ಕರ್ನಾಟಕ

karnataka

ETV Bharat / bharat

ವಾರ ಭವಿಷ್ಯ: ಈ ರಾಶಿಯವರು ವಿಪರೀತ ವೆಚ್ಚ ನಿಯಂತ್ರಿಸಿ, ಪ್ರವಾಸಗಳಿಂದ ದೂರವಿರಿ - best days of this week

ಈ ವಾರದ ರಾಶಿ ಭವಿಷ್ಯ ಹೀಗಿದೆ..

Etv Bharat
Etv Bharat

By

Published : Apr 2, 2023, 7:13 AM IST

ಮೇಷ:ಮೇಷ ರಾಶಿಯವರಿಗೆ ಈ ವಾರದಲ್ಲಿ ಭರವಸೆಯ ಹೊಸ ಕಿರಣ ಮೂಡಲಿದೆ. ಎಲ್ಲಾದರೂ ಬಾಕಿ ಉಳಿದಿದ್ದ ಹಣ ನಿಮ್ಮ ಕೈ ಸೇರಲಿದೆ. ಇದು ನಿಮಗೆ ಸಾಕಷ್ಟು ನಿರಾಳತೆಯನ್ನು ನೀಡಲಿದೆ. ನಿಮ್ಮ ವ್ಯವಹಾರವು ಚೆನ್ನಾಗಿರಲಿದೆ ಹಾಗೂ ಬೇರೆ ಬೇರೆ ಪ್ರದೇಶಗಳಿಂದ ನೀವು ವ್ಯವಹಾರದ ಹೊಸ ಒಪ್ಪಂದಗಳನ್ನು ಪಡೆಯಲಿದ್ದೀರಿ. ಆದರೆ, ಹೂಡಿಕೆ ಕುರಿತು ಎಚ್ಚರಿಕೆಯಿಂದ ಹೆಜ್ಜೆ ಹಾಕಿ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಮೊದಲು ಸಾವಿರ ಬಾರಿ ಯೋಚಿಸಿ. ನಿಮ್ಮ ಕೆಲಸದಲ್ಲಿ ನೀವು ಕಠಿಣ ಶ್ರಮವನ್ನು ಮುಂದುವರಿಸಲಿದ್ದೀರಿ ಹಾಗೂ ನಿಮ್ಮ ಕೆಲಸದ ಬಗ್ಗೆ ಧನಾತ್ಮಕ ಮನೋಭಾವವನ್ನು ಮೂಡಿಸಿಕೊಳ್ಳಲಿದ್ದೀರಿ. ನೀವು ಯಾರನ್ನಾದರೂ ಪ್ರೀತಿಸುತ್ತಿದ್ದರೆ ಅವರನ್ನು ಮದುವೆಗೆ ಮನವೊಲಿಸುವಲ್ಲಿ ಯಶಸ್ವಿಯಾಗಲಿದ್ದೀರಿ. ವಿವಾಹಿತ ಜೋಡಿಗಳಲ್ಲಿ ಸಂಗಾತಿಯು ಮುಂಗೋಪ ತೋರಿಸುವುದರಿಂದ ಇವರು ಒಂದಷ್ಟು ಸವಾಲುಗಳನ್ನು ಎದುರಿಸಬಹುದು. ವಾರದ ಮಧ್ಯ ಭಾಗವು ಪ್ರವಾಸಕ್ಕೆ ಹೋಗಲು ಅನುಕೂಲಕರ.

ವೃಷಭ:ಈ ವಾರ ನಿಮಗೆ ಸಾಮಾನ್ಯ ಫಲ ದೊರೆಯಲಿದೆ. ನಿಮ್ಮ ಜೀವನ ಸಂಗಾತಿಯ ಆರೋಗ್ಯದ ಕುರಿತು ನಿಮಗೆ ಚಿಂತೆ ಉಂಟಾಗಬಹುದು. ಪರಿಣಾಮವಾಗಿ ನಿಮ್ಮ ಕೆಲಸದಲ್ಲಿ ವಿಳಂಬ ಉಂಟಾಗಬಹುದು. ನಿಮ್ಮ ಉದ್ಯೋಗಕ್ಕೆ ಸಂಪೂರ್ಣ ಗಮನ ನೀಡಿರಿ ಮತ್ತು ನಿಮ್ಮ ಕೆಲಸದಲ್ಲಿ ನಿರಂತರತೆಯನ್ನು ಕಾಪಾಡಿ. ವ್ಯಾಪಾರೋದ್ಯಮಿಗಳೂ ಒಂದಷ್ಟು ಗಳಿಕೆಯನ್ನು ಮಾಡಲಿದ್ದಾರೆ. ಪ್ರೇಮಿಗಳಿಗೆ ಇದು ಸಕಾಲ. ನಿಮ್ಮ ಪ್ರೇಮ ಸಂಗಾತಿಗೆ ಮದುವೆಯ ಪ್ರಸ್ತಾಪ ಮಾಡಲು ಇದು ಸಕಾಲ. ಅಲ್ಲದೆ ನಿಮ್ಮ ವ್ಯಾಪಾರ ಸಂಗಾತಿಯ ಜೊತೆ ನೀವು ಒಳ್ಳೆಯ ಸಂಬಂಧವನ್ನು ಕಾಪಾಡಬೇಕು. ಇಲ್ಲದಿದ್ದರೆ ನೀವು ಸಮಸ್ಯೆ ಎದುರಿಸಬಹುದು. ನಿಮ್ಮ ಆರೋಗ್ಯದಲ್ಲಿ ಕುಸಿತ ಕಂಡುಬರಬಹುದು. ವಾರದ ಮಧ್ಯ ಭಾಗವು ಪ್ರಯಾಣಕ್ಕೆ ಅನುಕೂಲಕರ.

ಮಿಥುನ:ಈ ವಾರ ನಿಮಗೆ ಮಿಶ್ರಫಲ ದೊರೆಯಲಿದೆ. ವಾರದ ಆರಂಭಿಕ ದಿನಗಳು ನಿಮ್ಮ ಪಾಲಿಗೆ ಅತ್ಯುತ್ತಮವೆನಿಸಲಿವೆ. ಪ್ರಯಾಣಕ್ಕೆ ಹೋಗುವ ಮೂಲಕ ನೀವು ಉತ್ತಮ ಗಳಿಕೆ ಮಾಡಲಿದ್ದೀರಿ. ನೀವು ಕೆಲವು ಒಳ್ಳೆಯ ವ್ಯಕ್ತಿಗಳನ್ನು ಭೇಟಿಯಾಗಲಿದ್ದೀರಿ. ನೀವು ಧಾರ್ಮಿಕ ಚಟುವಟಿಕೆಗಳಲ್ಲಿ ಆಸಕ್ತಿ ತೋರಿಸಲಿದ್ದೀರಿ. ನೀವು ಬೇರೆಯವರ ಹಿತಕ್ಕಾಗಿ ಸಾಕಷ್ಟು ಸಮಯವನ್ನು ಕಳೆಯಲಿದ್ದೀರಿ. ವಿವಾಹಿತ ವ್ಯಕ್ತಿಗಳು ಸಹ ಬದುಕನ್ನು ಚೆನ್ನಾಗಿ ಆನಂದಿಸಲಿದ್ದಾರೆ. ನೀವು ಒಳ್ಳೆಯ ವ್ಯಕ್ತಿ ಎಂದು ನಿಮ್ಮ ಸಂಗಾತಿಯು ಅರ್ಥ ಮಾಡಿಕೊಳ್ಳಲಿದ್ದಾರೆ. ಇನ್ನಷ್ಟು ತೀವ್ರತೆಯಿಂದ ಅವರು ನಿಮ್ಮನ್ನು ಪ್ರೀತಿಸಲಿದ್ದಾರೆ. ವ್ಯಾಪಾರೋದ್ಯಮಿಗಳು ಕೆಲವೊಂದು ಹೊಸ ಸವಾಲುಗಳನ್ನು ಎದುರಿಸಲಿದ್ದಾರೆ. ಸರ್ಕಾರಿ ನೀತಿಗಳ ಕಾರಣ ನಿಮ್ಮ ಕೆಲಸದಲ್ಲಿ ನೀವು ಒಂದಷ್ಟು ಮಾರ್ಪಾಡುಗಳನ್ನು ಮಾಡಬೇಕಾದೀತು. ಉದ್ಯೋಗದಲ್ಲಿರುವವರು ಚಿಂತಿಸುವ ಅಗತ್ಯವಿಲ್ಲ. ಏಕೆಂದರೆ ಅವರ ಕೆಲಸಕ್ಕೆ ಪ್ರಶಂಸೆ ದೊರೆಯಲಿದೆ. ಹಳೆಯ ಸಾಲ ಮರುಪಾವತಿ ಮಾಡಲು ನಿಮಗೆ ಸಾಧ್ಯವಾಗಲಿದೆ. ವಿದ್ಯಾರ್ಥಿಗಳಿಗೆ ಇದು ಸಕಾಲವಲ್ಲ.

ಕರ್ಕಾಟಕ:ವಾರದ ಪ್ರಾರಂಭದಲ್ಲಿ, ನಿಮ್ಮ ಕೆಲಸಕ್ಕೆ ನೀವು ಹೆಚ್ಚಿನ ಪ್ರಾಮುಖ್ಯತೆ ನೀಡಲಿದ್ದೀರಿ. ವಿಶೇಷವಾಗಿ ಉದ್ಯೋಗಿಗಳು ತಮ್ಮ ಎದುರಾಳಿಗಳನ್ನು ಹಿಂದಿಕ್ಕಿ ಮುಂದುವರಿಯಲಿದ್ದಾರೆ. ವಾರದ ಪ್ರಾರಂಭ ಮತ್ತು ಮಧ್ಯ ಭಾಗದಲ್ಲಿ ನೀವು ಧನಾತ್ಮಕ ಮನೋಸ್ಥಿತಿಯನ್ನು ಹೊಂದಲಿದ್ದು ಹೊಸ ಗುರಿಯನ್ನು ನಿಗದಿಪಡಿಸಲಿದ್ದೀರಿ. ಆದರೆ, ವಾರದ ಮಧ್ಯ ಭಾಗದಲ್ಲಿ ಅವಸರದಿಂದ ನಿರ್ಧಾರ ತೆಗೆದುಕೊಳ್ಳಬೇಡಿ. ಏಕೆಂದರೆ ಅವಸರದ ನಿರ್ಧಾರದಿಂದ ನಿಮಗೆ ಹಾನಿಯುಂಟಾದೀತು. ವಾರದ ಕೊನೆಯ ಎರಡು ದಿನಗಳಲ್ಲಿ ನೀವು ಏಕತಾನತೆ ಮತ್ತು ಅಸಹಾಯಕತೆಗೆ ಒಳಗಾಗಲಿದ್ದೀರಿ. ವಾರದ ಕೊನೆಗೆ ನೀವು ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ಎದುರಿಸಲಿದ್ದೀರಿ. ಬೆನ್ನು, ಎದೆ, ಮೂಗು ಮತ್ತು ಗಂಟಲು ಮುಂತಾದ ದೇಹದ ಕೆಲವು ಭಾಗಗಳಿಗೆ ಹೆಚ್ಚಿನ ಗಮನ ಬೇಕಾದೀತು. ನಿಮ್ಮ ಬಂಧವು ಇನ್ನಷ್ಟು ಗಟ್ಟಿಯಾಗಲಿದೆ.

ಸಿಂಹ:ಈ ವಾರ ನಿಮಗೆ ಸಾಧಾರಣ ಫಲ ದೊರೆಯಲಿದೆ. ವಾರದ ಪ್ರಾರಂಭದಲ್ಲಿ, ನಿಮ್ಮ ಕೆಲಸಕ್ಕೆ ಹೆಚ್ಚಿನ ಗಮನ ನೀಡಲಿದ್ದೀರಿ. ನಿಮ್ಮ ಕೆಲಸದಲ್ಲಿ ನೀವು ಕಠಿಣ ಶ್ರಮ ಪಡಲಿದ್ದೀರಿ. ವಾರದ ಮಧ್ಯ ಭಾಗದಲ್ಲಿ ನಿಮ್ಮ ಬಾಸ್‌ನಿಂದ ನೀವು ಮೆಚ್ಚುಗೆ ಪಡೆಯಲಿದ್ದೀರಿ. ಆದರೆ, ವಾರದ ಕೊನೆಯ ದಿನಗಳು ಅಷ್ಟೊಂದು ಹಿತಕರವಾಗಿಲ್ಲ. ನಿಮ್ಮ ಖರ್ಚಿನಲ್ಲಿ ಹೆಚ್ಚಳ ಉಂಟಾಗಲಿದೆ. ವಿವಾಹಿತ ಜೋಡಿಗಳು ಏನಾದರೂ ಹೊಸ ವಿಷಯಗಳನ್ನು ಕಲಿಯಲಿದ್ದಾರೆ. ಪ್ರೇಮಿಗಳಿಗೆ ಇದು ಸಕಾಲ. ನಿಮ್ಮ ಹೃದಯದ ಭಾವನೆಗಳ ಬಗ್ಗೆ ನೀವು ನಿಮ್ಮ ಪ್ರೇಮ ಸಂಗಾತಿಯ ಜೊತೆ ಮಾತನಾಡಲಿದ್ದೀರಿ ಹಾಗೂ ಅವರಿಗೆ ಇನ್ನಷ್ಟು ಆಪ್ತತೆಯನ್ನು ಸಾಧಿಸಲಿದ್ದೀರಿ. ಕುಟುಂಬದ ವಾತಾವರಣವು ಚೆನ್ನಾಗಿರಲಿದೆ. ಕುಟುಂಬದ ಕೆಲವು ಸಮಸ್ಯೆಗಳು ಕೊನೆಗೊಳ್ಳಲಿವೆ. ಪ್ರವಾಸಕ್ಕೆ ಹೋಗಲು ಇದು ಸೂಕ್ತ ಕಾಲವಲ್ಲ.

ಕನ್ಯಾ:ಈ ವಾರವು ನಿಮ್ಮಲ್ಲಿ ವಿಶೇಷ ಪ್ರಮಾಣದ ಶಕ್ತಿ ಮತ್ತು ಆತ್ಮವಿಶ್ವಾಸವನ್ನು ತುಂಬಲಿದೆ. ಹೀಗಾಗಿ ನೀವು ಅತ್ಯಂತ ಸವಾಲಿನ ಕೆಲಸವನ್ನೂ ಸುಲಭದಲ್ಲಿ ಮುಗಿಸಲಿದ್ದೀರಿ. ನೀವು ನಿಮ್ಮ ಕೆಲಸದಲ್ಲಿ ಉತ್ತಮ ಫಲಿತಾಂಶ ಪಡೆಯಲಿದ್ದೀರಿ. ನೀವು ವ್ಯಾಪಾರೋದ್ಯಮಿ ಆಗಿದ್ದಲ್ಲಿ ನಿಮ್ಮ ಪಾಲಿಗೆ ಇದು ಯಶಸ್ವಿ ಸಮಯ. ನಿಮ್ಮ ಕೌಟುಂಬಿಕ ಜೀವನದಲ್ಲಿ ಸಾಕಷ್ಟು ಪ್ರೀತಿ ಮತ್ತು ವಾತ್ಸಲ್ಯ ಕಾಣಿಸಿಕೊಳ್ಳಲಿದೆ. ನಿಮ್ಮ ಗಳಿಕೆಯಲ್ಲಿ ಹೆಚ್ಚಳ ಉಂಟಾಗಲಿದೆ. ಆದರೆ, ನಿಮ್ಮ ಖರ್ಚುವೆಚ್ಚಗಳಲ್ಲಿಯೂ ಹೆಚ್ಚಳ ಉಂಟಾಗಲಿದೆ. ಇದು ನಿಮ್ಮ ಚಿಂತೆಗೆ ಕಾರಣವಾಗಬಹುದು. ನೀವು ಧಾರ್ಮಿಕ ಚಟುವಟಿಕೆಗಳಲ್ಲಿ ಆಸಕ್ತಿ ತೋರಿಸಲಿದ್ದೀರಿ. ವಿವಾಹಿತ ವ್ಯಕ್ತಿಗಳು ಸಹ ಬದುಕನ್ನು ಚೆನ್ನಾಗಿ ಆನಂದಿಸಲಿದ್ದಾರೆ. ಪ್ರೇಮಿಗಳು ತಮ್ಮ ಸಂಗಾತಿಗೆ ಮದುಯಾಗುವಂತೆ ಮನವೊಲಿಸಲಿದ್ದಾರೆ. ವಾರದ ಆರಂಭಿಕ ಮತ್ತು ಕೊನೆಯ ಕೆಲವು ದಿನಗಳು ಪ್ರಯಾಣಿಸಲು ಉತ್ತಮ.

ತುಲಾ:ಒಟ್ಟಾರೆ ಈ ವಾರ ನಿಮಗೆ ಉತ್ತಮ ಫಲ ದೊರೆಯಲಿದೆ. ಆದರೂ ವಾರದ ಅರಂಭವು ಅಷ್ಟೊಂದು ಚೆನ್ನಾಗಿರದು. ನೀವು ಹಣ ಗಳಿಸಲಿದ್ದು ನಿಮ್ಮ ಹಣಕಾಸಿನ ಸ್ಥಿತಿಯು ಸುದೃಢವಾಗಿರಲಿದೆ. ನಿಮ್ಮ ಕೆಲಸದಲ್ಲಿ ನೀವು ಪೂರ್ಣ ಮನಸ್ಸಿನಿಂದ ತೊಡಗಿಸಿಕೊಳ್ಳಲಿದ್ದೀರಿ ಹಾಗೂ ಒಳ್ಳೆಯ ಉದ್ಯೋಗಿಗಳ ಪೈಕಿ ನಿಮ್ಮನ್ನೂ ಗುರುತಿಸಲಾಗುವುದು. ವಾರದ ಮಧ್ಯ ಭಾಗದಲ್ಲಿ ನಿಮ್ಮ ವ್ಯವಹಾರವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಯತ್ನಿಸಲಿದ್ದೀರಿ. ನೀವು ಕಚೇರಿಯಲ್ಲಿ ಯಾರಾದರೂ ಒಬ್ಬ ವ್ಯಕ್ತಿಯೊಂದಿಗೆ ಆಳವಾದ ಚರ್ಚೆಯಲ್ಲಿ ತೊಡಗಿಸಿಕೊಳ್ಳಲಿದ್ದೀರಿ. ನಿಮ್ಮ ಆರೋಗ್ಯವು ಚೆನ್ನಾಗಿರಲಿದೆ ಹಾಗೂ ಇದರಿಂದಾಗಿ ನೀವು ಆರಾಮದಾಯಕತೆ ಅನುಭವಿಸಬಹುದು. ವಿವಾಹಿತ ಜೋಡಿಗಳ ಬದುಕಿನಲ್ಲಿ ಒತ್ತಡವು ಕಡಿಮೆಯಾಗಲಿದೆ. ಪ್ರೇಮಿಗಳಿಗೆ ಇದು ಸಕಾಲ. ವಾರದ ಮಧ್ಯದಲ್ಲಿ ನೀವು ದೀರ್ಘ ಪ್ರವಾಸಕ್ಕೆ ಹೋಗುವ ಸಾಧ್ಯತೆ ಇದೆ.

ವೃಶ್ಚಿಕ: ಈ ವಾರ ನಿಮಗೆ ಸಾಮಾನ್ಯ ಫಲ ದೊರೆಯಲಿದೆ. ವಾರದ ಆರಂಭದಲ್ಲಿ ನಿಮ್ಮ ವ್ಯವಹಾರದಲ್ಲಿ ನೀವು ಉತ್ತಮ ಪ್ರಗತಿ ಸಾಧಿಸಲಿದ್ದೀರಿ ಹಾಗೂ ದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳಲಿದ್ದೀರಿ. ಈ ವಾರವು ಉದ್ಯೋಗಿಗಳ ಪಾಲಿಕೆ ಉತ್ತಮ ಫಲ ನೀಡಲಿದೆ. ನೀವು ನಿಮ್ಮ ಕೆಲಸದಲ್ಲಿ ಆತ್ಮವಿಶ್ವಾಸ ತೋರಿಸಲಿದ್ದು ಇದರಿಂದ ತೃಪ್ತಿ ಮತ್ತು ಸಂತಸ ಪಡೆಯಲಿದ್ದೀರಿ. ಆರೋಗ್ಯದಲ್ಲಿ ಒಂದಷ್ಟು ಕುಸಿತ ಉಂಟಾಗಬಹುದು. ಹೀಗಾಗಿ ಈ ಕುರಿತು ಕಾಳಜಿ ವಹಿಸಿ. ನಿಮ್ಮ ವೈವಾಹಿಕ ಜೀವನದಲ್ಲಿ ಏರಿಳಿಕೆ ಉಂಟಾಗಬಹುದು. ಇದರಿಂದಾಗಿ ಒಂದಷ್ಟು ಒತ್ತಡ ಕಾಣಿಸಿಕೊಳ್ಳಬಹುದು. ಹೀಗಾಗಿ ನಿಮ್ಮ ಸಂಗಾತಿಯನ್ನು ಪ್ರೀತಿಯಿಂದ ಕಾಣಿರಿ. ಪ್ರೇಮಿಗಳಿಗೆ ಇದು ಸಕಾಲ. ನಿಮ್ಮ ಸಂಗಾತಿಯು ನಿಮ್ಮನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳುವಂತಾಗಲು ಅವರ ಜೊತೆಗೆ ನಿಮ್ಮ ಭಾವನೆಯನ್ನು ಮುಕ್ತವಾಗಿ ಹಂಚಿಕೊಳ್ಳಲಿದ್ದೀರಿ. ವಾರದ ಕೊನೆಯ ಎರಡು ದಿನಗಳು ಪ್ರವಾಸಕ್ಕೆ ಹೋಗಲು ಅನುಕೂಲಕರ.

ಧನು:ಈ ವಾರ ನಿಮಗೆ ಮಿಶ್ರಫಲ ದೊರೆಯಲಿದೆ. ನಿಮ್ಮ ವಿಪರೀತ ವೆಚ್ಚಗಳನ್ನು ನಿಯಂತ್ರಿಸಲು ನೀವು ಯತ್ನಿಸಬೇಕು ಹಾಗೂ ಪ್ರವಾಸಕ್ಕೆ ಹೋಗಬೇಡಿ. ಏಕೆಂದರೆ ಇದು ನಿಮ್ಮ ಖರ್ಚುವೆಚ್ಚಗಳು ಮತ್ತು ಮಾನಸಿಕ ಒತ್ತಡವನ್ನು ಹೆಚ್ಚಿಸಲಿದೆ. ಆರೋಗ್ಯದಲ್ಲಿ ಒಂದಷ್ಟು ಸುಧಾರಣೆ ಉಂಟಾಗಲಿದೆ. ನಿಮ್ಮ ದಿನಚರಿಯನ್ನು ಹೆಚ್ಚು ವ್ಯವಸ್ಥಿತವನ್ನಾಗಿಸಲು ನೀವು ಯತ್ನಿಸಲಿದ್ದೀರಿ. ನೀವು ನಿಮ್ಮ ಕೆಲಸದಲ್ಲಿ ಉತ್ತಮ ಫಲಿತಾಂಶ ಪಡೆಯಲಿದ್ದೀರಿ. ನಿಮ್ಮ ಗಳಿಕೆಯು ಚೆನ್ನಾಗಿರಲಿದೆ. ವ್ಯಾಪಾರೋದ್ಯಮಿಗಳಿಗೆ ಇದು ಸ್ವಲ್ಪ ಸವಾಲಿನ ಸಮಯವಾಗಿದೆ. ಮನೆಯ ಬದುಕು ಉತ್ತಮವಾಗಿರಲಿದೆ. ಪ್ರೇಮಿಗಳಿಗೆ ಇದು ಸಕಾಲ. ವಾರದ ಮಧ್ಯ ಭಾಗವು ಪ್ರಯಾಣಕ್ಕೆ ಉತ್ತಮ. ಹೀಗಾಗಿ ಈ ನಿಟ್ಟಿನಲ್ಲಿ ನೀವು ಯೋಜನೆ ರೂಪಿಸಬಹುದು.

ಮಕರ:ಇದು ನಿಮ್ಮ ಪಾಲಿಗೆ ಅದ್ಭುತ ವಾರ ಎನಿಸಲಿದೆ. ನೀವು ವಿದ್ಯಾರ್ಥಿಯಾಗಿದ್ದಲ್ಲಿ ನಿಮ್ಮ ಅಧ್ಯಯನದಲ್ಲಿ ನೀವು ಕಠಿಣ ಶ್ರಮ ತೋರಲಿದ್ದು ಉತ್ತಮ ಪ್ರಗತಿ ಸಾಧಿಸಲಿದ್ದೀರಿ. ಇದರಿಂದಾಗಿ ನಿಮ್ಮ ಸಹಪಾಠಿಗಳಿಗಿಂತಲೂ ಒಂದು ಹೆಜ್ಜೆ ಮುಂದೆ ಸಾಗಲು ನಿಮಗೆ ಅವಕಾಶ ಲಭಿಸಲಿದೆ. ನಿಮಗೆ ಸಾಕಷ್ಟು ಆಂತರಿಕ ತೃಪ್ತಿ ದೊರೆಯಲಿದೆ. ಉದ್ಯೋಗದಲ್ಲಿರುವವರು ಉತ್ತಮ ಸಮಯವನ್ನು ಆನಂದಿಸಲಿದ್ದಾರೆ. ನೀವು ನಿಮ್ಮ ಕೆಲಸದಲ್ಲಿ ಉತ್ತಮ ಫಲಿತಾಂಶ ಪಡೆಯಲಿದ್ದೀರಿ. ವ್ಯಾಪಾರೋದ್ಯಮಿಗಳು ಸಹ ಒಳ್ಳೆಯ ಪ್ರಗತಿ ಸಾಧಿಸಲಿದ್ದಾರೆ. ಖನಿಜ, ಅನಿಲ, ಕಾರ್ಮಿಕ, ಸೇವಾ ಕ್ಷೇತ್ರಗಳಲ್ಲಿ ತೊಡಗಿರುವವರು ವಿಶೇಷ ಲಾಭ ಗಳಿಸಲಿದ್ದಾರೆ. ಪ್ರೇಮಿಗಳು ಯಾರಾದರೂ ವ್ಯಕ್ತಿಗಳ ಅತೃಪ್ತಿಗೆ ಗುರಿಯಾಗಬೇಕಾದೀತು. ಆದರೆ ನಿಮ್ಮ ಸಂಬಂಧವು ಇನ್ನಷ್ಟು ಗಟ್ಟಿಯಾಗಬೇಕಾದರೆ ನೀವು ದೃಢವಾಗಿ ನಿಲ್ಲಬೇಕು. ವಿವಾಹಿತ ವ್ಯಕ್ತಿಗಳು ಸಹ ಬದುಕನ್ನು ಚೆನ್ನಾಗಿ ಆನಂದಿಸಲಿದ್ದಾರೆ. ನೀವು ಪ್ರವಾಸಕ್ಕೆ ಹೋಗಲು ಇಚ್ಛಿಸುವುದಾದರೆ, ವಾರದ ಕೊನೆಯ ದಿನ ಉತ್ತಮ.

ಕುಂಭ:ನೀವು ಯಾವಾಗಲೂ ಕೆಲಸದಲ್ಲಿ ತೊಡಗಿಸಿಕೊಂಡಿರುವುದರಿಂದ ಹಾಗೂ ನಿಮ್ಮ ಜವಾಬ್ದಾರಿಗಳನ್ನು ಪೂರೈಸಲು ವಿಫಲರಾಗುವುದರಿಂದ ನಿಮ್ಮ ಕುಟುಂಬದ ಸದಸ್ಯರ ಜೊತೆ ನೀವು ಸಮಯ ಕಳೆಯಬೇಕಾದೀತು. ಈ ವಾರ, ನಿಮ್ಮ ಜವಾಬ್ದಾರಿಯನ್ನು ನಿಭಾಯಿಸಲು ನಿಮಗೆ ಅವಕಾಶ ಸಿಗಬಹುದು. ಇದೇ ವೇಳೆ ನಿಮ್ಮ ಆದಾಯವು ಚೆನ್ನಾಗಿರಲಿದೆ ಹಾಗೂ ಖರ್ಚುವೆಚ್ಚಗಳು ನಿಯಂತ್ರಣದಲ್ಲಿರಲಿವೆ. ನಿಮ್ಮ ಜ್ಞಾನದಲ್ಲಿ ವೃದ್ಧಿ ಉಂಟಾಗಲಿದೆ. ಜನರು ನಿಮ್ಮನ್ನು ಹೊಗಳಲಿದ್ದಾರೆ. ನೀವು ಧಾರ್ಮಿಕ ಚಟುವಟಿಕೆಗಳಲ್ಲಿ ಹೆಚ್ಚಿನ ಆಸಕ್ತಿ ತೋರಿಸಲಿದ್ದೀರಿ. ನಿಮ್ಮ ಕೌಟುಂಬಿಕ ಜೀವನದಲ್ಲಿ ಸಾಕಷ್ಟು ಪ್ರೀತಿ ಮತ್ತು ಶಾಂತಿ ಕಾಣಿಸಿಕೊಳ್ಳಲಿದೆ. ಸಂಬಳಕ್ಕೆ ದುಡಿಯುವವರಿಗೆ ಸಂಬಳದಲ್ಲಿ ವೃದ್ಧಿ ಉಂಟಾಗಬಹುದು. ನಿಮಗೆ ಭಡ್ತಿ ಸಿಗುವ ಸಾಧ್ಯತೆಯೂ ಇದೆ. ವ್ಯಾಪಾರೋದ್ಯಮಿಗಳಿಗೆ ನಿಮ್ಮ ಯೋಜನೆಗಳನ್ನು ಮರುಪರಿಶೀಲಿಸಲು ಮತ್ತು ಏನಾದರೂ ಹೊಸತನ್ನು ಮಾಡಲು ಇದು ಸಕಾಲ. ವಿವಾಹಿತ ವ್ಯಕ್ತಿಗಳು ಬದುಕನ್ನು ಆನಂದಿಸಲಿದ್ದಾರೆ. ಪ್ರೇಮಿಗಳು ಸಹ ಒಳ್ಳೆಯ ಫಲಿತಾಂಶ ಪಡೆಯಲಿದ್ದಾರೆ. ವಿದ್ಯಾರ್ಥಿಗಳು ತಮ್ಮ ಅಧ್ಯಯನದಲ್ಲಿ ಆಸಕ್ತಿ ತೋರಲಿದ್ದಾರೆ. ವಾರದ ಮಧ್ಯಭಾಗವು ಪ್ರಯಾಣಿಸುವುದಕ್ಕೆ ಅನುಕೂಲಕರ.

ಮೀನ:ವಾರದ ಆರಂಭದಲ್ಲಿ ನಿಮ್ಮಲ್ಲಿ ವಿಶೇಷ ಆತ್ಮವಿಶ್ವಾಸ ಕಾಣಿಸಿಕೊಳ್ಳಲಿದೆ. ನಿಮ್ಮ ವ್ಯವಹಾರದಲ್ಲಿ ಏನಾದರೂ ಹೊಸತನ್ನು ಮಾಡುವುದನ್ನು ನೀವು ಆನಂದಿಸಲಿದ್ದೀರಿ. ವ್ಯವಹಾರಕ್ಕೆ ವೇಗ ದೊರೆತಂತೆ ನಿಮ್ಮ ಆದಾಯದಲ್ಲಿಯೂ ಹೆಚ್ಚಳ ಉಂಟಾಗಲಿದೆ. ನಿಮಗೆ ಕೆಲವು ಲಾಭದಾಯಕ ವ್ಯವಹಾರದ ಅವಕಾಶ ದೊರೆಯಬಹುದು ಹಾಗೂ ಕೆಲವು ಹೊಸ ಜನರೊಂದಿಗೆ ನೀವು ಕೆಲಸ ಮಾಡಬಹುದು. ಉದ್ಯೋಗದಲ್ಲಿರುವವರು ತಮ್ಮ ಕೆಲಸದ ಮೇಲೆ ಗಮನ ನೀಡಬೇಕು. ಇಲ್ಲದಿದ್ದರೆ ಅವರು ಸಮಸ್ಯೆ ಎದುರಿಸಬಹುದು. ವಿವಾಹಿತರು ತಮ್ಮ ಸಂಗಾತಿಯೊಂದಿಗೆ ಎಲ್ಲಾದರೂ ಭೇಟಿ ನೀಡಬಹುದು. ನೀವು ಯಾರನ್ನಾದರೂ ಪ್ರೀತಿಸುತ್ತಿದ್ದರೆ ಅವರೊಂದಿಗೆ ನಿಮ್ಮ ಪ್ರೇಮವನ್ನು ನಿವೇದಿಸಿಕೊಳ್ಳಲು ಇದು ಸಕಾಲ. ವಿದ್ಯಾರ್ಥಿಗಳು ತಮ್ಮ ಅಧ್ಯಯನದಲ್ಲಿ ಏನಾದರೂ ಹೊತಸನ್ನು ಮಾಡಲು ಅವಕಾಶ ಪಡೆಯಬಹುದು. ಅವರು ಸೃಜನಶೀಲತೆಯಿಂದ ತಮ್ಮ ಅಧ್ಯಯನವನ್ನು ಮುಂದುವರಿಸಲಿದ್ದಾರೆ. ವಾರದ ಆರಂಭಿಕ ದಿನಗಳು ಪ್ರವಾಸಕ್ಕೆ ಹೋಗಲು ಉತ್ತಮ.

ABOUT THE AUTHOR

...view details