ಕರ್ನಾಟಕ

karnataka

ETV Bharat / bharat

ಈ ವಾರವು ಅದೃಷ್ಟ ಹೊತ್ತು ತರಲಿದೆ.. ಕೌಟುಂಬಿಕ ಜೀವನವು ಆನಂದದಿಂದ ಕೂಡಿರಲಿದೆ - ರಾಶಿಫಲ

Weekly Horoscope: ಈ ವಾರದ ರಾಶಿ ಭವಿಷ್ಯ ಈ ಕೆಳಗಿನಂತಿದೆ..

Etv bharat weekly horoscope
ವಾರದ ರಾಶಿ ಭವಿಷ್ಯ

By

Published : Feb 13, 2022, 2:47 AM IST

Updated : Feb 13, 2022, 4:00 AM IST

ಮೇಷ: ಈ ವಾರದಲ್ಲಿ ನಿಮ್ಮ ಭೀತಿಯನ್ನು ತೊಲಗಿಸಿ ನೀವು ಮುಂದೆ ಸಾಗಬೇಕು. ಇಲ್ಲದಿದ್ದರೆ ನೀವು ಸಮಸ್ಯೆಯ ಸುಳಿಯಲ್ಲಿ ಸಿಲುಕಲಿದ್ದೀರಿ. ವಾರದ ಮಧ್ಯದಲ್ಲಿ, ನಿಮ್ಮ ಕೌಟುಂಬಿಕ ಜೀವನವನ್ನು ಆನಂದಿಸಲು ನೀವು ಎಲ್ಲಾ ಪ್ರಯತ್ನ ಮಾಡಲಿದ್ದೀರಿ. ಅಲ್ಲದೆ ನಿಮ್ಮ ಜೀವನ ಸಂಗಾತಿಯ ಆಸಕ್ತಿಯ ಏನಾದರೂ ಕೆಲಸವನ್ನು ನೀವು ಮಾಡಲಿದ್ದೀರಿ. ಇದು ಅವರನ್ನು ಸಂತಸಪಡಿಸಲಿದೆ. ನೀವು ಯಾರನ್ನಾದರೂ ಪ್ರೀತಿಸುತ್ತಿದ್ದರೆ, ಈ ವಾರವು ನಿಮ್ಮ ಪಾಲಿಗೆ ಅನುಕೂಲಕರ ಎನಿಸಲಿದೆ. ನಿಮ್ಮ ಸಂಬಂಧದಲ್ಲಿ ಅನ್ಯೋನ್ಯತೆಯು ವೃದ್ಧಿಸಲಿದೆ. ಉದ್ಯೋಗದಲ್ಲಿರುವವರು ತಮ್ಮ ಕಠಿಣ ಶ್ರಮಕ್ಕೆ ತಕ್ಕುದಾದ ಫಲವನ್ನು ಪಡೆಯಲಿದ್ದಾರೆ. ನೀವು ಭಡ್ತಿ ಅಥವಾ ವೇತನದಲ್ಲಿ ಹೆಚ್ಚಳ ನಿರೀಕ್ಷಿಸಬಹುದು. ಇದು ನಿಮಗೆ ಒಂದಲ್ಲ ಒಂದು ರೀತಿಯಲ್ಲಿ ಪ್ರಯೋಜನ ತಂದು ಕೊಡಬಹುದು. ವ್ಯಾಪಾರೋದ್ಯಮಿಗಳು ಈ ವಾರದಲ್ಲಿ ಉತ್ತಮ ಲಾಭ ಪಡೆಯಲಿದ್ದಾರೆ. ವಿದೇಶ ಅಥವಾ ದೂರದ ಸ್ಥಳದಿಂದ ನೀವು ಕೆಲಸದ ಆರ್ಡರ್‌ ಪಡೆಯಬಹುದು. ನಿಮ್ಮ ವಿರೋಧಿಗಳ ಮೇಲೆ ನೀವು ಯಶಸ್ಸು ಸಾಧಿಸಲಿದ್ದೀರಿ. ವಿದ್ಯಾರ್ಥಿಗಳಿಗೆ ಆಳ ಅಧ್ಯಯನದಲ್ಲಿ ತೊಡಗಿಸಿಕೊಳ್ಳಲು ಇದು ಸಕಾಲ. ಈ ಕಾಲದಲ್ಲಿ ವಿದ್ಯಾರ್ಥಿಗಳು ಉತ್ತಮ ಶೈಕ್ಷಣಿಕ ಸಾಧನೆ ಮಾಡಲಿದ್ದಾರೆ. ಆರೋಗ್ಯಕ್ಕೆ ಸಂಬಂಧಿಸಿದಂತೆ, ಈ ವಾರದಲ್ಲಿ ನಿಮ್ಮ ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ. ಯಾವುದೇ ದೊಡ್ಡ ಕಾಯಿಲೆ ನಿಮಗೆ ಕಾಡುವುದಿಲ್ಲ. ಆದರೂ, ನಿಮ್ಮ ಊಟದ ಅಭ್ಯಾಸದ ಕುರಿತು ನೀವು ಎಚ್ಚರಿಕೆ ವಹಿಸಬೇಕು. ವಾರದ ನಡುವಿನ ದಿನಗಳು ಪ್ರಯಾಣಿಸಲು ಉತ್ತಮ.

ವೃಷಭ:ಈ ವಾರದಲ್ಲಿ ನಿಮ್ಮ ಮಕ್ಕಳ ಜೊತೆಗಿನ ಸಂಬಂಧವು ಗಟ್ಟಿಗೊಳ್ಳಲಿದೆ. ಅವರ ಜೊತೆಗೆ ಕಾಲ ಕಳೆಯುವುದನ್ನು ನೀವು ಆನಂದಿಸಲಿದ್ದೀರಿ. ಸಾಧ್ಯವಿರುವ ಎಲ್ಲವನ್ನೂ ನೀವು ಅವರಿಗಾಗಿ ಮಾಡಲಿದ್ದೀರಿ. ಒಳ್ಳೆಯ ಉಡುಗೊರೆಗಳು ಅಥವಾ ಆಟಿಕೆಗಳನ್ನು ನೀವು ಅವರಿಗಾಗಿ ತರಲಿದ್ದೀರಿ. ಸಂಬಂಧದಲ್ಲಿರುವವರಿಗೆ ಈ ವಾರವು ಅತ್ಯಂತ ಅನುಕೂಲಕರ ಎನಿಸಲಿದೆ. ನಿಮ್ಮಿಬ್ಬರ ನಡುವಿನ ಸಂವಹನದಲ್ಲಿ ಸಾಕಷ್ಟು ಸುಧಾರಣೆ ಉಂಟಾಗಲಿದೆ. ಇದು ನಿಮ್ಮ ಸಂಬಂಧವನ್ನು ಗಟ್ಟಿಗೊಳಿಸಲಿದೆ. ವಿವಾಹಿತರ ಕೌಟುಂಬಿಕ ಬದುಕಿನಲ್ಲಿ ಒತ್ತಡ ಕಡಿಮೆಯಾಗಲಿದೆ. ಪರಸ್ಪರ ಗೌರವಿಸುವ ಮೂಲಕ ನಿಮ್ಮ ಬದುಕನ್ನು ನೀವು ಮುಕ್ತವಾಗಿ ಬದುಕಲಿದ್ದೀರಿ. ಈ ವಾರವು ವ್ಯಾಪಾರೋದ್ಯಮಿಗಳಿಗೆ ಮಿಶ್ರ ಫಲಿತಾಂಶ ತರಲಿದೆ. ನಿಮ್ಮ ಕೆಲಸದಲ್ಲಿ ನೀವು ಹೆಚ್ಚಿನ ಶ್ರಮ ಪಡಬೇಕಾಗುತ್ತದೆ. ಉದ್ಯೋಗದಲ್ಲಿರುವವರು ತಮ್ಮ ಕಠಿಣ ಶ್ರಮಕ್ಕೆ ತಕ್ಕುದಾದ ಫಲವನ್ನು ಪಡೆಯಲಿದ್ದಾರೆ. ಈ ವಾರದಲ್ಲಿ ವೇತನದಲ್ಲಿ ಹೆಚ್ಚಳ ನಿರೀಕ್ಷಿಸಬಹುದು. ವೃಷಭ ರಾಶಿಯ ವಿದ್ಯಾರ್ಥಿಗಳಿಗೆ ಇದು ಸಕಾಲ. ನಿಮ್ಮ ಅಧ್ಯಯನವನ್ನು ನೀವು ಆನಂದಿಸಲಿದ್ದೀರಿ. ಉನ್ನತ ಅಧ್ಯಯನ ಅಥವಾ ತಾಂತ್ರಿಕ ಅಧ್ಯಯನದಲ್ಲಿ ತೊಡಗಿಸಿಕೊಂಡಿರುವವರು ಅತ್ಯುತ್ತಮ ಫಲಿತಾಂಶ ಪಡೆಯಲಿದ್ದಾರೆ. ಈ ವಾರದಲ್ಲಿ ನಿಮ್ಮ ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು. ಹೀಗಾಗಿ ನಿಮ್ಮ ಆರೋಗ್ಯದ ಕುರಿತು ಸರಿಯಾದ ಕಾಳಜಿ ವಹಿಸಬೇಕು. ವಾರದ ಕೊನೆಯ ಕೆಲವು ದಿನಗಳು ಪ್ರಯಾಣಿಸಲು ಅತ್ಯುತ್ತಮ.

ಮಿಥುನ:ವಾರದ ಆರಂಭದಲ್ಲಿ, ಕುಟುಂಬದ ಜೊತೆ ಸೇರಿಕೊಂಡು ನೀವು ಕೆಲವೊಂದು ಅಗತ್ಯ ಚಟುವಟಿಕೆಗಳನ್ನು ಪೂರ್ಣಗೊಳಿಸಲಿದ್ದೀರಿ. ದೀರ್ಘ ಕಾಲದಿಂದ ಬಾಕಿ ಉಳಿದಿದ್ದ ಕೆಲಸ ಪೂರ್ಣಗೊಳ್ಳಬಹುದು. ಇದು ನಿಮ್ಮಲ್ಲಿ ಸಂತಸ ತರಲಿದೆ. ನಿಮ್ಮ ಕೌಟುಂಬಿಕ ಬದುಕಿನಲ್ಲಿ ಸಂಭ್ರಮ ಉಂಟಾಗಬಹುದು. ನಿಮ್ಮ ಮಕ್ಕಳ ಕುರಿತು ನೀವು ಕಾಳಜಿ ವಹಿಸುತ್ತೀರಿ. ಪ್ರೇಮ ಸಂಬಂಧದಲ್ಲಿರುವವರು ತಮ್ಮ ಹೃದಯ ಬಿಚ್ಚಿ ಮಾತನಾಡಲು ಅವಕಾಶ ಪಡೆಯಲಿದ್ದು ತಮ್ಮ ಪ್ರೇಮ ಸಂಗಾತಿಯ ಜೊತೆಗೆ ಭಾವನೆಗಳನ್ನು ಹಂಚಿಕೊಳ್ಳಲಿದ್ದಾರೆ. ಈ ವಾರದಲ್ಲಿ ಪ್ರಣಯದ ಮೇಲೆ ವಿಶೇಷ ಗಮನ ನೀಡಲಿದ್ದೀರಿ. ವಿವಾಹಿತ ವ್ಯಕ್ತಿಗಳ ಕೌಟುಂಬಿಕ ಬದುಕು ಸಂತೃಪ್ತಿಯಿಂದ ಕೂಡಿರಲಿದೆ. ನಿಮ್ಮ ಅತ್ತೆ ಮಾವಂದಿರ ಜೊತೆಗೆ ನೀವು ಉತ್ತಮ ಸಂವಾದ ನಡೆಸಲಿದ್ದೀರಿ. ಈ ವಾರವು ವ್ಯಾಪಾರೋದ್ಯಮಿಗಳಿಗೆ ಒಳ್ಳೆಯದು. ವ್ಯವಹಾರ ಮತ್ತು ಕೆಲಸದಲ್ಲಿ ಹೆಚ್ಚಳ ಉಂಟಾಗಬಹುದು. ಉದ್ಯೋಗಿಗಳು ಒಂದಷ್ಟು ಶುಭ ಸುದ್ದಿ ಪಡೆಯಬಹುದು. ಆದರೆ ನಿಮ್ಮಲ್ಲಿ ಅತಿಯಾದ ನಿರೀಕ್ಷೆ ಇರುವುದರಿಂದ ಕೆಲಸದ ಸ್ಥಳದಲ್ಲಿ ನೀವು ನಿರಾಸೆಗೆ ಒಳಗಾಗಬಹುದು. ಈ ವಾರವು ವಿದ್ಯಾರ್ಥಿಗಳಿಗೆ ಒಳ್ಳೆಯದು. ಶೈಕ್ಷಣಿಕ ವಿಷಯಗಳಿಗೆ ನೀವು ವಿಶೇಷ ಗಮನ ನೀಡಲಿದ್ದೀರಿ. ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ, ನಿಮ್ಮ ಆರೋಗ್ಯದಲ್ಲಿ ಸುಧಾರಣೆ ಉಂಟಾಗಲಿದೆ. ಅಲ್ಲದೆ ನೀವು ಉತ್ತಮ ಆಕಾರವನ್ನು ಪಡೆಯಲಿದ್ದೀರಿ. ಈ ನಡುವೆ ಋತುಮಾನಕ್ಕೆ ಸಂಬಂಧಪಟ್ಟಿ ಒಂದಷ್ಟು ಸಣ್ಣಪುಟ್ಟ ಕಾಯಿಲೆಗಳು ನಿಮ್ಮನ್ನು ಕಾಡಬಹುದು. ನಿಮ್ಮ ಆರೋಗ್ಯದ ಕುರಿತು ಕಾಳಜಿ ವಹಿಸಿ. ವಾರದ ಮಧ್ಯ ಭಾಗವು ಪ್ರವಾಸಕ್ಕೆ ಹೋಗಲು ಅತ್ಯುತ್ತಮ.

ಕರ್ಕಾಟಕ:ನಿಮ್ಮ ಬಳಿ ಸಾಕಷ್ಟು ಸಮಯಾವಕಾಶ ಇರುವುದರಿಂದ ಈ ವಾರದಲ್ಲಿ ನಿಮ್ಮ ಪ್ರೀತಿ ಪಾತ್ರರೊಂದಿಗೆ ಗುಣಮಟ್ಟದ ಸಮಯ ಕಳೆಯಲು ನಿಮಗೆ ಸಾಧ್ಯವಾಗುತ್ತದೆ. ಮನೆಯ ವಾತಾವರಣ ಚೆನ್ನಾಗಿರಲಿದೆ. ಆಸ್ತಿಗೆ ಸಂಬಂಧಿಸಿದಂತೆ ಸಮಸ್ಯೆ ಉಂಟಾಗಬಹುದು. ಪ್ರಣಯಭರಿತ ಸಂಬಂಧದಲ್ಲಿರುವವರ ದಿನಚರಿ ಈ ವಾರದಲ್ಲಿ ಸಾಮಾನ್ಯ ಮಟ್ಟದಲ್ಲಿರುತ್ತದೆ. ನಿಮ್ಮ ಸಂಬಂಧದಲ್ಲಿ ಸ್ವಲ್ಪ ಇಳಿತ ಕಂಡುಬರಬಹುದು. ವಿವಾಹಿತ ವ್ಯಕ್ತಿಗಳ ಕೌಟುಂಬಿಕ ಬದುಕು ಚೆನ್ನಾಗಿರಲಿದೆ. ಈ ಕಾಲದಲ್ಲಿ ನಿಮ್ಮ ಸಂಬಂಧದ ಕುರಿತು ಗಂಭೀರವಾಗಿ ಯೋಚಿಸಿ ಸೌಹಾರ್ದತೆಯನ್ನು ಕಾಪಾಡಲು ಯತ್ನಿಸಬೇಕು. ಉದ್ಯೋಗದಲ್ಲಿರುವವರು ಕಠಿಣ ಶ್ರಮವನ್ನು ಮುಂದುವರಿಸಬೇಕು. ಇದು ಈಗ ಮತ್ತು ಭವಿಷ್ಯದಲ್ಲಿ ನಿಮಗೆ ಒಳ್ಳೆಯ ಫಲಿತಾಂಶ ತಂದು ಕೊಡಲಿದೆ. ವ್ಯಾಪಾರೋದ್ಯಮದಲ್ಲಿ ತೊಡಗಿರುವವರ ಕೆಲಸದಲ್ಲಿ ಉತ್ತಮ ಪ್ರಗತಿ ಉಂಟಾಗಲಿದೆ. ನಿಮ್ಮ ಕೆಲಸದ ವ್ಯಾಪ್ತಿಯನ್ನು ವಿಸ್ತರಿಸಲು ಇದು ಸಕಾಲ. ಅಧ್ಯಯನದ ವಿಚಾರದಲ್ಲಿ ಈ ವಾರವು ತುಂಬಾ ಚೆನ್ನಾಗಿರಲಿದೆ. ವಿದ್ಯಾರ್ಥಿಗಳು ಅನೇಕ ಹೊಸ ವಿಚಾರಗಳನ್ನು ಕಲಿಯಲಿದ್ದಾರೆ. ನಿಮ್ಮ ಉತ್ತಮ ಆರೋಗ್ಯದ ಕಾರಣ ವಾರದ ಮೊದಲಿನಿಂದಲೇ ನೀವು ಚೈತನ್ಯಭರಿತರಾಗಿ ಕಾರ್ಯ ನಿರ್ವಹಿಸಲಿದ್ದೀರಿ. ಅಲ್ಲದೆ ಎಲ್ಲವನ್ನೂ ಸಕಾಲದಲ್ಲಿ ಪೂರ್ಣಗೊಳಿಸಲು ಯತ್ನಿಸಲಿದ್ದೀರಿ. ಇದಕ್ಕಾಗಿ ನಿಮಗೆ ಸಾಕಷ್ಟು ಸಮಯವಕಾಶ ದೊರೆಯಲಿದೆ. ವಾರದ ಆರಂಭಿಕ ಭಾಗವು ಪ್ರಯಾಣಕ್ಕೆ ಅನುಕೂಲಕರ.

ಸಿಂಹ:ಈ ವಾರದಲ್ಲಿ ವಿವಾಹಿತ ವ್ಯಕ್ತಿಗಳ ವೈವಾಹಿಕ ಬದುಕಿನಲ್ಲಿ ಕೆಲವೊಂದು ಸವಾಲುಗಳು ಎದುರಾಗಬಹುದು. ಏಕೆಂದರೆ ಪರಸ್ಪರ ಅರಿತುಕೊಳ್ಳುವಿಕೆಯ ಕೊರತೆಯ ಕಾರಣ ಸಂಬಂಧದಲ್ಲಿ ಒಂದಷ್ಟು ಬಿರುಕು ಉಂಟಾಗಬಹುದು. ಪ್ರಣಯಭರಿತ ಸಂಬಂಧದಲ್ಲಿರುವವರಿಗೆ ಈ ವಾರವು ಆಶಾದಾಯಕವೆನಿಸಲಿದೆ. ನಿಮ್ಮ ಸಂಬಂಧದಲ್ಲಿ ಅನುರಾಗವನ್ನು ಕಾಪಾಡಲು ನಿಮಗೆ ಸಾಧ್ಯವಾಗುತ್ತದೆ. ಇದು ಸಂಬಂಧಕ್ಕೆ ಹೊಸ ಸಂವೇದನೆ ತಂದು ಕೊಡಲಿದೆ. ಈ ರಾಶಿಯವರು ಕೆಲಸದಲ್ಲಿ ಯಶಸ್ಸು ಗಳಿಸಲಿದ್ದಾರೆ. ಇದರಿಂದಾಗಿ ಇವರ ಹಣಕಾಸಿನ ಸ್ಥಿತಿಯಲ್ಲಿ ಸುಧಾರಣೆ ಉಂಟಾಗಲಿದೆ. ನಿಮ್ಮ ಆತ್ಮವಿಶ್ವಾಸ ಉನ್ನತ ಮಟ್ಟದಲ್ಲಿರುವುದರಿಂದ ಕೆಲಸವನ್ನು ಸಕಾಲದಲ್ಲಿ ಮಾಡಿಸುವುದರಲ್ಲಿ ನೀವು ಯಶಸ್ವಿಯಾಗಲಿದ್ದೀರಿ. ವ್ಯಾಪಾರೋದ್ಯಮಿಗಳಿಗೆ ಈ ವಾರವು ಉತ್ತಮ ಫಲ ನೀಡಲಿದ್ದು ಅವರು ಒಳ್ಳೆಯ ಲಾಭ ಗಳಿಸಲಿದ್ದಾರೆ. ವ್ಯವಹಾರದಲ್ಲಿ ಗಣನೀಯ ಪ್ರಗತಿ ಉಂಟಾಗಲಿದೆ. ಉದ್ಯೋಗದಲ್ಲಿರುವ ಜನರು ಸಹ ತಮ್ಮ ಕೆಲಸದಲ್ಲಿ ಯಶಸ್ಸು ಗಳಿಸಲಿದ್ದಾರೆ. ಇದು ಅವರ ಆತ್ಮವಿಶ್ವಾಸವನ್ನು ವೃದ್ಧಿಸಲಿದೆ. ಆದಷ್ಟು ಜಾಗರೂಕತೆಯಿಂದ ಇರಿ ಹಾಗೂ ಕೌಟುಂಬಿಕ ಜವಾಬ್ದಾರಿಗಳನ್ನು ನಿರ್ಲಕ್ಷಿಸಬೇಡಿ. ಈ ಅವಧಿಯಲ್ಲಿ ವಿದ್ಯಾರ್ಥಿಗಳು ತಮ್ಮ ಅಧ್ಯಯನದಲ್ಲಿ ಸಾಕಷ್ಟು ಆಸಕ್ತಿ ತೋರಲಿದ್ದಾರೆ. ಅವರು ಶಿಕ್ಷಣದ ಮೇಲೆ ಗಮನ ಕೇಂದ್ರೀಕರಿಸಲಿದ್ದು ತಮ್ಮ ಪಠ್ಯಕ್ರಮವನ್ನು ಸಕಾಲದಲ್ಲಿ ಪೂರ್ಣಗೊಳಿಸಲು ಯತ್ನಿಸಲಿದ್ದಾರೆ. ಈ ಸಮಯದಲ್ಲಿ ನಿಮ್ಮ ಆರೋಗ್ಯ ಸಾಮಾನ್ಯ ಮಟ್ಟದಲ್ಲಿರಲಿದೆ. ಆದರೂ ಏನಾದರೂ ಸಣ್ಣಪುಟ್ಟ ಸಮಸ್ಯೆಗಳು ಇದ್ದಲ್ಲಿ ಅವುಗಳನ್ನು ನಿರ್ಲಕ್ಷಿಸಬೇಡಿ. ಇಲ್ಲದಿದ್ದರೆ ಸಮಸ್ಯೆ ಉಲ್ಬಣಿಸಬಹುದು.

ಕನ್ಯಾ:ಕನ್ಯಾ ರಾಶಿಯವರು ಈ ವಾರದಲ್ಲಿ ತಮ್ಮ ಸಂಬಂಧವನ್ನು ಮುಕ್ತವಾಗಿ ಆನಂದಿಸಲಿದ್ದಾರೆ. ಪ್ರಣಯಭರಿತ ಸಂಬಂಧದಲ್ಲಿ ಇರುವವರಿಗೆ ಇದು ಉತ್ತಮ ಕಾಲವೆನಿಸಲಿದೆ. ನಿಮ್ಮ ಅಕ್ಕರೆಯ ವ್ಯಕ್ತಿಯ ಜೊತೆಗಿನ ಅನ್ಯೋನ್ಯತೆಯು ವೃದ್ಧಿಸಲಿದೆ. ಈ ವಾರವು ಸಂಪೂರ್ಣ ಅನುರಾಗದಿಂದ ಪ್ರಾರಂಭಗೊಳ್ಳಲಿದೆ. ನಿಮಗೆ ಸಂಪೂರ್ಣ ತೃಪ್ತಿ ದೊರೆಯಲಿದ್ದು ಜನರನ್ನು ಪ್ರೇರೇಪಿಸಲು ಯತ್ನಿಸುತ್ತೀರಿ. ಅಪಾಯ ತೆಗೆದುಕೊಳ್ಳುವ ಪ್ರವೃತ್ತಿ ನಿಮ್ಮಲ್ಲಿ ಹೆಚ್ಚಲಿದ್ದು ಇದು ನಿಮ್ಮ ವ್ಯವಹಾರದಲ್ಲಿ ಉತ್ತಮ ಲಾಭ ತಂದು ಕೊಡಲಿದೆ. ಉದ್ಯೋಗದಲ್ಲಿರುವವ ದಕ್ಷತೆಯಲ್ಲಿ ಹೆಚ್ಚಳ ಉಂಟಾಗಲಿದೆ. ಕಠಿಣ ಶ್ರಮಕ್ಕಿಂತಲೂ ಚತುರತೆಯಿಂದ ಕೆಲಸ ಮಾಡುವ ಮೂಲಕ ಅವರು ಅದ್ಭುತ ಫಲಿತಾಂಶ ಪಡೆಯಲಿದ್ದಾರೆ. ವಿದ್ಯಾರ್ಥಿಗಳು ತಮ್ಮ ಅಧ್ಯಯನದಲ್ಲಿ ಉತ್ತಮ ಅಂಕ ಪಡೆಯಲಿದ್ದಾರೆ. ಕಠಿಣ ಶ್ರಮದ ಕಾರಣ ಇದು ಸಾಧ್ಯವಾಗಲಿದೆ. ಯಾವುದೇ ಗಂಭೀರ ಆರೋಗ್ಯ ಸಮಸ್ಯೆಗಳು ನಿಮ್ಮನ್ನು ಈಗ ಕಾಡುವುದಿಲ್ಲ. ಆದರೆ ಋತುಮಾನದ ಬದಲಾವಣೆಯ ಕುರಿತು ನೀವು ಜಾಗರೂಕರಾಗಿರಬೇಕು. ಇಲ್ಲದಿದ್ದರೆ ನೀವು ಸಮಸ್ಯೆ ಎದುರಿಸಬೇಕಾದೀತು. ಈ ವಾರವು ಪ್ರಯಾಣಕ್ಕೆ ಉತ್ತಮ. ಈ ವಾರದಲ್ಲಿ ನೀವು ಯಾವುದೇ ಪವಿತ್ರ ಸ್ಥಳಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ.

ತುಲಾ:ನಿಮ್ಮ ಪ್ರೇಮ ಬದುಕಿನಲ್ಲಿ ಅನುರಾಗವನ್ನು ಅನುಭವಿಸಲು ನಿಮಗೆ ಒಳ್ಳೆಯ ಅವಕಾಶ ದೊರೆಯುವುದರಿಂದ ನಿಮ್ಮ ಸಂಬಂಧವನ್ನು ನೀವು ಆನಂದಿಸುತ್ತೀರಿ. ಇನ್ನೂ ನೀವು ಏಕಾಂಗಿಯಾಗಿದ್ದು ಯಾರನ್ನಾದರೂ ಪ್ರೀತಿಸುತ್ತಿದ್ದರೆ, ಈ ಬಾರಿ ವ್ಯಾಲೆಂಟೀನ್ಸ್‌ ಡೇಯು ನಿಮ್ಮ ಪಾಲಿಗೆ ಅವಕಾಶದ ಬಾಗಿಲನ್ನು ತೆರೆಯಲಿದೆ. ನಿಮ್ಮ ಭಾವನೆಗಳನ್ನು ನೀವು ಅವರಿಗೆ ವ್ಯಕ್ತಪಡಿಸಬೇಕು. ಆದರೆ ನೀವು ಅವರಿಗೆ ಪ್ರಸ್ತಾವಿಸುವ ಮೊದಲು ಯಾರಿಗೂ ಅದು ತಿಳಿಯದಂತೆ ನೋಡಿಕೊಳ್ಳಿ. ಇಲ್ಲದಿದ್ದರೆ ಅದು ನಿಮಗೆ ಸಮಸ್ಯೆ ಅಥವಾ ಅಡಚಣೆಯನ್ನುಂಟು ಮಾಡಬಹುದು. ವಿವಾಹಿತ ವ್ಯಕ್ತಿಗಳ ಕೌಟುಂಬಿಕ ಬದುಕು ಚೆನ್ನಾಗಿರಲಿದೆ. ನಿಮ್ಮ ಸಂಬಂಧದಲ್ಲಿ ಅನುಗಾರ ಮೂಡಿ ಬರಲಿದೆ. ಅಲ್ಲದೆ ನಿಮ್ಮ ಜೀವನ ಸಂಗಾತಿಯ ಜೊತೆಗಿನ ಅನ್ಯೋನ್ಯತೆಯು ವೃದ್ಧಿಸಲಿದೆ. ಸಂಬಳಕ್ಕೆ ದುಡಿಯುವವರಿಗೆ ಈ ವಾರವು ಒಳ್ಳೆಯದು. ನಿಮ್ಮ ಕೆಲಸದಲ್ಲಿ ನೀವು ಸಾಕಷ್ಟು ಕಠಿಣ ಶ್ರಮ ತೋರಲಿದ್ದು ಇದಕ್ಕಾಗಿ ನಿಮಗೆ ಪ್ರಶಂಸೆ ವ್ಯಕ್ತವಾಗಲಿದೆ. ವ್ಯವಹಾರದಲ್ಲಿ ತೊಡಗಿಸಿಕೊಂಡಿರುವವರು ಪ್ರಯಾಣದ ಮೂಲಕ ಉತ್ತಮ ಲಾಭ ಗಳಿಸಲಿದ್ದಾರೆ. ವಿದ್ಯಾರ್ಥಿಗಳು ತಮ್ಮ ಅಧ್ಯಯನಕ್ಕೆ ಸಂಬಂಧಿಸಿದಂತೆ ಸಣ್ಣಪುಟ್ಟ ಸಮಸ್ಯೆಗಳನ್ನು ಎದುರಿಸಲಿದ್ದಾರೆ. ಆದರೆ ಶಿಕ್ಷಣದ ಕುರಿತು ಹೆಚ್ಚೇನು ಚಿಂತಿಸಬೇಕಾದ ಅಗತ್ಯವಿಲ್ಲ. ವಿದ್ಯಾರ್ಥಿಗಳು ತಮ್ಮ ಕಲಿಕೆಗೆ ಮೀಸಲಿಡುವ ಸಮಯವನ್ನು ಹೆಚ್ಚಿಸಬೇಕು ಮತ್ತು ಯೋಚಿತ ವೇಳಾಪಟ್ಟಿಯಂತೆ ಕಾರ್ಯ ನಿರ್ವಹಿಸಬೇಕು. ಅರೋಗ್ಯದ ವಿಚಾರದಲ್ಲಿ ಹೇಳುವುದಾದರೆ ಈ ವಾರದಲ್ಲಿ ಧನಾತ್ಮಕ ಮನೋಭಾವ ನಿಮ್ಮಲ್ಲಿ ಕಂಡು ಬರುತ್ತದೆ. ಏಕೆಂದರೆ ನಿಮ್ಮ ಆರೋಗ್ಯವು ಚೆನ್ನಾಗಿರುತ್ತದೆ ಹಾಗೂ ನೀವು ಕೆಲಸ ಮಾಡುವುದನ್ನು ಆನಂದಿಸಲಿದ್ದೀರಿ.

ವೃಶ್ಚಿಕ:ಈ ವಾರ ನಿಮಗೆ ಅತ್ಯುತ್ತಮ ಫಲ ದೊರೆಯಲಿದೆ. ವಿವಾಹಿತ ವ್ಯಕ್ತಿಗಳ ಕೌಟುಂಬಿಕ ಬದುಕು ಚೆನ್ನಾಗಿರಲಿದೆ. ಪ್ರಣಯಭರಿತ ಸಂಬಂಧದಲ್ಲಿರುವವರು ತಮ್ಮ ಸಂಬಂಧವನ್ನು ಹೊಸ ಉತ್ತುಂಗಕ್ಕೆ ಕೊಂಡೊಯ್ಯಲಿದ್ದಾರೆ ಹಾಗೂ ತಮ್ಮ ಅಕ್ಕರೆಯ ವ್ಯಕ್ತಿಯೊಂದಿಗೆ ಉತ್ತಮ ಸಂವಹನ ಸಾಧಿಸಲಿದ್ದಾರೆ. ನಿಮ್ಮ ಅಕ್ಕರೆಯ ಸಂಗಾತಿಗೆ ವಿವಾಹದ ಪ್ರಸ್ತಾಪವನ್ನು ನೀವು ಮುಂದಿಡಬಹುದು. ನಿಮ್ಮ ಕನಸು ನನಸಾಗುವುದರಿಂದ ನಿಮ್ಮಲ್ಲಿ ಸಂತಸ ಮತ್ತು ಸಂತೃಪ್ತಿಯ ಭಾವ ಕಂಡು ಬರುಬಹುದು. ನಿಮ್ಮ ಆರನೇ ಇಂದ್ರಿಯವು, ಸದ್ಯವೇ ಏನಾದರೂ ಒಳ್ಳೆಯ ಕೆಲಸ ಆಗುವ ಕುರಿತು ಸೂಚನೆ ನೀಡಬಹುದು. ಖರ್ಚುವೆಚ್ಚಗಳಲ್ಲಿ ಒಂದಷ್ಟು ಹೆಚ್ಚಳ ಉಂಟಾದರೂ ಈ ಕುರಿತು ನೀವು ಚಿಂತಿಸಬೇಕಾದ ಅಗತ್ಯವಿಲ್ಲ. ಏಕೆಂದರೆ ಆದಾಯವು ಚೆನ್ನಾಗಿರಲಿದೆ. ಉದ್ಯೋಗದಲ್ಲಿರುವವರಿಗೆ ಈ ವಾರ ಉತ್ತಮ ಫಲ ದೊರೆಯಲಿದೆ. ಸರ್ಕಾರದಿಂದ ನೀವು ಒಂದಷ್ಟು ನೆರವು ಪಡೆಯಬಹುದು. ವ್ಯವಹಾರದಲ್ಲಿ ತೊಡಗಿಸಿಕೊಂಡಿರುವವರಿಗೆ ಈ ವಾರವು ಒಳ್ಳೆಯದು. ನಿಮ್ಮ ವ್ಯವಹಾರವು ಪ್ರಗತಿ ಸಾಧಿಸಲಿದೆ. ವಿದ್ಯಾರ್ಥಿಗಳು ತಮ್ಮ ಅಧ್ಯಯನಗಳಲ್ಲಿ ಧನಾತ್ಮಕ ಫಲಿತಾಂಶ ಪಡೆಯಲಿದ್ದಾರೆ. ಉನ್ನತ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೂ ಇದು ಸಕಾಲ. ಆರೋಗ್ಯದ ವಿಚಾರದಲ್ಲಿಯೂ ಈ ವಾರವು ಚೆನ್ನಾಗಿರಲಿದೆ. ಯಾವುದೇ ದೊಡ್ಡ ಆರೋಗ್ಯ ಸಮಸ್ಯೆಗಳು ನಿಮ್ಮನ್ನು ಕಾಡುವುದಿಲ್ಲ. ಆದರೂ ನಿಮ್ಮ ಆಹಾರದ ಕಡೆಗೆ ಗಮನ ನೀಡಿ. ವಾರದ ಕೊನೆಯ ನಾಲ್ಕು ದಿನಗಳು ಪ್ರವಾಸ ಮತ್ತು ಪ್ರಯಾಣಕ್ಕೆ ಹೋಗಲು ಉತ್ತಮ.

ಧನು:ಇದು ನಿಮ್ಮ ಪಾಲಿಗೆ ಉತ್ತಮ ವಾರ ಎನಿಸಲಿದೆ. ವಿವಾಹಿತರು ಕೌಟುಂಬಿಕ ಬದುಕನ್ನು ಆನಂದಿಸಲಿದ್ದಾರೆ. ಪ್ರೇಮ ಸಂಬಂಧದಲ್ಲಿರುವವರ ಪ್ರೀತಿಯು ಉತ್ತುಂಗಕ್ಕೇರಲಿದೆ. ನಿಮ್ಮ ದಿನಗಳನ್ನು ಅನುರಾಗದೊಂದಿಗೆ ಕಳೆಯಲಿದ್ದೀರಿ. ಅಲ್ಲದೆ ನಿಮ್ಮ ಸಂಬಂಧದಲ್ಲಿ ಸಾಕಷ್ಟು ಸಂತೃಪ್ತಿ ಪಡೆಯಲಿದ್ದೀರಿ. ಸಂಬಳಕ್ಕೆ ದುಡಿಯುವವರು ಕೆಲಸದ ಮೇಲೆ ಗಮನ ನೀಡಲಿದ್ದು, ಇದು ಯಶಸ್ಸು ತಂದು ಕೊಡಲಿದೆ ಮಾತ್ರವಲ್ಲದೆ ಪ್ರಶಂಸೆಯೂ ದೊರೆಯಲಿದೆ. ಕೆಲಸದ ಬದಲಾವಣೆಗಾಗಿ ನೀವು ಅರ್ಜಿ ಹಾಕಿದ್ದರೆ ನಿಮಗೆ ಈ ಬಾರಿ ಅದೃಷ್ಟ ನಿಮ್ಮನ್ನು ಬೆಂಬಲಿಸಲಿದೆ. ವ್ಯವಹಾರದಲ್ಲಿ ತೊಡಗಿರುವವರಿಗೆ ಇದು ಸಕಾಲ. ನಿಮ್ಮ ಕಠಿಣ ಶ್ರಮಕ್ಕೆ ತಕ್ಕ ಫಲ ದೊರೆಯಲಿದೆ. ಅಲ್ಲದೆ ನಿಮ್ಮ ವ್ಯವಹಾರವು ಶೀಘ್ರವೇ ಬೆಳೆಯಲಿದೆ. ನಿಮ್ಮ ತಂಡದಿಂದ ನೀವು ಶುಭ ಸುದ್ದಿಯನ್ನು ಪಡೆಯಲಿದ್ದೀರಿ. ವಿದ್ಯಾರ್ಥಿಗಳ ಅಧ್ಯಯನದಲ್ಲಿ ಒಂದಷ್ಟು ಏರಿಳಿತ ಉಂಟಾಗಬಹುದು. ಅಧ್ಯಯನದ ಮೇಲಿನ ಗಮನ ಮತ್ತು ಸಮಯವನ್ನು ಹೆಚ್ಚಿಸಲು ಸಲಹೆ ನೀಡಲಾಗಿದೆ. ಆರೋಗ್ಯದ ವಿಚಾರದಲ್ಲಿ ಮಿಶ್ರಫಲ ದೊರೆಯಬಹುದು. ನಿಮ್ಮ ಆಹಾರದ ಕಡೆಗೆ ಗಮನ ನೀಡಿ. ಶೀತ ಮತ್ತು ಕೆಮ್ಮದಂತಹ ಸಮಸ್ಯೆಗಳು ಉಂಟಾಗಬಹುದು. ಹೀಗಾಗಿ ನಿಮ್ಮ ಆರೋಗ್ಯವನ್ನು ಕಡೆಗಣಿಸಬೇಡಿ. ವಾರದ ಆರಂಭಿಕ ದಿನಗಳು ಪ್ರಯಾಣಕ್ಕೆ ಅತ್ಯುತ್ತಮ.

ಮಕರ:ಈ ವಾರದಲ್ಲಿ ವಿವಾಹಿತರು ತಮ್ಮ ಕೌಟುಂಬಿಕ ಜೀವನವನ್ನು ಆನಂದಿಸಲಿದ್ದಾರೆ. ಪ್ರೇಮ ಸಂಬಂಧದಲ್ಲಿರುವವರು ತಮ್ಮ ಸಂಗಾತಿಯಲ್ಲಿ ಕುಂದು ಕೊರತೆಗಳನ್ನು ಕಂಡು ಹಿಡಿಯುವುದನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ಇದು ಸಾಮರಸ್ಯಕ್ಕೆ ಧಕ್ಕೆ ಉಂಟು ಮಾಡಲಿದೆ. ಈ ವಾರದಲ್ಲಿ ನೀವು ಸಾಕಷ್ಟು ಆತ್ಮವಿಶ್ವಾಸದಿಂದ ಮುಂದುವರಿಯಲಿದ್ದೀರಿ. ಹಣಕಾಸಿನ ಒಳಹರಿವು ಚೆನ್ನಾಗಿರಲಿದೆ. ಎಲ್ಲಾ ರೀತಿಯಲ್ಲಿ ನೀವು ನಿಮ್ಮ ಕುಟುಂಬದ ಸದಸ್ಯರಿಂದ ಬೆಂಬಲ ಪಡೆಯಲಿದ್ದೀರಿ. ಹಣದ ಹೊರಹರಿವಿನ ಸಾಧ್ಯತೆಯೂ ಇದೆ. ಆದರೆ ಒಳಹರಿವು ಚೆನ್ನಾಗಿರುವುದರಿಂದ ಹೊರಹರಿವನ್ನು ಸರಿದೂಗಿಸಬಹುದು. ಕೆಲಸದ ವಿಚಾರದಲ್ಲಿ ಹೇಳುವುದಾದರೆ ಸಮಯವು ನಿಮಗೆ ಅನುಕೂಲಕರವಾಗಿದೆ. ಕೆಲಸದಲ್ಲಿನ ನಿಮ್ಮ ಚತುರತೆಯು ತಾನಾಗಿಯೇ ಮುನ್ನೆಲೆಗೆ ಬರುತ್ತದೆ. ನಿಮ್ಮ ಕಠಿಣ ಶ್ರಮಕ್ಕಾಗಿ ನಿಮಗೆ ಪುರಸ್ಕರಿಸಲಾಗುತ್ತದೆ ಮತ್ತು ನಿಮ್ಮನ್ನು ಹೊಗಳಲಾಗುತ್ತದೆ. ವ್ಯವಹಾರದಲ್ಲಿರುವವರಿಗೆ ಫಲಿತಾಂಶವು ಲಾಭದಾಯಕವೆನಿಸಲಿದೆ. ನೀವು ಪ್ರಾರಂಭಿಸಿರುವ ಕೆಲಸದಲ್ಲಿ ಪ್ರಗತಿ ಕಾಣಲಿದ್ದೀರಿ. ವಿದ್ಯಾರ್ಥಿಗಳು ಅಧ್ಯಯನಗಳಲ್ಲಿ ಮತ್ತೆ ಆಸಕ್ತಿ ಕಂಡುಕೊಳ್ಳಲಿದ್ದು ಇದು ಅವರಿಗೆ ಉತ್ತಮ ಫಲಿತಾಂಶ ತಂದು ಕೊಡಲಿದೆ. ಆರೋಗ್ಯದ ವಿಚಾರದಲ್ಲಿ ಯಾವುದೇ ದೊಡ್ಡ ಸಮಸ್ಯೆಗಳು ಉಂಟಾಗದ ಕಾರಣ ಸ್ಥಿರತೆ ಮುಂದುವರಿಯುತ್ತದೆ. ವಾರದ ಆರಂಭಿಕ ದಿನಗಳು ಪ್ರಯಾಣಕ್ಕೆ ಅತ್ಯುತ್ತಮ.

ಕುಂಭ:ಈ ವಾರ ನಿಮಗೆ ಒಟ್ಟಾರೆ ಉತ್ತಮ ಫಲ ದೊರೆಯಲಿದೆ. ನಿಮ್ಮ ಮನಸ್ಸಿನಲ್ಲಿ ಧಾರ್ಮಿಕ ಭಾವನೆಗಳು ಮನೆ ಮಾಡಬಹುದು. ಅಲ್ಲದೆ ಆದಷ್ಟು ಮಟ್ಟಿಗೆ ಸಮಾಜಕ್ಕೆ ಸಹಾಯ ಮಾಡಲು ನೀವು ಇಚ್ಛಿಸುವಿರಿ. ಕೌಟುಂಬಿಕ ಜೀವನವು ಸಂತಸ ಮತ್ತು ಶಾಂತಿಯಿಂದ ಕೂಡಿರಲಿದೆ. ಪ್ರಣಯ ಸಂಬಂಧದಲ್ಲಿರುವ ಕುಂಭ ರಾಶಿಯವರಿಗೆ ಇದು ಸಕಾಲ. ಈ ವಾರದಲ್ಲಿ ಅಧಿಕ ಖರ್ಚು ಉಂಟಾಗಬಹುದು. ಆದರೆ ಇದು ಸಮಸ್ಯೆಯಾಗಲಾರದು. ಏಕೆಂದರೆ ಆದಾಯವು ಇದನ್ನು ಸರಿದೂಗಿಸುತ್ತದೆ. ಉದ್ಯೋಗದಲ್ಲಿರುವವರು ತಮ್ಮ ಕೆಲಸಕ್ಕೆ ಸಂಪೂರ್ಣ ಗಮನ ನೀಡಲಿದ್ದು, ಕೆಲಸದ ಯಶಸ್ಸಿಗಾಗಿ ಎಲ್ಲಾ ಪ್ರಯತ್ನ ಮಾಡಲಿದ್ದಾರೆ. ಈ ವಾರವು ವ್ಯಾಪಾರೋದ್ಯಮಿಗಳಿಗೆ ಅನುಕೂಲಕರ. ಏಕೆಂದರೆ ಅವರ ಯೋಜನೆಗಳು ಗರಿಗೆದರಲಿವೆ. ವಿದ್ಯಾರ್ಥಿಗಳು ತಮ್ಮ ಅಧ್ಯಯನದ ವಿಚಾರದಲ್ಲಿ ಹೆಚ್ಚು ಶ್ರಮ ಪಡಬೇಕಾಗುತ್ತದೆ. ಕಲಿಕೆಯ ಮೇಲಿನ ಒಳ್ಳೆಯ ಗಮನ ಮತ್ತು ಏಕಾಗ್ರತೆಯೊಂದಿಗೆ ಅವರು ಉತ್ತಮ ಅಂಕಗಳನ್ನು ಗಳಿಸಬಹುದು. ಆರೋಗ್ಯದ ವಿಚಾರದಲ್ಲಿ ಒಂದಷ್ಟು ಸಮಸ್ಯೆಗಳು ಉಂಟಾಗಬಹುದು. ಆಹಾರಕ್ರಮದ ಮೇಲೆ ಗಮನವಿಟ್ಟು ಹಾಗೂ ನಿಯಮಿತವಾಗಿ ವ್ಯಾಯಾಮ ಮಾಡುವ ಮೂಲಕ ಸಾಕಷ್ಟು ಕಾಳಜಿ ವಹಿಸಬೇಕು. ವಾರದ ಮಧ್ಯಭಾಗವು ಪ್ರಯಾಣಿಸುವುದಕ್ಕೆ ಅನುಕೂಲಕರ.

ಮೀನ:ವಿವಾಹಿತ ವ್ಯಕ್ತಿಗಳಿಗೆ ಈ ವಾರವು ಉತ್ತಮ ಅದೃಷ್ಟ ಹೊತ್ತು ತರಲಿದೆ. ಕೌಟುಂಬಿಕ ಜೀವನವು ಆನಂದಮಯವಾಗಿರುತ್ತದೆ. ಅವರ ಜೀವನ ಸಂಗಾತಿಯ ಜೊತೆಗೆ ಒಂದಷ್ಟು ಗುಣಮಟ್ಟದ ಸಮಯವನ್ನು ಕಳೆಯಲಿದ್ದಾರೆ. ಪ್ರಣಯ ಸಂಬಂಧದಲ್ಲಿರುವವರು ತಮ್ಮ ಸಂಬಂಧದಲ್ಲಿ ಪ್ರಾಮಾಣಿಕತೆಯನ್ನು ಮುಂದುವರಿಸಲಿದ್ದಾರೆ ಹಾಗೂ ತಮ್ಮ ಪ್ರಣಯ ಸಂಗಾತಿಯನ್ನು ಸಂತುಷ್ಟಪಡಿಸಲು ಎಲ್ಲಾ ಪ್ರಯತ್ನ ಮಾಡಲಿದ್ದಾರೆ. ಕೆಲಸದ ಮೇಲೆ ಅಧಿಕ ಗಮನ ನೀಡಲಿದ್ದೀರಿ. ಆದರೆ ಅಡಚಣೆಗಳನ್ನು ದೂರ ಮಾಡಲು ಯತ್ನಿಸಿ. ಏಕೆಂದರೆ ಇದು ಕಾರ್ಯಸ್ಥಳದಲ್ಲಿ ಸಮಸ್ಯೆ ಉಂಟು ಮಾಡಬಹುದು. ಕೆಲಸದ ಮೇಲೆ ಮಾತ್ರವೇ ಗಮನ ಕೇಂದ್ರೀಕರಿಸಿ. ನಿಮ್ಮ ಮನಸ್ಸಿನಲ್ಲಿ ಬೇರೆ ಯಾವುದೇ ಯೋಚನೆಗಳು ಬರದಂತೆ ನೋಡಿಕೊಳ್ಳಿ. ವ್ಯಾಪಾರೋದ್ಯಮಿಗಳಿಗೆ ಈ ವಾರವು ಉತ್ತಮ ಅದೃಷ್ಟ ತಂದುಕೊಡಲಿದೆ. ಜೊತೆಗೆ ಸಾಕಷ್ಟು ಲಾಭ ಮತ್ತು ಸಂತಸವೂ ದೊರೆಯಲಿದೆ. ವಿದ್ಯಾರ್ಥಿಗಳಿಗೆ ತಮ್ಮ ಅಧ್ಯಯನವು ಆಸಕ್ತಿದಾಯಕ ಎನಿಸಲಿದ್ದು, ಅವರು ತಮ್ಮ ಕಲಿಕೆಯಲ್ಲಿ ಉತ್ತಮ ಸಾಧನೆ ಮಾಡಲಿದ್ದಾರೆ. ಆರೋಗ್ಯದಲ್ಲಿ ಈ ವಾರ ಸುಧಾರಣೆ ಕಂಡು ಬರಲಿದೆ. ಆದರೆ ಲಘುವಾಗಿ ಜ್ವರ ಉಂಟಾಗುವ ಸಾಧ್ಯತೆ ಇದೆ. ಹೀಗಾಗಿ ಆರೋಗ್ಯಕ್ಕೆ ಸಂಬಂಧಿಸಿದ ವಿಚಾರಗಳನ್ನು ನಿರ್ಲಕ್ಷಿಸಬೇಡಿ. ವಾರದ ಮಧ್ಯ ಭಾಗದಲ್ಲಿ ಪ್ರಯಾಣಿಸುವುದು ಅನುಕೂಲಕರ.

Last Updated : Feb 13, 2022, 4:00 AM IST

ABOUT THE AUTHOR

...view details