ಮೇಷ: ಈ ವಾರದಲ್ಲಿ ಸಾಧಾರಣ ಲಾಭ ದೊರೆಯಲಿದೆ. ನಿಮ್ಮ ವ್ಯವಹಾರದಲ್ಲಿ ಹೊಸ ಬೆಳವಣಿಗೆಗಳು ಉಂಟಾಗಲಿವೆ. ನೀವು ವಿವಾಹಿತರಾಗಿದ್ದರೆ, ನಿಮ್ಮ ಜೀವನ ಸಂಗಾತಿಯನ್ನು ಸಂತುಷ್ಟಪಡಿಸಲು ನೀವು ಈ ಸಮಯವನ್ನು ಬಳಸಿಕೊಳ್ಳಲಿದ್ದೀರಿ. ನೀವು ಯಾರನ್ನಾದರೂ ಪ್ರೀತಿಸುತ್ತಿದ್ದರೆ, ನಿಮ್ಮ ಪ್ರೀತಿಗೆ ಸಂಬಂಧಿಸಿದಂತೆ ಇದು ಸಾಮಾನ್ಯ ಸಮಯವೆನಿಸಲಿದೆ. ನಿಮ್ಮ ಸಂಗಾತಿಯ ಕೋಪವನ್ನು ನೀವು ಎದುರಿಸಬೇಕಾದೀತು. ವಾರದ ಮಧ್ಯದಲ್ಲಿ ಅನಗತ್ಯ ಚಿಂತೆಗಳು ನಿಮ್ಮನ್ನು ಕಾಡಲಿವೆ. ಇದರಿಂದಾಗಿ ನಿಮ್ಮ ಅರೋಗ್ಯದಲ್ಲಿ ಸಮಸ್ಯೆ ಉಂಟಾಗಬಹುದು. ಹೀಗಾಗಿ ಈ ಚಿಂತೆಗಳನ್ನು ದೂರ ಮಾಡಿ. ವಾರದ ಕೊನೆಗೆ ನೀವು ದೀರ್ಘ ಪ್ರವಾಸಕ್ಕೆ ಹೋಗುವ ಸಾಧ್ಯತೆ ಇದೆ. ಈ ಪ್ರವಾಸವು ನಿಮ್ಮನ್ನು ಧಾರ್ಮಿಕ ಸ್ಥಳಕ್ಕೆ ಕೊಂಡೊಯ್ಯಬಹುದು. ಖರ್ಚುವೆಚ್ಚಗಳಲ್ಲಿ ಹೆಚ್ಚಳ ಉಂಟಾಗುವ ಕಾರಣ ಒತ್ತಡ ಹೆಚ್ಚಾಗಬಹುದು. ಅದರೆ ನಿಮ್ಮ ಆದಾಯವು ಸಾಮಾನ್ಯ ಸ್ಥಿತಿಯಲ್ಲೇ ಇರಲಿದೆ. ಉದ್ಯೋಗದಲ್ಲಿರುವವರು ತನ್ನ ಕಠಿಣ ಶ್ರಮದ ಕಾರಣ ಉತ್ತಮ ಫಲಿತಾಂಶ ಪಡೆಯಲಿದ್ದಾರೆ. ವಾರದ ಕೊನೆಯ ದಿನಗಳು ಪ್ರಯಾಣಕ್ಕೆ ಅನುಕೂಲಕರ.
ವೃಷಭ: ಈ ವಾರದಲ್ಲಿ ಮಿಶ್ರ ಫಲ ದೊರೆಯಲಿದೆ. ಈ ವಾರದಲ್ಲಿ ನೀವು ಪ್ರಯಾಣಕ್ಕೆ ಯೋಜನೆ ರೂಪಿಸಿದರೆ, ಒಂದಷ್ಟು ಅಡಚಣೆಗಳನ್ನು ನೀವು ಎದುರಿಸಬೇಕಾದೀತು. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದಂತೆ ಖರ್ಚುವೆಚ್ಚಗಳು ಉಂಟಾಗಬಹುದು. ನಿಮ್ಮ ಆದಾಯವು ಸಾಮಾನ್ಯ ಮಟ್ಟದಲ್ಲಿರಲಿದೆ. ಆದರೆ ಒಂದಷ್ಟು ಹಣವನ್ನು ನಿಮ್ಮ ಸೌಲಭ್ಯಗಳು ಮತ್ತು ಅನುಕೂಲತೆಗಳನ್ನು ಹೆಚ್ಚಿಸುವುದಕ್ಕಾಗಿ ನೀವು ಖರ್ಚು ಮಾಡಬಹುದು. ನಿಮ್ಮ ಆರೋಗ್ಯದಲ್ಲಿ ಕಂಡುಬರುವ ಏರುಪೇರು ನಿಮ್ಮ ಚಿಂತೆಗೆ ಕಾರಣವೆನಿಸಬಹುದು. ಉದ್ಯೋಗದಲ್ಲಿರುವವರು ತನ್ನ ಕಠಿಣ ಶ್ರಮಕ್ಕೆ ಉತ್ತಮ ಫಲಿತಾಂಶ ಪಡೆಯಲಿದ್ದಾರೆ. ವ್ಯಾಪಾರೋದ್ಯಮಿಗಳು ಅದ್ಭುತ ಲಾಭ ಗಳಿಸಲಿದ್ದಾರೆ. ವಿದ್ಯಾರ್ಥಿಗಳು ತಮ್ಮ ಅಧ್ಯಯನದಲ್ಲಿ ಯಾರಾದರೂ ಗುರುವಿನ ನೆರವು ಪಡೆಯಲಿದ್ದಾರೆ. ಈ ಗುರುವಿನ ನೆರವಿನಿಂದ ಅವರು ತಮ್ಮ ಅಧ್ಯಯನದಲ್ಲಿ ಮುಂದೆ ಸಾಗಲಿದ್ದು ತಮ್ಮ ಕೆಲಸವನ್ನು ಪೂರ್ಣಗೊಳಿಸಲಿದ್ದಾರೆ. ಸಂಬಂಧದಲ್ಲಿರುವ ಜನರು ತಮ್ಮ ನಡುವೆ ಇರುವ ಭಿನ್ನಾಭಿಪ್ರಾಯಗಳನ್ನು ಮರೆತು ಬಿಡಬೇಕು ಮತ್ತು ಪರಸ್ಪರ ನೆರವು ನೀಡಬೇಕು. ವಿವಾಹಿತ ಜೋಡಿಗಳ ಬದುಕು ಸಂತಸದಿಂದ ಕೂಡಿರಲಿದೆ. ಈ ವಾರ ಪ್ರಯಾಣಿಸಲು ಅನುಕೂಲಕರವಲ್ಲ.
ಮಿಥುನ: ಈ ವಾರದಲ್ಲಿ ನಿಮಗೆ ಮಿಶ್ರಫಲ ದೊರೆಯಲಿದೆ. ನಿಮ್ಮ ಪ್ರೇಮ ಬದುಕು ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿರುವುದರಿಂದ ಅದನ್ನು ಉಳಿಸಲು ನೀವು ಸಾಕಷ್ಟು ಪ್ರಯತ್ನ ಮಾಡಲಿದ್ದೀರಿ. ಆದರೆ ಈ ಸಂದರ್ಭದಲ್ಲಿ ನಿಮ್ಮ ಪ್ರೇಮ ಸಂಗಾತಿಯ ದ್ವೇಷ ಮತ್ತು ಕಹಿತನವನ್ನು ನೀವು ಎದುರಿಸಬೇಕಾದೀತು. ಆದರೆ ಹೆದರಬೇಡಿ! ವಿವಾಹಿತ ವ್ಯಕ್ತಿಗಳ ಗೃಹಸ್ಥ ಬದುಕು ಒಂದಷ್ಟು ಏರುಪೇರು ಎದುರಿಸಲಿದೆ. ಈ ಸಂದರ್ಭದಲ್ಲಿ ಸಂಯಮ ವಹಿಸಬೇಕು. ಉದ್ಯೋಗದಲ್ಲಿರುವ ಜನರು ತಮ್ಮ ಕೆಲಸದಲ್ಲಿ ವಿಶೇಷವಾಗಿ ತೊಡಗಿಸಿಕೊಳ್ಳಲಿದ್ದಾರೆ. ನಿಮ್ಮ ವರ್ಚಸ್ಸಿನ ಪ್ರಶ್ನೆ ಉದ್ಭವಿಸಿರುವ ಕಾರಣ ಸಮರ್ಪಣೆ ಮತ್ತು ಉತ್ತಮ ಪ್ರಸ್ತುತಿಯು ನಿಮಗೆ ಅತ್ಯಗತ್ಯ. ಈ ವಾರವು ವ್ಯಾಪಾರೋದ್ಯಮಿಗಳಿಗೆ ಲಾಭದಾಯಕ ಎನಿಸಲಿದೆ. ಇವರು ಹೊಸ ಟೆಂಡರ್ ಗಳಿಗೆ ಅರ್ಜಿ ಸಲ್ಲಿಸಲಿದ್ದಾರೆ. ವಿದ್ಯಾರ್ಥಿಗಳು ತಮ್ಮ ಅಧ್ಯಯನದ ಮೇಲೆ ಚೆನ್ನಾಗಿ ಗಮನ ನೀಡಬೇಕಾಗುತ್ತದೆ. ವಾರದ ಆರಂಭಿಕ ದಿನಗಳು ಪ್ರವಾಸಕ್ಕೆ ಹೋಗಲು ಅತ್ಯುತ್ತಮ.
ಕರ್ಕಾಟಕ: ಈ ವಾರವು ನಿಮಗೆ ಮಿಶ್ರ ಫಲ ನೀಡಲಿದೆ. ವಾರದ ಆರಂಭದಲ್ಲಿ ನಿಮ್ಮ ಕುಟುಂಬದ ಜವಾಬ್ದಾರಿಯನ್ನು ನೀವು ಈಡೇರಿಸಲಿದ್ದೀರಿ. ನಿಮ್ಮ ಕುಟುಂಬದ ಸದಸ್ಯರಿಗಾಗಿ ನೀವು ಹೊಂದಿರುವ ಜವಾಬ್ದಾರಿಯನ್ನು ನೀವು ಅರ್ಥ ಮಾಡಿಕೊಳ್ಳಲಿದ್ದೀರಿ. ವಾರದ ಮಧ್ಯದಲ್ಲಿ ಪ್ರೇಮದ ಬದುಕು ಚೆನ್ನಾಗಿರಲಿದೆ. ನಿಮ್ಮ ಸಂಗಾತಿಯನ್ನು ನೀವು ಡಿನ್ನರ್ ಗೆ ಕರೆದು ಕೊಂಡು ಹೋಗಬಹುದು. ವಾರದ ಕೊನೆಯಲ್ಲಿ ನಿಮ್ಮ ಖರ್ಚುವೆಚ್ಚಗಳಲ್ಲಿ ಹೆಚ್ಚಳ ಉಂಟಾಗಲಿದ್ದು ಇದು ನಿಮ್ಮ ಚಿಂತೆಗೆ ಕಾರಣವೆನಿಸಲಿದೆ. ಉದ್ಯೋಗದಲ್ಲಿರುವ ಜನರು ಇದನ್ನು ಅನಂದಿಸಲಿದ್ದಾರೆ. ಕೆಲಸದ ಒಂದಷ್ಟು ಸಮಯವನ್ನು ನೀವು ಮನರಂಜನೆಗಾಗಿ ಮೀಸಲಿಡಲಿದ್ದೀರಿ ಹಾಗೂ ನಿಮ್ಮ ಕೆಲಸವನ್ನು ಸುಲಭವಾಗಿ ಪೂರ್ಣಗೊಳಿಸಲು ನಿಮಗೆ ಸಾಧ್ಯವಾಗಲಿದೆ. ವ್ಯಾಪಾರೋದ್ಯಮಿಗಳಿಗೆ ಇದು ಒಳ್ಳೆಯ ವಾರ. ಏಕೆಂದರೆ ಅವರ ಕೆಲಸದಲ್ಲಿ ಪ್ರಗತಿ ಉಂಟಾಗಲಿದೆ. ಜನರ ಸಂತಸದಲ್ಲಿ ಹೆಚ್ಚಳ ಉಂಟಾಗಲಿದೆ. ವಿದ್ಯಾರ್ಥಿಗಳಿಗೆ ತಮ್ಮ ಅಧ್ಯಯನದಲ್ಲಿ ಏಕಾಗ್ರತೆ ಸಾಧಿಸಲು ಯಾವುದೇ ಸಮಸ್ಯೆ ಉಂಟಾಗದು. ಹೀಗಾಗಿ ಅವರಿಗೆ ತಮ್ಮ ಕೆಲಸವನ್ನು ಸುಲಭವಾಗಿ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ. ವಾರದ ನಡುವಿನ ದಿನಗಳು ಪ್ರವಾಸಕ್ಕೆ ಹೋಗಲು ಅತ್ಯುತ್ತಮ.
ಸಿಂಹ: ಈ ವಾರದಲ್ಲಿ ನಿಮಗೆ ಸಾಧಾರಣ ಲಾಭ ದೊರೆಯಲಿದೆ. ವಾರದ ಆರಂಭಿಕ ದಿನಗಳಲ್ಲಿ ನೀವು ರೊಮ್ಯಾಂಟಿಕ್ ಪ್ರವಾಸಕ್ಕೆ ಹೋಗಬಹುದು. ನಿಮ್ಮ ಜೀವನ ಸಂಗಾತಿಯ ಭಾವನೆಗಳನ್ನು ವ್ಯಕ್ತಪಡಿಸುವ ಅವಕಾಶವನ್ನು ಪಡೆಯಲಿದ್ದೀರಿ. ಇದರಿಂದಾಗಿ ನಿಮ್ಮ ಸಂಬಂಧದಲ್ಲಿ ಸುಧಾರಣೆ ಉಂಟಾಗಲಿದೆ. ವಿವಾಹಿತ ವ್ಯಕ್ತಿಗಳ ಕೌಟುಂಬಿಕ ಬದುಕು ಚೆನ್ನಾಗಿರಲಿದೆ. ಜೋಡಿಗಳ ನಡುವಿನ ತಪ್ಪು ಗ್ರಹಿಕೆ ಬಗೆಹರಿಯುತ್ತದೆ ಹಾಗೂ ಸಂಬಂಧದಲ್ಲಿ ಸುಧಾರಣೆ ಉಂಟಾಗಲಿದೆ. ಉದ್ಯೋಗದಲ್ಲಿರುವ ಜನರು ತಮ್ಮ ಕೆಲಸದಿಂದ ಲಾಭ ಗಳಿಸಲಿದ್ದಾರೆ. ನಿಮ್ಮ ಸಾಮರ್ಥ್ಯಗಳು ನಿಮ್ಮ ನೆರವಿಗೆ ಬರಲಿವೆ. ವ್ಯಾಪಾರೋದ್ಯಮಿಗಳು ತಮ್ಮ ಕೆಲಸದಲ್ಲಿ ಸ್ಥಿರತೆ ಸಾಧಿಸಬೇಕು. ನಿಮ್ಮ ಆರೋಗ್ಯವು ಚೆನ್ನಾಗಿರಲಿದೆ. ನಿಮ್ಮ ಕೌಟುಂಬಿಕ ಬದುಕು ಸಹ ಸಾಂಗವಾಗಿ ಮುಂದುವರಿಯಲಿದೆ. ತಮ್ಮ ಅಧ್ಯಯನದಲ್ಲಿ ಮುನ್ನಡೆ ಸಾಧಿಸಲು ಯತ್ನಿಸುವ ವಿದ್ಯಾರ್ಥಿಗಳು ತಮ್ಮ ಕೋರ್ಸ್ ಅನ್ನು ಪರಿಷ್ಕರಿಸಬೇಕು ಮತ್ತು ಹೆಚ್ಚಿನ ಪ್ರಯತ್ನ ಮಾಡಬೇಕು. ವಾರದ ನಡುವಿನ ದಿನಗಳು ಪ್ರವಾಸಕ್ಕೆ ಹೋಗಲು ಅತ್ಯುತ್ತಮ.
ಕನ್ಯಾ: ಈ ವಾರದಲ್ಲಿ ಸಾಮಾನ್ಯ ಫಲ ದೊರೆಯಲಿದೆ. ನಿಮ್ಮ ಉತ್ತಮ ಆರೋಗ್ಯದ ಕಾರಣ ಕೆಲಸದಲ್ಲಿ ಉತ್ಸಾಹ ತೋರಲಿದ್ದೀರಿ. ನಿಮ್ಮ ಅದೃಷ್ಟವು ಅಷ್ಟೊಂದು ಚೆನ್ನಾಗಿಲ್ಲ. ಹೀಗಾಗಿ ನಿಮ್ಮ ಕೆಲವು ಕೆಲಸಗಳು ಬಾಕಿ ಉಳಿಯಬಹುದು. ಆದರೆ ಸಹನೆಯಿಂದ ವರ್ತಿಸಿ ಹಾಗೂ ಹತಾಶರಾಗಬೇಡಿ. ನಿಮಗೆ ಖಂಡಿತವಾಗಿಯೂ ಯಶಸ್ಸು ದೊರೆಯಲಿದೆ. ಉದ್ಯೋಗದಲ್ಲಿರುವ ಜನರು ಈ ಸಮಯವನ್ನು ಚೆನ್ನಾಗಿ ಬಳಸಿಕೊಳ್ಳಬೇಕು. ಏನಾದರೂ ಹೊಸತನ್ನು ಕಲಿಯಲು ನಿಮಗೆ ಅವಕಾಶ ದೊರೆಯಲಿದೆ. ಇದು ನಿಮಗೆ ತುಂಬಾ ಉಪಯುಕ್ತ ಎನಿಸಲಿದೆ. ವ್ಯಾಪಾರೋದ್ಯಮಿಗಳು ಉಪಯುಕ್ತ ಸಾಧನಗಳನ್ನು ಎಚ್ಚರಿಕೆಯಿಂದ ಅರಿಸಬೇಕು. ಇದರಿಂದಾಗಿ ತಾವು ಎಲ್ಲಿ ಸುಧಾರಣೆ ಸಾಧಿಸಬೇಕು ಎಂಬುದು ಅವರಿಗೆ ತಿಳಿಯುತ್ತದೆ. ವಿವಾಹಿತ ಜೋಡಿಗಳ ಬದುಕು ಸುಗಮವಾಗಿ ಸಾಗಲಿದೆ. ಉತ್ತಮ ಸಾಮರಸ್ಯದ ಕಾರಣ ಸಂಬಂಧವು ಮುಂದೆ ಸಾಗಲಿದೆ. ಪ್ರೇಮ ಸಂಬಂಧದಲ್ಲಿರುವ ಜನರು ತಮ್ಮ ಸಂಬಂಧದಲ್ಲಿ ಸಾಕಷ್ಟು ಪ್ರಾಮಾಣಿಕತೆ ತೋರಲಿದ್ದಾರೆ ಹಾಗೂ ತನ್ನ ಸಂಗಾತಿಯಿಂದ ಇದನ್ನೇ ನಿರೀಕ್ಷಿಸಲಿದ್ದಾರೆ. ಹೀಗಾಗಿ ನಿಮ್ಮ ಸಂಬಂಧವು ಸುಂದರವಾಗಿರಲಿದೆ. ವಿದ್ಯಾರ್ಥಿಗಳು ತಮ್ಮ ಅಧ್ಯಯನದಲ್ಲಿ ಸಾಕಷ್ಟು ಶ್ರಮ ಪಡಲಿದ್ದಾರೆ. ವಾರದ ನಡುವಿನ ದಿನಗಳು ಪ್ರಯಾಣಕ್ಕೆ ಸೂಕ್ತ.