ಕರ್ನಾಟಕ

karnataka

ETV Bharat / bharat

ಪ್ರೇಮ ಬಂಧದಲ್ಲಿ ಇರುವವರಿಗೆ ಈ ವಾರವು ಸಂತಸ ತರಲಿದೆ.. ಕೆಲಸದಲ್ಲಿ ಯಶಸ್ಸು - ವಾರದ ರಾಶಿ ಭವಿಷ್ಯ

Weekly Horoscope: ಈ ವಾರದ ರಾಶಿ ಭವಿಷ್ಯ ಈ ಕೆಳಗಿನಂತಿದೆ..

etv bharat weekly horoscope
ವಾರದ ಭವಿಷ್ಯ

By

Published : Feb 20, 2022, 6:01 AM IST

ಮೇಷ:ಪ್ರೇಮ ಸಂಬಂಧದಲ್ಲಿರುವವರಿಗೆ ಈ ವಾರವು ಉತ್ತಮ ವಾರವೆನಿಸಲಿದೆ. ನಿಮ್ಮ ಎಲ್ಲಾ ಸಾಧನೆಗಳಿಗೆ ನಿಮ್ಮ ಸಂಗಾತಿಯು ಪುರಸ್ಕರಿಸಬಹುದು. ಅಲ್ಲದೆ ಅವರು ನಿಮಗೆ ಪ್ರೀತಿಯನ್ನು ವ್ಯಕ್ತಪಡಿಸಲಿದ್ದಾರೆ. ವಿವಾಹಿತ ಜೋಡಿಗಳ ಬದುಕು ಪ್ರಣಯದಿಂದ ಕೂಡಿರಲಿದೆ. ಈ ವಾರದಲ್ಲಿ ನೀವು ನಿಮ್ಮ ಒಡಹುಟ್ಟಿದವರೊಂದಿಗೆ ಕೆಲಸ ಮಾಡಲಿದ್ದೀರಿ. ಹಾಗೂ ಅವರ ನೆರವು ಮತ್ತು ಬೆಂಬಲದಿಂದ ಸಾಕಷ್ಟು ಲಾಭ ಗಳಿಸಲಿದ್ದೀರಿ. ಈ ನಿಟ್ಟಿನಲ್ಲಿ ನೀವು ಉತ್ತಮ ಲಾಭ ಗಳಿಸಲಿದ್ದೀರಿ. ಇದೇ ರೀತಿ, ನಿಮ್ಮ ಕುಟುಂಬದ ಸದಸ್ಯರಿಂದ ಉತ್ತಮ ಬೆಂಬಲ ಪಡೆಯಲಿದ್ದೀರಿ. ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಉತ್ತಮ ಸುಧಾರಣೆ ಉಂಟಾಗಲಿದೆ. ಸಮಾಜದಲ್ಲಿ ನಿಮ್ಮನ್ನು ಒಳ್ಳೆಯವರು ಎಂದು ಪರಿಗಣಿಸಲಾಗುತ್ತದೆ. ನಿಮ್ಮ ಗಳಿಕೆಯಲ್ಲಿ ಹೆಚ್ಚಳ ಉಂಟಾಗುತ್ತದೆ. ನೀವು ಸರ್ಕಾರದ ನೆರವಿಗೆ ಅರ್ಹತೆ ಪಡೆಯುವ ಸಾಧ್ಯತೆ ಇದೆ. ನೀವು ಈಗಾಗಲೇ ಉದ್ಯೋಗದಲ್ಲಿದ್ದರೆ, ನಿಮ್ಮ ಕಠಿಣ ಶ್ರಮ ಮತ್ತು ಬುದ್ಧಿಮತ್ತೆಗೆ ತಕ್ಕುದಾದ ಫಲ ದೊರೆಯಲಿದೆ ಹಾಗೂ ನಿಮ್ಮ ಬಾಸ್‌ ನಿಮ್ಮ ಕುರಿತು ಸಂತೃಪ್ತಿ ವ್ಯಕ್ತಪಡಿಸಲಿದ್ದಾರೆ. ವ್ಯಾಪಾರೋದ್ಯಮಿಗಳಿಗೆ ಈ ವಾರವು ಚೆನ್ನಾಗಿರಲಿದೆ. ವಿದ್ಯಾರ್ಥಿಗಳ ಕುರಿತು ನಾವು ಮಾತನಾಡುವುದಾದರೆ, ಅವರು ಈ ವಾರ ತಮ್ಮ ಅಧ್ಯಯನದಲ್ಲಿ ಆಸಕ್ತಿ ತೋರಲಿದ್ದು, ಗುರಿಯನ್ನು ಸಾಧಿಸಲು ಎಲ್ಲಾ ಪ್ರಯತ್ನ ಮಾಡಲಿದ್ದಾರೆ. ನೀವು ವಿದ್ಯಾರ್ಥಿ ಆಗಿದ್ದರೆ ಅಧ್ಯಯನಕ್ಕೆ ಮೀಸಲಿಡುವ ಸಮಯವನ್ನು ನೀವು ಹೆಚ್ಚಿಸಬೇಕು. ವೇಳಾಪಟ್ಟಿಯನ್ನು ನೀವು ಕಟ್ಟುನಿಟ್ಟಾಗಿ ಪಾಲಿಸುವುದು ಒಳ್ಳೆಯದು. ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ ನಿಮ್ಮ ಆರೋಗ್ಯವು ಚೆನ್ನಾಗಿರಲಿದೆ. ಆದರೂ ನಿಮ್ಮ ಆಹಾರದ ಕಡೆಗೆ ಗಮನ ನೀಡಿ. ವಾರದ ಆರಂಭಿಕ ದಿನಗಳು ಪ್ರವಾಸಕ್ಕೆ ಹೋಗಲು ಅತ್ಯುತ್ತಮ.

ವೃಷಭ:ಈ ವಾರ ನಿಮಗೆ ಉತ್ತಮ ಫಲ ದೊರೆಯಲಿದೆ. ಕುಟುಂಬದ ವಾತಾವರಣವು ಧನಾತ್ಮಕವಾಗಿರುತ್ತದೆ. ಎಲ್ಲರೂ ಒಂದೇ ಛಾವಣಿಯ ಅಡಿಯಲ್ಲಿ ವಾಸಿಸಲಿದ್ದು ಮನೆಯಲ್ಲಿ ಸಾಕಷ್ಟು ಪ್ರೀತಿ ನೆಲೆಸಲಿದೆ. ಸಂಬಂಧದಲ್ಲಿ ಪ್ರಣಯ ಇರಲಿದ್ದು ಸಂಬಂಧದ ಭಾವ ನೆಲೆಸಲಿದೆ. ಪ್ರೇಮ ಸಂಬಂಧದಲ್ಲಿರುವವರಿಗೆ ಈ ವಾರವು ಸಂತಸ ಒದಗಿಸಲಿದೆ. ನಿಮ್ಮ ಪ್ರೇಮ ಸಂಗಾತಿಗೆ ಅತ್ಯುತ್ತಮ ಉಡುಗೊರೆಯೊಂದನ್ನು ನೀವು ನೀಡಲಿದ್ದೀರಿ. ನಿಮ್ಮ ಕುಟುಂಬದ ಸದಸ್ಯರೊಂದಿಗೆ ಸಮಯವನ್ನು ಕಳೆಯುವುದನ್ನು ನೀವು ಇಷ್ಟಪಡಲಿದ್ದೀರಿ. ನಿಮ್ಮ ಎಳೆಯ ಒಡಹುಟ್ಟಿದವರಿಗೆ ನಿಮ್ಮ ಆಂತರಿಕ ಭಾವನೆಗಳನ್ನು ತಿಳಿಸಲು ನಿಮಗೆ ಸಾಧ್ಯವಾಗಲಿದೆ. ಹಾಗೂ ನೀವು ಕೆಲವೊಂದು ವಿಚಾರಗಳನ್ನು ಅವರೊಂದಿಗೆ ಹಂಚಿಕೊಳ್ಳಲಿದ್ದೀರಿ. ನಿಮ್ಮ ಮಾತನ್ನು ಕೇಳಿದ ನಂತರ ಅವರು ಅದನ್ನು ಪ್ರೀತಿಯಿಂದಲೇ ಸ್ವೀಕರಿಸಲಿದ್ದಾರೆ. ನಿಮ್ಮ ಹಣಕಾಸಿನ ಸ್ಥಿತಿಯು ಚೆನ್ನಾಗಿರಲಿದೆ. ಈ ವಾರದಲ್ಲಿ ಖರ್ಚುವೆಚ್ಚಗಳಲ್ಲಿ ಇಳಿಕೆ ಉಂಟಾಗಬಹುದು. ಕೌಟುಂಬಿಕ ಜವಾಬ್ದಾರಿಗಳ ಕುರಿತು ನೀವು ಎಚ್ಚರಿಕೆಯಿಂದ ವರ್ತಿಸಲಿದ್ದೀರಿ. ಅಲ್ಲದೆ ಮನೆಯ ಖರ್ಚಿನ ಜವಾಬ್ದಾರಿಯನ್ನು ಹೊರಲಿದ್ದೀರಿ. ಈಗಾಗಲೇ ಉದ್ಯೋಗದಲ್ಲಿರುವವರಿಗೆ ಇದು ಅದ್ಭುತ ಕಾಲ. ಸರ್ಕಾರಿ ಉದ್ಯೋಗದಲ್ಲಿರುವ ಕೆಲ ಜನರಿಗೆ ಈ ವಾರವು ಅವಕಾಶಗಳನ್ನು ಹೊತ್ತು ತರಲಿದೆ. ಸರ್ಕಾರಿ ಉದ್ಯೋಗದಲ್ಲಿರುವವರು ಲಾಭ ಗಳಿಸಬಹುದು. ಅಲ್ಲದೆ ಈ ಅವಧಿಯಲ್ಲಿ ನಿಮ್ಮ ಬಾಸ್‌ ನಿಮಗೆ ಕೆಲವೊಂದು ಅತ್ಯುತ್ತಮ ಸವಲತ್ತು ನೀಡಬಹುದು. ವಿದ್ಯಾರ್ಥಿಗಳ ವಿಚಾರದಲ್ಲಿ ಹೇಳುವುದಾದರೆ ಈ ವಾರ ಅವರ ಪಾಲಿಗೆ ಉತ್ತಮ ಸಮಯ ಎನಿಸಲಿದೆ. ಹೊಸ ವಿಚಾರಗಳನ್ನು ಕಲಿಯುವುದನ್ನು ನೀವು ಆನಂದಿಸಲಿದ್ದೀರಿ. ಉನ್ನತ ಅಧ್ಯಯನಗಳಲ್ಲಿ ನೀವು ಅದ್ಭುತ ಯಶಸ್ಸು ಗಳಿಸಲಿದ್ದೀರಿ. ನಿಮ್ಮ ಆರೋಗ್ಯದ ವಿಚಾರದಲ್ಲಿ ಒಂದಷ್ಟು ಏರಿಳಿತ ಉಂಟಾಗಬಹುದು. ಹೀಗಾಗಿ ನಿಮ್ಮ ಕುರಿತು ಕಾಳಜಿ ವಹಿಸಿ. ವಾರದ ನಡುವಿನ ದಿನಗಳು ಪ್ರಯಾಣಕ್ಕೆ ಅನುಕೂಲಕರ.

ಮಿಥುನ:ವಿವಾಹಿತ ವ್ಯಕ್ತಿಗಳ ಬದುಕು ಚೆನ್ನಾಗಿರಲಿದೆ. ನೀವು ಪರಸ್ಪರ ವಿಶೇಷ ಗೌರವ ನೀಡಲಿದ್ದೀರಿ. ಪ್ರೇಮ ಸಂಬಂಧದಲ್ಲಿರುವವರಿಗೆ ಈ ವಾರವು ಭರವಸೆಯ ವಾರವೆನಿಸಲಿದೆ. ಪರಸ್ಪರ ಮಾತನಾಡುತ್ತಾ ಮತ್ತು ಅರ್ಥ ಮಾಡಿಕೊಳ್ಳುತ್ತಾ ನೀವು ಸಮಯ ಕಳೆಯಲಿದ್ದೀರಿ. ನಿಮ್ಮ ಪ್ರಣಯ ಬದುಕು ಸಂತಸದಿಂದ ಕೂಡಿರಲಿದೆ. ನೀವು ಚೈತನ್ಯದಿಂದ ಕೂಡಿರಲಿದ್ದು, ಇದು ಎಲ್ಲವನ್ನು ಶೀಘ್ರವಾಗಿ ಮಾಡಲು ನಿಮಗೆ ಅನುವು ಮಾಡಿ ಕೊಡಲಿದೆ. ಇದು ನಿಮ್ಮ ಪಾಲಿಗೆ ಸಾಕಷ್ಟು ಸಮಯವನ್ನು ಉಳಿಸಲಿದೆ. ಈ ಸಮಯವನ್ನು ನೀವು ಸೃಜನಶೀಲ ಕೆಲಸಗಳಿಗಾಗಿ ಬಳಸಬಹುದು. ಈ ವಾರದಲ್ಲಿ ಖರ್ಚುವೆಚ್ಚಗಳಲ್ಲಿ ಇಳಿಕೆ ಉಂಟಾಗಬಹುದು. ನಿಮ್ಮ ಹಣಕಾಸಿನ ಸ್ಥಿತಿಯು ಚೆನ್ನಾಗಿರಲಿದೆ. ವ್ಯಾಪಾರೋದ್ಯಮದಲ್ಲಿ ತೊಡಗಿಸಿಕೊಂಡಿರುವ ಜನರು ಸಾಕಷ್ಟು ಅವಕಾಶಗಳನ್ನು ಪಡೆಯಲಿದ್ದಾರೆ. ಅಲ್ಲದೆ ನಿಮ್ಮ ವ್ಯವಹಾರವು ಬೆಳೆಯಲಿದೆ. ನಿಮ್ಮ ವ್ಯವಹಾರದಿಂದ ನೀವು ಉತ್ತಮ ಲಾಭ ಗಳಿಸಲಿದ್ದೀರಿ. ನೀವು ಉದ್ಯೋಗಿಗಳಾಗಿದ್ದರೆ ಲಾಭದಾಯಕ ಅವಕಾಶಗಳು ನಿಮ್ಮ ಪಾಲಿಗೆ ಒದಗಿ ಬರಲಿದ್ದು, ಉತ್ತಮ ಪುರಸ್ಕಾರವನ್ನು ತಂದು ಕೊಡಲಿವೆ. ಸರ್ಕಾರಿ ಕ್ಷೇತ್ರವು ನಿಮಗೆ ಅದ್ಭುತ ಲಾಭ ತಂದು ಕೊಡಲಿದೆ. ವಿದ್ಯಾರ್ಥಿಗಳ ವಿಚಾರದಲ್ಲಿ ಹೇಳುವುದಾದರೆ ಕಠಿಣ ಶ್ರಮವು ಅವರಿಗೆ ತಕ್ಕುದಾದ ಫಲಿತಾಂಶ ತಂದು ಕೊಡಲಿದೆ. ತರಗತಿಯಲ್ಲಿ ಅವರು ಕಠಿಣ ಶ್ರಮ ತೋರಲಿದ್ದು, ಬಹುಶಃ ಪಠ್ಯಕ್ರಮದ ಹೊರಗೆ ಹೊಸ ವಿಚಾರಗಳನ್ನು ಕಲಿಯಲಿದ್ದಾರೆ. ಆರೋಗ್ಯದ ವಿಚಾರದಲ್ಲಿಯೂ ಈ ಅವಧಿಯು ಪ್ರಯೋಜನಕಾರಿ. ನಿಮ್ಮ ಆರೋಗ್ಯದ ಕುರಿತು ನೀವು ಕಾಳಜಿ ತೆಗೆದುಕೊಳ್ಳಬೇಕು. ಆದರೆ ಯಾವುದೇ ಗಂಭೀರ ಅನಾರೋಗ್ಯ ಉಂಟಾಗದು. ವಾರದ ಕೊನೆಯ ಕೆಲವು ದಿನಗಳು ಪ್ರಯಾಣಕ್ಕೆ ಅತ್ಯುತ್ತಮ.

ಕರ್ಕಾಟಕ:ವಿವಾಹಿತ ವ್ಯಕ್ತಿಗಳ ವೈವಾಹಿಕ ಬದಕು ಈ ವಾರದಲ್ಲಿ ಚೆನ್ನಾಗಿರಲಿದೆ. ಪ್ರೇಮ ಸಂಬಂಧದಲ್ಲಿರುವವರು ಲಾಭದಾಯಕ ಫಲಿತಾಂಶವನ್ನು ಪಡೆಯಲಿದ್ದಾರೆ. ವಾರದ ಕೊನೆಯ ಕೆಲವು ದಿನಗಳನ್ನು ನೀವು ಕುಟುಂಬದ ಸದಸ್ಯರ ಜೊತೆಗೆ ವಿಶೇಷ ಸಂವಾದ ನಡೆಸುವ ಮೂಲಕ ಕಳೆಯಲಿದ್ದೀರಿ. ವಾರದ ಆರಂಭದಲ್ಲಿ ಖರ್ಚುವೆಚ್ಚದಲ್ಲಿ ಉಂಟಾಗುವ ಅನಿರೀಕ್ಷಿತ ಹೆಚ್ಚಳವು ನಿಮ್ಮ ಚಿಂತೆಗೆ ಕಾರಣವಾಗಬಹುದು. ವಾರದ ಮಧ್ಯ ಭಾಗವು ಉತ್ತಮ ಫಲಿತಾಂಶ ತರಲಿದೆ. ಉದ್ಯೋಗಿಗಳು ತಮ್ಮ ಕೆಲಸದಲ್ಲಿ ಅತ್ಯುತ್ತಮ ಯಶಸ್ಸನ್ನು ಗಳಿಸಲಿದ್ದಾರೆ. ನೀವು ಸಾಕಷ್ಟು ಪ್ರಯತ್ನ ಮಾಡಲಿದ್ದು ಈ ಗಳಿಕೆಯಲ್ಲಿ ಇದು ನಿಮಗೆ ಪ್ರಯೋಜನಕಾರಿ ಎನಿಸಲಿದೆ. ವ್ಯವಹಾರ ವರ್ಗದವರ ಸವಾಲುಗಳು ದೂರವಾಗಲಿವೆ. ನಿಮ್ಮ ಕೆಲಸದಲ್ಲಿ ಯಶಸ್ಸು ದೊರೆಯಲಿದ್ದು ನಿಮ್ಮ ಕೆಲಸವು ಮೆಲ್ಲನೆ ಪ್ರಗತಿಯನ್ನು ಕಾಣಲಿದೆ. ನಿಮ್ಮ ಚತುರ ಮನಸ್ಸು ನಿಮಗೆ ಸಾಕಷ್ಟು ಲಾಭ ತಂದು ಕೊಡಲಿದೆ. ಇನ್ನೊಂದೆಡೆ ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ತಮ್ಮ ಅಧ್ಯಯನದಲ್ಲಿ ಕೆಲವು ಹೊಸ ವಿಷಯಗಳನ್ನು ಸೇರಿಸಿಕೊಳ್ಳಬಹುದು. ಇದು ಅವರಿಗೆ ಲಾಭ ತಂದು ಕೊಡಲಿದೆ. ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ ಒಂದಷ್ಟು ದೌರ್ಬಲ್ಯ ನಿಮ್ಮನ್ನು ಕಾಡಬಹುದು. ಇಂತಹ ಸನ್ನಿವೇಶದಲ್ಲಿ ನಿಮ್ಮ ಆಹಾರಕ್ರಮಕ್ಕೆ ಸಾಕಷ್ಟು ಗಮನ ನೀಡುವುದು ಒಳ್ಳೆಯದು. ವಾರದ ಕೊನೆಯ ಎರಡು ದಿನಗಳು ಪ್ರಯಾಣಕ್ಕೆ ಅನುಕೂಲಕರ.

ಸಿಂಹ:ಈ ವಾರದಲ್ಲಿ ನಿಮ್ಮ ಸಂಬಂಧದಲ್ಲಿ ಹೆಚ್ಚು ಅರ್ಥೈಸುವಿಕೆ ನೆಲೆಸುತ್ತದೆ. ನಿಮ್ಮ ಸಂಗಾತಿಯು ಕೋಪಗೊಂಡಾಗ ನಿಮಗೆ ಇಷ್ಟವಾಗದ ಮಾತನ್ನು ಹೇಳಬಹುದು. ಇದು ನಿಮ್ಮ ನಡುವೆ ತಪ್ಪು ಗ್ರಹಿಕೆ ಉಂಟು ಮಾಡಬಹುದು. ಆದರೂ ಸಂಬಂಧದಲ್ಲಿರುವವರಿಗೆ ಈ ವಾರವು ಉತ್ತಮ ವಾರವೆನಿಸಲಿದೆ. ನಿಮ್ಮ ಸಂಬಂಧದಲ್ಲಿರುವ ಪ್ರಣಯದಲ್ಲಿ ವೃದ್ಧಿಯಾಗಲಿದೆ. ನಿಮ್ಮ ಸಂಗಾತಿಗೆ ಸರ್ಕಾರಿ ಕೆಲಸ ದೊರೆಯಬಹುದು. ವಾರದ ಆರಂಭದಲ್ಲಿ ಆದಾಯದಲ್ಲಿ ಹೆಚ್ಚಳ ಉಂಟಾಗಬಹುದು. ಆದರೆ ವಾರದ ಮಧ್ಯದ ದಿನಗಳಲ್ಲಿ ಖರ್ಚುವೆಚ್ಚಗಳ ಮೇಲೆ ಗಮನ ಕೇಂದ್ರೀಕರಣಗೊಳ್ಳಬಹುದು. ಆದರೂ ನೀವು ವಿವೇಚನೆಯಿಂದ ಖರ್ಚು ಮಾಡಿದರೆ ನಿಮಗೆ ಯಾವುದೇ ದೊಡ್ಡ ಸಮಸ್ಯೆಗಳು ಎದುರಾಗುವುದಿಲ್ಲ. ಈ ವಾರದ ಕೊನೆಯ ದಿನದಲ್ಲಿ ವಿರಾಮ ತೆಗೆದುಕೊಳ್ಳಲು ನಿಮಗೆ ಅವಕಾಶ ದೊರೆಯಬಹುದು. ವಿದ್ಯಾರ್ಥಿಗಳ ವಿಚಾರದಲ್ಲಿ ಹೇಳುವುದಾದರೆ ಅವರು ತಮ್ಮ ಅಧ್ಯಯನದಲ್ಲಿ ಸವಾಲುಗಳನ್ನು ಎದುರಿಸಬಹುದು. ಈ ಪರಿಸ್ಥಿತಿಯಲ್ಲಿ ನೀವು ಅಧ್ಯಯನದ ಅವಧಿಯನ್ನು ಹೆಚ್ಚಿಸುವುದು ಒಳ್ಳೆಯದು. ವೇಳಾಪಟ್ಟಿಯನ್ನು ರೂಪಿಸಿ ಅದರಂತೆ ಅಭ್ಯಾಸ ನಡೆಸುವುದು ಒಳ್ಳೆಯದು. ಆರೋಗ್ಯದ ವಿಚಾರದಲ್ಲಿ ಪರಿಸ್ಥಿತಿಯು ಚೆನ್ನಾಗಿದೆ. ನೀವು ಸಣ್ಣಪುಟ್ಟ ದೈಹಿಕ ಸಮಸ್ಯೆಗಳಿಗೆ ಒಳಗಾಗಿದ್ದಲ್ಲಿ, ಇದನ್ನು ನಿರ್ಲಕ್ಷಿಸಬೇಡಿ. ಬದಲಾಗಿ ಅದನ್ನು ಗುರುತಿಸಲು ವೈದ್ಯರನ್ನು ಭೇಟಿಯಾಗಿ. ವಾರದ ಕೊನೆಯ ಕೆಲವು ದಿನಗಳು ಪ್ರಯಾಣಕ್ಕೆ ಅನುಕೂಲಕರ.

ಕನ್ಯಾ:ಈ ವಾರದಲ್ಲಿ, ಪ್ರಣಯ ಸಂಬಂಧದಲ್ಲಿರುವವರಿಗೆ ಸಂತಸವು ಮರಳಲಿದೆ. ಅಲ್ಲದೆ ನಿಮ್ಮ ಭಾವನೆಗಳನ್ನು ನಿಮ್ಮ ಸಂಗಾತಿಯ ಹೃದಯಕ್ಕೆ ವರ್ಗಾಯಿಸುವಲ್ಲಿ ಯಶಸ್ವಿಯಾಗಲಿದ್ದೀರಿ. ಇದು ನಿಮ್ಮ ಮತ್ತು ನಿಮ್ಮ ಸಂಗಾತಿಯ ನಡುವಿನ ಪ್ರೀತಿಯ ಹೆಚ್ಚಳಕ್ಕೆ ಕಾರಣವಾಗಲಿದೆ. ವಿವಾಹಿತ ಜೋಡಿಗಳ ಬದುಕು ಚೆನ್ನಾಗಿರಲಿದೆ. ನಿಮ್ಮ ಕೆಲಸಕ್ಕೆ ನೀವು ಗಮನ ನೀಡಲಿದ್ದೀರಿ. ಇದು ಕೆಲಸದ ಸಾಧನೆಯಲ್ಲಿ ಯಶಸ್ಸು ತಂದು ಕೊಡಲಿದೆ. ಉದ್ಯೋಗದಲ್ಲಿರುವವರು ತಮ್ಮ ಪ್ರಯತ್ನದ ಫಲವಾಗಿ ಧನಾತ್ಮಕ ಫಲಿತಾಂಶ ಪಡೆಯಲಿದ್ದಾರೆ. ನೀವು ಪ್ರಶಂಸೆಯನ್ನು ನಿರೀಕ್ಷಿಸದಿದ್ದರೂ, ನಿಮ್ಮ ಕಾರ್ಯಸಾಧನೆಗಾಗಿ ನಿಮ್ಮ ಬಾಸ್‌ ನಿಮ್ಮನ್ನು ಪ್ರಶಂಸಿಸಲಿದ್ದಾರೆ. ಆದರೆ ನಿಮ್ಮ ಬಾಸ್‌ ಜೊತೆ ಸಂಘರ್ಷ ಉಂಟಾಗದಂತೆ ನೋಡಿಕೊಳ್ಳಿ. ನೀವು ವ್ಯವಹಾರವನ್ನು ನಡೆಸುತ್ತಿದ್ದಲ್ಲಿ ಸರ್ಕಾರದಿಂದ ನಿಮಗೆ ದೊಡ್ಡ ಪ್ರಮಾಣದಲ್ಲಿ ಪ್ರಯೋಜನ ದೊರೆಯಲಿದೆ. ಈ ಸಮಯವನ್ನು ನೀವು ಚೆನ್ನಾಗಿ ಬಳಸಿಕೊಂಡಲ್ಲಿ ನಿಮ್ಮ ಕಂಪನಿಯ ವಿಸ್ತರಣೆ ಉಂಟಾಗಲಿದೆ. ರಿಯಲ್‌ ಎಸ್ಟೇಟ್‌ ಖರೀದಿಯಲ್ಲಿ ನಿಮಗೆ ಯಶಸ್ಸು ದೊರೆಯಲಿದೆ. ವಿದ್ಯಾರ್ಥಿಗಳು ಚೆನ್ನಾಗಿ ಅಧ್ಯಯನ ನಡೆಸಲಿದ್ದು, ಚತುರ ಬುದ್ಧಿಮತ್ತೆಯ ಮೂಲಕ ತನ್ನ ಕೆಲಸಗಳನ್ನು ಕಡಿಮೆ ಸಮಯದಲ್ಲಿ ಪೂರ್ಣಗೊಳಿಸುವಲ್ಲಿ ಯಶಸ್ವಿಯಾಗಲಿದ್ದಾರೆ. ಇದು ಧನಾತ್ಮಕ ಫಲಿತಾಂಶವನ್ನು ತಂದುಕೊಡಲಿದೆ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ನೀವು ಯಶಸ್ಸು ಗಳಿಸಲಿದ್ದೀರಿ. ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ ನೀವು ಈಗ ಉತ್ತಮ ಆಕಾರದಲ್ಲಿ ಇರುವಿರಿ. ನೀವು ವ್ಯಾಯಾಮಕ್ಕೆ ಗಮನ ನೀಡುವಿರಿ. ಅಲ್ಲದೆ ನಿಯಮಿತ ವೇಳಾಪಟ್ಟಿಯನ್ನು ಪಾಲಿಸುವಿರಿ. ಏನಾದರೂ ಮಸಾಲೆಯುಕ್ತ ಆಹಾರ ಸೇವಿಸಲು ನಿಮಗೆ ಮನಸ್ಸಾಗಬಹುದು. ಆದರೆ ಹೆಚ್ಚು ತೈಲ ಮತ್ತು ಮಸಾಲೆಯಿಂದ ಕೂಡಿದ ಆಹಾರಗಳಿಂದ ದೂರವಿರಿ. ನಿಮಗೆ ಪ್ರವಾಸಕ್ಕೆ ಹೋಗಬೇಕಾದರೆ ವಾರದ ಆರಂಭಿಕ ಮತ್ತು ಕೊನೆಯ ದಿನಗಳು ಸೂಕ್ತ.

ತುಲಾ:ಈ ವಾರ ನಿಮಗೆ ಪ್ರಯೋಜನಕಾರಿ ಎನಿಸಲಿದೆ. ವಿವಾಹಿತ ವ್ಯಕ್ತಿಗಳ ಕೌಟುಂಬಿಕ ಜೀವನ ಹಿಂದೆಗಿಂತಲೂ ಹೆಚ್ಚು ಸದೃಢಗೊಳ್ಳಲಿದ್ದು, ಸಂತಸವು ನೆಲೆಸಲಿದೆ. ಸಂಬಂಧದಲ್ಲಿರುವ ಜನರಿಗೆ, ಕುಟುಂಬದ ಹಿರಿಯರು ಸಂಬಂಧವನ್ನು ಆಶೀರ್ವಚಿಸುವುದರಿಂದ ಪುಳಕಿತಗೊಳ್ಳಲಿದ್ದಾರೆ. ಅಲ್ಲದೆ ವಾರದ ಆರಂಭದಲ್ಲಿ ಪ್ರಯಾಣಕ್ಕೆ ಸಂಬಂಧಿಸಿದಂತೆ ಕಾರ್ಯನಿರತರಾಗಲಿದ್ದಾರೆ. ಈ ಪ್ರಯಾಣವು ಸಾಕಷ್ಟು ಅನುಕೂಲತೆಗಳನ್ನು ಒದಗಿಸಲಿದ್ದು ನಿಮ್ಮ ವರ್ಚಸ್ಸನ್ನು ವೃದ್ಧಿಸಲಿದೆ. ಉದ್ಯೋಗದಲ್ಲಿರುವ ಜನರು ಉತ್ತಮ ಫಲಿತಾಂಶ ಪಡೆಯುವುದಕ್ಕಾಗಿ ತಮ್ಮ ಕೆಲಸದಲ್ಲಿ ಸಾಕಷ್ಟು ಶ್ರಮ ಪಡಲಿದ್ದಾರೆ. ವ್ಯಾಪಾರೋದ್ಯಮಿಗಳು, ತಮಗೆ ಲಭ್ಯವಿರುವ ಕಾರ್ಯವನ್ನು ವಿಸ್ತರಿಸುವುದಕ್ಕಾಗಿ ಇನ್ನೂ ಹೆಚ್ಚಿನ ಉದ್ಯೋಗಿಗಳನ್ನು ನೇಮಿಸಲಿದ್ದಾರೆ. ಇದು ಖಂಡಿತವಾಗಿಯೂ ಲವಲವಿಕೆಯನ್ನು ತರಲಿದೆ. ವಿದ್ಯಾರ್ಥಿಗಳು ಸಹ ಪ್ರಯೋಜನ ಪಡೆಯಲಿದ್ದಾರೆ. ಕೆಲವು ವಿದ್ಯಾರ್ಥಿಗಳು ವಿದ್ಯಾರ್ಥಿವೇತನಕ್ಕೆ ಅರ್ಹತೆ ಪಡೆಯಲಿದ್ದಾರೆ. ನಿಮ್ಮ ಆರೋಗ್ಯವು ಚೆನ್ನಾಗಿರಲಿದೆ. ಯಾವುದೇ ದೊಡ್ಡ ಸಮಸ್ಯೆಗಳು ನಿಮ್ಮನ್ನು ಕಾಡುವುದಿಲ್ಲ. ಈ ವಾರದಲ್ಲಿ ನಿಮ್ಮ ಕೆಲಸವನ್ನು ನೀವು ಸಂಪೂರ್ಣ ಉತ್ಸಾಹದಿಂದ ಪೂರ್ಣಗೊಳಿಸಲಿದ್ದೀರಿ. ಈ ವಾರವು ಪ್ರಯಾಣಿಸಲು ಉತ್ತಮ.

ವೃಶ್ಚಿಕ:ಈ ವಾರ ನಿಮ್ಮ ಸಂಬಂಧದ ಕುರಿತು ನೀವು ಧನಾತ್ಮಕ ಭಾವನೆ ತೋರಲಿದ್ದು ನಿಮ್ಮ ವೈಯಕ್ತಿಕ ಬದುಕನ್ನು ಗಟ್ಟಿಗೊಳಿಸಲು ಯತ್ನಿಸಲಿದ್ದೀರಿ. ಪರಸ್ಪರ ಭೇಟಿಯಾಗುವ ಅವಕಾಶ ನಿಮಗೆ ದೊರೆಯಲಿದೆ. ವಾರದ ಆರಂಭವು ಸವಾಲಿನಿಂದ ಕೂಡಿರಲಿದೆ. ಹೀಗಾಗಿ ಆರಂಭದಲ್ಲಿ ಯಾವುದೇ ಕಾಮಗಾರಿಯನ್ನು ಕೈಗೆತ್ತಿಕೊಳ್ಳದೆ ಇದ್ದರೆ ಒಳ್ಳೆಯದು. ನಿಮ್ಮ ಹಣವನ್ನು ಜಾಣ್ಮೆಯಿಂದ ಹೂಡಿಕೆ ಮಾಡಿ. ಅಲ್ಲದೆ ನಿಮಗೆ ಗೊತ್ತಿರುವ, ಆದರೆ ಚೆನ್ನಾಗಿ ಗೊತ್ತಿಲ್ಲದ ವ್ಯಕ್ತಿಗೆ ಹಣ ಸಾಲ ನೀಡಬೇಡಿ. ಹೀಗೆ ಮಾಡಿದರೆ ನೀವು ಸಮಸ್ಯೆಗೆ ಸಿಲುಕುವುದು ಖಂಡಿತ. ಉದ್ಯೋಗದಲ್ಲಿರುವ ಜನರು ತಮ್ಮ ಕೆಲಸವನ್ನು ಗಂಭೀರವಾಗಿ ಪರಿಗಣಿಸಬೇಕು. ಆದರೂ ನೀವು ಒಂದಷ್ಟು ಋಣಾತ್ಮಕ ಪರಿಣಾಮಗಳನ್ನು ಎದುರಿಸಬೇಕಾದೀತು. ವ್ಯಾಪಾರಿ ವರ್ಗದ ನಿರೀಕ್ಷೆಗಳು ಹೆಚ್ಚಲಿವೆ. ನಿಮ್ಮ ಕಂಪನಿಯು ಬೆಳೆಯಲಿದೆ. ಇದನ್ನು ನೀವು ಸಂಭ್ರಮಿಸಲಿದ್ದೀರಿ. ವಿದ್ಯಾರ್ಥಿಗಳು ತಮ್ಮ ಅಧ್ಯಯನವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಹೀಗೆ ಮಾಡಿದಲ್ಲಿ ಪರಿಸ್ಥಿತಿ ಅವರ ಪರವಾಗಿ ವಾಲಲಿದೆ ಹಾಗೂ ಅಧ್ಯಯನದಲ್ಲಿ ಅವರು ಉತ್ತಮ ಸಾಧನೆ ಮಾಡಲಿದ್ದಾರೆ. ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ ನೀವು ಚೆನ್ನಾಗಿ ಇರುವಿರಿ. ಬಾಯಲ್ಲಿ ನೀರೂಡಿಸುವ ಆಹಾರವನ್ನು ಆನಂದಿಸಿ. ವಾರದ ಕೊನೆಗೆ ಎಲ್ಲಾದರೂ ನಡಿಗೆಗೆ ಹೋಗುವ ಮೂಲಕ ಅಥವಾ ಎಲ್ಲಾದರೂ ಡಿನ್ನರ್‌ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ನಿಮ್ಮನ್ನು ನೀವು ತೊಡಗಿಸಿಕೊಳ್ಳಿ. ವಾರದ ಆರಂಭಿಕ ಕೆಲವು ದಿನಗಳನ್ನು ಹೊರತುಪಡಿಸಿ ಉಳಿದ ದಿನಗಳು ಪ್ರಯಾಣಿಸಲು ಅನುಕೂಲಕರ.

ಧನು:ಈ ವಾರದಲ್ಲಿ ನಿಮ್ಮಲ್ಲಿ ಪ್ರಣಯ ನೆಲೆಸಲಿದೆ. ಪ್ರೇಮ ಸಂಬಂಧದಲ್ಲಿರುವರಿಗೆ ಈ ವಾರವು ಉತ್ತಮ ಫಲ ನೀಡಲಿದೆ. ನಿಮ್ಮನ್ನು ಪುನಶ್ಚೇತನಗೊಳಿಸಲು ನೀವು ದೀರ್ಘ ಪ್ರವಾಸಕ್ಕೆ ಹೋಗಲಿದ್ದೀರಿ. ಇದು ನಿಮ್ಮ ಮನಸ್ಸಿನಲ್ಲಿ ಶಾಂತಿ ನೆಲೆಸುವಂತೆ ಮಾಡಲಿದೆ. ಈ ವಾರವು ನಿಮ್ಮ ಬದುಕಿನಲ್ಲಿ ಸಂತಸ ತರಲಿದೆ. ಹೃದಯದಲ್ಲಿ ಪ್ರೀತಿ ನೆಲೆಸಲಿದೆ. ಅಲ್ಲದೆ ನಿಮ್ಮ ಕುಟುಂಬದ ಸದಸ್ಯರಿಗಾಗಿ ಸಾಕಷ್ಟು ಸಮಯ ಮೀಸಲಿಡಲಿದ್ದೀರಿ. ಈ ವಾರದಲ್ಲಿ ಕೌಟುಂಬಿಕ ಬದುಕಿನಲ್ಲಿ ಸಂತಸ ನೆಲೆಸಲಿದೆ. ಖರ್ಚುವೆಚ್ಚಗಳು ತಗ್ಗಲಿದ್ದು ಆದಾಯದಲ್ಲಿ ಹೆಚ್ಚಳ ಉಂಟಾಗಲಿದೆ. ನಿಮ್ಮ ಪ್ರಯತ್ನಗಳಲ್ಲಿ ಯಶಸ್ಸು ಸಾಧಿಸಲಿದ್ದೀರಿ. ಉದ್ಯೋಗದಲ್ಲಿರುವವರಿಗೆ ಈ ವಾರ ಚೆನ್ನಾಗಿರಲಿದೆ. ನಿಮ್ಮ ಕಠಿಣ ಶ್ರಮಕ್ಕೆ ಪುರಸ್ಕಾರ ದೊರೆಯಲಿದೆ. ವ್ಯವಹಾರದಲ್ಲಿ ತೊಡಗಿಸಿಕೊಂಡಿರುವವರಿಗೆ ಈ ವಾರದಲ್ಲಿ ಉತ್ತಮ ಫಲ ದೊರೆಯಲಿದೆ. ನೀವು ಕೆಲಸವನ್ನು ಬೇಗನೇ ಮುಗಿಸಲಿದ್ದೀರಿ ಹಾಗೂ ಈ ವಾರದ ಆರಂಭದಲ್ಲಿಯೇ ನಿಮ್ಮ ಕೆಲಸದಲ್ಲಿ ಯಶಸ್ಸು ಸಾಧಿಸುವುದಕ್ಕಾಗಿ ಕೆಲವು ಅಗತ್ಯ ದಾಖಲೆಗಳನ್ನು ಪಡೆಯಲಿದ್ದೀರಿ. ಆರಂಭದಲ್ಲಿ ವ್ಯವಹಾರಕ್ಕೆ ಸಂಬಂಧಿಸಿದ ಪ್ರಯಾಣವನ್ನು ನೀವು ಮಾಡಬಹುದು. ವಾರದ ಕೊನೆಯ ದಿನಗಳಲ್ಲೂ ನೀವು ಪ್ರಯಾಣಿಸಬಹುದು. ವಿದ್ಯಾರ್ಥಿಗಳು ತಮ್ಮ ಅಧ್ಯಯನವನ್ನು ಗಂಭೀರವಾಗಿ ಪರಿಗಣಿಸಲಿದ್ದಾರೆ. ಈ ಕಾರಣದಿಂದಾಗಿ ನೀವು ಉತ್ತಮ ಫಲಿತಾಂಶ ಪಡೆಯಲಿದ್ದೀರಿ. ಆರೋಗ್ಯದ ವಿಚಾರದಲ್ಲಿ ಈ ವಾರವು ತುಂಬಾ ಚೆನ್ನಾಗಿರಲಿದೆ. ಆದರೂ ನಿಮ್ಮ ಆರೋಗ್ಯದ ಕಡೆಗೆ ಗಮನ ನೀಡಿ. ಪ್ರಯಾಣದ ವಿಚಾರದಲ್ಲಿ ಈ ವಾರವು ತುಂಬಾ ಬಿಡುವಿಲ್ಲದ ವಾರ ಎನಿಸಲಿದೆ.

ಮಕರ:ಈ ವಾರವು ನಿಮಗೆ ಸಾಧಾರಣವಾಗಿ ಉತ್ಪಾದಕ ವಾರ ಎನಿಸಲಿದೆ. ವಿವಾಹಿತ ಜೋಡಿಗಳ ಕೌಟುಂಬಿಕ ಬದುಕು ಚೆನ್ನಾಗಿರಲಿದೆ. ಆದರೆ ಅವರ ಸಂಬಂಧದಲ್ಲಿ ಒಂದಷ್ಟು ಭಿನ್ನಾಭಿಪ್ರಾಯಗಳು ಕಾಣಿಸಿಕೊಳ್ಳಬಹುದು. ಪ್ರೇಮ ಸಂಬಂಧದಲ್ಲಿರುವ ಜನರು ತಮ್ಮ ಬುದ್ಧಿಮತ್ತೆಯನ್ನು ಬಳಸಿ, ಪ್ರೇಮ ಸಂಗಾತಿಯನ್ನು ಸಂತುಷ್ಟಗೊಳಿಸುವಲ್ಲಿ ಯಶಸ್ವಿಯಾಗಲಿದ್ದಾರೆ. ಕೆಲಸದಲ್ಲಿ ಯಶಸ್ಸು ಸಾಧಿಸುವುದಕ್ಕಾಗಿ ನೀವು ಎಲ್ಲಾ ಪ್ರಯತ್ನಗಳನ್ನು ಮಾಡಬೇಕು. ದೈಹಿಕ ಶ್ರಮದ ಜೊತೆಗೆ ಮಾನಸಿಕ ಪ್ರಯತ್ನವೂ ಬೇಕು. ನಿಮ್ಮ ಕಂಪನಿಯನ್ನು ಮುನ್ನಡೆಸಲು ನಿಮಗೆ ನೆರವು ಒದಗಿಸಲಿರುವ ಉದ್ಯಮಿಯೊಬ್ಬರು ನಿಮ್ಮ ಸಂಪರ್ಕಕ್ಕೆ ಬರಲಿದ್ದಾರೆ. ಉದ್ಯೋಗದಲ್ಲಿರುವವರಿಗೆ ಈ ವಾರವು ಪ್ರೋತ್ಸಾಹದಾಯಕ ಎನಿಸಲಿದೆ. ನೀವು ಎಲ್ಲಾ ಪ್ರಯತ್ನ ಮಾಡಲಿದ್ದು, ನಿಮಗೆ ದೊರೆಯುವ ಫಲಿತಾಂಶದಲ್ಲಿ ಇದು ವ್ಯಕ್ತವಾಗಲಿದೆ. ವಿದ್ಯಾರ್ಥಿಗಳ ವಿಚಾರದಲ್ಲಿ ಹೇಳುವುದಾದರೆ, ತಮ್ಮ ಚತುರ ಬುದ್ಧಿಮತ್ತೆಯನ್ನು ಬಳಸಿ ತಮ್ಮ ಅಧ್ಯಯನದಲ್ಲಿ ಪ್ರಗತಿ ಸಾಧಿಸಲಿದ್ದಾರೆ. ಈ ವಾರದಲ್ಲಿ ದೊಡ್ಡ ಸಾಧನೆಯು ಸಾಧ್ಯವಾಗಲಿದೆ. ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು. ಇಂತಹ ಸಂದರ್ಭದಲ್ಲಿ ನಿಮ್ಮ ಆರೋಗ್ಯಕ್ಕೆ ಆದ್ಯತೆ ನೀಡಬೇಕು. ನಿಮ್ಮ ಆಹಾರಕ್ರಮದ ಮೇಲೆ ನೀವು ಕಣ್ಣಿಡಬೇಕು. ವಾರದ ಕೊನೆಯ ದಿನವು ಪ್ರಯಾಣಕ್ಕೆ ಅತ್ಯುತ್ತಮ.

ಕುಂಭ:ವಿವಾಹಿತ ಜೋಡಿಗಳ ಪಾಲಿಗೆ ಇದು ಅದ್ಭುತ ಸಮಯ ಎನಿಸಲಿದೆ. ಪರಸ್ಪರ ಅರ್ಥೈಸುವಿಕೆಯನ್ನು ನೀವು ಗಮನದಲ್ಲಿಟ್ಟುಕೊಂಡಲ್ಲಿ ಕೌಟುಂಬಿಕ ಬದುಕಿನಲ್ಲಿ ಸಂತಸ ಕಾಪಾಡಲು ನಿಮಗೆ ಸಾಧ್ಯವಾಗುತ್ತದೆ. ಪ್ರೇಮ ಸಂಬಂಧದಲ್ಲಿರುವರಿಗೆ ಈ ವಾರವು ಲಾಭದಾಯಕ ಎನಿಸಲಿದೆ. ವಾರದ ಆರಂಭದಲ್ಲಿ ನಿಮ್ಮ ಪ್ರೇಮ ಸಂಗಾತಿಯೊಂದಿಗೆ ನೀವು ಡೇಟ್‌ಗೆ ಹೋಗಬಹುದು. ಇದು ನಿಮಗೆ ಪ್ರೇಮ ಸಂಬಂಧವನ್ನು ಪ್ರಾರಂಭಿಸಲು ನೆರವಾಗಲಿದೆ. ಈ ಸಂಬಂಧವು ಪ್ರೀತಿ ಮತ್ತು ಪ್ರಣಯದಿಂದ ಕೂಡಿರಲಿದೆ. ನಿಮ್ಮ ಆದಾಯದಲ್ಲಿ ಹೆಚ್ಚಳ ಉಂಟಾಗಲಿದ್ದು, ಸಂತಸದ ಮನೋಭಾವ ನಿಮ್ಮಲ್ಲಿ ಉಂಟಾಗಲಿದೆ. ಹಣಕಾಸಿನ ಸಮಸ್ಯೆಗಳು ಉಂಟಾಗಬಹುದು. ಆದರೆ ಇದನ್ನು ಹೇಗೆ ನಿಭಾಯಿಸಬೇಕು ಎನ್ನುವುದು ನಿಮಗೆ ತಿಳಿದಿದೆ. ಉದ್ಯೋಗದಲ್ಲಿರುವವರಿಗೆ ಈ ವಾರ ಚೆನ್ನಾಗಿರಲಿದೆ. ನೀವು ಕೆಲಸ ಮಾಡಿದಲ್ಲಿ ಪ್ರಗತಿ ಸಾಧಿಸಲಿದ್ದೀರಿ. ಏಕೆಂದರೆ ನೀವು ಎಂದಿಗೂ ಹಿಂಜರಿಯದ ಸಮರ್ಪಿತ ವ್ಯಕ್ತಿಯಾಗಿದ್ದೀರಿ. ನೀವು ಆಡಳಿತ ವರ್ಗದ ಬೆಂಬಲ ಪಡೆಯಲಿದ್ದು ಇದು ನಿಮ್ಮ ಅಧಿಕಾರವನ್ನು ವರ್ಧಿಸಲಿದೆ. ಆದರೆ ನಿಮಗೆ ಚೆನ್ನಾಗಿ ತಿಳಿದಿರುವ ಕೆಲಸವನ್ನು ನೀವು ಕಂಡುಕೊಳ್ಳಬೇಕು. ಆದರೆ ಇದನ್ನು ಇನ್ನೂ ಕಂಡುಕೊಳ್ಳದೆ ಇರುವ ಸಾಧ್ಯತೆಗಳು ಹೆಚ್ಚು. ವ್ಯಾಪಾರೋದ್ಯಮಿಗಳಿಗೆ ಈ ವಾರವು ಚೆನ್ನಾಗಿರಲಿದೆ. ನಿಮ್ಮ ಪ್ರಯತ್ನಗಳಿಗೆ ಫಲಿತಾಂಶ ದೊರೆಯಲಿದೆ ಹಾಗೂ ನಿಮ್ಮ ಆದಾಯದ ಒಳಹರಿವು ಚೆನ್ನಾಗಿರಲಿದೆ. ವಿದ್ಯಾರ್ಥಿಗಳಿಗೆ ಓದುವಿಕೆಯು ಆನಂದ ತಂದು ಕೊಡಲಿದೆ. ವಿವಿಧ ವಿಷಯಗಳನ್ನು ಕಲಿಯಲು ಅವರಿಗೆ ಸಾಧ್ಯವಾಗಲಿದೆ. ತಾಂತ್ರಿಕ ಮತ್ತು ಕಲಾ ವಿದ್ಯಾರ್ಥಿಗಳಿಗೆ ವಾರದ ಕೊನೆಯ ದಿನದಲ್ಲಿ ಪ್ರಯೋಜನ ದೊರೆಯಲಿದೆ. ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ ನೀವು ಆರೋಗ್ಯಯುತ ಜೀವನವನ್ನು ನಡೆಸಲಿದ್ದೀರಿ. ನಿಮ್ಮ ಆತ್ಮವಿಶ್ವಾಸದಲ್ಲಿ ಹೆಚ್ಚಳ ಉಂಟಾಗಲಿದ್ದು ಆತ್ಮಸ್ಥೈರ್ಯವು ಅಧಿಕ ಮಟ್ಟದಲ್ಲಿರುತ್ತದೆ.

ಮೀನ:ಈ ವಾರದಲ್ಲಿ ನಿಮ್ಮ ಕುಟುಂಬ ಮತ್ತು ಜೀವನ ಸಂಗಾತಿಯ ನಡುವೆ ಒಂದಷ್ಟು ಸಮಸ್ಯೆಗಳು ಉಂಟಾಗಬಹುದು. ಮಧ್ಯಪ್ರವೇಶ ಮಾಡುವ ಮೂಲಕ ಪರಿಸ್ಥಿತಿಯನ್ನು ನೀವು ಬಗೆಹರಿಸಬಹುದು. ನಿಮ್ಮ ಉತ್ತಮ ಸಂವಹನ ಬಲದ ಮೂಲಕ ಪ್ರೇಮದ ಬದುಕನ್ನು ಸಾಗಿಸುವ ಜನರು ತಮ್ಮ ಸಂಗಾತಿಯ ಹೃದಯವನ್ನು ಗೆಲ್ಲುವಲ್ಲಿ ಯಶಸ್ವಿಯಾಗಲಿದ್ದಾರೆ. ವಾರದ ಆರಂಭದಲ್ಲಿ ನಿಮ್ಮ ಕುಟುಂಬದ ಅಗತ್ಯತೆಗಳಿಗೆ ನೀವು ಗಮನ ಹರಿಸಲಿದ್ದೀರಿ. ಮನೆಯ ಖರ್ಚುವೆಚ್ಚಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದು ಒಳ್ಳೆಯದು. ಅಲ್ಲದೆ ಈ ವಾರದಲ್ಲಿ ನಿಮ್ಮ ತಾಯಿಗೆ ವಿಶೇಷ ಪ್ರೀತಿಯನ್ನು ನೀಡಲು ಪ್ರಾರಂಭಿಸುವುದು ಒಳ್ಳೆಯದು. ನಿಮ್ಮ ಆದಾಯವು ಚೆನ್ನಾಗಿರಲಿದೆ. ಆದರೆ ಇತ್ತೀಚಿನ ಖರ್ಚುವೆಚ್ಚಗಳು ಹೆಚ್ಚಲಿವೆ. ಸಂಬಳಕ್ಕೆ ದುಡಿಯುವ ವ್ಯಕ್ತಿಗಳು ಕೆಲಸದಲ್ಲಿ ಶಕ್ತಿಶಾಲಿಯಾಗಿ ಹೊರಹೊಮ್ಮಲಿದ್ದು ತಮ್ಮ ಅಸ್ತಿತ್ವವನ್ನು ತೋರಿಸಿ ಕೊಡಲಿದ್ದಾರೆ. ವ್ಯಾಪಾರೋದ್ಯಮಿಗಳು ತಮ್ಮ ವೃತ್ತಿಯಲ್ಲಿ ಪ್ರಗತಿ ಸಾಧಿಸುವುದಕ್ಕಾಗಿ ಹೊಸ ವ್ಯಕ್ತಿಗಳನ್ನು ಭೇಟಿಯಾಗಲಿದ್ದಾರೆ. ವಿದ್ಯಾರ್ಥಿಗಳು ತಮ್ಮ ಶಿಕ್ಷಣದ ಸವಾಲುಗಳನ್ನು ಮೀರಿ ನಿಲ್ಲುವಲ್ಲಿ ಯಶಸ್ವಿಯಾಗಲಿದ್ದಾರೆ. ನೀವು ಯಶಸ್ವಿಯಾಗಿ ಮುಂದೆ ಸಾಗಲಿದ್ದೀರಿ. ನಿಮ್ಮ ಫಲಿತಾಂಶಗಳಲ್ಲೂ ಸುಧಾರಣೆ ಕಂಡು ಬರಲಿದೆ. ವಿದೇಶಕ್ಕೆ ಪ್ರಯಾಣಿಸಲು ನಿಮಗೆ ಅವಕಾಶ ದೊರೆಯಲಿದೆ. ನಿಮ್ಮ ಆರೋಗ್ಯದಲ್ಲಿ ಸುಧಾರಣೆ ಕಂಡು ಬರಲಿದೆ. ನೀವು ಬೇಜವಾಬ್ದಾರಿಯಿಂದ ವರ್ತಿಸಿದರೆ ಕೆಲವೊಂದು ಸಮಸ್ಯೆಗಳು ಉಂಟಾಗಬಹುದು. ಅಲ್ಲದೆ ಅವು ದೊಡ್ಡ ಸಮಸ್ಯೆಯಾಗಿ ರೂಪುಗೊಳ್ಳಬಹುದು. ವಾರದ ಆರಂಭವು ಪ್ರವಾಸಕ್ಕೆ ಹೋಗಲು ಅತ್ಯುತ್ತಮ.

ABOUT THE AUTHOR

...view details