ಮೇಷ: ಮೇಷ ರಾಶಿಯಲ್ಲಿ ಹುಟ್ಟಿದವರು ಸಾಧಾರಣ ವಾರವನ್ನು ನಿರೀಕ್ಷಿಸಬಹುದು. ನೀವು ಯಾವುದೇ ದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳಬಾರದು. ಇಲ್ಲದಿದ್ದರೆ ನೀವು ನಂತರ ಪಶ್ಚಾತ್ತಾಪ ಪಡಬೇಕಾದೀತು. ಯಾವುದೇ ಹೊಸ ಕೆಲಸವನ್ನು ತೆಗೆದುಕೊಂಡರೆ ಅದು ನಿಮ್ಮ ಪಾಲಿಗೆ ಹಾನಿಕಾರಕವೆನಿಸಬಹುದು. ನಿಮ್ಮ ಹಣದ ಖರ್ಚು ಒಮ್ಮೆಲೆ ಹೆಚ್ಚಾಗಬಹುದು. ಇದು ಮಾನಸಿಕ ಒತ್ತಡಕ್ಕೆ ಕಾರಣವಾಗಬಹುದು. ಪ್ರೇಮ ಸಂಬಂಧದಲ್ಲಿರುವವರು ಚೆನ್ನಾಗಿ ಕಾಲ ಕಳೆಯಲಿದ್ದಾರೆ. ನಿಮ್ಮ ಸಂಗಾತಿಯೊಂದಿಗೆ ಮುಂದಿನ ಹಂತಕ್ಕೆ ಸಾಗಲು ನೀವು ನಿರ್ಧರಿಸಬಹುದು. ಈ ದಿನಗಳಲ್ಲಿ ನಿಮ್ಮ ಆರೋಗ್ಯದಲ್ಲಿ ಸುಧಾರಣೆ ಕಂಡು ಬರಲಿದೆ. ಹಿರಿಯರು ದೀರ್ಘಕಾಲೀನ ಆರೋಗ್ಯ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು. ಉದ್ಯೋಗದಲ್ಲಿರುವ ವೃತ್ತಿಪರರು ತನ್ನ ಕಠಿಣ ಶ್ರಮದ ಕಾರಣ ಉತ್ತಮ ಫಲಿತಾಂಶ ಪಡೆಯಲಿದ್ದಾರೆ. ವ್ಯಾಪಾರೋದ್ಯಮಿಗಳು ಒಳ್ಳೆಯ ಲಾಭ ಗಳಿಸಲಿದ್ದಾರೆ. ನಿಮ್ಮ ತಂದೆಗೆ ಉಡುಗೊರೆಗಳನ್ನು ಕಳುಹಿಸುವ ಯೋಜನೆಯನ್ನು ನೀವು ರೂಪಿಸಬಹುದು. ರಜಾ ವಿರಾಮದಲ್ಲಿ ಹೋಗಲು ಇಚ್ಛಿಸುವವರು ಸೂಕ್ತ ಸಮಯಕ್ಕಾಗಿ ಕಾಯುವುದು ಒಳ್ಳೆಯದು. ವಿದ್ಯಾರ್ಥಿಗಳು ತಮ್ಮ ಕೆಲಸವನ್ನು ಇನ್ನಷ್ಟು ಸುಧಾರಿಸಲಿದ್ದಾರೆ.
ವೃಷಭ:ನಿಮಗೆ ಈ ವಾರವು ಲಾಭದಾಯಕ ಎನಿಸಲಿದೆ. ವೃತ್ತಿ ಮತ್ತು ಶಿಕ್ಷಣದ ವಿಚಾರದಲ್ಲಿ ಹೇಳುವುದಾದರೆ, ನಿಮ್ಮ ಗಮನವನ್ನು ನೀವು ಅಧ್ಯಯನದತ್ತ ಕೇಂದ್ರೀಕರಿಸಲಿದ್ದೀರಿ. ಗಮನವಿಟ್ಟು ಕಲಿಯುವುದರಿಂದ ಅಧ್ಯಯನದಲ್ಲಿ ಧನಾತ್ಮಕ ಫಲಿತಾಂಶ ಬರಲಿದೆ. ವಾರದ ಮಧ್ಯದಲ್ಲಿ ಖರ್ಚುವೆಚ್ಚಗಳಲ್ಲಿ ಹೆಚ್ಚಳ ಉಂಟಾಗಬಹುದು. ಆದರೆ ಇದು ನಿಮ್ಮ ಹಣಕಾಸಿನ ವಿಚಾರಗಳ ಮೇಲೆ ಪರಿಣಾಮ ಬೀರುವುದಿಲ್ಲ. ವಾರದ ಕೊನೆಯ ಕೆಲವು ದಿನಗಳು ವ್ಯವಹಾರವನ್ನು ವಿಸ್ತರಿಸಲು ಉತ್ತಮ. ದೂರದ ಊರಿನ ವ್ಯವಹಾರದಿಂದ ನೀವು ಲಾಭ ಗಳಿಸಲಿದ್ದೀರಿ. ಉದ್ಯೋಗದಲ್ಲಿರುವ ವೃತ್ತಿಪರರು ತಮ್ಮ ಕೆಲಸದಲ್ಲಿ ಅತೀವ ಆಸಕ್ತಿ ತೋರಲಿದ್ದಾರೆ. ಅದೃಷ್ಟವು ನಿಮಗೆ ಜತೆ ನೀಡಲಿದ್ದು ಇದು ನಿಮ್ಮ ವೃತ್ತಿ ಜೀವನದಲ್ಲಿ ನೀವು ಸರಿಯಾದ ದಾರಿಯಲ್ಲಿ ಸಾಗುವಂತೆ ಮಾಡಲಿದೆ. ನಿಮ್ಮ ಆತ್ಮವಿಶ್ವಾಸವು ಎಷ್ಟು ಉತ್ತುಂಗದಲ್ಲಿರಲಿದೆ ಎಂದರೆ ನಿಮ್ಮ ಕಾರ್ಯ ಸಾಧಿಸುವುದಕ್ಕಾಗಿ ಅಪಾಯಕ್ಕೆ ಮೈಯೊಡ್ಡಲು ನೀವು ಹಿಂದೆ ಮುಂದೆ ನೋಡುವುದಿಲ್ಲ. ನಿಮ್ಮ ಪ್ರೇಮ ಜೀವನಕ್ಕೆ ನೀವು ಇನ್ನಷ್ಟು ಮೆರುಗನ್ನು ನೀಡಲಿದ್ದೀರಿ. ವಿವಾಹಿತರು ಮೆಲ್ಲನೆ ತಮ್ಮ ಮಾನಸಿಕ ಒತ್ತಡದಿಂದ ಹೊರ ಬರಲಿದ್ದಾರೆ. ನಿಮ್ಮ ಜೀವನ ಸಂಗಾತಿಯ ಜೊತೆ ಉಂಟಾಗುವ ತಪ್ಪು ಗ್ರಹಿಕೆಯನ್ನು ನೀವು ಸರಿಪಡಿಸಲಿದ್ದೀರಿ. ವಾರದ ಆರಂಭದಲ್ಲಿ ಪ್ರಯಾಣವನ್ನು ಪರಿಗಣಿಸಬಹುದು.
ಮಿಥುನ:ನೀವು ಈ ವಾರವನ್ನು ಆನಂದಿಸಲಿದ್ದೀರಿ. ವಾರದ ಆರಂಭಿಕ ದಿನಗಳಲ್ಲಿ ನಿಮ್ಮ ಕುಟುಂಬಕ್ಕೆ ಸಂಪೂರ್ಣ ಗಮನ ನೀಡಲಿದ್ದೀರಿ. ನಿಮ್ಮ ಪ್ರೇಮಿಯ ಮನವೊಲಿಸುವುದಕ್ಕಾಗಿ ನಿಮ್ಮ ಕೆಲಸ ಮತ್ತು ವೈಯಕ್ತಿಕ ಬದುಕಿನ ನಡುವೆ ನೀವು ಸಮತೋಲನವನ್ನು ಕಾಪಾಡಲಿದ್ದೀರಿ. ಈ ಸಂದರ್ಭದಲ್ಲಿ ಸ್ವಂತ ಆಸ್ತಿಯನ್ನು ಖರೀದಿಸಲು ನೀವು ಯೋಜನೆ ಹೂಡಬಹುದು. ವಿವಾಹಿತರು ತಮ್ಮ ಸಂಗಾತಿಯ ತೋಳಿನ ಅಪ್ಪುಗೆಯಲ್ಲಿ ಸಮಯವನ್ನು ಅದ್ಭುತವಾಗಿ ಕಳೆಯಲಿದ್ದಾರೆ. ನಿಮ್ಮಿಬ್ಬರ ನಡುವೆ ಮುರಿಯಲಾರದ ಬಂಧವನ್ನು ರೂಪಿಸುವುದಕ್ಕಾಗಿ ನೀವು ಪ್ರಣಯಭರಿತ ಮಾತುಕತೆಯನ್ನು ನಡೆಸಬಹುದು. ಪ್ರೇಮಿಗಳು ತಮ್ಮ ಸಂಗಾತಿಯ ಹೃದಯದಲ್ಲಿ ಸ್ಥಾನ ಪಡೆಯಲು ಪ್ರಯತ್ನ ಮಾಡಬೇಕು. ಉದ್ಯೋಗಾಕಾಂಕ್ಷಿಗಳು ಹೊಸ ಕಾರ್ಯಸ್ಥಳದಲ್ಲಿ ಕೆಲಸ ಮಾಡುವ ಅವಕಾಶ ಪಡೆಯಬಹುದು. ವ್ಯಾಪಾರ ವಹಿವಾಟು ನಡೆಸುವವರಿಗೆ ಈ ವಾರವು ಒಳ್ಳೆಯದು. ಏಕೆಂದರೆ ನಿಮ್ಮ ವ್ಯವಹಾರವು ವಿಸ್ತರಿಸಲಿದೆ. ನಿಮ್ಮ ಹಣದ ಖರ್ಚು ಹೆಚ್ಚಲಿದೆ. ಹೀಗಾಗಿ ನೀವು ಈ ಕುರಿತು ಗಮನ ನೀಡಬೇಕು. ಇಲ್ಲದಿದ್ದರೆ ಹಣಕಾಸಿನ ಚಿಂತೆ ಹೆಚ್ಚಾಗಬಹುದು. ವಿದ್ಯಾರ್ಥಿಗಳು ತಮ್ಮ ಅಧ್ಯಯನದ ಮೇಲೆ ಗಮನ ನೀಡಬಹುದು. ಪ್ರಯಾಣಿಕರು ಈ ಉದ್ದೇಶಕ್ಕಾಗಿ ವಾರದ ಮೊದಲ ಎರಡು ದಿನಗಳನ್ನು ಪರಿಗಣಿಸಬೇಕು. ಆರೋಗ್ಯವು ಸಾಮಾನ್ಯ ಸ್ಥಿತಿಯಲ್ಲಿ ಇರುತ್ತದೆ.
ಕರ್ಕಾಟಕ:ಹೊಸ ವಾರಕ್ಕೆ ಪ್ರವೇಶಿಸುವಾಗ ಕರ್ಕಾಟಕ ರಾಶಿಯವರು ಈ ಅನುಕೂಲಕರ ಸಮಯವನ್ನು ಆನಂದಿಸಲಿದ್ದಾರೆ. ವಾರದ ಆರಂಭದಲ್ಲಿ ನೀವು ಸಣ್ಣ ಮಟ್ಟದ ಪ್ರವಾಸಕ್ಕೆ ಹೋಗುವ ಸಾಧ್ಯತೆ ಇದೆ. ನಿಮ್ಮ ಆತ್ಮೀಯರ ಜೊತೆ ಬೆರೆಯುವ ಅವಕಾಶ ನಿಮಗೆ ದೊರೆಯಬಹುದು. ನೀವು ನಿಮ್ಮ ಕುಟುಂಬದ ಜೊತೆ ಗುಣಮಟ್ಟದ ಸಮಯ ಕಳೆಯಲಿದ್ದೀರಿ. ಕರ್ಕಾಟಕ ರಾಶಿಯಲ್ಲಿ ಹುಟ್ಟಿದ ಪ್ರೇಮಿಗಳು ಸಣ್ಣಪುಟ್ಟ ಸಮಸ್ಯೆಗಳನ್ನು ಎದುರಿಸಬಹುದು. ವಿವಾಹಿತರು, ತಮ್ಮ ಸಂಗಾತಿಯ ಕಾರಣ ಹೆಚ್ಚು ಒತ್ತಡಕ್ಕೆ ಈಡಾಗಬಹುದು. ಅಲ್ಲದೆ, ನಿಮ್ಮ ಪ್ರೇಮ ಬದುಕನ್ನು ನೀವು ಆನಂದಿಸಲಿದ್ದೀರಿ. ವ್ಯವಹಾರದಲ್ಲಿ ತೊಡಗಿಸಿಕೊಂಡಿರುವವರಿಗೆ ಈ ವಾರ ಸಾಮಾನ್ಯ ಫಲ ದೊರೆಯಲಿದೆ. ನಿರೀಕ್ಷಿತ ಲಾಭವನ್ನು ಪಡೆಯಬೇಕಾದರೆ ನೀವು ಸವಾಲುಗಳನ್ನು ಮೆಟ್ಟಿ ನಿಲ್ಲಬೇಕಾಗುತ್ತದೆ. ಏನಾದರೂ ಹೊಸ ಕೆಲಸವನ್ನು ಶೂನ್ಯದಿಂದ ಪ್ರಾರಂಭಿಸಬೇಕಾಗುತ್ತದೆ. ಈ ವಾರವು ಉದ್ಯೋಗದಲ್ಲಿರುವವರಿಗೆ ತುಂಬಾ ಒಳ್ಳೆಯದು. ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ, ಮುಂದಿನ ವಾರದಲ್ಲಿ ನೀವು ಸಣ್ಣಪುಟ್ಟ ಸಮಸ್ಯೆಗಳನ್ನು ಎದುರಿಸಬಹುದು. ವಿದ್ಯಾರ್ಥಿಗಳಿಗೆ ಕಠಿಣ ಶ್ರಮದಲ್ಲಿ ತೊಡಗಲು ಪ್ರೇರಣೆ ದೊರೆಯಲಿದೆ. ಪ್ರಯಾಣದ ಉದ್ದೇಶವು ಈಡೇರಲಿದೆ.
ಸಿಂಹ:ವಾರದ ಆರಂಭಿಕ ದಿನಗಳಲ್ಲಿ ನಿಮಗೆ ಕೌಟುಂಬಿಕ ಜವಾಬ್ದಾರಿಗಳು ಎದುರಾಗಬಹುದು. ಇದೇ ವೇಳೆ, ಹಣಕಾಸಿನ ವಿಚಾರಗಳ ಮೇಲೆ ನೀವು ಕಣ್ಣಿಡಲಿದ್ದೀರಿ. ವಾರದ ಮಧ್ಯಭಾಗವು ಪ್ರಯಾಣಿಸುವುದಕ್ಕೆ ಅನುಕೂಲಕರ. ನೀವು ನಿಮ್ಮ ಕುಟುಂಬದ ಸದಸ್ಯರ ಜೊತೆಗೂ ಸಮಯ ಕಳೆಯಲಿದ್ದೀರಿ. ನಿಮ್ಮ ತಾಯಿಯ ಜೊತೆಗೆ ಸಾಕಷ್ಟು ಸಂಭಾಷಣೆ ನಡೆಯಲಿದೆ. ನೀವು ಪರಸ್ಪರ ಆಕರ್ಷಿತರಾಗಲಿದ್ದೀರಿ ಹಾಗೂ ಸಂಬಂಧವನ್ನು ದೃಢವಾಗಿ ಮುಂದಕ್ಕೆ ಕೊಂಡೊಯ್ಯಲಿದ್ದೀರಿ. ಪ್ರೇಮ ಸಂಬಂಧದಲ್ಲಿರುವವರಿಗೆ ಈ ವಾರವು ಉತ್ತಮ ವಾರವೆನಿಸಲಿದೆ. ನಿಮ್ಮ ಸಂಬಂಧದಲ್ಲಿ ನೀವು ಮುಂದೆ ಸಾಗಲಿದ್ದೀರಿ. ವ್ಯಾಪಾರೋದ್ಯಮಿಗಳಿಗೆ ಹೊಸ ಸವಾಲುಗಳು ಎದುರಾಗುವುದರಿಂದ ಮುಂದೆ ಸಾಗುವುದಕ್ಕಾಗಿ ಕಾರ್ಯತಂತ್ರಗಳನ್ನು ರೂಪಿಸಬೇಕಾಗುತ್ತದೆ. ಉದ್ಯೋಗದಲ್ಲಿರುವವರು ತಮ್ಮ ಕೆಲಸಕಾರ್ಯಗಳಲ್ಲಿ ನಿಖರತೆ ಪಡೆಯಲಿದ್ದಾರೆ. ಈ ವಾರದಲ್ಲಿ ನಿಮ್ಮ ಆರೋಗ್ಯವು ಸಾಮಾನ್ಯ ಮಟ್ಟದಲ್ಲಿರಲಿದೆ. ಹೀಗಾಗಿ ನೀವು ವಿಶೇಷ ಕಾಳಜಿ ವಹಿಸಬೇಕು. ವಿದ್ಯಾರ್ಥಿಗಳು ತಮ್ಮ ಅಧ್ಯಯನಗಳಲ್ಲಿ ಉತ್ತಮ ಫಲಿತಾಂಶ ಪಡೆಯಲಿದ್ದಾರೆ.
ಕನ್ಯಾ:ನೀವು ಸಾಕಷ್ಟು ಉತ್ಸಾಹದಿಂದ ಈ ವಾರವನ್ನು ಪ್ರಾರಂಭಿಸುವಿರಿ. ಇದು ನಿಮ್ಮ ಕೆಲಸದಲ್ಲಿ ಯಶಸ್ಸಿನ ದಾರಿಯನ್ನು ಕಂಡುಕೊಳ್ಳಲು ನಿಮಗೆ ಸಹಕರಿಸಲಿದೆ. ನಿಮ್ಮ ಕೌಟುಂಬಿಕ ಜೀವನದಲ್ಲಿ ಸಾಕಷ್ಟು ಪ್ರೀತಿ ಮತ್ತು ವಾತ್ಸಲ್ಯ ಕಾಣಿಸಿಕೊಳ್ಳಲಿದೆ. ನಿಮ್ಮ ಸಾಮಾಜಿಕ ಜೀವನದಲ್ಲಿ ನೀವು ಇನ್ನಷ್ಟು ಸಂಪರ್ಕಗಳನ್ನು ಬೆಳೆಸಲಿದ್ದೀರಿ. ಉದ್ಯೋಗದಲ್ಲಿರುವ ವೃತ್ತಿಪರರು ವಿಶೇಷ ಗಮನದೊಂದಿಗೆ ಕೆಲಸ ಮಾಡಬೇಕು. ಇಲ್ಲದಿದ್ದರೆ ಗುರಿ ಸಾಧಿಸುವಲ್ಲಿ ಹಿನ್ನಡೆ ಉಂಟಾಗಬಹುದು. ವ್ಯವಹಾರದಲ್ಲಿ ತೊಡಗಿಸಿಕೊಂಡಿರುವವರಿಗೆ ಈ ವಾರವು ಒಳ್ಳೆಯದು. ಕೆಲಸದಲ್ಲಿ ಯಶಸ್ಸು ದೊರೆಯಲಿದ್ದು, ನಿಮ್ಮ ಆದಾಯದಲ್ಲಿ ಸ್ಥಿರತೆ ಇರುತ್ತದೆ. ವಿವಾಹಿತ ವ್ಯಕ್ತಿಗಳ ಬದುಕು ಸಾಮಾನ್ಯ ಮಟ್ಟದಲ್ಲಿರುತ್ತದೆ. ಆದರೆ ಅವರ ನಡುವೆ ಒಂದಷ್ಟು ಸಂಘರ್ಷ ಉಂಟಾಗುವ ಸಾಧ್ಯತೆ ಇದೆ. ಪ್ರೇಮಿಗಳು ಒಂದಷ್ಟು ಏರುಪೇರನ್ನು ಎದುರಿಸಬೇಕಾದೀತು. ವಿದ್ಯಾರ್ಥಿಗಳು ತಮ್ಮ ಅಧ್ಯಯನದಲ್ಲಿ ಏಕಾಗ್ರತೆಯ ಕೊರತೆ ಎದುರಿಸಬಹುದು.