ ಕೆಲಸವನ್ನು ಕೈಗೊಂಡರೂ ನಿಮಗೆ ಯಶಸ್ಸು ದೊರೆಯಲಿದೆ. ಆರ್ಥಿಕ ಲಾಭ ದೊರೆಯುವ ಎಲ್ಲಾ ಸಾಧ್ಯತೆಗಳಿವೆ. ಬೇರೆ ಬೇರೆ ಮೂಲಗಳಿಂದ ನಿಮಗೆ ಹಣ ದೊರೆಯಲಿದೆ. ಯಾರಾದರೂ ವ್ಯಕ್ತಿಗೆ ನೀಡಿದ ಹಣವು ಮರಳಿ ಬರಲಿದ. ಹಳೆಯ ಸಾಲವನ್ನು ಪಾವತಿಸಲು ನೀವು ಹೊಸ ಸಾಲವನ್ನು ಪಡೆಯಬಹುದು. ಕೆಲಸದಲ್ಲಿ ನಿಮ್ಮ ಸ್ಥಾನವು ಚೆನ್ನಾಗಿರಲಿದೆ. ವ್ಯವಹಾರ ನಡೆಸುತ್ತಿರುವವರು ಒಂದಷ್ಟು ಏರುಪೇರನ್ನು ಎದುರಿಸಬೇಕಾದೀತು. ವಿದ್ಯಾರ್ಥಿಗಳ ಕುರಿತು ಹೇಳುವುದಾದರೆ, ಅವರು ಈಗ ಅಧ್ಯಯನದ ಕುರಿತು ಹೆಚ್ಚಿನ ಗಮನ ನೀಡಬೇಕು. ಧ್ಯಾನವು ಏಕಾಗ್ರತೆಯ ಕೊರತೆಯನ್ನು ನಿವಾರಿಸುವಲ್ಲಿ ಸಹಾಯ ಮಾಡಲಿದೆ.

ಮಕರ :ಈ ವಾರ ನಿಮಗೆ ಸಾಮಾನ್ಯ ಫಲ ದೊರೆಯಲಿದೆ. ವಿವಾಹಿತ ವ್ಯಕ್ತಿಗಳು ತಮ್ಮ ಕೌಟುಂಬಿಕ ಬದುಕಿನಲ್ಲಿ ಸಂತಸ ಅನುಭವಿಸಲಿದ್ದಾರೆ. ಆದರೆ ಜೀವನ ಸಂಗಾತಿಯ ಆರೋಗ್ಯದಲ್ಲಿ ಕುಸಿತ ಉಂಟಾಗಬಹುದು. ಪ್ರೇಮದ ಸಂಬಂಧದಲ್ಲಿ ಸಾಕಷ್ಟು ಧನಾತ್ಮಕತೆ ನೆಲೆಸಲಿದೆ. ಹಠಾತ್‌ ಆಗಿ ನೀವು ಒಂದಷ್ಟು ಹಣವನ್ನು ಪಡೆಯಬಹುದು. ಸದ್ಯಕ್ಕೆ ನೀವು ಏಲ್ಲಾದರೂ ಬಾಕಿ ಉಳಿದಿರುವ ಹಣವನ್ನು ಪಡೆಯಬಹುದು. ನೀವು ಯಾರಿಗಾದರೂ ಹಣವನ್ನು ನೀಡಿದ್ದಲ್ಲಿ, ಹಠಾತ್‌ ಆಗಿ ಅವರು ನಿಮಗೆ ಹಣವನ್ನು ಮರಳಿಸಬಹುದು. ಇದು ನಿಮ್ಮ ಪಾಲಿಗೆ ಸಂತಸ ತರಲಿದೆ. ನೀವು ಆ ಹಣವನ್ನು ಯಾವುದಾದರೂ ಹೊಸ ಕೆಲಸದಲ್ಲಿ ಹೂಡಿಕೆ ಮಾಡಬಹುದು. ಕೆಲಸದ ಸ್ಥಳದಲ್ಲಿ ಸನ್ನಿವೇಶವು ವಿಷಮತೆಯನ್ನು ತಲುಪಬಹುದು. ಹೀಗಾಗಿ ಎಚ್ಚರಿಕೆಯಿಂದ ಇರಿ. ವ್ಯವಹಾರ ನಡೆಸಲು ಈ ಸಮಯ ಅನುಕೂಲಕರ. ನೀವು ಮತ್ತು ನಿಮ್ಮ ವ್ಯವಹಾರ ಪಾಲುದಾರರು ಒಟ್ಟಿಗೆ ಕೆಲಸ ಮಾಡಿದೆ, ನಿಮ್ಮ ಯೋಚನಾ ಶಕ್ತಿಯ ಕಾರಣ ಹೊಸ ಡೀಲು ಕುದುರುವ ಸಾಧ್ಯತೆ ಇದೆ. ವಿದ್ಯಾರ್ಥಿಗಳ ಕುರಿತು ಮಾತನಾಡುವುದಾದರೆ, ಅವರು ತಮ್ಮ ಅಧ್ಯಯನದಲ್ಲಿ ಸಕ್ರಿಯರಾಗಲಿದ್ದಾರೆ. ಸ್ಪರ್ಧೆಯಲ್ಲಿ ಯಶಸ್ಸು ಪಡೆದರೆ ಅವರು ಸಂತಸ ಪಡಲಿದ್ದಾರೆ.

ಕುಂಭ :ಈ ವಾರ ನಿಮಗೆ ಸಂತಸವನ್ನು ತರಲಿದೆ. ಗೆಳೆಯರೊಂದಿಗೆ ಮೋಜನ್ನು ಅನುಭವಿಸಲು ನಿಮಗೆ ಅವಕಾಶ ದೊರೆಯಲಿದೆ. ಎಲ್ಲಾದರೂ ಒಂದು ಕಡೆಗೆ ನೀವು ವಾಕ್‌ ಗೆ ಹೋಗಬಹುದು. ನಿಮ್ಮ ಜೀವನ ಸಂಗಾತಿಯ ಜೊತೆಗೆ ಸಂಬಂಧದಲ್ಲಿ ಸುಧಾರಣೆ ಉಂಟಾಗಲಿದೆ. ನಿಮ್ಮ ಕೌಟುಂಬಿಕ ಬದುಕಿಗೆ ಮೆರುಗು ದೊರೆಯಲಿದೆ. ನಿಮ್ಮ ಪ್ರೇಮ ಜೀವನದಲ್ಲಿ ನಿಮ್ಮ ಗೆಳೆಯರು ಹಸ್ತಕ್ಷೇಪ ಮಾಡಬಹುದು. ಇದರಿಂದ ದೂರವಿರಲು ಯತ್ನಿಸಿ. ಏಕೆಂದರೆ ಇದು ಸಂಬಂಧದಲ್ಲಿ ಸಮಸ್ಯೆಗಳನ್ನು ಹೆಚ್ಚಿಸಬಹುದು. ಉದ್ಯೋಗದಲ್ಲಿರುವವರಿಗೆ ಇದು ಸಕಾಲ. ನೀವು ಹೊಸ ಉದ್ಯೋಗವಕಾಶವನ್ನು ಪಡೆಯಬಹುದು. ಪ್ರಯಾಣದಲ್ಲಿ ನಿಮ್ಮ ವ್ಯವಹಾರದಲ್ಲಿ ಲಾಭದಾಯಕ ಎನಿಸಲಿದೆ. ಯಾವುದಾದರೂ ಹೊಸ ಯೋಜನೆಗಳಲ್ಲಿ ಕೆಲಸವು ಪೂರ್ಣಗೊಳ್ಳಲಿದೆ. ಇದರಿಂದಾಗಿ ವ್ಯವಹಾರಕ್ಕೆ ವೇಗ ದೊರೆಯಲಿದ್ದು ನಿಮಗೆ ಲಾಭ ಸಿಗಲಿದೆ. ವಿದ್ಯಾರ್ಥಿಗಳ ಕುರಿತು ಮಾತನಾಡುವುದಾದರೆ, ಅವರು ಅಧ್ಯಯನವನ್ನು ಇಷ್ಟಪಡಲಿದ್ದಾರೆ. ಅಧ್ಯಯನಕ್ಕೆ ಶಾಂತ ವಾತಾವರಣದ ಅಗತ್ಯವಿದೆ. ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ, ಇದು ನಿಮ್ಮ ಪಾಲಿಗೆ ಒಳ್ಳೆಯ ಕಾಲ. ಯಾವುದೇ ದೊಡ್ಡ ಸಮಸ್ಯೆ ಎದುರಾಗದು.

ಮೀನ :ಈ ವಾರ ಒಟ್ಟಾರೆ ನಿಮಗೆ ಒಳ್ಳೆಯ ಫಲ ಲಭಿಸಲಿದೆ. ವೈವಾಹಿಕ ಬದುಕು ಸಂತಸದಿಂದ ಕೂಡಿರಲಿದೆ. ಪ್ರೇಮದ ಸಂಬಂಧದಲ್ಲಿ ಸಂತಸ ಕಾಣಿಸಿಕೊಳ್ಳಲಿದೆ. ಕೌಟುಂಬಿಕ ವ್ಯವಹಾರದಲ್ಲಿ ಯಶಸ್ಸು ದೊರೆಯಲಿದೆ. ಕುಟುಂಬದ ಗೌರವದಲ್ಲಿ ವೃದ್ಧಿ ಉಂಟಾಗಲಿದೆ. ಕುಟುಂಬದ ಯಾರಾದರೂ ವ್ಯಕ್ತಿಗೆ ದೊಡ್ಡ ಬಹುಮಾನ ದೊರೆಯಲಿದೆ. ಗೆಳೆಯರಿಂದ ಲಾಭವನ್ನು ಪಡೆಯಲಿದ್ದೀರಿ. ವಾರದ ಆರಂಭದಲ್ಲಿ ನಿಮ್ಮ ಆದಾಯದಲ್ಲಿ ವೃದ್ಧಿ ಉಂಟಾಗಲಿದೆ. ಇದರಿಂದಾಗಿ ನೀವು ನಿಟ್ಟುಸಿರು ಬಿಡಲಿದ್ದೀರಿ. ಆದರೆ ವಾರದ ನಡುವೆ ಕೆಲವೊಂದು ಖರ್ಚುವೆಚ್ಚಗಳಲ್ಲಿ ಹೆಚ್ಚಳ ಉಂಟಾಗಬಹುದು. ಇದು ನಿಮ್ಮ ಚಿಂತೆಯನ್ನು ಹೆಚ್ಚಿಸಬಹುದು. ವಾರದ ಕೊನೆಗೆ ಪರಿಸ್ಥಿತಿಯಲ್ಲಿ ಸುಧಾರಣೆ ಕಂಡು ಬರಲಿದ್ದು ನೀವು ಸಮಸ್ಯೆಯಿಂದ ಹೊರ ಬರಲಿದ್ದೀರಿ. ನಿಮ್ಮ ನಿರರ್ಗಳತೆಯು ನಿಮ್ಮನ್ನು ಮುಂಚೂಣಿಯಲ್ಲಿ ಇರಿಸಲಿದೆ ಹಾಗೂ ನಿಮ್ಮ ಚತುರ ಉತ್ತರವು ನಿಮಗೆ ಅನೇಕ ಕೆಲಸವನ್ನು ತಂದು ಕೊಡಲಿದೆ. ಆದರೆ ಕೆಲವೊಮ್ಮೆ ಆಡಬಾರದ ಮಾತುಗಳನ್ನುನೀವು ಆಡಬಹುದು. ಇದರ ಪರಿಣಾಮವನ್ನು ನೀವು ಎದುರಿಸಬೇಕಾದೀತು. ವಿದ್ಯಾರ್ಥಿಗಳ ಕುರಿತು ಮಾತನಾಡುವುದಾದರೆ, ಅವರು ತಮ್ಮ ಅಧ್ಯಯನದಲ್ಲಿ ಏಕಾಗ್ರತೆ ತೋರಬೇಕು.

ABOUT THE AUTHOR

...view details